ಎಲ್ಲಿ ಮನಕಳುಕಿರದೊ, ಎಲ್ಲಿ ತಲೆ ಬಾಗಿರದೊ

ಎಲ್ಲಿ ಮನಕಳುಕಿರದೊ, ಎಲ್ಲಿ ತಲೆ ಬಾಗಿರದೊ

ಬರಹ

Godfrey Rego ಎಂಬುವರು ಸಂಪದ ಸಮುದಾಯಕ್ಕೆ ಬರೆದ ಪತ್ರದಲ್ಲಿ ಹೀಗೆ ಕೇಳಿದ್ದಾರೆ:

"ರಬೀಂದ್ರನಾಥ ಟಾಗೂರರ

'Where the mind is without fear and the head is held high;
Where knowledge is free;

ಕವನವನ್ನು ಕನ್ನಡಕ್ಕೆ ಅನುವಾದ ಮಾಡಿದ ಬಿ. ಎಂ. ಶ್ರೀ "ಇಂಗ್ಲಿಷ್ ಗೀತೆಗಳು" ಎಂಬ ಪುಸ್ತಕದಲ್ಲಿ ಹೊರತಂದಿದ್ದರು. ಕವನದ ಸಾಲುಗಳು ಹೀಗಿವೆ:

“ಎಲ್ಲಿ ಮನಕಳುಕಿರದೊ, ಎಲ್ಲಿ ತಲೆ ಬಾಗಿರದೊ,
ಎಲ್ಲಿ ತಿಳಿವಿಗೆ ತೊಡಕು ತೋರದಿಹುದಲ್ಲಿ…”

ಇದರ ಪೂರ್ಣ ಆವೃತ್ತಿ ಸಿಗಬಹುದೆ?"

(ಎಡಿಟ್) ಜೂನ್ ೬, ೨೦೦೮: ಮೇಲಿನ ಕನ್ನಡ ಅನುವಾದ [:article/9073#comment-20039|ಕೆಳಗಿನ ಪ್ರತಿಕ್ರಿಯೆಯಲ್ಲಿ ನರೇಂದ್ರರು ತಿಳಿಸಿರುವಂತೆ] ಎಂ ಎನ್ ಕಾಮತರದ್ದು.

ಸಂಪದಿಗರಿಗೆ ಪೂರ್ಣ ಕವನ ತಿಳಿದಿದ್ದರೆ ಪ್ರತಿಕ್ರಿಯೆ ಮೂಲಕ ತಿಳಿಸುತ್ತಾರೆ ಎಂದು ಆಶ್ವಾಸನೆ ಗಾಡ್ಫ್ರಿಯವರಿಗೆ ಕೊಟ್ಟಿದ್ದೀನಿ. ಸುಳ್ಳಾಗಿಸಬೇಡಿ ಮತ್ತೇ! :-)