ಪಲ್ಲವಿ ವಿಷಯವಾಗಿ...

ಪಲ್ಲವಿ ವಿಷಯವಾಗಿ...

ಬರಹ

ಬ್ಲಾಗ್ ಮಿತ್ರರೇ...
ಪಲ್ಲವಿ ಸಂಪದಕ್ಕೆ ಬಂದಾಗ್ಲಿಂದಾನೂ ಅವಳನ್ನ ನೋಡ್ತಾನೇ ಇದ್ದೀನಿ. ನಿಮ್ಮ ಹಾಗೇ ನಾನೂ ಯಾರಪ್ಪಾ ಇದು? ಎಂದು ಹುಬ್ಬೇರಿಸಿದ್ದುಂಟು. ಆದ್ರೆ ಪ್ರತಿಕ್ರಿಯಿಸಿಲ್ಲ. ನಿಮ್ಮ ಹಾಗೂ ಅವಳ ನಡುವೆ ಏರ್ಪಟ್ಟ ಸವಾಲ್ ಜವಾಬ್ ನ್ನ ತಪ್ಪದೇ ಗಮನಿಸ್ತಾ ಹೋದೆ. ಅವಳ ಬರಹ, ವಿಚಾರಧಾರೆ, ಪ್ರತಿಕ್ರಿಯಿಸುವ ಚಾಕಚಕ್ಯತೆ ಎಲ್ಲವೂ ವಿಶೇಷ ಗಮನ ಸೆಳೆಯಿತು. ಈ ಬೆಳವಣಿಗೆ ಕಂಡಾಗ ಅಕ್ಷರಗಳನ್ನೇ ಉಸಿರಾಡುತ್ತ ಅಕ್ಷರಗಳನ್ನೇ ಧ್ಯಾನಿಸುವವಳು ಪಲ್ಲವಿ ಎಂಬುದು ದಟ್ಟವಾಗುತ್ತಾ ಹೋಯಿತು. ವಯಸ್ಸಿಗೆ ಮೀರಿದ ಅನುಭಾವ, ಗಟ್ಟಿ ಭಾವವಲಯ ಅವಳದು. ಅವಳಿಗದು ಅರಿವಿದೆಯೋ ಇಲ್ಲವೋ.... ಸಂಪದದ ಮೂಲಕ ತನ್ನೊಂದಿಗೆ ಇತರರನ್ನೂ ಬೆಳೆಸುತ್ತ ಸಾಗಿರುವ (ಅಕ್ಷರ ಕಾಯಕ) ವೈಶಾಲ್ಯ ನಿಜಕ್ಕೂ ಖುಷಿ ವಿಷಯ.
ಎನಿ ವೇ ಗುಡ್ ಲಕ್ ಪಲ್ಲವಿ..... ಜಿಡ್ಡು ಹಿಡಿದ, ಸವೆಕಲಾದ, ವಿಚಾರಧಾರೆಯಿಂದ ಆಚೆ ಬರಲು ಹವಣಿಸುವ ಪ್ರಯತ್ನಕ್ಕೆ ಮನದಲ್ಲೇ ನನ್ನದೊಂದು ಪುಟ್ಟ ಧನ್ಯವಾದ.
ಇದನ್ನು ಬರೆಯಲು ಪ್ರೇರೇಪಿಸಿದ ಸುನಿಲ್ ಜಯಪ್ರಕಾಶ್ ಅವರಿಗೆ ‘ವಿಶೇಷ’ ಧನ್ಯವಾದಗಳು....