ಒಂದು ಸಾಕೋ, ಎರಡು ಬೇಕೋ?
ನಾನು ತಾಯಿಯಾಗಿ ಹತ್ತಿರ ಎರಡು ವರ್ಷವಾಗುತ್ತ ಬಂದಿತು. ಇದೀಗ ಎಲ್ಲರಿಂದ ಸಣ್ಣಗೆ ಕೊರೆತ ಶುರುವಾಗಿದೆ. ಮಗನಿಗೆ ತಂಗಿ/ತಮ್ಮ ಬೇಡವಾ ಎಂದು ಕೇಳುವುದು. ಈ ಪ್ರಶ್ನೆಗೆ ಉತ್ತರಿಸಲು ಮಾನಸಿಕವಾಗಿ ನಾನಿನ್ನೂ ಸಿದ್ಧಗೊಂಡಿಲ್ಲ. ಮಗ ಇದೀಗ ತಾನೆ ದೊಡ್ಡವನಾಗುತ್ತಿದ್ದು, ನನಗೆ ಸ್ವಲ್ಪ ರಿಲ್ಯಕ್ಸ್ ಎನಿಸುತ್ತಿದೆ.
ಕೆಲಸಕ್ಕೂ ಹೋಗಿ ಮನೆಯನ್ನೂ ನೋಡಿಕೊಳ್ಳುವ ಒಬ್ಬ ತಾಯಿಗೆ, ಎರಡನೆ ಮಗುವನ್ನು ಹೆರುವುದು, ಅದರ ಪಾಲನೆ ಪೋಷಣೆ, ಕಷ್ಟವೆನಿಸುತ್ತದೆ. ನೋಡಿಕೊಳ್ಳಲು ಹಿರಿಯರೊಬ್ಬರು ಇದ್ದರೆ ಆ ಮಾತು ಬೇರೆ. ಎಲ್ಲದಕ್ಕೂ ಕೆಲಸದವರನ್ನು ಅವಲಂಬಿಸಿದ್ದರೆ ಬಹಳ ಕಷ್ಟ. ಅಲ್ಲದೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇರುವ ಒಂದು ಮಗುವಿಗೆ ಸೂಕ್ತ ಶಿಕ್ಷಣ ಕೊಡಿಸಿ ಅವರನ್ನು ಒಂದು ದಡ ಮುಟ್ಟಿಸುವುದು ಕಷ್ಟವಾಗಿರುವಾಗ, ಇನ್ನೊಂದು ಮಗು ಇದ್ದರೆ, ನಾವು ಎರಡೂ ಮಕ್ಕಳಿಗೂ ಸರಿಯಾದ ಸಾಮಾಜಿಕ ನ್ಯಾಯ ಒದಗಿಸಬಲ್ಲೆವೆ?
ಕೆಲವರು ಹೇಳುತ್ತಾರೆ, ಒಂದೇ ಮಗುವಿದ್ದರೆ ಅವರು ಸ್ವಾರ್ಥಿಗಳಾಗುತ್ತಾರೆ, ಹಂಚಿಕೊಳ್ಳ್ದುವ ಗುಣ, ಸಹಬಾಳ್ವೆ ಅವರಲ್ಲಿರುವುದಿಲ್ಲ, ದೊಡ್ಡವರಾಗುತ್ತಾ ಅವರಿಗೆ ತಾವು ಒಂಟಿ ಎನಿಸತೊಡಗುತ್ತದೆ, ಮುದ್ದು ಜಾಸ್ತಿಯಾಗಿ ಹಟ ಮಾರಿಯಾಗುತ್ತಾರೆ, ವಿಶೇಷವಾಗಿ ತಾಯಿಯೂ ದುಡಿಯುತ್ತಿರುವಾಗ, ಎಂದು. ಆದರೆ ಮಕ್ಕಳು ನಾವು ಬೆಳೆಸಿದಂತೆ ಇರುತ್ತಾರಲ್ಲವೆ.
ಯಾವುದು ಸರಿ? ಯಾವ ರೀತಿ ನಿರ್ಧಾರ ಕೈಗೊಳುವುದು ? ಮನಸ್ಸು ಗೊಂದಲದ ಗೂಡಾಗಿದೆ.
ನೀವೇನಂತೀರಿ? ನೀವು ಕೂಡ ನಿಮ್ಮ ಪೋಷಕರಿಗೆ ಒಬ್ಬರೆ ಮಗುವಾಗಿದ್ದರೆ ನಿಮ್ಮ ಅನುಭವವೇನು ?
ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿ.
Comments
ಉ: ಒಂದು ಸಾಕೋ, ಎರಡು ಬೇಕೋ?
ಉ: ಒಂದು ಸಾಕೋ, ಎರಡು ಬೇಕೋ?
In reply to ಉ: ಒಂದು ಸಾಕೋ, ಎರಡು ಬೇಕೋ? by roopablrao
ಉ: ಒಂದು ಸಾಕೋ, ಎರಡು ಬೇಕೋ?
ಉ: ಒಂದು ಸಾಕೋ, ಎರಡು ಬೇಕೋ?
ಉ: ಒಂದು ಸಾಕೋ, ಎರಡು ಬೇಕೋ?
ಉ: ಒಂದು ಸಾಕೋ, ಎರಡು ಬೇಕೋ?