ತಿಂಗಾ ತಿಂಗಳಿಗೂ ಚೆಂದ ನಂಜನಗೂಡು

ತಿಂಗಾ ತಿಂಗಳಿಗೂ ಚೆಂದ ನಂಜನಗೂಡು

ತಿಂಗಾ ತಿಂಗಳಿಗೂ ಚೆಂದ ನಂಜನಗೂಡು
ಗಂಧ ತುಂಬೈತೆ ಉಡಿಗೆಲ್ಲಾ
ಗಂಧ ತುಂಬೈತೆ ಉಡಿಗೆಲ್ಲಾ ನಂಜುಂಡೋ
ಅಪ್ಪಾ ನಂಜುಂಡೋ ನೆಲೆಗೊಂಡು
ಅಪ್ಪಾ ನಂಜುಂಡೋ ನೆಲೆಗೊಂಡು ||

ಎದ್ದೇಳೊ ನಂಜುಂಡ ಎಷ್ಟೊತ್ತು ನಿನ್ನ ನಿದ್ದೆ
ಆನೆ ಬಂದಾವೆ ಅರಮನೆಗೇ
ಆನೆ ಬಂದಾವೆ ಅರಮನೆಗೆ ನಂಜುಂಡೋ
ಭಕ್ತ್ರು ಬಂದವ್ರೇ ದರುಶನಕೇ
ಭಕ್ತ್ರು ಬಂದವ್ರೇ ದರುಶನಕೇ ||

ಮಂದಿ ಮಂದೀಯೆಂದು ಮಂದಿ ನಂಬಲುಹೋದೆ
ಮಂದಿ ಬಿಟ್ಟಾರೋ ನಡುನೀರಾ
ಮಂದಿ ಬಿಟ್ಟಾರೋ ನಡುನೀರ ನಂಜುಂಡೋ
ಅಪ್ಪಾ ನನ್ ಕೈಯಾ ಬಿಡಬ್ಯಾಡ
ಅಪ್ಪಾ ನನ್ ಕೈಯಾ ಬಿಡಬ್ಯಾಡ ||
********************************ಪ್ರೀತಿಯಿಂದ ಪ್ರೀತಿಗಾಗಿ ಜಿ.ವಿಜಯ್ ಹೆಮ್ಮರಗಾಲ

Rating
Average: 3.3 (11 votes)