ಹಳೇ ಚಂದಮಾಮ ಇಲ್ಲಿದ್ದಾನೆ
ಶಾಲೆಗೆ ರಜೆ ಬಂದ್ರೆ ಸಾಕು, ಆಟ ಆಟ ಆಟ... ಸಂಜೆ ಕತ್ತಲಾದ ಮೇಲೆ ಮನೆಗೆ ಬಂದು, ಟೈಂಪಾಸ್ ಗೆ ಮೊರೆ ಹೋಗ್ತಾ ಇದ್ದದ್ದು "ಚಂದಮಾಮ"ನ ಬಳಿ.
ಸನ್ 1947 ರ ಜುಲೈ ತಿಂಗಳಲ್ಲಿ ಬಿ. ನಾಗಿರೆಡ್ಡಿ ಯವರು ಸ್ವಾತಂತ್ರ್ಯಾನಂತರದ ಪೀಳಿಗೆಗೆ ಭಾರತದ ಸಂಸ್ಕೃತಿ, ಸಾಹಿತ್ಯ, ಕಲೆ, ಪುರಾಣಗಳನ್ನು ಅತ್ಯಂತ ಸರಳವಾದ ಕಥೆಗಳ ಮೂಲಕ ಹೇಳಿಕೊಡುವ ಹಾಗು ಅರಿವು ಮೂಡಿಸುವ ಸಲುವಾಗಿ "ಚಂದಮಾಮ"ನನ್ನು ಭೂಮಿ ಮೇಲೆ ತಂದರು. ಆ ಹಳೆಯ ಸುಮಾರು ಅಷ್ಟೂ ಸಂಚಿಕೆಗಳು ನಮಗೆ ಇವಾಗ ಮತ್ತೆ ದೊರಕಿಸುವ ನಿಟ್ಟಿನಲ್ಲಿ "ಚಂದಮಾಮ"ನನ್ನು ಅಂತರ್ಜಾಲಕ್ಕೆ ತಂದಿದ್ದಾರೆ. ಇದರಲ್ಲಿ 1949ರ ಜುಲೈನಿಂದ, 1958ರ ಡಿಸೆಂಬರ್ ವರೆಗಿನ ಸಂಚಿಕೆಗಳನ್ನು PDF ರೂಪದಲ್ಲಿ ಲಭ್ಯವಿದೆ. ಕನ್ನಡ, ತೆಲುಗು, ಮಲೆಯಾಳಂ, ತಮಿಳು, ಇಂಗ್ಲಿಷ್ ಹಾಗು ಹಿಂದಿಯಲ್ಲಿ ಹಳೆಯ ಸಂಚಿಕೆಗಳು ಫ್ರೀ ಡೌನ್ಲೋಡಿಗೆ (Free Download) ಇದೆ. ಹಳೆಯ ಎಲ್ಲಾ ಸಂಚಿಕೆಗಳೂ ಸಧ್ಯಕ್ಕೆ ಇಲ್ಲವಾದರೂ, ಇನ್ನು ಕೆಲವು ತಿಂಗಳುಗಳಲ್ಲಿ ದೊರೆಯಬಹುದು.
ಮತ್ತೆ ನಮ್ಮೆಲ್ಲರ ಪ್ರೀತಿಯ ಮಾಮನನ್ನು ನೋಡುವ ಬನ್ನಿ.
ಅಂತರ್ಜಾಲದಲ್ಲಿ ಹಳೆಯ "ಚಂದಮಾಮ"ನನ್ನು ಇಲ್ಲಿ ನೋಡಿರಿ.
http://www.chandamama.com/content/story_archive_pdf/archive.php
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ