ಅಬ್ಬಿ ಜಲಪಾತ
ಬರಹ
ಭಾವ ವೀಣೆಯು ನುಡಿಸಿತು ಹೃದಯಸ್ಪರ್ಶಿ ನಿನಾದ
ಆಲಾಪನೆಯು ಝ್ಹೇಂಕರಿಸಿತು ನರ ನಾಡಿಗಳಾ ಉತ್ಕರ್ಷ
ತನುಮನ ಧಮನಿಗಳ ಮೃದಂಗ ತುಡಿತ ದರ್ಶನ
ಅಬ್ಬಿ ಜಲಪಾತದ ರುದ್ರ ರಮಣೀಯ ಮೇಳ ತಂಬೂರಿ
ರೋಮಾಂಚನ ಮುರಳೀ ಗಾನ ಅಂಗಾಂಗ ಕಂಪನ
ಸ್ತಬ್ಧ ಸ್ನ್ಬಿಗ್ಧ ಕಾರ್ಮೋಡ ಮೇಳ, ದಟ್ಟೈಸಿದ ನೀರ
ಅಶರೀರ ವಾಣಿಯ ಗುಡುಗು ಡಮರುಗ ಮಿಂಚು ಬೆಳಕು
ಶಿವತಾಂಡವದ ವಿಹಂಗಮ ನೋಟ ಸೃಷ್ಟಿ ಲಯ ಚಕ್ರ