ಯಾಕೆ 'ನೋ' ಅಂದ್ರಿ ಡಾಕ್ಟ್ರೆ?

ಯಾಕೆ 'ನೋ' ಅಂದ್ರಿ ಡಾಕ್ಟ್ರೆ?

ಬರಹ

೨೬ ಮಾರ್ಚ್೨೦೦೮ರ ಪತ್ರಿಕಾ ವರದಿ-

ಒಂದು ಚೂರು ರಾಗಿರೊಟ್ಟಿ, ಮತ್ತೊಂದು ಚೂರು ಜೇನುತುಪ್ಪದ ರುಚಿ ನೋಡಿದ ರಾಹುಲ್ ಬೆಟ್ಟದ ಗೆಣಸಿಗೆ ಕೈ ಹಾಕಿದರಾದರೂ ಪಕ್ಕದಲ್ಲೇ ಇದ್ದ ಅವರ ವೈದ್ಯರು ‘ನೋ’ ಎಂದರು.

‘ನೋ’ ಅಂದ್ರು ಯಾಕೆ?

ತಾವೆಲ್ಲಾ ದಯಮಾಡಿಸಿದ್ದು ಬಿಳಿಗಿರಿರಂಗನ ಬೆಟ್ಟದ ದಟ್ಟಾರಣ್ಯದ ನಡುವೆ ಇರುವ ಸೋಲಿಗರ ಹಾಡಿಗೆ. ಹೆಚ್ಚಿನ ಸಮಯದಲ್ಲಿ ಅವರ ಮುಖ್ಯ ಆಹಾರವೇ ಗೆಡ್ಡೆಗೆಣಸು.
ದೇಶದ ಮುಂದಿನ ಪ್ರಧಾನಿ(?) ಅದರ ರುಚಿ ನೋಡಿರುತ್ತಿದ್ದರೆ ಅವರಿಗೂ, ನಮಗೂ ಸಂತೋಷವಾಗುತಿತ್ತು.

ಡಾಕ್ಟ್ರು ಬೇಡ ಅಂದಿರಬೇಕಾದರೆ ಅದರಲ್ಲಿ ಆರೋಗ್ಯಕ್ಕೆ ತೊಂದರೆಕೊಡುವಂತಹ ಅಂಶ ಏನಾದರೂ ಇರಬಹುದೇ?

“No”

೧೦೦ ಗ್ರಾಂ ಗೆಣಸಿನಲ್ಲಿ ೦.೨ಗ್ರಾಂ ನಷ್ಟೂ fat ಇಲ್ಲ. ರಾಹುಲ್ ಗಾಂಧಿಯ ತೂಕ ಹೆಚ್ಚುವ ಪ್ರಮೇಯ ಇಲ್ಲ.

ವಿಟಮಿನ್ ಎ,ಬಿ,ಸಿ, ಕ್ಯಾಲ್ಸಿಯಂ ಇತ್ಯಾದಿಯಿಂದ ಕೂಡಿರುವ ಗೆಣಸು, ಈಗಿನ ಡಾಕ್ಟ್ರುಗಳ ಇಷ್ಟದ ಎಂಟಿ‌ಒಕ್ಸಿಡೆಂಟ್ ಗುಣವನ್ನೂ ಹೊಂದಿದೆ.
ಉಳಿದೆಲ್ಲಾ ತರಕಾರಿಗಳಿಗಿಂತ ಅತ್ಯಧಿಕ ಪ್ರಮಾಣದ nutritional value ಇರುವ ತರಕಾರಿ-ಗೆಣಸು. ಅದರ ತುಂಬಾ ತುಂಬಾ ನಂತರದ ಸ್ಥಾನ ಆಲೂಗಡ್ಡೆಯದ್ದು.

--ಹೀಗಿದ್ದೂ ಯಾಕೆ ‘ನೋ’ ಅಂದ್ರು?

ಇದರ ವಿಶೇಷ ನೋಡಿ- ಸಿಹಿಯಾಗಿದ್ದರೂ ಡಯಬಿಟಿಸ್ ಕಾಯಿಲೆಗೆ ಇದರಿಂದ ತೊಂದರೆ ಇಲ್ಲ. ಪ್ರಾಣಿಗಳ ಮೇಲೆ ಮಾಡಿದ ಪ್ರಯೋಗದಿಂದ, ಗೆಣಸು ರಕ್ತದಲ್ಲಿ ಶುಗರ್ ಪ್ರಮಾಣವನ್ನು ನಿಯಂತ್ರಣದಲ್ಲಿ ಇಡುವುದು ಸಾಬೀತಾಗಿದೆ.

ಕೆಲವು ಗೆಡ್ಡೆಗಳನ್ನು ತಿಂದಾಗ ಅಲರ್ಜಿ ಆಗುವುದು. ಆದರೆ ಗೆಣಸಿನಲ್ಲಿ ಆ ತೊಂದರೆಯೂ ಬರದು.
ಗೆಣಸಿಗೂ, ಮನಸಿಗೂ ನೋವಾಗಿದೆ.
ಯಾಕೆ ನೋ ಅಂದ್ರಿ ಡಾಕ್ಟ್ರೆ?
-ಗಣೇಶ.