ಎಚ್ಚರ! ಡ್ಯೂಪ್ಲಿಕೇಟ್ Volvo ಸೇವೆ ಲಭ್ಯವಿದೆ

ಎಚ್ಚರ! ಡ್ಯೂಪ್ಲಿಕೇಟ್ Volvo ಸೇವೆ ಲಭ್ಯವಿದೆ

ಬರಹ


ನಮ್ಮ ಬಿ.ಎಂ.ಟಿ.ಸಿ ಯವರು ಈ ರೀತಿ ಬೋರ್ಡ್ ಹಾಕಿಕೊಳ್ಳೋದು ಮಾತ್ರಾನೇ ಬಾಕಿ ಉಳಿದಿರೋದು. ಬೇಸಿಗೆಗಾಗಿ ಬೆಂಗಳೂರಿನ ನಾಗರೀಕರಿಗೆ ಪರಿಚಯಿಸಿದ Volvo ಬಸ್ಸುಗಳು ಐ.ಟಿ ಉದ್ಯೋಗಿಗಳಷ್ಟೇ ಅಲ್ಲದೆ ಇನ್ನೂ ಅನೇಕರ ಗಮನ ಸೆಳೆಯಿತು. ಅದರ ಜೊತೆಗೇ ಬಿ.ಎಂ.ಟಿ.ಸಿ ಎದೆಯುಬ್ಬಿಸಿ ಅದರ ಬಗ್ಗೆ ಮಾತನ್ನೂ ಆಡಿತು. ಅದರಿಂದ ಬರ್ತಿರೋ ಕಾಸು ಜ್ಯಾಸ್ತಿ ಆಯ್ತು ಅನ್ಸತ್ತೆ ಈಗ ಜನಾರ್ದನರಿಗೆ ಹಾಡು ಹಗಲೇ ಡ್ಯೂಪ್ಲಿಕೇಟ್ Volvo ಸೇವೆಯನ್ನೂ ಉಣಬಡಿಸಲಿಕ್ಕೆ ಹೆಜ್ಜೆ ಹಾಕಿದೆ ಬಿ.ಎಂ.ಟಿ.ಸಿ. ಈ ಸಲದ ಬೇಸಿಗೆಯಲ್ಲಿ. ನಂಬಿಕೆ ಬರ್ತಿಲ್ವಾ? ಕೆಳಗಿನ ಕೆಲ ಚಿತ್ರ ಗಳನ್ನ ನೋಡಿ. ಇವು ಡ್ಯೂಪ್ಲಿಕೇಟ್ ವೋಲ್ವೋನ ಕೆಲ ಇಂಟೀರಿಯರ್ ಚಿತ್ರಗಳು.


 ಮಾಮೂಲಿ ಬಸ್ ಗಿಂತ ಎನೂ ಬಿನ್ನ ಇಲ್ಲ (ಎ.ಸಿ. ಎಕ್ಸ್ ಟ್ರಾ ಎಫೆಕ್ಟ್), ಫುಲ್ ಪ್ಲಾಟ್, ನೋಡಿ ಎಷ್ಟು ಹಿಡಿಗಳನ್ನ ಜನ ನಿಂತು ಕೊಳ್ಲಿಕ್ಕಾಕಿದ್ದಾರೆ,

 ಕಾಪಿ! ಕಾಪಿ! ಲೋಕಲ್ ಮಾಲು

 

ಬನ್ನಿ ಬನ್ನಿ! ಹಿಡಿ ಹಿಡ್ಕೊಂಡ್ ನಿಂತ್ಕಾಳಿ. ಕಾಸ್ ಮಾತ್ರ ಕಮ್ಮಿ ಇಲ್ಲ! ಅದೇ ಬೆಲೆ

 

ಪೂರಾ ಲೋಕಲ್ ಸಾರ್! ಗೊತ್ತಾಯ್ತಾ?

 

 ಕ್ವಾಲಿಟಿ ನೋಡಣ್ಣೋ!

 ಏರ್ ಕಂಡೀಷನ್ಡ್ ಆದ್ರೂ ಇದಕ್ಕೆ ಪುಷ್ಪಕ್ ಮಾದರಿಯ ಯಾವಗಲೂ ತೆರೆದಿರೋ ಏರ್ ವೆಂಟಿಲೇಟರ್. ಬೆಳಕೂ ಒಳಗೆ ಬರ್ತಿದೆ ನೋಡಿ.

 

ಇಲ್ಲೇನಾದ್ರೂ ಹೊಸತಿದೆಯಾ? 

ಡ್ಯೂಪ್ಲಿಕೇಟ್ ವೋಲ್ವೋದ ಮತ್ತಿತರ ವಿಶೇಷಗಳು :

ಒಳಗೆ ಕೂತರೆ ಯಾವುದೋ ಹಳೆಯ ಬಸ್ ನಲ್ಲಿರುವಂತ ಅನುಭವ. ಕೊಳೆಯಾದ ಕುರ್ಚಿಗಳು, ಹಳೆಯ ಪುಷ್ಪಕ್ ಫೀಲಿಂಗ್ ಕಡೆಯ ಸೀಟಿನಲ್ಲಿ. ಏ.ಸಿ ಎವಾಪರೇಟ್ ಆಗಲಿಕ್ಕೆ ಅವಕಾಶ (ಮೇಲಿನ ಒಂದು ಚಿತ್ರಗಲ್ಲೂ ಕಾಣಸಿಗುತ್ತದೆ). ನನಗೆ ಕಂಡದ್ದು ಮಾಮೂಲಿ ಬಿ.ಎಂ.ಟಿ.ಸಿ ಡ್ರೈವರ್ ಮತ್ತು ಕಂಡಕ್ಟರುಗಳು, ಅದೇ ದಿಮಾಕು, ಅದೇ ದರಿದ್ರ ಡ್ರೈವಿಂಗ್. ಹಂಪ್ ನಲ್ಲೂ ಹಾರುವ ತರಾತುರಿ. ಶೋಮೆಕರ್ ಲೇವಿ ಯನ್ನೂ ಮೀರಿಸುವಂತಿದೆ ಇವರ ಉತ್ಸಾಹ. ಕುಂತರೆ ಒಮ್ಮೆ ನಿಮ್ಮ ಬಾಡಿ ಎಲ್ಲಾ "ಶೇಕ್ ಶೇಕ್" ಬ್ರೇಕ್ ಡ್ಯಾನ್ಸ್ ಬೇಕಿಲ್ಲ. ಕರ್ಕಶ, ಕರ್ಣ ಕಠೋರ ಎಂಜಿನ್ ಸದ್ದು. ಮೆಜೆಸ್ಟಿಕ್ ನಿಂದಲೇ ಹೊರಬರಲಿಕ್ಕ್ಕೆ ಕಷ್ಟ ಸಾಧ್ಯವಾದ ಪಿಕ್-ಅಪ್. ಇಲ್ಲಿ ವೋಲ್ವೋ ದಲ್ಲಿರುವಂತೆ ಸೆಕ್ಯೂರಿಟಿ ಕ್ಯಾಮರಾ, ಸೇಪ್ಟಿ ಮೆಸರ್ಸ್ ಇಲ್ಲ. ಏನಾದ್ರೂ ಆದ್ರೆ ವೆಂಟಿಲೇಶನ್ ವಿಂಡೋ ಉಪಯೋಗಿಸ್ಬೇಕಷ್ಟೆ.  

ಈಗಾಗಲೇ ಬಿಸಿಲಿನ ಬರ ದಿಂದ ಬೇಸತ್ತಿರೋ ನಮಗೆ ಪ್ರಾಣ ತೆಗೆಯೋ ಇಂತ ಹಳೇ ಬಸ್ ಗಳಿಗೆ ಬಣ್ಣ ಬಳಿದು ಚೆಲುವಾಗಿಸೋದ್ ಬೇಕಾ? ಅತ್ಯಾಧುನಿಕ ಸೇವೆ ಅಂತ ಹೆಸರಿಗೆ ಮಾತ್ರ ಬೇಕಾ? ಇಂತಾ ಡ್ಯೂಪ್ಲಿಕೇಟ್ ಸೇವೆಗೆ ಅದೇ ಮೊತ್ತದ ಹಣ ಕೊಟ್ಟು ಹೋಗ್ಬೇಕೆ? ವೋಲ್ವೋ ಡಿಸೈನ್ ಕಾಪಿ ಮಾಡೋದ್ ಬೇಕಾ? ನಾಚಿಕೇನೆ ಇಲ್ಲಾರಿ ಜನಕ್ಕೆ ಆಡ್ಕೊಂಡ್ ನಗ್ತಾರೆ ಅಂತ. ಬೇಕಿದ್ರೆ ನಮ್ಮಲ್ಲಿರೋ ಯುವಕರನ್ನೇ ಕೇಳಿ ಹೊಸ ಡಿಸೈನ್ ಮಾಡಿಸಬಹುದು, ಎಂಜಿನಿಯರ್ ಗಳಿಗೇನು ಕೊರತೆಯೇ ಕರ್ನಾಟಕದಲ್ಲಿ. ವೋಲ್ವೋಗೆ ಕೊಡ್ತಿದ್ದ ಹಣ ನಮ್ಮ ಜನರಿಗೇ ಕೊಡಬಹುದಲ್ವಾ ಇಂತಹ ಅವಕಾಶಗಳನ್ನ  ಸೃಷ್ಟಿಸುವುದರಿಂದ. ಅಂತೂ ಸಾರ್ವಜನಿಕ ಸಾರಿಗೆಯನ್ನೇ ಹೆಚ್ಚಾಗಿ ನೆಚ್ಚಿ ಕೊಂಡಿದ್ದ ನನಗೆ ಬಿ.ಎಂ.ಟಿ.ಸಿ ನೋವುಂಟು ಮಾಡಿದೆ.

ವಿಶೇಷ ಸ್ಪರ್ಧೆ : ಈ ಡ್ಯೂಪ್ಲಿಕೇಟ್ ವೋಲ್ವೋದ ಡ್ರೈವರ್ ಬಳಿಯ ಚಿತ್ರ,, ಮೆಟ್ಟಿಲುಗಳು, ಬಸ್ ನ ಹೊರನೋಟದ ಚಿತ್ರವನ್ನ ಸಂಪದದಲ್ಲಿ ಮೊದಲು ಪ್ರಕಟಿಸಿದವರಿಗೆ ನನ್ನ ಕಡೆಯಿಂದ ಕನ್ನಡ ಚಿತ್ರವೊಂದಕ್ಕೆ ೨ ಟಿಕೆಟ್ ಗಳು ಸಿಗ್ತವೆ! ೧೬ನೇ ತಾರೀಖಿನ ಒಳಗೆ ನಿಮ್ಮ ಚಿತ್ರ ಸಂಪದಿಗರಿಗೆ ಮುಟ್ಟಲಿ.