ಕೊಂದವರು ಯಾರು

ಕೊಂದವರು ಯಾರು

ವರುಣ್

ಥೂ ಇಂಥ ಹಲ್ಕಾ ಅಂತ ಗೊತ್ತಿದ್ದರೆ ಇವನ ಹತ್ತಿರ ಕೆಲ್ಸಕ್ಕೆ ಸೇರ್ತಿರಲಿಲ್ಲ. ಎಷ್ಟು ಕಷ್ಟ ಪಟ್ಟಿದ್ದೆ ಇವನಿಗೋಸ್ಕರ. ಮದುವೆಗೂ ಕೇವಲ್ ಮೂರೆ ದಿನ ರಜಾ ಕೊಟ್ಟಿದ್ದ . ಆದರೂ ಅದೇನು ಒಳ್ಳೆಯ ಬುದ್ದಿ ಬಂತ್ಟೊ ಮದುವೆಗೆ ಬಂದ ಹೋದ ಮೇಲೆ ಪ್ರಮೋಷನ್ ಕೊಟ್ಟ . ಮನೆ ಕಟ್ಟಿಸುವಂತೆ ಹೇಳಿದ ಸಾಲಕ್ಕೆ ಶಿಫಾರಸ್ಸು ಮಾಡಿದ. ಹೆಂಡತಿ ದಿವ್ಯಳ ಮೈ ಮೇಲೆ ಒಡವೆಗಳನ್ನು ಮಾಡಿಸಿಕೊಡುವಂತೆ ಹೇಳಿದ . ಕಾರು ಎಲ್ಲ ಕೊಡಿಸಿದ . ಎಲ್ಲಾ ದಿವ್ಯಾಳ ಕಾಲ್ಗುಣ ಎಂದುಕೊಂಡರೆ ಅದು ಅವಳ ಅಂದದಿಂದ ಎಂದು ತಿಳಿದಿದ್ದು ಬಹಳ ತಡವಾಗಿ.

ಅವನು ಹೇಳಿದ್ದು ಎಷ್ಟು ಅಸಹ್ಯವಾಗಿತ್ತು "ವರುಣ್ ನೋಡು ಒಬ್ಬೊಬ್ಬರಿಗೂ ಒಂದೊಂದು ವೀಕ್ನೆಸ್ ಇರುತ್ತೆ ನಿಂಗೆ ಹಣದ ಅವಶ್ಯಕತೆ ಇತ್ತು ಹಾಗಾಗಿ ಸಾಲ ಮಾಡಿದೆ . ಈಗ ಮೈ ತುಂಬ ಸಾಲ . ಅದು ನಿನ್ನ ವೀಕ್ನೆಸ್. ನಂಗೆ ಹಣ ಇದೆ ಆದರೆ ಅದೇನೋ ಚೆನ್ನಾಗಿರೋ ಹುಡುಗೀರನ್ನ ನೋಡಿದರೆ ಮೈ ಅವರನ್ನು ಪಡೀಬೇಕು ಅನ್ನಿಸುತ್ತೆ . ನನ್ನ್ ವೀಕ್ ನೆಸ್ ಅದು . ಈಗ ನಿನ್ನ ಹೆಂಡತೀನ ಮದುವೇಲಿ ನೋಡಿದೆ . ಅಷ್ಟೆ ಆಗಿನಿಂದ ಅವಳನ್ನ ಹೇಗೆ ಜೊತೆ ಮಾಡ್ಕೊಬೇಕು ಅಂತ ಯೋಚಿಸಿದೆ. ಕೊನೆಗೆ ನಿನ್ನ ಸಾಲದ ಬಲೇಲಿ ಸಿಗಿಸಿದರೆ ಇದೆಲ್ಲಾ ಅಗುತ್ತೆ ಅಂತ ಪ್ಲಾನ್ ಮಾಡಿದೆ . ಈಗ ನೀನು ಒಪ್ಪಲೇಬೇಕು . ನಾಳೆ ಟುಲಿಪ್ ರೆಸಾರ್ಟನಲ್ಲಿ ರೂಮ್ ಬುಕ್ ಮಾಡು ಅವಳನ್ನ ಕರ್ಕೊಂಡು ಬಾ ಹಾಗೆ ಡ್ರಿಂಕ್ಸ್ ಅರೇಂಜ್ ಮಾಡು ಇಲ್ಲ ಅಂದರೆ ಕೆಲಸ ಇಲ್ಲ ಸಾಲದ ಬ್ಯಾಂಕ್ ನವರಿಗೂ ಇನ್ಫಾರ್ಮ್ ಮಾಡ್ತೀನಿ . ಅಷ್ಟೆ ನಿನ್ನ ಗತಿ ಏನಾಗುತ್ತೆ ನೋಡ್ತಿರು "

 ನಾನು ಏನು ಮಾಡಲಿ ಈಗ ಹ್ಯಾಗೆ ಇದರಿಂದ ಪಾರಾಗಿ ಹೋಗಲಿ . ಇದಕ್ಕೋಸ್ಕರ ದಿವ್ಯಾನ ಬಲಿ ಕೊಡುವುದೇ ಅಥವಾ?

ಮತ್ತೊಮೆ ಆ ಚಂದ್ರಕಾಂತ್ ಹೇಳಿದೆ ಮಾತು ನೆನಪಾಯಿತು "ಡ್ರಿಂಕ್ಸ್ ರೆಡಿಮಾಡಿಕೊಂಡು ಬಾ" ಏನೋ ಹೊಳೆಯಿತು ಮನಸಿಗೆ ದೃಢ ನಿರ್ಧಾರ ಮಾಡಿಕೊಂಡು ಅವನಿಗೆ ಫೋನ್ ಮಾಡಿದೆ " ಸಾರ್ ನಾಳೆ ನಾನು ಬರ್ತಾ ಇದೀನಿ"

" ನೀನು ಬಂದು ಏನು ಪ್ರಯೋಜನ ?ಅವಳು ?" "ಅವಳು ಬರ್ತಾಳೆ ಸಾರ್" "ಸರಿ

ವೆರಿ ಗುಡ್" ಫೋನ್ ಕಟ್ ಮಾಡಿದ ಮೇಲೆ ಮುಂದಿನ ಕೆಲಸಕ್ಕೆ ಸಿದ್ದತೆ ಮಾಡಲಾರಂಭಿಸಿದೆ.

ಪ್ರೀತಿ

 ಇವನು ನನ್ನ ಜೀವನಾನೆ ಹಾಳು ಮಾಡಿಬಿಟ್ಟ . ಮನೆಯವರೂ ಅಷ್ಟೆ ಇವನ ಆಸ್ತಿ ನೋಡಿ ೨೦ರ ನನ್ನನ್ನ ೪೫ರ ಅವನಿಗೆ ಕಟ್ಟಿಬಿಟ್ಟರು . ಆದರೆ ನಾನು ದಿನ ದಿನಕ್ಕೆ ನರಕ ಯಾತನೆ ಅನುಭವಿಸ್ತಾ ಇದೀನಿ.

ವಯಸ್ಸಾಗಿದ್ದರೆ ಏನು ಗಂಡ ಅಲ್ಲವಾ ಜೀವನ ಸಾಗಿಸೋಣ ಎಂದರೆ ಇವನೋ ಹಿಂಸಾ ಪಶು ಮತ್ತೊಬ್ಬರ ಅಳು ನೋಡಿ ನಗುವವನು . ನನ್ನನ್ನ ಎಷ್ಟು ಹಿಂಸೆ ಮಾಡುತ್ತಿದ್ದಾನೆ . ಸೆಕ್ಸ್ ಎಂದರೆ ಇವನಿಗೆ ಹೆಣ್ಣನ್ನು ಗೋಳು ಹಾಕಿಕೊಳ್ಳ್ಳುವುದು ಎಂದಾಗಿದೆ.

ಹಗಲೆಲ್ಲಾ ಅನುಮಾನಿಸಿ ಹಿಂಸೆ ಕೊಡುತ್ತಿದ್ದರೆ ರಾತ್ರಿಯೆಲ್ಲ ನರಕ ದರ್ಶನ ಮಾಡಿಸುತ್ತಿದ್ದ .

ಕಷ್ಟ ತಾಳಾಲಾರದೆ ಓಡಿ ಹೋಗ ಬೇಕೆಂದರೆ ಇವನು ಹೊರಗೆ ಹೋಗುವಾಗ ಬಾಗಿಲಿಗೆ ಬೀಗ ಹಾಕಿಕೊಂಡು ಹೋಗುತ್ತಾನೆ. ಒಬ್ಬರ ಜೊತೆ ಮಾತಾಡುವ ಹಾಗಿಲ್ಲ . ಮಾನಸಿಕ ದೈಹಿಕ ವಾಗಿ ನಾನು ಕುಸಿದುಹೋಗಿದ್ದೇನೆ.

ಇದೇನು ಈಗ ಬಂದವನು "ಏಯ್ ಪ್ರೀತಿ ನಾಳೆ ಸಂಜೆ ನಂಗೆ ಹನಿಮೂನ್ . ಒಂದು ಮುದ್ದಾಗಿರೋ ಮೂಗ್ಗಿನ ಜೊತೆ. ಇವತ್ತು ರಾತ್ರಿ ನಿಂಗೇನು ಕೆಲಸ್ ಇಲ್ಲ ಹೋಗು ಬಿದ್ದುಕೋ"

ಇವನ ಕಾಮಕ್ಕೆ ಅದೆಷ್ಟು ಮಂದಿ ಬಲಿಯಾಗಿದ್ದಾರೋ . ಮಾಲಿಯ ೧೩ ವರ್ಷದ ಮಗಳನ್ನೂ ಬಿಡದೆ ಆಕೆಯನ್ನು ಜೀವಂತ ಶವವನ್ನಾಗಿ ಮಾಡಿದ್ದಾನೆ.

ಆದರೆ ಮಾಲಿ ಇವನ ವಿರುದ್ದ ಹೋಗಲಾರದೆ ಇಲ್ಲೇ ಇದ್ದಾನೆ. ಹೇಗೆ ಇವನಿಂದ ಮುಕ್ತಿ ಸಿಗುತ್ತೋ ದೇವರೇ ಏನಾದರೂ ದಾರಿ ತೋರಿಸು.

ಹೌದು ಇವನಿಂದ ಮುಕ್ತಿ ಪಡೆಯಲು ಒಂದೇ ದಾರಿ . ನಾನು ಜೈಲಿಗೆ ಹೋದರೂ ಪರವಾಗಿಲ್ಲ . ಸತ್ತರೂ ಎಷ್ಟೊ ಜನರಿಗೆ ಒಳ್ಳೇದು ಮಾಡಿದ ಹಾಗೆ ಆಗುತ್ತೆ .

 ಹೇಗೆ

ಒಳಗೆ ಅವನು ಕೆಮ್ಮಿದ ದನಿ ಕೇಳಿಸಿತು "ಲೇಯ್ ಕಾಫ್ ಸಿರಪ್ ತೊಗಂಬಾ. ಇದೊಂದು ಕೆಮ್ಮು ಇಲ್ಲ ಅಂದಿದ್ದರೆ ನಾನು ಒಳ್ಳೆ ೨೦ ವರ್ಷದವನ್ ಥರ ಇರಬಹುದಿತ್ತು. ನಾಳೆ ನಾನು ಹೋಗುವಾಗ ಅದನ್ನು ಬ್ಯಾಗ್ನಲ್ಲಿ ಹಾಕಿ ಕಳಿಸು " ಕೆಮ್ಮಿನಲ್ಲೇ ಹೇಳಿದ . ಇವನಿಗೆ ಇದೊಂದೇ ರೋಗ ಅ ದೂ ಆ ಸಿರಪ್ ತೊಗಂಡ್ರೆ............. ಕೂಡಲೆ

ಮಿಂಚು ಹೊಡೆದಂತೆ ಮನಸಿಗೆ ಏನೊ ಹೊಳೆಯಿತು. ದೇವರು ದಾರಿ ತೋರಿಸಿದ್ದ

ಸಿದ್ದ -ಮಾಲಿ

ಈವಯ್ಯ ಮಾಡಿದ ಮೋಸಕ್ಕೆ ತಕ್ಕದಾಗಿ ದೇವರು ಶಿಕ್ಷೆ ಕೊಡಲಿಲ್ಲ ಅಂದ್ರೂ ನಾನು ಬಿಡಲ್ಲ . ನಾನು ಇವನ್ ಜೊತೇನೆ ಇದ್ದುಕೊಂಡು ಇವನಿಗೆ ಎಂಗಾರ ಮಾಡಿ ಪ್ರಾಣ ತಗಂತೀನಿ

ಅಂಗ್ ಮಾಡಿದ್ರೆ ನನ್ಮ ಮಗೂಗೆ ಆದ ಬ್ಯಾನೆ ಬ್ಯಾರೆ ಯಾರಿಗೂ ಅಗಲ್ಲ . ಆ ಪ್ರೀತಿಯಮ್ಮ್ನ್ನ ಎಷ್ಟು ಗೋಳು ಹಾಕಂತಾನೆ ಈವಯ್ಯ .

 ಕೆಂಪೀ ಆಡೊ ಅಸುಗೂಸನ್ನ ಮನೆಗೆ ಅವ್ವೋರ ಜೊತೆ ಇರಲಿ ಅಂತ ಕಳಿಸಿದಾರೆ ಅವಳ ಜೀವನಾನೆ ಆಳು ಮಾಡಿಬಿಟ್ಟವನೆ . ಪಾಪ ಅದು ಉಚ್ಚಿ ತರ ಆಡ್ತೈತೆ ಈವಯ್ಯನ್ನ ಹೆಂಗೆ ಕೊನೆ ಗಾಣ್ಸೋದು .

"ಲೋ ಸಿದ್ದ ಬಾರೊ ಇಲ್ಲಿ ನಾಳೆ ರಾತ್ರಿ ಒಂದು ಉತ್ಸವ ಇದೆ . ಹೂವಾ ಎಲ್ಲ ಚೆನ್ನಾಗಿ ಪ್ಯಾಕ್ ಮಾಡಿ ಕೊಡು . ಎಲೇನೂ ಇರಲಿ . ಅಲ್ಲಿ ಹೋಗಿ ಮಂಚಕ್ಕೆ ಹಾಕ್ತ್ರೀನಿ "

ಆವಯ್ಯ ಬಂದು ಹೇಳಿದ .

 ಈವಯ್ಯನ್ನ ಹೆಂಗೆ ಕೊನೆ ಗಾಣ್ಸೋದು . ಅಂತ ಯೋಚಿಸ್ತಾ ಇದ್ದಾಗ ಅಲ್ಲಿ ನಾಗ್ರಾವು ಕಾಣಿಸ್ತು. ಇನ್ನೂ ಎಳೇದಂತನಿಸುತ್ತೆ . ನಂಗೇನೊ ಅನ್ನಿಸ್ತು . ತಕ್ಷಣ ಅದನ್ನ ಎತ್ತಿ ಹಿಡಿದು ಒಂದು ಬುಟ್ಟೀಲಿ ಆಕ್ಕೊಂಡೆ.

 ಸೂರ್ಯಕಾಂತ :

ಅಣ್ಣ ಅಂತ ಕರ್ಯೋಕೆ ಬೇಸರ ಆಗುತ್ತೆ ಆದರೆ ಏನು ಮಾಡಲಿ . ಅಪ್ಪ ಅಮ್ಮ ಇಬ್ಬರೂ ಸತ್ತು ಹೋದಾಗ ನನ್ನ ಬೆಳೆಸಿದ್ದು ಇವನೇ . ಆದರೆ ಓದಿಸಲಿಲ್ಲ .

 ಯಾಕೆ ಬೆಳೆಸಿದ ಅಂದ್ರೆ ಅಪ್ಪ ಸಾಯುವಾಗ ಇನ್ನೂ ಚಿಕ್ಕವನಾಗಿದ್ದ ತನ್ನ ಹೆಸರಿಗೆ ಆಸ್ತಿಯನ್ನೆಲ್ಲಾ ಬರೆದು ಸತ್ತಿದ್ದರು .

ಅವರಿಗೂ ಸಾಯುವಾಗ ಗೊತ್ತಿತ್ತೇನೋ ಇವನ್ ಬುದ್ದಿ.

 ತನಗೇನು ಗೊತ್ತಿತ್ತು ಇವನ್ ಬುದ್ದಿ ೧೮ ವರ್ಷವಾದಾಗ ಆಸ್ತಿಯನ್ನೆಲ್ಲ ಇವನ್ ಹೆಸರಿಗೆ ಬರೆಸಿಕೊಂಡ ಮೇಲೆ .

ನನ್ನನ್ನು ಸಾಯಿಸಲು ಬಹಳ ಸಲ ನೋಡಿದ ಆದರೆ ದೇವರ್ ದಯೆ ಇಂದ ನಾನು ಬದುಕ್ಕೊಂಡೆ. ನನಗೆ ಗಾಡಿ ಓಡಿಸೋದು ಬಿಟ್ಟರೆ ಏನು ಬರುತ್ತೆ ಬದುಕು ಅಂತ ನೋಡ್ಕೊಳ್ಳೊಕೆ .

ನನಗೂ ಒಂದು ಆಸೆ ಗುರಿ ಎಲ್ಲಾ ಇದ್ದರು ಅಣ್ಣ ಅನಿಸಿಕೊಂಡ ಇವನನ್ನ ಏನು ಮಾಡಲೂ ಆಗದೇ ಒದ್ದಾಡ್ಥಾ ಇದೀನಿ.

"ಲೋ ಸೂರ್ಯ ಗಾಡಿ ಎಲ್ಲ ಕ್ಲೀನ್ ಮಾಡಿಡು . ನಾಳೆ ನಿನ್ನ ಇನ್ನೊಂದು ಒಂದು ದಿನದ ಅತ್ತಿಗೆ ಜೊತೆ ಫಸ್ಟ್ ನೈಟ್ ಇದೆ " ಮೈ ಎಲ್ಲ ಉರಿಯುತ್ತೆ .

 ಇಷ್ಟು ವಯಸ್ಸಾದರೂ ಅಷ್ಟು ಚೆಂದದ ಹೆಂಡತಿ ಇದ್ದರೂ ದಿನಕ್ಕೆ ಒಬ್ಬ ಹೊಸ ಹೆಣ್ಣು ಬೇಕು

ಅದೇ ೨೫ ವರ್ಷದ ತಾನು ನೀತುವನ್ನು ಪ್ರೀತಿಸಿದ್ದಕ್ಕೆ ಅವಳನ್ನೆ ಕೇಳುತ್ತಿದ್ದಾನೆ . "ಇವನ್ನ ಹ್ಯಾಗೆ ಮುಗಿಸೋದು. ಯಾರಿಗೂ ಅನುಮಾನ ಬರದ ರೀತಿ ಇವನ್ನ ಸಾಯ್ಸಿ ನೀತು ಜೊತೆ ಹಾಯಾಗಿ ಇರ್ಬೋದು . ಅತ್ತಿಗೆಗೂ ಇನ್ನೊಂದು ಮದುವೆ ಮಾಡ್ಕೊಳ್ಳೋದಿಕ್ಕೆ ಹೇಳ್ತೀನಿ ಪಾಪ ಚಿಕ್ಕ ವಯಸ್ಸಿನ ಅತ್ತಿಗೆ .

ಆದರೆ ಹ್ಯಾಗೆ?

ಗಾಡಿ ಸರಿ ಮಾಡುತ್ತಿದ್ದಂತೆ ಬ್ರೇಕ್ ಮೇಲಿಟ್ಟ ಕೈ ಏನೋ ಹೇಳಿತು. ಮನಸ್ಸು ಅದಕ್ಕೆ ಆಯಿತು ಎಂದಿತು

ಮಾರನೆ ದಿನ

ಚಂದ್ರಕಾಂತ

 ಅಬ್ಬಾ ನನ್ನ ಸಾಯ್ಸೋಕೆ ಏನೆಲ್ಲಾ ಪ್ಲಾನ್ ಮಾಡಿದ್ರು ಹೆಂಡತಿ ತಮ್ಮ ಮಾಲಿ , ವರುಣ್ . ಹ್: ಅಷ್ಟೊಂದು ಸುಲಭಾನ ನನ್ನ ಸಾಯ್ಸೋದು

ಯಾವಗ್ಲೂ ನನ್ನ ನೋಡಿದ್ರೆ ಒಳಗೆ ಇರ್ತಿದ್ದ ಪ್ರೀತಿ ಇವತ್ತು ಬಂದು ರೀ ಕಾಫ್ ಸಿರಪ್ ತಗೊಳ್ಳಿ ಅಂದಾಗಲೇ ಅನುಮಾನ ಬಂತು.

ಆ ಸಿದ್ದ ಅಷ್ಟೊಂದು ಹೂವ ಎಲೆ ಎಲ್ಲ ಚೆನ್ನಾಗಿ ಅಲಂಕಾರ ಮಾಡಿ ಕಟ್ತ್ ಕೊಟ್ಟಾಗ ಏನೋ ಇದೆ ಅಂತ ಅನ್ನಿಸಿತು.

 ನನ್ನ ತಮ್ಮ "ಅಣ್ಣ ಇವತ್ತು ನಾನು ಬರೋದಿಕ್ಕೆ ಆಗಲ್ಲ ಹುಷಾರಿಲ್ಲ ಅಂದಾಗ ಬೇಕಂತಲೇ ಅವನು ತೋರಿಸಿದ ಕಾರಲ್ಲಿ ಆ ಮ್ಯಾನೇಜರ್‌ನ ಕಳಿಸಿ ನಾನು ಇನ್ನೊಂದು ಕಾರು ಹತ್ಕೊಂಡು ಬಂದೆ ದಾರೀಲಿ ಆ ಮ್ಯಾನೇಜರ್ ಕಾರ್ ಬ್ರೇಕ ತಪ್ಪಿ ಗುಂಡಿಗೆ ಬಿತ್ತು . ಅವನು ಸತ್ತ .

ನಾನು ಬದುಕಿದೆ ಈ ರೆಸಾರ್ಟ್‌ಗೆ ಬಂದ ತಕ್ಷಣ ಆ ಕಾಫ್ ಸಿರಪನ್ ಅಲ್ಲೇ ಇದ್ದ ನಾಯಿಗೆ ಹಾಕಿದೆ ಅದು ವಿಲ ವಿಲ ಅಂತ ಒದ್ದಾಡಿ ಸತ್ತು ಹೋಯಿತು . ಅದು ವಿಷ ಅಂತ ಗೊತ್ತಾಯಿತು.

ಆ ರೂಮ್ ಬಾಯ್ ಗೆ ಹೂವನ್ನು ಬಿಚ್ಚಲು ಹೇಳಿದೆ ಅದರಲ್ಲಿ ಹಾವು . ಅವನನ್ನ ಅದೇನೋ ಕಚ್ಹಲಿಲ್ಲ . ಅವನ ಆಯಸ್ಸು ಗಟ್ಟಿ ಇತ್ತು

ಆದರೆ ಆ ವರುಣ್ ಕಳಿಸಿದ್ದ ವಿಸ್ಕಿಯನ್ನು ಟೇಸ್ಟ್ ಮಾಡಲು ಹೇಳಿದಾಗ ಕುಡಿದವ ರಕ್ತ ಕಾರಿಕೊಂಡ.

ಅದನ್ನೆಲ್ಲಾ ಕ್ಲೀನ್ ಮಾಡಲು ಹೇಳಿ ಹೊರಗಡೆ ಬಂದೆ

ನನ್ನ ಸಾಯ್ಸೋಕೆ ಆ ಬ್ರಹ್ಮನೇ ಬಂದರೂ ಆಗಲ್ಲ .

ಒಳ್ಳೇ ಬೆಳಕಿನ ಸ್ಠಳ.

ಮೊಬೈಲ್ ತೆಗೆದು ವರುಣ್ಗೆ ಫೋನ್ ಮಾಡಿದೆ "ನಿನ್ನಾಟ ನಡೆಯಲ್ಲ ನಾನು ಚಿರಾಯು . ಮೊದಲು ನಿನ್ನ ಹೆಂಡತೀನ ಕರ್ಕೊಂಡು ಬಾ ಇಲ್ಲ ಅಂದರೆ ನಾನೇ ಬರ್ತೀನಿ" ಆಫ್ ಮಾಡಿದೆ

ಇನ್ಸ್ಪೆಕ್ಟರ್ ಶಿವು

ಫೋನ್ ರಿಂಗಿಸಿದಾಗ ರಾತ್ರಿ ಡ್ಯುಟಿ . ಅತ್ತಕಡೆಯಿಂದ ಸುದ್ದಿ ಬಂತು " ಚಂದ್ರಕಾಂತ್ ಕೊಲೆ ಯಾಗಿದ್ದಾರೆ " ಕೂಡಲೆ ಟುಲಿಪ್ ರೆಸಾರ್ಟ್ಗೆ ಬನ್ನಿ" ನಂಗೆ ಶಾಕ್ .  ಆದರೂ ಕೊಲೆ ಮಾಡಿದ ಆ ಮಹಾನುಭಾವನಿಗೆ ಮನದಲ್ಲೇ ವಂದನೆ ಹೇಳಿದೆ . ಆ ಚಂದ್ರಕಾಂತ ಮೇಲೆ ಎಷ್ಟೊ ದೂರುಗಳು ಬಂದ್ರೂ ಸೂಕ್ತ ಸಾಕ್ಷಿಗಳಿಲ್ಲದೇ ಅವನನ್ನು ಹಿಡಿಯಲು ಆಗಿರಲಿಲ್ಲ.

ಟುಲಿಪ್ ರೆಸಾರ್ಟ್ ನಲ್ಲಿ ಹೋದ ಮೇಲೆ  ಗೊತ್ತಾದ ವಿಷಯವೆಂದರೆ ಇವನ್ನನ್ನು ಕೊಲ್ಲಲ್ಲು ಇನ್ನೂ ನಾಲ್ಕು ಮಂದಿ ಪ್ಲಾನ್  ಮಾಡಿದ್ದರು . ಅವರೆಂದರೆ ಚಂದ್ರಕಾಂತನ ಮಡದಿ ಪ್ರೀತಿ ,ತಮ್ಮ  ಸೂರ್ಯಕಾಂತ , ಮಾಲಿ ಸಿದ್ದ , ಪಿ.ಎ ವರುಣ್

ಆದರೆ ಪಾಪಿ ಚಿರಾಯು ಅನ್ನುವಂತೆ ಅವನು ಉಳಿದಿದ್ದ ಆದರೆ  ಯಾರೋ ಅವನ ತಲೆಗೆ ಬಲವಾದ ಪೆಟ್ಟು ಕೊಟ್ಟು ಒಂದೆ ಏಟಿಗೆ ಕೊಂದಿದ್ದರು  . ಅವರು ಉಪಯೋಗಿಸಿದ್ದ ಆ ಮರದ ಹಲಗೆ ಕೂಡ ಹಾಗೆ ಅಲ್ಲಿಯೇ ಇತ್ತು. ಆದರೆ ಬೆರಳಿನ ಗುರುತು ಯಾವದೂ ಇರಲಿಲ್ಲ

ರೆಸಾರ್ಟ್ನವರ ಪ್ರಕಾರ ಅಲ್ಲಿಗೆ ಅಲ್ಲಿನ ಕೆಲಸದವರನ್ನು  ಬಿಟ್ಟರೆ ಬೇರೆ ಯಾರೂ ಬಂದಿರಲಿಲ್ಲ .  ಅಲ್ಲಿರುವ ಯಾರಿಗೂ ಅವನ ಮೇಲೆ ದ್ವೇಷವಿರಲಿಲ್ಲ

ಹಾಗಾದರೆ  ----------
ಇದರ ಮುಂದಿನ ಭಾಗ ಇಲ್ಲಿದೆ
ಚಂದ್ರಕಾಂತನ ಕೊಲೆ ಮಾಡಿದವರು ಯಾರು ಎಂಬುದನ್ನು ಊಹಿಸಬಲ್ಲೀರಾ?
http://www.sampada.net/blog/roopablrao/05/04/2008/8208

Rating
No votes yet