"ಹ್ರದಯ ಚೋರನೆ-ಈಪ್ರೀತಿಯ ವೇದನೆಗೆ ಕೊನೆ ಬೇಗನೆ ಸಿಗಲಿ ಎಂದು ಆಶಿಸುತ್ತೇನೆ"

"ಹ್ರದಯ ಚೋರನೆ-ಈಪ್ರೀತಿಯ ವೇದನೆಗೆ ಕೊನೆ ಬೇಗನೆ ಸಿಗಲಿ ಎಂದು ಆಶಿಸುತ್ತೇನೆ"

ಹೌದು ಕಣೋ,
ನಸ್ನ್ನನ್ನು ನೀನು ನಿಜವಾಗಿಯೂ ಪ್ರೀತಿಸ್ತಿಯಾ ಅನ್ನೋದು ತಿಳಿದಿತ್ತು.ಆದರೆ ಈ ಪರಿಯಾಗಿ ನನ್ನನ್ನು ಪ್ರೀತಿಸ್ತಿಯಾ ಅಂಥ ತಿಳಿದಿರಲಿಲ್ಲ.ಅಲ್ಲ ನಾನು ಎರಡು ದಿನ ಊರಲಿಲ್ಲದಕ್ಕೆ ಹೀಗಾಗಿ ಬಿಡೊದಾ?.ಮುಖದ ತುಂಬಾ ಗಡ್ಡ ಬಿಟ್ಟು, ದೇವದಾಸನ ತರಹ ಆಡುವದು , ಕಡೆಗೆ ನೀನು ಅಡ್ಡ ದಾರಿ ಹಿಡಿಯುದು ನನಗೆ ಇಷ್ಟವಿಲ್ಲ.ನೀನು ಗಡ್ಡ ಬಿಟ್ಟಾಗ , ಚಿಗುರು ಮೀಸೆಯಲಿ ಸುಂದರವಾಗಿ ಕಾಣಿಸ್ತಿಯಾ ,ನಿಜ,ಆದರೆ ಅದಕ್ಕೆ ಪ್ರೀತಿಯ ವಿರಹದ ಬಣ್ಣ ಬಳಿಯುವುದು ನನಗಿಸ್ಟವಿಲ್ಲ.
ನೀನು ನನಗೆ ಇಷ್ಟವಾದುದ್ದು, ಕಾಲೇಜಿನ ಮೊದಲ ದಿನವೇ.ಆಡ್ಮಿಷನ್ನಿಗೆಂದು ಬಂದಾಗ. ಆವಾಗಲೇ ನೀನು ನೇರವಾಗಿ ನನ್ನ ಹ್ರುದಯದಲ್ಲಿ ಬಂದು ಕುಳಿತುಬಿಟ್ಟೆ.ಆದರೆ ನೀನು ಯಾವ ತರಗತಿಗೆ, ಅಡ್ಮಿಷನ್ ಮಾಡಿಸಿಕೊಂಡೆ ಏಂದು ತಿಳಿದಿರಲಿಲ್ಲ.ಆವಗಲೇ ಅದನ್ನು ಹೇಗಾದರೂ ತಿಳಿದುಕೊಳ್ಳಬೇಕೆಂದು ತವಕ. ಹೋಗ್ಲಿ ಬಾಯಿ ಬಿಟ್ಟು ಕೇಳಿಬಿಡಲಾ?.ಅಯ್ಯೊ ಹೆದರಿಕೆ ಮಾರಯಾ.ಕಾಲೇಜು ಪ್ರಾರಂಭವಾಗಲು ಇನ್ನು ೧೫ ದಿನಗಳು.ಈ15 ದಿನಗಳಲಿ ಯಾವುದೇ ಪರಿಚಯ ಇಲ್ಲದಿದ್ದರೂ ನಿನ್ನ ನೆನಪು ಕಾಡಿದ್ದು ಸುಳ್ಳಲ್ಲ.ಏನ್ ಮಾರಾಯ್ತಿ ಈಗಲೇ ಲವ್ವಲ್ಲಿ ಬಿದ್ಬಿಟ್ಟ್ಯಾ? ... ಅಂಥ ಮನಸು ಕೇಳುತ್ತೆ.ಛೇ ಇಲ್ಲಪ್ಪ ...ಅಂಥ ಮನಸ್ಸಿಗೊಂದು ಸಮದಾನ.

ಕಾಲೇಜು ಇನ್ನೇನು ಪ್ರಾರಂಭವಾಯ್ತು , ಒಂದು ದಿನ ಕಳೆಯಿತು, ಎರಡು ದಿನ ಕಳೆಯಿತು ಕಾಲೇಜಿನಲ್ಲಿ ನಿನ್ನ ಸುಳಿವೇ ಇಲ್ಲ .ಗೆಳತಿಯರ ಗುಂಪಿನಲ್ಲಿದ್ದ್ದರೂ ಕಸ್ಣ್ಣುಗಳು ಏನನ್ನೋ ಹುಡುಕುತ್ತಿದ್ದವು.ಮನಸ್ಸಿನಲ್ಲಿ ನಿರಾಸೆ ಭಾವನೆ ಮೂಡಿತ್ತು.ಕಾಲೇಜಿನಲ್ಲಿ ಅಟ್ಟೆಂಡೆನ್ಸ ತೆಗೆದುಕೊಳ್ಳುವಾಗ ನಿನ್ನ ಮುಂದೆ ಇದ್ದ ಹೆಸರು ಯಾವಾಗಲೂ ಅಪ್ಸೆಂಟ್.ಆದರೆ ಆ ದಿನ ಒಂದು ದ್ವನಿ ’ ಎಸ್ ಸರ್" ಎಂದಿತು ಯಾರಿರಬಹುದು ಎಂದು ನೋಡಿದಾಗೆಅದು ನೀನೆ..!!.ಮನಸ್ಸ್ಸಿಗೆ ಆದ ಸಂತೋಷ ಅಷ್ಟಸ್ಟಲ್ಲ. ಆ ಸಂತೋಷಿನಲ್ಲೆ ನನ್ನ ಅಟ್ಟೆಂಡನ್ಶು ಬಂದಾಗ ತುಂಬಾ ಜೋರಾಗಿ ಕೂಗಿ ಹೇಳಿದೆ. ಎಲ್ಲರ ಮುಖಗಳು ನನ್ನ ಕಡೆಗೆ, ನಗುತ್ತ ನೋಡಿದವು.ಅದರಲ್ಲಿ ನೀನು ಒಬ್ಬ.ಸಂಕೋಚದಿಂದ ಕೆಳಗೆ ಕುಳಿತುಕೊಂಡೆ.

ನಂತರ ನಮ್ಮಿಬ್ಬರಿಗೂ ಪರಿಚಯಬಾದದ್ದ್ದು, ನಮ್ಮಿಬ್ಬರ ನಡ್ಶುವೆ ನೋಟ್ಸನ್ನು axchange ಮಾಡುವುದರಿಂದ.ನೀನು ನಿನ್ನ ಪುಸ್ತಕದ ಕೊನೆ ಪುಟದಲ್ಲಿ ಬರೆವುತ್ತಿದ್ದ್ದ ಪ್ರೇಮ ಬರಹಗಳು ತುಂಬಾ ಹಿಡಿಸಿದವು.ಅವುಗಳನ್ನದರೂ ಓದಲಿಕ್ಕೆ ನಿನ್ನ ನೋಟ್ಸ ದಿನಾಲೂ ಇಸಿದುಕೋಳ್ತಾ ಇದ್ದೆ.
ಆದರೆ ದಿನ ಬದಲಾದಂತೆ, ನಿನ್ನಲ್ಲಿ ಬದಲಾದ ದೇಹ ಭಾಷೆವು ನನ್ನಲ್ಲಿ, ನನ್ನ ಮೇಲೆ ನಿನಗೆ ಪ್ರೀತಿಯಿದೆ ಎಂಬುವುದನ್ನು ಹೇಳಲು ಮರೆಯಲಿಲ್ಲ.ನಿನ್ನ ಕದ್ದು ನೋಡುವ ಕಣ್ಣುಗಳು ನನಗೆ ಅರ್ಥವಾಗುತಿದ್ದವು. ಸುಮ್ಮನೆ ಯೋಚನೆ ಮಾಡ್ತಾ ಕುಳಿತುರುತ್ತಿದ್ದ ನೀನು , ನಾನು ಬಂದ ಕೂಡಲೇ ನಿನ್ನ ಕಣ್ಣಿನ ಭಾಷೆ, ಮುಖದಲ್ಲಿಯ ಮಂದ ಹಾಸ ನನ್ನ ಮೇಲೆ ನಿನಗೆ ಎಷ್ಟು ಪ್ರೀತಿ ಇದೆ ಎಂದು ಸಾರಿ ಹೇಳುತ್ತಿದ್ದವು.

ನನಗೇನು ನಿನ್ನನ್ನು ಕಾಡಿಸಬೇಕೆಂದು ಬಯಕೆ ಇಲ್ಲ ನಾನು ಒಂದು ಒಳ್ಳ್ಳೆಯ ಗಳಿಗೆಗಾಗಿ ಕಾಯುತ್ತಿದ್ದೆನೆ. ಈ ಪ್ರೇಮಿಗಳ ದಿನ ಹೇಗಾದರೂ ಹತ್ತಿರ ಬಂದಿದೆ ಅಲ್ವಾ..??.ಹೇಳ್ತಿನಿ ಇರು.

ಈ ಪ್ರೀತಿಯ ವೇದನೆಗೆ ಕೊನೆ ಬೇಗನೆ ಆಗಲಿ ಎಂದು ಆಶಿಸುತ್ತೇನೆ.

ನಿನ್ನ ಜಿಸ್ಮ್...

Rating
No votes yet