ಇಂದು ವಿಶ್ವ ಪರಿಸರ ದಿನ - Do I care?

ಇಂದು ವಿಶ್ವ ಪರಿಸರ ದಿನ - Do I care?

Comments

ಬರಹ

ಇವತ್ತು ವಿಶ್ವ ಪರಿಸರ ದಿನಾಚರಣೆ. ಎಂದಿನಂತೆ ಇಂದು ಒಂದು ದಿನ ಅಂತಾನೆ ನಾವು ಇಷ್ಟು ದಿನ ಕಳೆದಿದ್ದಿವಿ. ಹೆಚ್ಚೆಂದರೆ ಗಿಡ ನೆಡಬೇಕು, ಪರಿಸರ ಕಾಪಾಡಬೇಕು ಅಂತ ಒಂದೆರಡು ಮಾತಾಡಿ ಸುಮ್ಮನಾಗಿ ಬಿಡ್ತಿವಿ. ಆದ್ರೆ ಇವತ್ತು ವಿಶ್ವ ಪರಿಸರ ದಿನ ನಮ್ಮಿಂದ ತುಂಬ ಪ್ರಾಮಾಣಿಕವಾದ, ಬದ್ಧತೆ ಯನ್ನು ಬೇಡುತ್ತ ಇದೆ. ಈ ನಮ್ಮ ಭೂಮಿಯನ್ನು, ನಮ್ಮ ಸುಂದರ ಕರುನಾಡನ್ನು ನಾವು ನಮ್ಮ ಮುಂದಿನ ಪೀಳಿಗೆಗೆ ಹೇಗೆ ಬಿಟ್ಟು ಹೋಗ್ತಾ ಇದ್ದಿವಿ ? ಇವತ್ತು ಭೂಮಿ ಮೇಲೆ ಆಗ್ತಿರೋ ಆಕ್ರಮಣ, ದೌರ್ಜನ್ಯದ ಪ್ರಮಾಣ ಮೇರೆ ಮಿರಿದೆ. ಇವತ್ತಿಗಾಗ್ಲೆ ಗ್ಲೋಬಲ್ ವಾರ್ಮಿಂಗ್ ಅನ್ನೋ ಭೂತದ ಪರಿಣಾಮ ನಮ್ಮೆಲ್ಲರ ಅನುಭವಕ್ಕೆ ಬರ್ತಾ ಇದೆ. ಮೊನ್ನೆ ಮೊನ್ನೆ ಯಷ್ಟೇ ಸುರಿದ ಅಕಾಲಿಕ ಮಳೆಯಿಂದ ನಮ್ಮ ರಾಯಚೂರು, ಬಳ್ಳಾರಿ, ಗದಗ್ ಸುತ್ತಮುತ್ತಲಿನ ರೈತರ ಬೆಲೆ ಸಂಪೂರ್ಣ ನಾಶವಾಗಿ ರೈತರು ಕಂಗಾಲಾಗುವಂತೆ ಮಾಡಿತು. ಆದ್ರೆ, ಇದೆಲ್ಲ ಬರಿ ಆರಂಭ. ಬರೋ ದಿನಗಳಲ್ಲಿ ಎಲ್ಲಕಿಂತ ಹೆಚ್ಚು ಕಷ್ಟ ನಷ್ಟ ಅನುಭವಿಸುವವರು ನಮ್ಮ ಮುಂದಿನ ಪೀಳಿಗೆ. ಅವರಿಗೆ ನಾವು ಬಿಟ್ಟು ಹೋಗುತ್ತಿರುವುದಾದರೂ ಏನು ? ವೈಪರಿತ್ಯ ಉಳ್ಳ ಹವಾಮಾನ, ಎಲ್ಲಿ ನೋಡಿದರಲ್ಲಿ ಜಲ ಕ್ಷಾಮ, ೨೦ ರಿಂದ ೩೦% ಪ್ರಾಣಿ ಮತ್ತು ಸಸ್ಯ ಸಂಕುಲದ ನಾಶ. ಆದರೆ ಇದೆಲ್ಲವನ್ನೂ ಸ್ವಲ್ಪ ಪ್ರಯತ್ನ ಮಾಡಿದ್ರೆ ತಪ್ಪಿಸಬಹುದೇನೋ !

೧> ನಾನು, ನೀವು, ಎಲ್ಲರೂ ಜಾಗತಿಕ ತಾಪಮಾನ ಏರಿಕೆ ಬಗ್ಗೆ ಅರಿವು ಬೆಳೆಸಿಕೊಳ್ಳೋಣ
೨> ಆದಷ್ಟು ಸಂಪನ್ಮೂಲಗಳ ಪುನರ್ಬಳಕೆ ಮಾಡೋಣ.
೩> ಪರಿಸರ ನಾಶ ಅನ್ನುವುದನ್ನು ಒಂದು ರಾಜಕೀಯವಾಗಿ ಪ್ರಾಮುಖ್ಯತೆ ಪಡೆದ ವಿಷಯವನ್ನಾಗಿಸೋಣ. ನಮ್ಮ ಮತದ ಮೂಲಕ ಬರುವ ದಿನಗಳಲ್ಲಿ ನಮ್ಮನ್ನು ಆಳುವ ದೊರೆಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸೋಣ.
೪> ಆದಷ್ಟು ಸಸ್ಯಹಾರಿಗಳಾಗಿ. ಕೊನೆ ಪಕ್ಷ, ಮಾಂಸ ಸೇವನೆಯನ್ನು ಕಡಿಮೆ ಮಾಡೋಣ.
೫> CFL ಬಲ್ಬ್ ಗಳನ್ನು ಬಳಸೋಣ, ಆ ಮೂಲಕ ವಿದ್ಯುತ ಬಳಕೆಯಲ್ಲಿ ಉಳಿಸೋಣ
೬> ಆದಷ್ಟು ರೆಚ್ಯ್ಕ್ಲೆದ್ ವಸ್ತುಗಳನ್ನು ಬಳಸೋಣ.
೭> ಆದಷ್ಟು ಹೆಚ್ಚು ಸಾರ್ವಜನಿಕ ಸಾರಿಗೆ ಬಳಸೋಣ. ವಿಶ್ವ ಮಾರುಕಟ್ಟೆಯಲ್ಲಿ ತೈಲ ಬೆಲೆ ೨೦೦ ಡಾಲರ್ ಪ್ರತಿ ಬ್ಯಾರೆಲ್ ಗೆ ಆಗುತ್ತಿರುವ ಈ ಸಂದರ್ಭದಲ್ಲಿ, ಈ ಹೆಜ್ಜೆ ಒಳ್ಳೆಯದು.
೮> ಕೆಲಸದ ಸಮಯ ಮುಗಿದ ಮೇಲೆ ನಿಮ್ಮ ಕಂಪ್ಯೂಟರ್ ಅನ್ನು ಆಫ್ ಮಾಡಿ. ಬಳಸದೆ ಇದ್ದಲ್ಲಿ ನಿಮ್ಮ ಮನೆಯ ಎ.ಸಿ ಆರಿಸಿ.
೯> ಆದಷ್ಟು ಕಡಿಮೆ ಪ್ಯಾಕೇಜ್ ಮಾಡಿರೋ ವಸ್ತುಗಳನ್ನು ಖರೀದಿಸಿ. ನೆನಪಿರಲಿ, ಇಂದು ಖರಿದಿಸೋ ವಸ್ತುವಿಗಿಂತಲೂ ಅದರ ಪ್ಯಾಕೇಜಿಂಗ್ ಗಾಗಿ ಬಳಸೋ ವಸ್ತುಗಳೇ ದೊಡ್ಡ ಪ್ರಮಾಣದ ಪರಿಸರ ಮಾಲಿನ್ಯದ ಸಮಸ್ಯೆ ತಂದೋಡ್ದುತ್ತಿವೆ.

ನಾಳಿನ ಭವಿಷ್ಯ ಅಂದ್ರೆ ನಮಗಾಗಿ ಯಾರೋ ಸೃಷ್ಟಿ ಮಾಡಿರೋದಲ್ಲ. ಅದನ್ನ ನಾವೇ ಸೃಷ್ಟಿಸಬೇಕು. ಪ್ರತಿ ದಿನವು ನಮ್ಮ ಆಯ್ಕೆಗಳ ಮೂಲಕ, ನಮ್ಮ ಪರಿಸರ ಸ್ನೇಹಿ ನಿಲುವುಗಳ ಮೂಲಕ ನಾವು ಒಂದು ಸುಂದರ ಜಗತ್ತನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸಬಹುದು. ನೆನಪಿರಲಿ, ಪರಿಸರದ ವಿಷಯದಲ್ಲಿ ಯಾವುದೇ ಬಹುಮಾನವು ಇಲ್ಲ, ಶಿಕ್ಷೆಯು ಇಲ್ಲ, ಇರುವುದು ಪರಿಣಾಮವೊಂದೇ. Let us Think and Act. Make a Commitment before it is too late.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet