ಹಳೆಯ ಚಿತ್ರ ಗೀತೆಗಳು
ಕರ್ಣ (1986) -
ಸಾಹಿತ್ಯ : ಚಿ. ಉದಯಶಂಕರ್
ಸಂಗೀತ : ಎಂ. ರಂಗರಾವ್
ಗಾಯನ : ಕೆ.ಜೆ. ಯೇಸುದಾಸ್
ಆ ಕರ್ಣನಂತೆ ನೀ ದಾನಿಯಾದೆ
ಇನ್ನೊಂದು ಜೀವಕೆ ಆಧಾರವಾದೆ
ಆ ಕರ್ಣನಂತೆ ನೀ ದಾನಿಯಾದೆ
ಇನ್ನೊಂದು ಜೀವಕೆ ಆಧಾರವಾದೆ
ಆ ಕರ್ಣನಂತೆ...
ಕಸದಮ್ತೆ ಕಂಡರು ಮನೆಯಲ್ಲಿ ಎಲ್ಲರು
ದಿನವೆಲ್ಲ ಬಾಳಲಿ ಕಣ್ಣೇರು ತಂದರು
ಕಸದಮ್ತೆ ಕಂಡರು ಮನೆಯಲ್ಲಿ ಎಲ್ಲರು
ದಿನವೆಲ್ಲ ಬಾಳಲಿ ಕಣ್ಣೇರು ತಂದರು
ನಿನ್ನಂತರಂಗವ ಅವರೆಏನು ಬಲ್ಲರು
ನಿನ್ನನ್ನು ಹೆತ್ತವರು ಮಹಾ ಪುಣ್ಯವಂತರು
ಆ ಕರ್ಣನಂತೆ ನೀ ದಾನಿಯಾದೆ
ಇನ್ನೊಂದು ಜೀವಕೆ ಆಧಾರವಾದೆ
ಆ ಕರ್ಣನಂತೆ...
ಬಾಳೆಂಬ ಆಟದಿ ಚೆಂಡಂತೆ ಎಲ್ಲರು
ತನ್ನಾಸೆಯಂತೆಯೆ ಆಡೊದು ದೇವರು
ಬಾಳೆಂಬ ಆಟದಿ ಚೆಂಡಂತೆ ಎಲ್ಲರು
ತನ್ನಾಸೆಯಂತೆಯೆ ಆಡೋದು ದೇವರು
ಇಂದಲ್ಲ ನಾಳೆ ಸಾಯೋದೆ ಎಲ್ಲರು
ಎನಾದರೆನೀಗ ನಿನ್ನನ್ನು ಮರೆಯರು
ಪ್ರೀತಿಯಲಿ ಸುಖವುಂಟು ಸ್ನೇಹದಲಿ ಹಿತವುಂಟು
ತ್ಯಾಗಕ್ಕೆ ಫಲವುಂಟು ನಿನಗೊಂದು ಬೆಲೆಯುಂಟು
ಬಂಗಾರದಂತ ಗುಣವು ನಿನ್ನಲ್ಲಿ ಇರುವಾಗ
ಬಾಳೆಂಬ ಹೊರಾಟದಲಿ ಸೊಲೆಂಬುದೆಲ್ಲುಂಟು
ಆ ಕರ್ಣನಂತೆ ನೀ ದಾನಿಯಾದೆ
ಇನ್ನೊಂದು ಜೀವಕೆ ಆಧಾರವಾದೆ
ಆ ಕರ್ಣನಂತೆ...
****************************
ಕವಿರತ್ನ ಕಾಳಿದಾಸ (1983) -
ಸಾಹಿತ್ಯ: ಕಾಳಿದಾಸ
ಸಂಗೀತ: ಎಂ. ರಂಗರಾವ್
ಗಾಯನ: ಡಾ| ರಾಜ್‍ಕುಮಾರ್
ಮಾಣಿಕ್ಯ ವೀಣಾ ಮುಫಲಾಲಯಂತೀಂ
ಮದಾಲಸಾಂ ಮಂಜುಲ ವಾಗ್ವಿಲಾಸಾಂ
ಆಆ......
ಮಾಣಿಕ್ಯ ವೀಣಾ ಮುಫಲಾಲಯಂತೀಂ
ಮದಾಲಸಾಂ ಮಂಜುಲ ವಾಗ್ವಿಲಾಸಾಂ
ಮಾಹೇಂದ್ರ ನೀಲದ್ಯುತಿ ಕೋಮಲಾಂಗೀಂ......
ಮಾಹೇಂದ್ರ ನೀಲದ್ಯುತಿ ಕೋಮಲಾಂಗೀಂ
ಮಾತಂಗಕನ್ಯಾಂ ಮನಸಾಸ್ಮರಾಮೀ....ಈ..
ಮನಸಾಸ್ಮರಾಮೀ
ಚತುರ್ಭುಜೇ ಚಂದ್ರಕಳಾವತಂಸೇ
ಕುಚೋನ್ನತೇ ಕುಂಕುಮರಾಗಶೋಣೇ....
ಚತುರ್ಭುಜೇ ಚಂದ್ರಕಳಾವತಂಸೇ
ಕುಚೋನ್ನತೇ ಕುಂಕುಮರಾಗಶೋಣೇ....
ಆ......
ಪುಂಡ್ರೇಕ್ಷುಪಾಶಾಂಕುಶ ಪುಷ್ಪಬಾಣಹಸ್ತೇ
ನಮಸ್ತೇ.. ಜಗದೇಕಮಾತಹಾ..ಆ..
ಮಾತಾ... ಮರಕತಶ್ಯಾಮಾ ಮಾತಂಗೀ ಮಧುಶಾಲಿನೀ
ಆ.....
ಮಾತಾ... ಮರಕತಶ್ಯಾಮಾ ಮಾತಂಗೀ ಮಧುಶಾಲಿನೀ
ಕುರ್ಯಾತ್ಕಟಾಕ್ಷಂ ಕಲ್ಯಾಣೀ.. ಕದಂಬ ವನವಾಸಿನೀ...
ಮಾತಾ... ಮರಕತಶ್ಯಾಮಾ ಮಾತಂಗೀ ಮಧುಶಾಲಿನೀ
ಕುರ್ಯಾತ್ಕಟಾಕ್ಷಂ ಕಲ್ಯಾಣೀ.. ಕದಂಬ ವನವಾಸಿನೀ...
ಜಯ ಮಾತಂಗತನಯೇ, ಜಯ ನೀಲೋತ್ಪಲದ್ಯುತೇ
ಜಯ ಸಂಗೀತರಸಿಕೇ, ಜಯ ಲೀಲಾಶುಕಪ್ರಿಯೇ...
ಸುಧಾಸಮುದ್ರಾಂತ ಹೃದ್ಯನ್ಮಣಿದ್ವೀಪ ಸಮ್ರೂಢ ಬಿಲ್ವಾಟವೀ ಮಧ್ಯ
ಕಲ್ಪದ್ರುಮಾಕಲ್ಪ ಕಾದಂಬ ಕಾಂತಾರವಾಸಪ್ರಿಯೇ...
ಕೃತ್ತಿವಾಸಪ್ರಿಯೇ.. ಸರ್ವಲೋಕಪ್ರಿಯೇ
ಪಲ್ಲಕೀವಾದನ ಪ್ರಕ್ರಿಯಾಲೋಲತಾಲೀದಲಾಬದ್ದ
ತಾಟಂಕ ಭೂಷಾವಿಶೇಷಾನ್ಮಿತೇ ಸಿದ್ದ ಸಮ್ಮಾನಿತೇ...
ದೇವ ದೇವೇಶ ದೈತ್ಯೇಶ ಯಕ್ಷೇಶ ಭೂತೇಶ ವಾಗೀಶ ಕೋಣೇಶ
ವಾಯ್ವಗ್ನಿ ಕೋಟೀರ ಮಾಣಿಕ್ಯ
ಸಂಕೃಷ್ಟ ಬಾಲಾ ತಪೋತ್ತಾಮ
ಲಾಕ್ಷಾರ ಸಾರುಣ್ಯ
ಲಕ್ಷ್ಮೀಗೃಹೀತ್ತಾಂಗಿ ಪದ್ಮದ್ವಯೇ ಅದ್ವಯೇ..
ಪುರುಚಿನನವರತ್ನ ಪೀಠಸ್ತಿತೆ, ಸುಸ್ತಿತೇ
ಶಂಖ ಪದ್ಮದ್ವಯೋಪಾಶ್ರಿತೇ, ಆಶ್ರಿತೇ
ದೇವಿ ದುರ್ಗಾ ವಟುಕ್ಷೇತ್ರ ಪಾಲೈರ್ಯುತೆ
ಮತ್ತ ಮಾತಂಗ ಕನ್ಯಾ ಸಮೂಹಾನ್ವಿತೇ...
ಸರ್ವಯಂತ್ರಾತ್ಮಿಕೆ
ಸರ್ವಮಂತ್ರಾತ್ಮಿಕೆ
ಸರ್ವತಂತ್ರಾತ್ಮಿಕೆ
ಸರ್ವಮುದ್ರಾತ್ಮಿಕೆ
ಸರ್ವಶಕ್ತ್ಯಾತ್ಮಿಕೆ
ಸರ್ವವರ್ಣಾತ್ಮಿಕೆ
ಸರ್ವರೂಪೇ ಜಗನ್ಮಾತೃಕೇ.. ಹೇ ಜಗನ್ಮಾತೃಕೇ
ಪಾಹಿ ಮಾಂ ಪಾಹಿ ಮಾಂ ಪಾಹಿಮಾಂ ಪಾಹೀ
********************************
ಕಾವ್ಯ (1995) -
ಸಂಗೀತ: ಸಾಧು ಕೋಕಿಲ
ಗಾಯಕ: ಎಸ್ ಪಿ ಬಿ
ವಂದನೆ ವಂದನೆ
ಸಾವಿರ ವಂದನೆ
ಸಾಧನೆ ತೋರಿದ ಜಾಣೆಗೆ
ಗೆಲುವಿನ ಬಂಗಾರಿಗೆ
ಸೊಬಗಿನ ಸಿಂಗಾರಿಗೆ
ವಂದನೆ ವಂದನೆ ವಂದನೆ || ೨
ನೀಲಾಂಬರದ ಬೆಳ್ದಿಂಗಳಲಿ
ತೇಲಾಡುತಿರೊ ಸೌಂದರ್ಯವು ನೀನೆ
ರಂಗೆರಿರುವ ಹೂದೋಟದಲಿ
ತೂಗಾಡುತಿರೊ ಮಂದಾರವು ನೀನೆ || ೨
ಮೋಹಾಂಗನೆ ನೀನು ಆ
ರಾಗಾಂಗ್ಕಿತ ನಾನು
ಓ ಶೋಭನೆ ನೀಲಾಂಜನೆ ಅಭಿವಂದನೆ
ವಂದನೆ ....
ಕಾರ್ತಿಕ ಸಿರಿ ದೇವಾಲಯದಿ
ಓಲಾಡುತಿರೊ ದೀಪಾಂಜಲಿಯು ನೀನೆ
ಬೃಂದಾವನದ ಕಾರಂಜಿಯಲಿ
ನಲಿದಾಡುತಿರೊ ನೃತ್ಯಾಂಗನೆಯು ನೀನೆ || ೨
ಸಿರಿ ಯೌವ್ವನೆ ನೀನು ಆ
ಅಭಿಮಾನಿಯು ನಾನು
ಓ ಶೋಭನೆ ಪ್ರೇಮಾಂಗನೆ ಅಭಿವಂದನೆ
ವಂದನೆ ....
************************
ಕೃಷ್ಣ ರುಕ್ಮಿಣಿ (1988) -
ಸಂಗೀತ: ರಾಜನ್ ನಾಗೇಂದ್ರ
ಗಾಯನ: ಎಸ್.ಪಿ.ಬಿ
ಕರ್ನಾಟಕದ ಇತಿಹಾಸದಲಿ
ಬಂಗಾರದ ಯುಗದ ಕಥೆಯನ್ನು
ಹಾಡುವೆ ಕೇಳಿ ನಾ ಹಾಡುವೆ ಕೇಳಿ
ಹಾಡುವೆ ಕೇಳಿ ನಾ ಹಾಡುವೆ ಕೇಳಿ
ಕರ್ನಾಟಕದ ಇತಿಹಾಸದಲಿ
ಜ್ಞಾನದ ಜ್ಯೋತಿಯು ವಿದ್ಯಾರಣ್ಯರು
ಆನುಗ್ರಹಗೈದ ಭೂಮಿ ಇದು
ಜ್ಞಾನದ ಜ್ಯೋತಿಯು ವಿದ್ಯಾರಣ್ಯರು
ಆನುಗ್ರಹಗೈದ ಭೂಮಿ ಇದು
ಹಕ್ಕ ಬುಕ್ಕರು ಆಳಿದರಿಲ್ಲಿ
ಹರುಷದ ಮಳೆಯನ್ನು ಎಲ್ಲು ಚೆಲ್ಲಿ
ವಿಜಯದ ಕಹಳೆಯ ಊದಿದರು
ವಿಜಯನಗರ ಸ್ಥಾಪನೆ ಮಾಡಿದರು
ಕರ್ನಾಟಕದ ....
ಗಂಡರ ಗಂಡ ಧೀರ ಪ್ರಚಂಡ
ಕೃಷ್ಣದೇವರಾಯ ಆಳಿದ ವೈಭವದೆ
ಗಂಡರ ಗಂಡ ಧೀರ ಪ್ರಚಂಡ
ಕೃಷ್ಣದೇವರಾಯ ಆಳಿದ ವೈಭವದೆ
ಕಲಿಗಳ ನಾಡು ಕಲಿಗಳ ಬೀಡು
ಕಲಿಗಳ ನಾಡು ಕವಿಗಳ ಬೀಡು
ಎನಿಸಿತು ಹಂಪೆಯು ಆ ದಿನದೆ
ಕನ್ನಡ ಬಾವುಟ ಹಾರಿಸಿದ
ಮಧುರೆವರೆಗು ರಾಜ್ಯವ ಅರಳಿಸಿದ
ಕರ್ನಾಟಕದ ಇತಿಹಾಸದಲ್ಲಿ
ಸಂಗೀತ ನಾಟ್ಯಗಳಾ ಸಂಗಮವಿಲ್ಲೆ
ಶಿಲ್ಪಾ ಕಲೆಗಳ ತಾಣವಿದೆ
ಸಂಗೀತ ನಾಟ್ಯಗಳಾ ಸಂಗಮವಿಲ್ಲೆ
ಶಿಲ್ಪಾ ಕಲೆಗಳ ತಾಣವಿದೆ
ಭುವನೇಶ್ವರಿಯ ತವರೂರಿದೆ
ಯತಿಗಳ ದಾಸರ ನೆಲೆ ನಾಡಿಲ್ಲೆ
ಪಾವನ ಮಣ್ಣಿದು ಹಂಪೆಯದು
ಯುಗ ಯುಗ ಅಳಿಯದ ಕೀರ್ತಿ ಇದು
ಕನ್ನಡ ಭೂಮಿ ಕನ್ನಡ ನುಡಿಯು
ಕನ್ನಡ ಕೀರ್ತಿ ಎಂದೆಂದು ಬಾಳಲಿ
ಸಿರಿಗನ್ನಡಂ ಗೆಲ್ಗೆ
ಸಿರಿಗನ್ನಡಂ ಗೆಲ್ಗೆ
ಸಿರಿಗನ್ನಡಂ ಗೆಲ್ಗೆ
***************
ಅನುರಾಗದ ಅಲೆಗಳು (1993) -
ಸಾಹಿತ್ಯ : ಹಂಸಲೇಖ
ಸಂಗೀತ : ಹಂಸಲೇಖ
ಗಾಯನ : ಡಾ.ರಾಜ್ ಕುಮಾರ್
ಜೀವಕೋಗಿಲೇ ಇಂಚರ ಅದಕೇ ದೇಹವೆಂಬುದೇ ಪಂಜರ
ಆ.....ಆ......ಓ....ಓ....
ಜೀವಕೋಗಿಲೇ ಇಂಚರ ಅದಕೇ ದೇಹವೆಂಬುದೇ ಪಂಜರ
ಇಂಚರ ಕೇಳಲು ಪಂಜರ ಅವಸರ
ಪಂಜರ ಮುರಿದರೇ ಇಂಚರ ಅಗೋಚರ......{ಪಲ್ಲವಿ}
ಬರುವಾಗ ತಾಯ ಗರ್ಭ ದಣಿಸೋ ಜೀವಾ
ಬೆಳೆವಾಗ ಮಾತುಬರದೇ ಅಳುವಾ ಜೀವಾ...ಅರಳೋ ಜೀವಾ
ಕಲಿತಾಗ ನಾನೇ ಎಂದು ಬೀಗೋ ಜೀವಾ
ಬಲಿತಾಗ ಪ್ರೀತಿಗಾಗಿ ಅಲೆಯೋ ಜೀವಾ..ಅಲೆಸೋ ಜೀವಾ
ಗೂಡಲ್ಲಿ ಸೇರೋ ಸುದ್ದಿ ಮೊದಲೇ ಕೊಡುವಾ
ಗೂಡಿಂದ ಹಾರೋ ಸುದ್ದಿ ಗುಟ್ಟಾಗಿಡುವಾ
ಇಂಚರ ಕೇಳಲೂ ಪಂಜರ ಅವಸರ
ಪಂಜರ ಮುರಿದರೇ ಇಂಚರ ಅಗೋಚರ.......{ಪಲ್ಲವಿ}
ಓ.....ಓ.....
ವೇದಾಂತ ಸಾರದಲ್ಲಿ ಅಮರಾತ್ಮವಿದೂ
ವಿಜ್ಞಾನ ಲೋಕದಲ್ಲಿ ಗೂಢಾತ್ಮವಿದೂ...ವಿವಾದಾತ್ಮವಿದೂ
ಕೆನ್ನೀರ ರಾಡಿಯಲ್ಲಿ ರಾಜೀವವಿದೂ
ಪರಿಶುದ್ದ ಪ್ರೇಮದಲ್ಲಿ ತಲ್ಲೀನವಿದೂ....ಪರಮಾತ್ಮವಿದೂ
ಅರಿತೋರು ಯಾರು ಇಲ್ಲಾ ಇದರಾ ಜಾಲಾ
ಸಾಯೋನು ತಾನೆ ಬಲ್ಲಾ ಇದರಾ ಮೂಲಾ
ಇಂಚರ ಕೇಳಲೂ ಪಂಜರ ಅವಸರ
ಪಂಜರ ಮುರಿದರೆ ಇಂಚರ ಅಗೋಚರ.........{ಪಲ್ಲವಿ}
*******************
6.
ಚೈತ್ರದ ಪ್ರೇಮಾಂಜಲಿ (1992) -
ಸಂಗೀತ: ಹಂಸಲೇಖ
ಗಾಯನ: ಎಸ್.ಪಿ.ಬಿ, ಮಂಜುಳ ಗುರುರಾಜ
ನನ್ನವರೇ ನನಗೆ ಕೊನೆಗೆ ಮುಳ್ಳಾದರೆದೆಗೆ
ಕನಸುಗಳು ಕರಗಿದವು ಆಸೆಗಳು ಸೊರಗಿದವು ಮರುಗಿದವು
ಅಂಜಿಕೆಯೆ ನನಗೆ ಕೊನೆಗೆ ಉರುಳಾಯಿತೆನಗೆ
ನಂಬಿದರೆ ನಿಜವುಂಟು ಕಾಣಿಸದ ಕಥೆಯುಂಟು ವ್ಯಥೆಯುಂಟು
ವಿನೋದದ ಆಲಿಂಗನ ವಿಲಾಸದ ಆ ಚುಂಬನ
ನಾ ಮೈ ಮರೆತೆನು ಕರಿನಾಗದ ಗೆಳೆತನದೊಳಗೆ
ನಾಕಣ್ತೆರೆಯೆಯುವ ಮೊದಲೇರಿತು ವಿಷ ಮೈಯೊಳಗೆ
ಅಪಾಯದ ಬಲಾಬಲ ದುರಾಸೆಯ ಫಲಾಫಲ
ಅದರರಿವಿಲ್ಲದೆ ಬರಿ ಪ್ರೇಮದ ಸವಿಯನು ಸವಿದೆ
ದೇವರೆ.. ಈ ಅತಿ ಆಸೆಗೆ ಮಸಿಯನು ಬಳಿದೆ
ವಿವಾಹವೇ ಪ್ರವಾಹವೊ ವಿಮೋಚನೆ ಇಲ್ಲಿಲ್ಲವೊ
ಈ ಸುಳಿಅಲೆಯಲಿ ಎದುರೀಜಲು ಬಲ ಕುಸಿದಿದೆಯೊ
ನಾ ಮುಳುಗಿರುವೆಡೆ ನಿಜವೆಲ್ಲವು ಒಳಗಡಗಿದೆಯೊ
ಓ ಸಾವೆ ನೀ ದಯಾಮಯ ಈ ನೋವಿಗೆ ತೋರು ದಯ
ಈ ಬದುಕಿನ ಜೊತೆ ಬಯಸುವವರು ನಯ ವಂಚಕರೆ
ಆ ಸವಿನುಡಿಯಲಿ ವಿಷ ಉಣಿಸುವ ಕೊಲೆಪಾತಕರೆ
****************
ಚೈತ್ರದ ಪ್ರೇಮಾಂಜಲಿ
ಸಾಹಿತ್ಯ: ಹಂಸಲೇಖ
ಸಂಗೀತ: ಹಂಸಲೇಖ
ಗಾಯಕರು : ಎಸ್. ಪಿ. ಬಾಲಸುಬ್ರಮಣ್ಯಂ
ಚೈತ್ರದ ಪ್ರೇಮಾಂಜಲಿಯ ಸುಮ ಸುಮ ಸುಮ
ಗಂಧದ ಪರಿಮಳಕಿಂತ ಘಮ ಘಮ ಘಮ
ಚೈತ್ರದ ಪ್ರೇಮಾಂಜಲಿಯ ಸುಮ ಸುಮ ಸುಮ
ಗಂಧದ ಪರಿಮಳಕಿಂತ ಘಮ ಘಮ ಘಮ
ಮಲ್ಲಿಗೆಯ ಮಳ್ಳಿ ಚೆಲುವಿನಲಿ ಮೆಲ್ಲುಲಿಯ ಮೆಲ್ಲ ನಗುವಿನಲಿ
ಸಂಪಿಗೆಯ ಮೆಲ್ಲ ನಗುವಿನಲಿ ತಂಪಿಡುವ ಶಶಿಯ ವದನದಲಿ
ಮಾತನಾಡೆ ಮಂದಾರ ನಿನ್ನ ಹೆಸರೆ ಶ್ರುಂಗಾರ
ಕನಕಾಂಬರಿ ಓ ನೀಲಾಂಬರಿ ನಿನಗೆ ನೀ ಸರಿ
ಸೇವಂತಿಗೆ ಸೂಜೀಮಲ್ಲಿಗೆ
ಗಿಡವಾಗಿ ಎಲೆಯಾಗಿ ನಿನಗೆನಾ ಸರಿ
ಚೈತ್ರದ ಪ್ರೇಮಾಂಜಲಿಯ ಸುಮ ಸುಮ ಸುಮ
ಗಂಧದ ಪರಿಮಳಕಿಂತ ಘಮ ಘಮ ಘಮ
ಕಣ್ಣಲ್ಲಿ ನೀನು ಕಮಲವತಿ ಒಡಲಲ್ಲಿ ತಾಳೆ ಪುಷ್ಪವತಿ
ಭಯವೇಕೆ ಅಂಜು ಮಲ್ಲಿಗೆಯೆ ಬಾ ಏಳು ಸುತ್ತು ಮಲ್ಲಿಗೆಯೆ
ಪಾರಿಜಾತ ವರವಾಗು ಸೂರ್ಯ ಕಾಂತಿ ಬೆಳಕಾಗು
ಮಧು ತುಂಬಿದ ಗುಲಾಬಿ ಸುಮ ನಿನಗೆ ನೀ ಸಮ
ನಶೆ ಏರಿಸೊ ಓ ರಜನಿ ಸುಮ
ಹೂದಾನಿ ಅಭಿಮಾನಿ ನಿನಗೆ ನಾ ಸಮ
ಚೈತ್ರದ ಪ್ರೇಮಾಂಜಲಿಯ ಸುಮ ಸುಮ ಸುಮ
ಗಂಧದ ಪರಿಮಳಕಿಂತ ಘಮ ಘಮ ಘಮ
************************
ನಿನಗಾಗಿ (2002) -
ಸಾಹಿತ್ಯ: ???
ಸಂಗೀತ: ಗುರುಕಿರಣ್
ಗಾಯನ: ರಾಜೇಶ್ ಕೃಷ್ಣನ್
ಎಲ್ಲೆಲ್ಲಿ ನಾ ನೋಡಲೀ
ನಿನ್ನದೆ ಚಿಲಿಪಿಲೀ..
ಕಣ್ಣು ಮುಚ್ಚಿಯು ಬೆಳಕಿದೆ
ಹೆಜ್ಜೆ ಇಡದೆ ಹಾರಿದೆ
ನನ್ನ ಒಳಗೀಗ ನಾನಿಲ್ಲಾ ಏನಾದೆನಾ
ನೀನೆ ನಾನೇನಾ ನಿನ್ನೊಳಗೆ ನೀರಾದೆನಾ
ಎಲ್ಲೆಲ್ಲಿ ನಾ ನೋಡಲೀ
ನಿನ್ನದೆ ಚಿಲಿಪಿಲೀ..
ಎಲ್ಲೆಲ್ಲಿ ನಾ ನೋಡಲೀ||
ಆ ಮೋಡದಾ ನೆರಳಲು ಕಾಣುವೆ
ನೆರಳಾಗೊ ನಿನ್ನ ರೂಪವಾ..
ಈ ಇಬ್ಬನಿ ಹನಿಯಲಿ ಕಣ್ಣಲಿ
ತೋರಿಹುದು ನಿನ ಬಿಂಬವಾ
ಹಿಮದಲೂ ನಿನ್ನ ಚಿತ್ರವಾ
ನನ್ನ ಉಸಿರೆ ಬಿಡಿಸಿದೇ..
ನನ್ನ ಒಳಗೀಗ ನಾನಿಲ್ಲಾ ಏನಾದೆನಾ..
ಹಗಲುಗನಸಲ್ಲೆ ಕಣ್ಮುಚ್ಚಿ ನಡೆದಿರುವೆ ನಾ..
ಎಲ್ಲೆಲ್ಲಿ ನಾ ನೋಡಲೀ
ನಿನ್ನದೆ ಚಿಲಿಪಿಲೀ..
ಎಲ್ಲೆಲ್ಲಿ ನಾ ನೋಡಲೀ||
ಆ ಕಡಲಿನಾ ಅಲೆಗಳಾ ಮೇಲೆಯೂ
ನಿನ್ನ ತುಂಟ ಕುಣಿದಾಟವೇ..
ಆ ಚಿಗುರಿನಾ ಎಲೆಗಳಾ ಮೇಲೆ..
ನಿನ್ನ ಲಜ್ಜೆಯಾ ರೂಪವೇ..
ಬೀಸೊಗಾಳಿ ಎದೆಯಲೂ
ನಿನ್ನ ಎದೆಯಾ ಬಡಿತವೇ..
ನನ್ನ ಒಳಗೀಗ ನಾನಿಲ್ಲಾ ಏನಾದೆನಾ..
ನಿನ್ನ ನೆನೆನೆನೆದು ನಿನ್ನಲ್ಲೆ ಕಲೆದೋದೆನಾ..
ಎಲ್ಲೆಲ್ಲಿ ನಾ ನೋಡಲೀ
ನಿನ್ನದೆ ಚಿಲಿಪಿಲೀ..
ಕಣ್ಣು ಮುಚ್ಚಿಯು ಬೆಳಕಿದೆ
ಹೆಜ್ಜೆ ಇಡದೆ ಹಾರಿದೆ
ನನ್ನ ಒಳಗೀಗ ನಾನಿಲ್ಲಾ ಏನಾದೆನಾ..
ನೀನೆ ನಾನೇನಾ ನಿನ್ನೊಳಗೆ ನೀರಾದೆನಾ..
ಎಲ್ಲೆಲ್ಲಿ ನಾ ನೋಡಲೀ
ನಿನ್ನದೆ ಚಿಲಿಪಿಲೀ..
ಎಲ್ಲೆಲ್ಲಿ ನಾ ನೋಡಲೀ||
***********************
ನೀ ಬರೆದ ಕಾದಂಬರಿ (1985) -
ಸಾಹಿತ್ಯ : ಆರ್.ಎನ್.ಜಯಗೋಪಾಲ್
ಸಂಗೀತ : ವಿಜಯಾನಂದ್
ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ
ಸೂಚನೆ: ವಿಷಾದ ಭಾವದಿಂದ ಕೂಡಿರುವ ಹಾಡಿನ ಸಾಹಿತ್ಯವನ್ನು ಇಲ್ಲಿ ಕೊಡಲಾಗಿದೆ. ಇದೇ ಸಾಲುಗಳಿಂದ ಪ್ರಾರಂಭವಾಗುವ ಹಾಡನ್ನು ಈ ಚಿತ್ರದಲ್ಲಿ ಯುಗಳ ಗೀತೆಯಾಗಿ ಹಾಗು ಮಗು ಹೇಳುವ ರೀತಿಯಲ್ಲಿ ಕೂಡ ಬಳಸಲಾಗಿದೆ.
ನೀ ಮೀಟಿದ ನೆನಪೆಲ್ಲವು
ಎದೆ ತುಂಬಿ ಹಾಡಾಗಿದೆ
ಇಂದೇತಕೊ ನಾನಿನ್ನಲಿ ಬೆರೆವಂತ ಮನಸಾಗಿದೆ
ಈ ಬಂಧನ ಬಹು ಜನ್ಮದ ಕಥೆ ಎಂದು ಮನ ಹೇಳಿದೆ
ಈ ಬಂಧನ ಬಹು ಜನ್ಮದ ಕಥೆ ಎಂದು ಮನ ಹೇಳಿದೆ
ನೀ ಮೀಟಿದ ನೆನಪೆಲ್ಲವು
ಎದೆ ತುಂಬಿ ಹಾಡಾಗಿದೆ
ಬಾಳಲ್ಲಿ ನೀ ಬರೆದೆ
ಕಣ್ಣೀರ ಕಾದಂಬರಿ
ಕಲ್ಲಾದ ಹೃದಯಕ್ಕೆ
ಏಕಾದೆ ನೀ ಮಾದರಿ
ಹುಸಿರಾಗುವೆ ಎಂದ ಮಾತೆಲ್ಲಿದೆ
ಸಿಹಿ ಪ್ರೇಮವೆ ಇಂದು ವಿಶವಾಗಿದೆ
ಹುಸಿ ಪ್ರೀತಿಯ ನಾ ನಂಬಿದೆ
ಮಳೆ ಬಿಲ್ಲಿಗೆ ಕೈ ಚಾಚಿದೆ
ಒಲವೆ ಚೆಲುವೆ ನನ್ನ ಮರೆತು ನಗುವೆ
ನೀ ಮೀಟಿದ ನೆನಪೆಲ್ಲವು
ಎದೆ ತುಂಬಿ ಹಾಡಾಗಿದೆ
ಹಗಲೇನು ಇರುಳೇನು
ಮನದಾಸೆ ಮರೆಯಾಗಿದೆ
ಸಾವೇನು ಬದುಕೇನು
ಏಕಾಂಗಿ ನಾನಾಗಿರೆ
ನಾ ಬಾಳುವೆ ಕಂದ ನಿನಗಾಗಿಯೆ
ಈ ಜೀವನ ನಿನ್ನ ಸುಖಕಾಗಿಯೆ
ನನ್ನಾಸೆಯ ಹೂವಂತೆ ನೀ
ಇರುಳಲ್ಲಿಯೂ ಬೆಳಕಂತೆ ನೀ
ನಗುತ ಇರು ನೀ
ನನ್ನ ಪ್ರೀತಿ ಮಗುವೆ
ನೀ ಮೀಟಿದ ನೆನಪೆಲ್ಲವು
ಎದೆ ತುಂಬಿ ಹಾಡಾಗಿದೆ
ಇಂದೇತಕೊ ನಾನಿನ್ನಲಿ ಬೆರೆವಂತ ಮನಸಾಗಿದೆ
ಈ ಬಂಧನ ಬಹು ಜನ್ಮದ ಕಥೆ ಎಂದು ಮನ ಹೇಳಿದೆ
ಈ ಬಂಧನ ಬಹು ಜನ್ಮದ ಕಥೆ ಎಂದು ಮನ ಹೇಳಿದೆ
********************************
ಪ್ರೇಮಲೋಕ (1987) -
ಸಂಗೀತ / ಸಾಹಿತ್ಯ : ಹಂಸಲೇಖ
ಗಾಯಕರು: ಎಸ್.ಪಿ.ಬಿ
ಏಯ್!! ಏಯ್!!!
ಹೇಯ್! ಮೋಸಗಾರನಾ? ಹೃದಯಶೂನ್ಯನಾ?
ನಿನಗೆ ಇನ್ನು ನಾ ಬೇಡವಾದೆನಾ?
ಕೇಳೆನ್ನ ಒಲವೇ, ನೀನನ್ನ ಜೀವವೆ
ನಂಬಿಕೆ ಇಲ್ಲವೇ?, ಶಂಕಿಸ ಬೇಡವೇ
ಹೇಯ್! ಬಾರೆ ಹೃದಯವೆ
ಮನಸು ತೆರೆದಿದೆ
ನಿನ್ನ ಕಾಣದೆ ಹೃದಯ ಬಿರಿದಿದೆ
ಕೇಳೆನ್ನ ಗೆಳತಿ, ಪ್ರೇಮಕ್ಕೆ ಈ ಗತಿ
ತರುವ ಸಂಗತಿ, ಲೋಕದ ಪದ್ಧತಿ
|| ಹೇಯ್! ಮೋಸಗಾರನಾ? ||
ಹೇಯ್! ಇರುಳೆಂದು ಹಗಲಲ್ಲ
ಸುಳ್ಳೆಂದು ನಿಜವಲ್ಲ
ಈ ಶಕುನಿ ಜನರೆದುರೂ
ಪ್ರೀತಿಗೆ ಬೆಲೆಯಿಲ್ಲ
ಈ ಲೋಕ ಎಂದರೆ ಬರಿ ಪ್ರೀತೀಗೆ ತೊಂದರೆ
ಹೆಜ್ಜೆ ಹಿಂದಿಟ್ಟರೆ, ಗೆಲುವಿಲ್ಲ ಹೊರಗೆ ಬಾರೆ
ಕಣ್ಣೀರಿನ್ನೇಕೆ? ಕಂಗಾಲೇಕೆ? ಬಾ...
ಬಾರೆ ಹೃದಯವೆ, ಮನಸು ತೆರೆದಿದೆ, ಏಯ್
ನಿನ್ನ ಕಾಣದೆ ಹೃದಯ ಬಿರಿದಿದೆ
ಕೇಳೆನ್ನ ಒಲವೇ, ನೀನೆನ್ನ ಜೀವವೇ
ನಂಬಿಕೆಯಿಲ್ಲವೇ?, ಶಂಕಿಸಬೇಡವೆ
|| ಏಯ್! ಮೋಸಗಾರನಾ? ||
ಹೇಯ್! ಪ್ರೀತಿಯ ಹಾಲಿಗೆ ಹುಳಿಯಿಂಡಬಹುದೀಗ
ಭಯವೇಕೆ ಈ ಹುಳಿಗೆ? ಮೊಸರಾಗದೇನೀಗ
ಉಸಿರಾಟ ನಿಂತರೂ ನಾನಿಲ್ಲಿಂದ ಹೋಗೆನೇ
ಹೆಸರೇನೆ ಬಂದರೂ ನಾನೆಂದೂ ನಿನ್ನ ಬಿಡೆನೇ
ನಿನ್ನಾಮೇಲಾಣೆ ಮೋಸಾ ಕಾಣೆ ಬಾ....ಆಹ್!
ಬಾರೆ ಹೃದಯವೇ ಮನಸು ತೆರೆದಿದೆ..ಏಯ್!
ನಿನ್ನ ಕಾಣದೆ ಹೃದಯ ಬಿರಿದಿದೆ
ಕೇಳೆನ್ನ ಗೆಳತಿ, ಪ್ರೇಮಕ್ಕೆ ಈ ಗತಿ
ತರುವ ಸಂಗತಿ, ಲೋಕದ ಪದ್ದತಿ
|| ಏಯ್! ಮೋಸಗಾರನಾ? ||
**************************
ಸಾಹಿತ್ಯ / ಸಂಗೀತ: ಹಂಸಲೇಖ
ಗಾಯಕರು: ಕೆ. ಜೆ. ಯೇಸುದಾಸ್, ಎಸ್. ಜಾನಕಿ
ಪ್ರೇಮಲೋಕದಿಂದ ತಂದ ಪ್ರೇಮದ ಸಂದೇಶ
ಭೂಮಿಯಲ್ಲಿ ಹಾಡಿ ತಿಳಿಸೋಣ
ಪ್ರೀತಿ ಹಂಚೋಣ
ಆನಂದ ಪಡೆಯೋಣ
ಬನ್ನಿ ಪ್ರೇಮದ ಹಸ್ತ್ರ ಹೇಳೋಣ
ಜೀವನವೆಂದರೆ ಪ್ರೀತಿಯೆನ್ನೋಣ
ಲೋಕದ ಸೃಷ್ಠಿಗೆ ಪ್ರೀತಿ ಕಾರಣ ||೨||
ಪ್ರೇಮಲೋಕದಿಂದ ತಂದ ಪ್ರೇಮದ ಸಂದೇಶ
ಗಾಳಿ, ನೀರು , ಹೂವು, ಹಣ್ಣು, ಇರುವುದು ಏತಕ್ಕೆ?
ಪ್ರೀತಿ ಇಂದ ತಾನೆ? ಪ್ರೇಮದಿಂದ ತಾನೆ?
ಸೂರ್ಯ ಚಂದ್ರ ರಾತ್ರಿ ಹಗಲು ಬರುವುದು ಏತಕ್ಕೆ?
ಪ್ರೀತಿ ಇಂದ ತಾನೆ? ಪ್ರೇಮದಿಂದ ತಾನೆ?
ಬರುವುದು ಹೇಗೆ? ಇರುವುದು ಹೇಗೆ?
ತಿಳಿದಿದೆ ನಮಗೆ, ಆದರೆ ಕೊನೆಗೆ
ಹೋಗುವ ಘಳಿಗೆ ತಿಳಿಯದು ನಮಗೆ
ಒಗಟಿದು ಎಲ್ಲರಿಗೆ
ಜೀವನವೆಂದರೆ ಪ್ರೀತಿಯೆನ್ನೋಣ
ಲೋಕದ ಸೃಷ್ಠಿಗೆ ಪ್ರೀತಿ ಕಾರಣ
ಪ್ರೇಮಲೋಕದಿಂದ ತಂದ ಪ್ರೇಮದ ಸಂದೇಶ
ರಾಗ ತಾಳ, ಹಾವ ಭಾವ ಸೇರದೆ ಹೋದರೇ
ಗಾನ ನಾಟ್ಯವಿಲ್ಲ, ಪ್ರೇಮ ರಾಗವಿಲ್ಲ
ಜೀವ ಜೀವ ಪ್ರೀತಿಯಿಂದ ಕೂಡದೆ ಹೋದರೆ
ಜೀವ ರಾಗವಿಲ್ಲ, ಶೂನ್ಯಲೋಕವೆಲ್ಲ
ಬದುಕಿನ ಜೊತೆಗೆ ಪ್ರೆಮದ ಬೆಸುಗೆ
ಇರುವುದು ಹೀಗೆ ಒಲವಿನ ತೆರೆಗೆ
ಪ್ರೀತಿಯ ಸವಿಗೆ ತೋರುವ ನಮಗೆ
ಪ್ರೇಮವು ವರತಾನೆ?
ಜೀವನವೆಂದರೆ ಪ್ರೀತಿಯೆನ್ನೋಣ
ಲೋಕದ ಸೃಷ್ಠಿಗೆ ಪ್ರೀತಿ ಕಾರಣ
|| ಪ್ರೇಮಲೋಕದಿಂದ ||
ಜೀವನವೆಂದರೆ ಪ್ರೀತಿಯೆನ್ನೋಣ
ಲೋಕದ ಸೃಷ್ಠಿಗೆ ಪ್ರೀತಿ ಕಾರಣ ||೨||
*********************.
12.
ರಥಸಪ್ತಮಿ (1986) -
ಸಂಗೀತ: ಉಪೇಂದ್ರಕುಮಾರ್
ಗಾಯಕ: ಎಸ್ ಪಿ ಬಿ
ಒಲವೆ
ಹೂವಾಗಿ ಬಳಿ ಬಂದೆ
ಒಲವೆ
ಹೊಸ ಆಸೆಯ ಸಾವಿರ ತೋರಿಸಿದೆ
ಒಲವೆ ಒಲವೆ
ಸವಿ ಜೇನು ನೀನು
ಹೀಗೇಕೆ ವಿಷವಾದೆ || ೩
ಒಲವೆ
ಮೇಲೆ ಬಾನಿನಲಿ ತೇಲಿ ಹೋಗುತಿರೆ
ಸಿಡಿಲು ಬಂದಂತೆ ಆಯ್ತೆ
ಏತಕೆ
ಪ್ರೇಮ ಗಾನವನು ಸೇರಿ ಹಾಡುತಿರೆ
ಕೊರಳು ಕುಯ್ದಂತೆ ಆಯ್ತೆ
ಏತಕೆ
ಬೆಳಕನ್ನು ನೋಡುವ ಕಂಗಳ
ಬೆಳಕನೆ ಆರಿಸಿ
ಬಿರುಗಾಳಿ ಯಂತಾದೆ
ಬಿರುಗಾಳಿಯಂತಾದೆ
ಹೀಗೇಕೆ ವಿಷವಾದೆ
ಒಲವೆ
ಜೀವ ವೇದನೆಯ ರಾಗ ಹಾಡುತಿರೆ
ಬದುಕೆ ವಿಶಾದಾವಾಯ್ತೆ ಈ ದಿನ
ದೇಹ ಪ್ರಾಣಗಳು ಬೇರೆ ಆಗುತಿರೆ
ಕನಸು ಕಂಡಂತೆ ಆಯ್ತೆ ಈ ಕ್ಷಣ
ಎದೆಯಲ್ಲಿ ಬೆಳಗುವ ದೀಪವ
ರೋಷದಿ ಆರಿಸೊ
ಬಿರುಗಾಳಿ ಏಕಾದೆ
ಬಿರುಗಾಳಿ ಏಕಾದೆ
ಹೀಗೇಕೆ ವಿಷವಾದೆ
ಒಲವೆ
ಹೂವಾಗಿ ಬಳಿ ಬಂದೆ
ಒಲವೆ
ಹೊಸ ಆಸೆ ಸಾವಿರ ತೋರಿಸಿದೆ
ಒಲವೆ ಒಲವೆ
ಸವಿ ಜೇನು ನೀನು
ಹೀಗೇಕೆ ವಿಷವಾದೆ || ೩
ಒಲವೆ
****************
13
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಉಪೇಂದ್ರಕುಮಾರ್
ಗಾಯನ: ಎಸ್. ಜಾನಕಿ ಮತ್ತು ಎಸ್.ಪಿ.ಬಾಲಸುಬ್ರಮಣ್ಯಂ
[ಹೆಣ್ಣು]
ಶಿಲೆಗಳು ಸಂಗೀತವಾ ಹಾಡಿವೆ||2||
ಬೇಲೂರ ಗುಡಿಯಲ್ಲಿ, ಕೇಶವನೆದುರಲ್ಲಿ ||೨||
ಅನುದಿನ, ಅನುಕ್ಷಣ ಕುಣಿಯುತಲೀ
ಶಿಲೆಗಳು ಸಂಗೀತವಾ ಹಾಡಿವೇ...
ಕುಣಿಯುವ ಕಾಲ್ಗೆಜ್ಜೆ ಘಲಘಲ ಎನುವಂತೆ
ಅರಳಿದ ಕಣ್‍ಬೆಳಕು ಫಳಫಳ ಹೊಳೆದಂತೆ
ಕುಣಿಯುವ ಕಾಲ್ಗೆಜ್ಜೆ ಘಲಘಲ ಎನುವಂತೆ
ಅರಳಿದ ಕಣ್‍ಬೆಳಕು ಫಳಫಳ ಹೊಳೆದಂತೆ
ಆ ಶಿಲ್ಪಿಯ ಹೊಂಗನಿಸ ಸೌಂದರ್ಯದ ಕನ್ನಿಕೆಯರು
ಕರವ ಮುಗಿದು ಶರಣು ಎಂದು
ಭಕುತಿಯಲಿ ಶ್ರೀಹರಿಯ ಸ್ತುತಿಸುತ ಸಂಗೀತವಾ ಹಾಡಿವೆ
ಶಿಲೆಗಳು ಸಂಗೀತವಾ ಹಾಡಿವೆ
ಶಿಲೆಗಳು ಸಂಗೀತವಾ ಹಾಡಿವೆ
ಶಿಲೆಗಳು ಸಂಗೀತವಾ
ಶಿಲೆಗಳು ಸಂಗೀತವಾ
ಶಿಲೆಗಳು ಸಂಗೀತವಾ....
[ಗಂಡು] ಆ ಆ ಆ......
ಶಿಲೆಗಳು ಸಂಗೀತವಾ ಹಾಡಿವೆ...
ಬೇಲುರ ಗುಡಿಯಲ್ಲಿ, ಕೇಶವನೆದುರಲ್ಲಿ
ಅನುದಿನ, ಅನುಕ್ಷಣ ಕುಣಿಯುತಲೀ
ಶಿಲೆಗಳು ಸಂಗೀತವಾ ಹಾಡಿವೆ..
ಶಿಲೆಯಲೆ ಕಲೆಯನ್ನು ಸೆರೆಹಿಡಿದಾ..||೨||
ಕಲೆಯನು ಶಿಲೆಯಲ್ಲೆ ಅರಳಿಸಿದಾ
ಉಳಿಯಿಂದ ಮೀಟಿ ಹೊಸ ನಾದ ತಂದು ಹೊಸ ರೂಪ ತಂದ ಕಲೆಗಾರನ
ಯಾವ ರೀತಿ ಈಗ ನಾನು ಹಾಡಿ ಹೊಗಳುವುದೋ ಕುಣಿಯುವುದೋ ಎನ್ನುತಾ
ಶಿಲೆಗಳು ಸಂಗೀತವಾ ಹಾಡಿವೆ
ಶಿಲೆಗಳು ಸಂಗೀತವಾ ಹಾಡಿವೆ
********************
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಉಪೇಂದ್ರಕುಮಾರ್
ಗಾಯನ: ಎಸ್. ಜಾನಕಿ ಮತ್ತು ಎಸ್.ಪಿ. ಬಾಲಸುಬ್ರಮಣ್ಯಂ
[ಗಂಡು]
ಜೊತೆಯಾಗಿ ಹಿತವಾಗಿ, ಸೇರಿ ನಡೆವಾ, ಸೇರಿ ನುಡಿವಾ ||೨||
ನನ್ನ ಬದುಕಲ್ಲಿ ನೀ ಎಂದು ಬೆಳಕಾಗಿರು
ನನ್ನ ಉಸಿರಲ್ಲಿ ನೀ ಎಂದು ಉಸಿರಾಗಿರು
ನಿನ್ನ ಬಿಡಲಾರೆ ನಾನೆಂದಿಗೂ....
[ಹೆಣ್ಣು]
ಜೊತೆಯಾಗಿ ಹಿತವಾಗಿ, ಸೇರಿ ನಡೆವಾ, ಸೇರಿ ನುಡಿವಾ ||೨||
ನನ್ನ ಬದುಕಲ್ಲಿ ನೀ ಎಂದು ಬೆಳಕಾಗಿರು
ನನ್ನ ಉಸಿರಲ್ಲಿ ನೀ ಎಂದು ಉಸಿರಾಗಿರು
ನಿನ್ನ ಬಿಡಲಾರೆ ನಾನೆಂದಿಗೂ....
[ಗಂಡು]
ಆ ಬಾನ ನೆರಳಲ್ಲಿ, ಆ ಸೂರ್ಯನೆದುರಲ್ಲಿ
ಒಲವಿಂದ ನಾವೀಗ, ಈ ಗಂಗೆ ದಡದಲ್ಲಿ
ಒಂದಾಗಿ ಸವಿಯಾದ ಮಾತೊಂದ ನುಡಿವ
[ಹೆಣ್ಣು]
ಈ ಸಂಜೆ ರಂಗಲ್ಲಿ, ಈ ತಂಪು ಗಾಳೀಲಿ
ಜೊತೆಯಾಗಿ ನಾವೀಗ, ಶಂಕರನ ಎದುರಲ್ಲಿ
ಇಂಪಾಗಿ ಹಿತವಾದ ಮಾತೊಂದ ನುಡಿವಾ
[ಗಂಡು]ನೀನೆ ನನ್ನ ಪ್ರಾಣ, [ಹೆಣ್ಣು] ನಮ್ಮ ಪ್ರಣಯ ಮಧುರ ಗಾನ ||೨||
[ಹೆಣ್ಣು]ಜೊತೆಯಾಗಿ
[ಗಂಡು] ಹಿತವಾಗಿ
[ಹೆಣ್ಣು]ಸೇರಿ ನಡೆವ
[ಗಂಡು] ಸೇರಿ ನುಡಿವಾ
[ಹೆಣ್ಣು]
ಕನಸಲ್ಲಿ ಕಂಡಾಸೆ, ಮನಸಲ್ಲಿ ಇರುವಾಸೆ
ಎಲ್ಲವೂ ಒಂದೇನೇ, ನಿನ್ನನ್ನು ಪಡೆವಾಸೆ
ಇನ್ನೇನು ಬೇಕಿಲ್ಲ, ನನ್ನಾಣೆ ನಲ್ಲ
[ಗಂಡು]
ಹಗಲಲ್ಲಿ ಕಂಡಾಸೆ, ಇರುಳಲ್ಲಿ ಬಂದಾಸೆ
ಎಲ್ಲಾವೂ ಒಂದೇನೆ, ನಿನ್ನೊಡನೆ ಇರುವಾಸೆ
ಬೇರೇನು ನಾ ಕೇಳೆ, ನಿನ್ನಾಣೆ ನಲ್ಲೆ
[ಗಂಡು] ಎಂದೂ ಹೀಗೆ ಇರುವ, [ಹೆಣ್ಣು] ನಾವೆಂದೂ ಹೀಗೆ ನಲಿವ ||೨||
[ಗಂಡು, ಹೆಣ್ಣು]ನಿನ್ನ ಬಿಡಲಾರೆ ನಾನೆಂದಿಗೂ
ಲಲ ಲಾ ಲಾ
[ಹೆಣ್ಣು]
ಜೊತೆಯಾಗಿ ಹಿತವಾಗಿ, ಸೇರಿ ನಡೆವ, ಸೇರಿ ನುಡಿವಾ ||೨||
[ಗಂಡು] ನನ್ನ ಬದುಕಲ್ಲಿ ನೀ ಎಂದು ಬೆಳಕಾಗಿರು
[ಹೆಣ್ಣು] ನನ್ನ ಉಸಿರಲ್ಲಿ ನೀ ಉಸಿರಾಗಿರು
[ಗಂಡು, ಹೆಣ್ಣು] ನಿನ್ನ ಬಿಡಲಾರೆ ನಾನೆಂದಿಗೂ....
************************
ರಾಯರು ಬಂದರು ಮಾವನ ಮನೆಗೆ (1993) -
ಸಾಹಿತ್ಯ: ಆರ್. ಎನ್. ಜಯಗೋಪಾಲ್
ಸಂಗೀತ: ರಾಜ್ ಕೋಟಿ
ಗಾಯನ: ಎಸ್. ಪಿ. ಬಾಲಸುಭ್ರಮಣ್ಯಂ
ಮುದ್ದಿನ ಹುಡುಗಿ ಚೆಂದ, ಮೌನದ ರೂಪವೆ ಅಂದ,
ಚೆಂದಕೆ ಚೆಂದ ವಂತೆ ನಿನ್ನ ಅಂದವು
ಮುದ್ದಿನ ಹುಡುಗಿ ಚೆಂದ, ಮೌನದ ರೂಪವೆ ಅಂದ,
ಚೆಂದಕೆ ಚೆಂದ ವಂತೆ ನಿನ್ನ ಅಂದವು
ಈ ಹೃದಯ ನಿನಗಾಗಿಯೇ ಮೀಸಲು ಓ ಪ್ರಿಯೆ ಎಂದಿಗೂ
ಈ ಬೆಸುಗೆ ಬಿರುಗಾಳಿಯೆ ಬಂದರೂ ಒಡೆಯದು ಎಂದಿಗೂ
ಮುದ್ದಿನ ಹುಡುಗಿ ಚೆಂದ,ಮೌನದ ರೂಪವೆ ಅಂದ,
ಚೆಂದಕೆ ಚೆಂದ ವಂತೆ ನಿನ್ನ ಅಂದವು
ಓ ಚಿನ್ನ ಅಂದು ನೋಡಿದೆ ನಿನ್ನನು
ಓ ರನ್ನ ಸೆರೆ ಮಾಡಿದೆ ನನ್ನನು
ಅರಿಯದೆ ಹೇಗೊ ನಾ ಬೆರೆತೆ ನಿನ್ನಲಿ
ತನು ಮನವೆಲ್ಲ ತುಂಬಿ ನಿಂತೆ ನನ್ನಲಿ
ನಿನ್ನನೆ ಕಂಡೆ ಎಲ್ಲೆಲ್ಲು, ನನ್ನನ್ನೆ ಕಂಡೆ ನಿನ್ನಲ್ಲು
ನಿನ್ನನೆ ಕಂಡೆ ಎಲ್ಲೆಲ್ಲು, ನನ್ನನ್ನೆ ಕಂಡೆ ನಿನ್ನಲ್ಲು
ಈ ಹೃದಯ ನಿನಗಾಗಿಯೇ ಮೀಸಲು ಓ ಪ್ರಿಯೆ ಎಂದಿಗೂ
ಮುದ್ದಿನ ಹುಡುಗಿ ಚೆಂದ,ಮೌನದ ರೂಪವೆ ಅಂದ,
ಚೆಂದಕೆ ಚೆಂದ ವಂತೆ ನಿನ್ನ ಅಂದವು
ಯಾವುದೋ ಜನುಮಾಂತರ ಬಂಧನ,
ಬೆರೆಸಿತು ಅದು ನಮ್ಮನು ಆ ದಿನ
ಹೆಣ್ಣು: ತಾಳದು ಜೀವ ನೀ ನಿಮಿಷ ನೊಂದರು,
ಒಂದೆ ಒಂದು ಹನಿಯ ಕಣ್ಣೀರು ಬಂದರು,
ನಿನ್ನನು ಮರೆಯಲಾರೆನು ಅಗಲಿ ಬದುಕಲಾರೆನು
ನಿನ್ನನು ಮರೆಯಲಾರೆನು ಅಗಲಿ ಬದುಕಲಾರೆನು
ಈ ಬೆಸುಗೆ ಬಿರುಗಾಳಿಯೆ ಬಂದರೂ ಒಡೆಯದು ಎಂದಿಗೂ
ಮುದ್ದಿನ ಹುಡುಗ ಚೆಂದ,ಮೌನದ ರೂಪವೆ ಅಂದ,
ಚೆಂದಕೆ ಚೆಂದ ವಂತೆ ನಿನ್ನ ಅಂದವು
ಗಂಡು:ಮುದ್ದಿನ ಹುಡುಗಿ ಚೆಂದ,ಮೌನದ ರೂಪವೆ ಅಂದ,
ಚೆಂದಕೆ ಚೆಂದ ವಂತೆ ನಿನ್ನ ಅಂದವು
ಈ ಹೃದಯ ನಿನಗಾಗಿಯೇ ಮೀಸಲು ಓ ಪ್ರಿಯೆ ಎಂದಿಗೂ
ಈ ಬೆಸುಗೆ ಬಿರುಗಾಳಿಯೆ ಬಂದರೂ ಒಡೆಯದು ಎಂದಿಗೂ
****************************
ಶೃತಿ ಸೇರಿದಾಗ (1987) -
ಸಾಹಿತ್ಯ : ಚಿ.ಉದಯಶಂಕರ
ಸಂಗೀತ : ಟಿ.ಜಿ.ಲಿಂಗಪ್ಪ
ಗಾಯನ : ಎಸ್.ಜಾನಕಿ
ರಾಗ : ಮಧುಬಂತಿ
ಆ.......ಆ.......
ಕನಸಲ್ಲಿ ಬಂದವನಾರೇ..ಮನಸಲ್ಲಿ ನಿಂದವನಾರೇ
ಅವನಾರೋ ನಾ ಕಾಣೆ ನೀ ಹೇಳೆ ಗೆಳತಿ......{ಪಲ್ಲವಿ}
ಜಟೆಯಲ್ಲಿ ಗಂಗೆಯ ಧರಿಸಿರುವಾ
ಮುಡಿಯಲಿ ಚಂದ್ರನ ಮುಡಿದಿರುವಾ
ಶೂಲವು ಅವನಾ ಕರದಲ್ಲೀ..
ನಗುವಾ ಮೊಗವಾ ಕಂಡು ಸೋತೆ....{ಪಲ್ಲವಿ}
ಮಂಜಿನ ಗಿರಿಯಲಿ ಕಾಣಿಸಿದಾ
ಸೂರ್ಯನ ಕಾಂತಿಯ ನಾಚಿಸಿದಾ
ಪ್ರೇಮದಿ ನನ್ನಾ ಬಳಿ ಬಂದಾ
ಒಲಿದು ಬಂದೆ ಗಿರಿಜೆ ಎಂದ....{ಪಲ್ಲವಿ}
*******************************
ಪ್ರೀತಿಯಿಂದ ಪ್ರೀತಿಗಾಗಿ- ಜಿ.ವಿಜಯ್ ಹೆಮ್ಮರಗಾಲ