ವಿರೋಧ ನೀತಿಯೇ?
ನಮ್ಮಲ್ಲಿ ಕನ್ನಡ -ಸಂಸ್ಕೃತದ ಬಗ್ಗೆ ಚರ್ಚೆ ನಡೆಯುತ್ತ ಇದೆ. ಹಾಗೆಯೇ ಅಲ್ಲಮನ ಬಗ್ಗೆಯೂ ಸಣ್ಣ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ನನ್ನೆರಡು ಮಾತು.
>ವೇದಗಳು ಯಾರೊಬ್ಬ ಜಾತಿಯ ಸ್ವತ್ತಲ್ಲ. ಇವುಗಳ ಬರೆದವರು(?!) ಒಂದೇ ಜಾತಿಯವರೇನಲ್ಲ. ಹಾರವರಷ್ಟೇ ವೀರಶೈವರೂ ಈ ವೇದಗಳನ್ನು ( ಕರ್ಮ ಕಾಂಡ?!... ಆಚರಣೆಯಲ್ಲಿ ಇಡಲು ಇನ್ನೇನಿದೆ?... ಸಾಧ್ಯವಾದರೆ ಸೇರಿಸಿ. ) ಆಚರನೆಯಲ್ಲಿಟ್ಟಿದಾರೆ. ಇತರರೂ ವೇದ ಪಾರಮ್ಯವನ್ನು ಒಪ್ಪಿಕೊಳ್ಳುತಾರೆ. ಹಾಗಾಗಿ ನಮ್ಮಲ್ಲಿ ಯಾರಾದರೂ ವೇದಗಳ ವಿರುದ್ದ ಏನಾದರೂ ಮಾತಾಡಿದರೆ "ಹಾರವ ವಿರೋಧಿ" ಅನ್ನುವ ಅರ್ಥ ಕಲ್ಪಿಸಿ ಕೊಳ್ಳಬಾರದು..
>>ಇನ್ನು ಸಂಸ್ಕೃತ... ಹೇಗೆ ಹಾರವರ ಹಲವಾರು ಧರ್ಮಗ್ರಂಥ ಗಳು ಸಂಸ್ಕೃತದಲ್ಲಿ ಬರೆಯಲ್ಪಟ್ಟಿದ್ದಾವೋ ಹಾಗೆಯೇ ವೀರಶೈವರ, ಜೈನರ , ಮತ್ತಿತರರ (?) ಹಲವಾರು ಧರ್ಮಗ್ರಂಥಗಳು ಸಂಸ್ಕೃತದಲ್ಲಿವೆ. ಆದಕಾರಣ ಸಂಸ್ಕೃತ ವಿರೋಧ ನೀತಿಯನ್ನು ಹಾರವ ವಿರೋಧ ನೀತಿಯಷ್ಟು ಕೆಳಮಟ್ಟಕ್ಕೆ ಇಳಿಸಬಾರದು.
ಕನ್ನಡ - ಸಂಸ್ಕೃತದ ಚರ್ಚೆ ತಾತ್ವಿಕ ತಳಹದಿಯಲ್ಲಿ ನಡೆಯುತ್ತಾ ಸಾಗಬೇಕು. ಕನ್ನಡ ಪರ ವಾದದಲ್ಲಿ "ಅನವಶ್ಯಕವಾಗಿ" ಜಾತಿಯ ಪ್ರವೆಶವಾಗಿಲ್ಲ ಅನ್ನುವುದು ನನ್ನ ಅನಿಸಿಕೆ.
>> ಅಲ್ಲಮನನ್ನು ನಾನು ನೋಡುವುದು ಒಬ್ಬ ಮಹಾನ್ ಕನ್ನಡದ ಪ್ರತಿಭೆ ಎಂದು. ದಯವಿಟ್ಟು ಯಾರೂ ಅವನನ್ನೂ ಯಾವುದೇ ಒಂದು ಮತದ ಚೌಕಟ್ತಿಗೆ , ಯಾವುದೇ ಒಂದು ವಿರೋಧಿ ನೀತಿಗೆ ಮೊಟಕುಗೊಳಿಸಬೇಡಿ. ಎಲ್ಲವನ್ನೂ ಮೀರಿ ನಿಂತವ ಈ ಅಲ್ಲಮ. ಎಂದೂ ಯಾವ ಮತವನ್ನು ಸ್ತಾಪಿಸುವುದೂ ಆತನ ಉದ್ದೇಶವಾಗಿರಲಿಲ್ಲ. ಸಾಧ್ಯವಾದರೆ ಓದಿ.