ಎಂದೂ ಎಂದೂ ಮುಗಿಯದ ಖಾಲಿ ಖಾಲಿ ಸಿನಿಮಾ ನಾನ್ಯಾರು..?

ಎಂದೂ ಎಂದೂ ಮುಗಿಯದ ಖಾಲಿ ಖಾಲಿ ಸಿನಿಮಾ ನಾನ್ಯಾರು..?

ಬರಹ

ಎಂದೂ ಎಂದೂ ಮುಗಿಯದ
ಯಾವ ಪದಕೂ ನಿಲುಕದ.....
ನಿಮಗೆ ನಾನು ತೋರುವ
ಖಾಲಿ ಖಾಲಿ ಸಿನಿಮಾ
ಇಂತೀ ನಿಮ್ಮ ಪ್ರೀತಿಯ
ನಾನ್ಯಾರು...?ನಾನ್ಯಾರು...?

ಅಂತ ಮುಂದೆ ಒಂದಿನ ನಮ್ಮ ಕನ್ನಡ ಸಿನಿಮಾ ನೋಡುಗ "ದೇವರಿಗೆ" 'ರೀಲ್' ಪತ್ರ ಸಂಪದದಲ್ಲಿ
ಪ್ರಕಟ ಆದ್ರೆ ಅದ್ರಲ್ಲಿ ವಿಶೇಷ ಏನೂ ಇರೋದಿಲ್ಲ. ಕಾರಣ ನಮ್ಮ ಈಗಿನ ಕನ್ನಡ
ಸಿನಿಮಾಗಳ 'ಕಥೆ' ಹಾಗಾಗಿದೆ

ಕಥೆಯು 'ತೆಗೆ'ದು ಸುತ್ತಿದ 'ರೀಲಿ'ನ
ಸೆಳೆತ ಮೂಡದ 'ಮಡಿ'ದ ದೃಶ್ಯದ
ನೋಡಿದ ದೇವರು 'ಕೈ'ಎತ್ತಿ ಮುಗಿಯುವ
ಖಾಲಿ ಖಾಲಿ ಸಿನಿಮಾ
ಇಂತೀ ನಿಮ್ಮ ಪ್ರೀತಿಯ ನಾನ್ಯಾರು...?

ಎಂದು ಸ್ವತ: ಸಿನಿಮಾ ತನ್ನ ತುಂಬು...? ಎಪ್ಪತ್ತೈದು ವರ್ಷದ ಮಾಗಿದ ವಯಸ್ಸಿನ
ಆತ್ಮಕಥೆಯಲ್ಲಿ ಬರೆದುಕೊಳ್ಳುತ್ತಿದೆ.

ಗೆದ್ದ ಕುದುರೆ ಬಾಲದ ಕಥೆಯ
ಬದುಕೇ ಇಲ್ಲದ ಭಾಷೆಯ
ಇದ್ದೂ ಇಲ್ಲದ 'ನಟ'ನೆಯ
ಖಾಲಿ ಖಾಲಿ ಸಿನಿಮಾ
ಇಂತೀ ನಿಮ್ಮ ಪ್ರೀತಿಯ ನಾನ್ಯಾರು...?

ಕನ್ನಡ ಚಿತ್ರರಂಗ ತನ್ನ ಆತ್ಮಕಥೆಯಲ್ಲಿ ಕಾಂ'ಟೆಂಪರರಿ' ಚಿತ್ರರಂಗದ 'ಗತಿ'ಯನ್ನು
ಈ ರೀತಿ ಬರೆದುಕೊಳ್ಳಬಹುದೇನೊ.

'ದೇವರು' ತೊರೆದ ಥಿಯೇಟರಿನ
ಅಳುವ ತರಿಸೊ ನಗು?ವಿನ
ಶಿಳ್ಳೆ 'ಮರೆ'ಸೊ ಸ್ಪಂದನ
ಇಂದಿನ ನನ್ನ ಜೀವನದ
ಖಾಲಿ ಖಾಲಿ ಸಿನಿಮಾ
ಇಂತೀ ನಿಮ್ಮ ಪ್ರೀತಿಯ ನಾನ್ಯಾರು...?

ಯೋಗರಾಜ ಭಟ್ಟರ, ಸೂರಿಯವರ ಕ್ಷಮೆ ಕೋರಿ.....