ಭರತ ಖಂಡದ ಸುತ್ತ ಒಂದು ಸುತ್ತು... ನೀರಿನ ಜಾಡು ಹಿಡಿದು

ಭರತ ಖಂಡದ ಸುತ್ತ ಒಂದು ಸುತ್ತು... ನೀರಿನ ಜಾಡು ಹಿಡಿದು

ಬರಹ

Sharada Prasad
ಅಂದು ಸಂಪೂರ್ಣ ಕಾರ್ಪೋರೇಟ್ ಜಗತ್ತಿನಂತಿದ್ದ ಹೋಟೆಲ್ ಸೆಮಿನಾರ್ ರೂಮಿನಲ್ಲಿ ಇಷ್ಟು ಸ್ಪಷ್ಟ ಕನ್ನಡ ಮಾತನಾಡಿದ್ಯಾರು ಎಂದು ಎಲ್ಲರೂ ತಲೆ ಎತ್ತಿ ನೋಡಿದ್ದರು. ತಂತ್ರಜ್ಞಾನದ ಬಗ್ಗೆ ಹೆಚ್ಚು ಅರಿಯದವರೂ ಸ್ಕ್ರೀನಿನ ಮೇಲೆ ಬಂದು ಹೋಗುತ್ತಿದ್ದ ಗೂಗಲ್ ದುಮ್ಯಾಪುಗಳು, ಅದರೊಂದಿಗೆ ಪ್ರಸಾದ್ ರವರ GPS trail ಎಲ್ಲರ ಗಮನವನ್ನು ಸೆಳೆದಿತ್ತು.

ಇವತ್ತು ಪ್ರಸಾದ್ ಇಡಿಯ ಭರತ ಖಂಡ ಸುತ್ತಿ ಬರಲು ಸಜ್ಜಾಗಿದ್ದಾರೆ. ಅದೂ ತಮ್ಮ ಬೈಕಿನ ಮೇಲೆಯೇ. ಉದ್ದೇಶ ನೀರಿನ ಬಳಕೆ ಹಾಗೂ ಮೂಲಗಳ ಬಗ್ಗೆ, ಒಟ್ಟಾರೆ ಭಾರತದಲ್ಲಿನ ಸದ್ಯದ ನೀರಿನ ಪರಿಸ್ಥಿತಿಯ ಬಗ್ಗೆ ಅಧ್ಯಯನ ನಡೆಸುವುದು. ತಮ್ಮ GPS ಡಿವೈಸ್ ಹಿಡಿದು ಅವರು ಹಿಡಿಯುವ ದಾರಿ ಅಂತರ್ಜಾಲದಲ್ಲಿ ರೆಕಾರ್ಡ್ ಮಾಡುತ್ತ ಹೋಗುವರು. ಜೊತೆಗೆ ತಮ್ಮ ಅನುಭವವನ್ನು ಕನ್ನಡದಲ್ಲಿ ಹಂಚಿಕೊಳ್ಳುವರು.

ಪ್ರಸಾದ್ ಜೊತೆ ಮೊನ್ನೆ ಮಾತನಾಡಿದೆವು. ಮಾತುಕತೆಯ ಕೆಲ ಭಾಗಗಳು ಇಗೋ ನಿಮ್ಮ ಮುಂದಿದೆ. (ಪುಟದ ಕೊನೆ ನೋಡಿ - ಸಂಪೂರ್ಣ ಲೇಖನ ಹಾಗೂ ಮತ್ತಷ್ಟು ಗ್ನು/ಲಿನಕ್ಸ್ ಹಬ್ಬದ ನಂತರ ಹಾಕುವೆ!)

ಪ್ರಸಾದ್ ರವರನ್ನು ಸಂಪರ್ಕಿಸಲು csp@arghyam.org ಗೆ ಇ-ಮೇಯ್ಲ್ ಮಾಡಿ. ಇವರೊಂದಿಗೆ ಅಯಾ ಊರುಗಳಿಂದ ಸ್ನೇಹಿತರೂ ಜೊತೆಗೂಡುತ್ತಿದ್ದಾರೆ. ನಿಮಗೆ ಆಸಕ್ತಿಯಿದ್ದರೆ ನೀವೂ ಜೊತೆಗೂಡಬಹುದು. ಹೆಚ್ಚಿನ ಮಾಹಿತಿಗೆ http://www.indiawaterportal.org/k2k/ ನೋಡಿ.

ಅವರ ಈ ಯಾತ್ರೆ ಶುಭವಾಗಲಿ ಎಂದು ಹಾರೈಸೋಣ, ಕನ್ನಡದವರೊಬ್ಬರಿಂದ ನಡೆಯುತ್ತಿರುವ ಇಂತಹ ಪ್ರಯತ್ನವೊಂದಕ್ಕೆ ನಮ್ಮೆಲ್ಲರ ಪ್ರೋತ್ಸಾಹ ನೀಡೋಣ :-)

ಪ್ರಸಾದ್ ರವರ ಯಾತ್ರೆಗೆ Flag off ಇಂದು, ಬೆಳಿಗ್ಗೆ 9.00 ಕ್ಕೆ,

ಫೋಟೋ ಕೃಪೆ: ಬೆಂಗಳೂರು ಮಿರರ್, ನಿಶಾಂತ್ ರತ್ನಾಕರ್.