ಹೞಗನ್ನಡದ ’ಱ’ ಹಾಗೂ ’ೞ’ ಗಳು ಬೇಕೇ?
ಬರಹ
ಬೇಕೇ ಬೇಕು. ಈ ಎರಡು ಅಕ್ಷರಗಳು ದ್ರಾವಿಡ ಭಾಷೆಗೆ ವಿಶೇಷವಾದ ಅಕ್ಷರಗಳು. ಇವುಗಳನ್ನು ಕೇವಲ ಸಂಕೇತಗಳನ್ನಾಗಿ ಬೞಸದೆ ’ರ’ ಮತ್ತು ’ಱ’ ನಡುವಿನ ಉಚ್ಚಾರ ವ್ಯತ್ಯಾಸ ಹಾಗೆಯೆ ’ಳ’ ಮತ್ತು ’ೞ’ ನಡುವಿನ ಉಚ್ಚಾರ ವ್ಯತ್ಯಾಸಗಳು ಕೂಡ ಮುಖ್ಯ. ಸಿರಿಗನ್ನಡಂ ಬಾಳ್ಗೆ ಎಂದರೆ ಸಿರಿಗನ್ನಡ ಕತ್ತಿಗೆ ಅಂದರೆ ಸಿರಿಗನ್ನಡ ಕತ್ತಿಗೆ ಬಲಿಯಾಗಲಿ ಎಂದೂ ಆಗುತ್ತದೆ. ಆದರೆ ಸಿರಿಗನ್ನಡಂ ಬಾೞ್ಗೆ ಎಂದರೆ ಸಿರಿಗನ್ನಡ ಬಾೞಲಿ ಅರ್ಥಾತ್ ಸಿರಿಗನ್ನಡ ಬದುಕಲಿ ಎಂದಾಗುತ್ತದೆ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಹೞಗನ್ನಡದ ’ಱ’ ಹಾಗೂ ’ೞ’ ಗಳು ಬೇಕೇ?