ಮಾ
ಇಲ್ಲಿ ಅಮೇರಿಕದಲ್ಲಿ ಮೇ ೧೧ ಅಮ್ಮನ ದಿನವೆಂದು ಆಚರಿಸಲಾಗುತ್ತೆ. ನನಗಂತೂ ಇದು ನನ್ನ ತಾಯ್ತನವನ್ನು ಸಂಭ್ರಮಿಸುವ ದಿನವೆಂದು ಬಹಳ ಇಷ್ಟ. ಮಕ್ಕಳಿಗೆ ಅಪ್ಪುಗೆ, ಮುತ್ತುಗಳನ್ನು ಒಂದಷ್ಟು ಹೆಚ್ಚಾಗಿ ಈ ದಿನ ಕೊಡುತ್ತೇನೆ, ಜೊತೆಗೆ ಬಯ್ಯದೆ, ಹೊಡೆಯದೆ ಹುಶಾರಾಗಿ ದಿನವನ್ನು ಕಳೆಯುತ್ತೇನೆ :-) ಮನೆಯಲ್ಲಿನ ಅಪ್ಪ ಇಂದು ನನ್ನನ್ನು ಆಚೆ ಊಟಕ್ಕೆ ಕೊಂಡೊಯ್ಯಲೇ ಬೇಕು. ಇಲ್ಲದಿದ್ದರೆ ಗೊತ್ತಲ್ಲ..;-) ಈವತ್ತು ವಿಶೇಷವಾಗಿ ಏನಾಯಿತೆಂದರೆ, ಹೋಟೆಲಿಗೆ ಹೋಗಲು ಕಾರಿನಲ್ಲಿ ಕುಳಿತ್ತಿದ್ದಾಗ, ನನ್ನ ಮಗ, "ಅಮ್ಮ, ಇರು, ನಿನಗೊಂದು ಹಾಡನ್ನು ಕೇಳಿಸುತ್ತೇನೆ" ಎಂದು ತಾರೆ ಝಮೀನ್ ಪರ್ ಚಿತ್ರದ "ಮಾ" (ಅಂದರೆ ಅಮ್ಮ), ಎನ್ನುವ ಹಾಡನ್ನು ಪೂರ್ತಿ ಹಾಡಿ ಕೇಳಿಸಿದ. ಇದಕ್ಕಿಂತ ಒಳ್ಳೆಯ ಉಡುಗೊರೆ ನನಗಿನ್ನೇನು ಬೇಕು ಎನ್ನಿಸಿ ಕಣ್ಣಲ್ಲಿ ನೀರು ಬಂತು. ಜೊತೆಗೆ, ನಾನು ನನ್ನ ತಾಯಿಗಾಗಿ "ಅಮ್ಮ ನೀನು ನಮಗಾಗಿ, ಸಾವಿರ ವರುಷ ಸುಖವಾಗಿ, ಬಾಳಲೇ ಬೇಕು ಈ ಮನೆ ಬೆಳಕಾಗಿ" ಎಂಬ ಹಾಡು ಹಾಡುತ್ತಿದ್ದುದು ನೆನಪಾಯ್ತು. ಇದನ್ನೇ "life comes full circle" ಎನ್ನುತ್ತಾರೇನೋ...
"ಮಾ" ಹಾಡನ್ನು ಕೇಳದಿರುವವರು ಖಂಡಿತ ಕೇಳಿ, ತುಂಬಾ ಚೆನ್ನಾಗಿದೆ -ಇಲ್ಲಿದೆ ಒಂದು ವೀಡಿಯೋ- http://www.youtube.com/watch?v=tlIOLtQ_D1s&feature=related . ಹಿಂದಿ ಅರ್ಥವಾಗದಿದ್ದರೆ, ಇಲ್ಲಿದೆ ಅದರ ಆಂಗ್ಲ ಅನುವಾದ - http://www.taarezameenpar.com/track5.htm
ನಿಮಗೆಲ್ಲರಿಗೂ ಅಮ್ಮನ ದಿನದ ಶುಭಾಶಯಗಳು!