ಮಧ್ಯ ರಾತ್ರಿಯಲ್ಲಿ ರಸ್ತೆಯ ಮೌನ ಮಾತಾದಾಗ..

ಮಧ್ಯ ರಾತ್ರಿಯಲ್ಲಿ ರಸ್ತೆಯ ಮೌನ ಮಾತಾದಾಗ..

ಬರಹ

ಉಪ್ ..... ಸಾಕಾಗಿಹೋಯಿತು ಈಗ ಎಷ್ಟು ಹಾಯಾಗಿ ಇದೆ. ಬೆಳಗಿನಿಂದ ಇಲ್ಲಿಯತನಕ ಒಂದೇ ಸಮನೆ ಕೆಲಸ ಮಾಡಿ ಈಗ ರೆಸ್ಟು ತೆಗೆದುಕೊಳ್ತಾ ಇದೀನಿ. ಈ ಜನರಿಗೆ ಬೆಳೆಗ್ಗೆ ಕಾಪಿ ಇಲ್ದೆ ಇದ್ರು ನಡೆಯುತ್ತೆ, ತಿಂಡಿ ತಿನ್ನದೆ ಹೋದ್ರು ನಡೆಯುತ್ತೆ. ಆದ್ರೆ ದಿನಕ್ಕೆ ಒಂದು ಸಲ ಆದ್ರೂ ನನ್ ಮೆಲೆ ಹಾದು ಹೋಗ್ದೆ ಇದ್ರೆ ಇವ್ರಿಗೆ ನಿದ್ದೆನೆ ಬರಲ್ಲ. ರಜಾ ದಿನಾ ಆದ್ರು ಸರಿ, ಕೆಲಸದ ದಿನ ಆದ್ರೂ ಸರಿ. ಸುಮ್ಮನೆ ಒಂದು ಸುತ್ತಾದ್ರು ಸುತ್ತೋಗ್ದೆ ಇದ್ರೆ ಇವ್ರ ಮನಸ್ಸಿಗೆ ನೆಮ್ದೀನೆ ಇರಲ್ಲ . ನನ್ ಮೇಲೆ ಬರೀ ಬಸ್ಸು ಲಾರಿ ಗಾಡಿಗಳಿಗಷ್ಟೇ ಪ್ರೀತಿ ಇಲ್ಲಾ ನಡ್ಕೊಂಡು ಹೋಗೋ ಜನರಿಗೂ ನನ್ ಮೇಲೆ ಅದೇನೊ ಒಂಥರಾ ಪ್ರೀತಿ. ಎಷ್ಟೇ ಚೆನ್ನಾಗಿ ದೊಡ್ಡದಾಗಿ ಪುಟ್ಪಾತ್ ಇದ್ರೂ ಸಹ ಇವ್ರು ನನ್ ಮೇಲೆನೆ ಹೋಗೊದು. ನನ್ ಮೇಲೆ ಮನುಷ್ಯ್ ರಿಗಷ್ಟೇ ಅಲ್ಲ ಪ್ರಾಣಿಗಳಿಗೂ ಪ್ರೀತೀನೆ ... ಆದ್ರೆ ಈ ಪೋಲೀಸಪ್ಪ ಬಿಡಬೇಕಲ್ಲಾ ಯಾವಾಗ ನೋಡಿದ್ರೂ ಒಡಿಸ್ತಾನೆ ಇರ್ತಾನೆ.ಈ ಜನರಿಗೆ ನನ್ ಮೇಲೆ ಎಷ್ಟು ಪ್ರೀತಿ ಅಂದ್ರೆ ... ನಾನು ಹೇಗೇ ಇರ್ಲಿ ಅಂದ್ರೆ ನನ್ ಮೇಲೆ ಹಳ್ಳ ಇರಲಿ, ಕೊಳ್ಳ ಇರಲಿ, ಕೆಸರೇ ಇರಲೀ, ಮೊಸರು...[ ? ] ಇರಲಿ.. ಇವ್ರು ಮಾತ್ರ ನನ್ ಕೈ ಬಿಡಲ್ಲಾ. ನಾನು ಹೇಗೆ ಇದ್ರೂ ನನ್ನನ್ನ ಸ್ವೀಕರಿಸಿದ್ದಾರೆ, ಸ್ವೀಕರಿಸ್ತಾ ಇದ್ದಾರೆ, ಸ್ವೀಕರಿಸ್ತಾನೆ ಇರ್ತಾರೆ. ಆ ನಂಬಿಕೆ ನನಗಿದೆ.ಈ ಮೊದಲು ನನ್ನ ಅಕ್ಕ ಪಕ್ಕ ಮರಗಳಿದ್ದು ಎಷ್ಟೇ ಬಿಸಿಲಿದ್ದ್ರೂ ಸರಿ ಎಷ್ಟೇ ಜೋರಾಗಿ ಮಳೆ ಬಂದ್ರೂ ಸಹ ಕೊಡೆಯಂತೆ ನನ್ನನ್ನ ಕಾಪಾಡ್ತ ಚೆನ್ನಾಗಿ ನೋಡ್ಕೋಂತಾ ಇದ್ರು.ಆದ್ರೆ ನಾನೆ ಸ್ವಾರ್ಥಿಯಾಗಿ ನನ್ನನ್ನ ಬೆಳೆಸ್ಕೊಳ್ಳೊದಿಕ್ಕೆ ಅವುಗಳನ್ನೆಲ್ಲಾ ನುಂಗ್ಬಿಟ್ಟೆ. ಆದ್ರೆ ಅವುಗಳನ್ನ ಮರೆಯೊದಿಕ್ಕೆ ಆಗ್ದೆ ಅವುಗಳ ಪಳೆಯುಳಿಕೆಗಳನ್ನ ನನ್ನ ಒಡಲಲ್ಲಿ ಅಡಗಿಸಿಕೊಂಡಿದ್ದೀನಿ . ಇನ್ನು ಕೆಲವೇ ವರ್ಷದಲ್ಲಿ ಮೆಟ್ರೊ ಬರುತ್ತೇ ಅಂತ ನನ್ನ ಓರಗೆಯವರು ಮಾತಾಡ್ಕೊಂತಿದ್ರು. ಅದು ಬಂದ್ರೆ ನಮ್ಮನ್ನ ಯಾರು ಅಷ್ಟಾಗಿ ವಿಚಾರಿಸ್ಕೊಳ್ಳೋದಿಲ್ಲ ಅಂತೆ. ನಾನು ಆ ಬಗ್ಗೆ ತಲೆ ಕೆಡಿಸ್ಕೊಂಡಿಲ್ಲಾ.. ಯಾಕೆಂದ್ರೆ ನನಗೆ ಗೊತ್ತು ಎಷ್ಟೇ ಮೆಟ್ರೊ ಬಂದ್ರೂ ಸಹ ಜನ ನನ್ನನ್ನ ಮರೆಯೋದಿಲ್ಲಾ. ಅಷ್ಟು ಆತ್ಮ ವಿಶ್ವಾಸ ನನ್ಮೇಲೆ ನನಗಿದೆ.ಇಷ್ಟು ಸಾಕು ಎಷ್ಟೂ ಅಂತ ನನ್ ಬಗ್ಗೆ ನಾನ್ ಹೇಳ್ಕೊಳ್ಳಿ ಇನ್ನು ನೀವ್ ಹೊರಡಿ ಬೆಳಗಾಗೊದ್ರೊಳ್ಗೆ ನಾನು ಸ್ವಲ್ಪ ರೆಸ್ಟ್ ತಗೊಂತೀನಿ ನೀವು ಮನೇಗ್ ಹೋಗಿ ಎ ಸಿ ಹಾಕ್ಕೊಂಡು ಆರಾಮಾಗಿ ಮಲಗಿ...ಬೆಳೆಗ್ಗೆ ಸಿಗೋಣ..