ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ

ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ

ನಿಸರ್ಗ - ಇದು ಕನ್ನಡದ ಮೊದಲ ಪ್ರಾದೇಶಿಕ ಕಾದಂಬರಿ ಎಂಬ ಹೆಗ್ಗಳಿಕೆ ಹೊಂದಿದೆ . ಇದನ್ನು ೧೯೪೫ ರಲ್ಲಿ ಬರೆದವರು ಮಿರ್ಜಿ ಅಣ್ಣಾರಾಯರು . ಅನೇಕ ಮುದ್ರಣಗಳನ್ನು ಕಂಡಿದೆ . ಬೆಳಗಾಂವಿಯ ಈ ಭಾಗದ ಕನ್ನಡ ಪರಿಚಯ ನಿಮಗೆ ಇರಲೆಂದು ಆ ಕಾದಂಬರಿಯ ಮುನ್ನುಡಿಯ ಭಾಗವೊಂದನ್ನು ಇಲ್ಲಿ ಕೊ(ಕು)ಟ್ಟಿದ್ದೇನೆ .

ಕೆಲವು ಶಬ್ದರೂಪಗಳು , ವ್ಯಾಕರಣರೂಪಗಳು ವಿಶಿಷ್ಟವಾಗಿವೆ . ಮುಖ್ಯವಾದವನ್ನು ಇಲ್ಲಿ ತಿಳಿಸುವೆ .
* ಏನು = ಯಾನು , ಏನಾದರೂ = ಯಾನರ , ಏಕೆ ಯಾಕೆ ಆದ ಹಾಗೆ ಏನಂತೆ ಇದು ಯಾನತ್ತ ಆಗುವದು
* ಚತುರ್ಥೀಪ್ರತ್ಯಯವದ ’ಗೆ’ ಇದು ’ಗಿ’ ಆಗುವದು . ಅವರಿಗೆ =ಅವರಿಗಿ , ಮನೆಗೆ=ಮನಿಗಿ , ಆಕೆಗೆ=ಆಕಿಗಿ , ದನಕ್ಕೆ = ದನೀಗಿ .. ಎಕಾರಾಂತವೆಲ್ಲ ಇಕಾರಾಂತ ಆಗುವ ಪ್ರವೃತ್ತಿ ಇದೆ . ಈಕಡೆ= ಇಕಡಿ , ನಿನ್ನೆ=ನಿನ್ನಿ , ಆನೆಗೆ=ಆಣಿಗಿ , ಕಪಾಳಕ್ಕೆ = ಕಪ್ಪಾಳಿಗಿ
* ಉಕಾರಾಂತವು ಅಕಾರಾಂತವಾಗುವದು . ಹೆಣ್ಣುಮಗಳು= ಹೆಣ್ಣುಮಗಳ , ಸೊಸೆಂದಿರು=ಸೊಸದೇರ
* ಶಬ್ದದ ಒಳಗೂ ಏ ಇದು ಯಾ ಆಗುವದು . ಹೆಂಡತಿ= ಹ್ಯಾಂತಿ , ತೆವರು = ತ್ಯಾವರಾ , ಕಡೆಯವರು = ಕಡ್ಯಾವರಾ
* ಷಷ್ಠಿಯ ಕೆಲವು ವಿಕೃತ ರೂಪಗಳಿವೆ . ದನದ = ದನೀನ , ಕರುವಿನ / ಕರದ= ಕರೀನ
* ಹಾಗೆಯೇ ದ್ವಿತೀಯಾದಲ್ಲಿ ಅವರನ್ನು = ಅವರ್ನಾ
* ಇದೆ=ಐತಿ , ಬರುತ್ತದೆ = ಬರತೇತಿ
* ಕ್ರಿಯಾರೂಪದಲಿಯೂ ಏ ಯಾ ಅಗಿರುವದು ಬಹಳ . ಕೊಡುತ್ತೇನೆ= ಕೊಡತ್ಯಾನ , ಎತ್ತುಕೊಳ್ಳುತ್ತೇನಲ್ಲಾ?=ಎತಕೋತ್ಯಾನಲಾ ? ಹೊಡೆದೇನು= ಹೊಡೆದ್ಯಾನ , ಮಾಡುವಳೆಂದಿ=ಮಾಡ್ಯಾಳಂದಿ - ಇಲ್ಲಿ ಉಕಾರದ ಸ್ಥಾನದಲ್ಲಿ ಯಾ ಬಂದಿದೆ .
* ಕಳೆದಿರಬಹುದು = ಕಳೆದಿದ್ದಾದೋತ , ಆದೀತು=ಆದೋತು, ಬಂದೀತು=ಬಂದೋತು , ತಿಂದಿದ್ದಾನು = ತಿಂದಾದಾ ,
* ಬಿಟ್ಟೆನು=ಬಿಟ್ನಿ , ಅಂದೆನು =ಅಯ್ನು , ಎಡತಾಕಿದೆನು=ಎಡತಾಕಿನ್ನು
* ಇಳಿಯೋ= ಇಳಿನೋ , ಬಾರಲ್ಲಾ = ಬಾಲಾ ,
* ಹೋಗುತ್ತಿರಲು / ಹೋಗಿರಲು= ಹೋಗೇತೀರ , ನೋಡುತ್ತಿರಲು=ನೋಡೇತೀರ , ಹೊರಳುವದಿಲ್ಲ =ಹೊಳ್ಳೂಲ , ಇಲ್ಲದಾಗಿದ್ದನು=ಇಲ್ಲಾಗಿದ್ದ , ಆಗದಿದ್ದರೆ = ಆಗದೀರ , ಬೀಳುವದಕ್ಕೆ/ ಬಿದ್ದೀಯಂತೆ= ಬೀಳಕ್ಕೆ , ಬರುತ್ತೇನೆ= ಬರ್ತಾನು ,
ಕರೆಯೋಣ = ಕರ್ಯಾನ , ಮಾಡಿದ್ದಳು = ಮಾಡಿಳ್ಳ , ಹಾಕಿದ್ದಳು=ಹಾಕಿಳ್ಳ , ಅಳುತ್ತಿದ್ದಳು= ಅಳತೀಳ , ಮಾಡಿದೆವು = ಮಾಡಿದ್ಯು , ಕಲಿಸಿದೆವು=ಕಲಿಸಿದ್ಯು ,
* ಬಂಯ್ದಾನ [ಬಂದಿದ್ದಾನೆ], ತಿಂಯ್ದಾನ [ತಿಂದಿದ್ದಾನೆ] - ಈ ರೂಪಗಳು ಭಾಷಾಶಾಸ್ತ್ರದೃಷ್ಟಿಯಿಂದ ಮಹತ್ವದ್ದಾಗಿ ಬಾ/ಬರು ಧಾತುವಿನ ಬಯ್ ಎಂಬ ಮೂಲರೂಪವನ್ನು ಸೂಚಿಸುತ್ತವೆ . ಹಾಗೇ ತಾ, ತಯ್
* ಕೆಲವು ವಿಶಿಷ್ಟ ರೂಪಗಳು
ಹರೀವತ್ತ [ಹರೇಹೊತ್ತು , ಬೆಳಿಗ್ಗೆ ] , ಪೋರ [ಹುಡುಗ] , ಪೋರಿ[ಹುಡುಗ] , ಸುದ್ದಿಲ್ಲ [ ಶುದ್ಧಿ/ಎಚ್ಚರ ಇಲ್ಲ ] , ನಡೀನ [ನಡುವಿನ] , ಹೋಂದ [ಹೌದು] , ಜರಾನs [ ಸ್ವಲ್ಪು] , ಇಕ್ಕೇದ [ ಈಕೆಯದು] , ಅಚ್ಚೀಬರೆ [ ಆಚೆ ಬಾರಿ, ಹೋದ ಸಲ ] , ಹಚ್ಚಕೊಟ್ಟs [ಹಚ್ಚಿಕೊಟ್ಟನು , ಹೇಳಿಕಳಿಸಿದನು] , ನಿಲ್ಲಕ್ಕಿ [ ನಿಲ್ಲುವಾಕೆ] , ಮದಿಂದಾಗ [ ಮಧ್ಯಾಹ್ನದಾಗ] , ನಂದೋಸೋದ [ನಂದಾಯಿಸುವದು , ಸೊಸೆಯಾಗಿ ನಡೆಯುವದು] ; ಕೆಪ್ಪ [ ಕೆಂಪು] , ನೇಟ [ನೆಟ್ಟಗೆ ] , ಆಂಯ್ದ [ ಅಲ್ಲಿಂದ , ಅಮೇಲೆ] , ಬಿರಿ [ಬಿಗಿ/ಕಠಿಣ] , ಪರಾದ [ಪ್ರಾಯದ] , ನಿಚ್ಚವಲ [ನಿಶ್ಚಯದಿಂದ ] ಕಡಚಣಗಿ [ಕಾಟಕ್ಕ] , ಕಾಸಡೇವ [ಕಾಸಿನ ಕಿಮ್ಮತ್ತಿನವು] , ಕೌಸಲೇರ [ ಕುಸಲೆಯರು/ತಂತ್ರಗಾರ್ತಿಯರು] , ಹುರೂಟ [ ಅನನುಭವಿಕ] , ಹಂಗಣೆ [ಹಂಗಿಸುವಿಕೆ] ಇತ್ಯಾದಿ
ಇವನ್ನೆಲ್ಲ ಕಣ್ಣಿಟ್ಟು ನೋಡಿದರೆ ಭಾಷಾಚರಿತ್ರೆಗೆ ಹಾಗೂ ಶಾಸ್ತ್ರಕ್ಕೆ ವಿಪುಲ ಸಾಮಗ್ರಿ ದೊರೆಯುವದು .....

ಈ ಮುನ್ನುಡಿಯನ್ನು ಬರೆದವರು ರಂ.ಶ್ರೀ.ಮುಗಳಿ ಅವರು .

Rating
No votes yet

Comments