ಬದುಕು - ಬವಣೆ
ಹುಟ್ಟು ಸಾವುಗಳ ಮಧ್ಯೆ
ಏನೆಲ್ಲಾ ನೋಡುವೆವು
ನೋವು ನಲಿವು, ಅಸಹನೆ
ಅನ್ಯಾಯ, ಅಕ್ರಮ ವಂಚನೆ
ಅದೆಷ್ಟೋ ಸಹಿಸಲಾಗದ ಮುಖಗಳು
ಅವುಗಳೊಂದಿಗಿನ ಪ್ರತಿ ಕ್ಷಣಗಳು
ಕೆಲವೊಮ್ಮೆ ನಾವು ನಗಲಾರದೆ
ಕಳೆದುಬಿಡುತ್ತೇವೆ ವಾರ ತಿಂಗಳುಗಳು
ಬೆಳೆದಂತೆ ಜವಾಬ್ದಾರಿ, ಹೆಚ್ಚುವ ಆತಂಕಗಳು
ಪ್ರತಿದಿನವೂ ಹೊಸತು, ಹೊಸ ಸಂಬಧಗಳು
ಎಲ್ಲವನ್ನೂ ನಿಭಾಯಿಸಬೆಕು, ನಿಲ್ಲದೆ ಮುಂದೆ ಸಾಗಬೇಕು
ಎಲ್ಲವೂ ಬೇಕು, ಸುಖಿಸಬೇಕು
ದುಡಿದೋ, ದುಡಿಯದೆಯೋ ಗಳಿಸಬೇಕು
ಬೇರೊಬ್ಬರ ತುಳಿದು, ತಲೆಯೆತ್ತಿ,
ಎದೆಯುಬ್ಬಿಸಿ ನಾವು ಬೀಗಬೇಕು.
ನಾನು ನನ್ನದೆನ್ನುವುದು ಅದೆಷ್ಟೋ
ಇನ್ನಿಲದಂತೆ ಕಿತ್ತಾಡಿ, ಗಳಿಸಿ ಕೂಡಿಟ್ಟಿದ್ದೇನೊ
ಹೀಗೊಮ್ಮೆ ಯೋಚಿಸಿದರೆ ಶೂನ್ಯ
ಮನದಲ್ಲಿ ಇಣುಕಿ ಕುಟುಕುವುದೊಂದೇ ಪ್ರಶ್ನೆ
ಏನಿದು ಜೀವನ, ಯಾತಕೀ ಬವಣೆ?
-- ಅರುಣ ಸಿರಿಗೆರೆ
Rating