ಸುವರ್ಣ ಕರ್ನಾಟಕ ಅಂತರ್ಜಾಲ ವಾಹಿನಿ?

ಸುವರ್ಣ ಕರ್ನಾಟಕ ಅಂತರ್ಜಾಲ ವಾಹಿನಿ?


ಮೇಲೊಂದು ಹಿಡಿದೆಳೆದು ಬಗ್ಗಿಸಿದ ಚಿತ್ರ. ಚಿತ್ರದೊಳಗೆ ಅಗಲ ಹಿಡಿದೆಳೆದ ಲೋಗೊ. ಪಕ್ಕದಲ್ಲಿ ಎಲ್ಲಿಂದಲೋ ಎತ್ತಿ ಹಾಕಿಕೊಂಡ ಕ್ಲಿಪ್ ಆರ್ಟ್.

ಅದರಡಿ ಎಡಕ್ಕೆ ವಿಧಾನಸೌಧದ ಚಿತ್ರ, ಬಲಗಡೆ ಐ ಟಿ ಪಿ ಎಲ್ - ಇವೆರಡೂ ಗ್ರಂಥಾಲಯವೆಂದ ತಕ್ಷಣ ನೆನಪಿಗೆ ಬರುವ ಕಟ್ಟಡಗಳಲ್ಲಿ ಕೊನೆಯವು!
ಮಧ್ಯದಲ್ಲಿ ಮೇಲಿಂದ ಕೆಳಗೆ, ಎಡದಿಂದ ಬಲಕ್ಕೆ, ವಾರೆವಾರೆಯಾಗಿ, ಕ್ಯಾಸಿನೋ ಮೆಶೀನನ್ನೂ ನಾಚಿಸುವ "ಹೊಸತು" (New) ಎನ್ನುವ ಕ್ಲಿಪ್ ಆರ್ಟುಗಳು.

ಇದು ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಆರಂಭಿಸಿರುವ 'ಸುವರ್ಣ ಕರ್ನಾಟಕ ಅಂತರ್ಜಾಲ ವಾಹಿನಿ' ಪೋರ್ಟಲ್ಲು.

Children's virutal Library ಎನ್ನುವೆಡೆ ಡೈಯಪರ್ ಹಾಕಿಕೊಂಡ ಮಗು ಯಾಕೆ ಲಾಗ ಹೊಡೆಯುತ್ತಿದೆ ಎಂಬುದು ಮೇಲಿನದ್ದು ನೋಡಿದ ನಮಗೆ ಆಶ್ಚರ್ಯ ಹುಟ್ಟಿಸಲಾರದು.

ಇಂದು ವಿಜಯ ಕರ್ನಾಟಕದಲ್ಲಿ ಈ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ವೆಬ್ಸೈಟು ಕುರಿತು ಬಂದಿದ್ದ ಒಂದು ಲೇಖನವನ್ನೋದುತ್ತ ವೆಬ್ಸೈಟು ತೆರೆದು ನೋಡಿದೆ. ಗಾಬರಿಯಾಯಿತು.
"ಹೊಸ ಮಾದರಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಸಿದ್ಧಪಡಿಸಿದ್ದೀವಿ" ಎಂದಿತ್ತು ಲೇಖನ.

ವಿ.ಕ. ದ ಅದೇ ಲೇಖನದಲ್ಲಿ "ಇಲಾಖೆ ಕೋಟ್ಯಂತರ ರೂ. ಹೂಡಿಕೆ ಮಾಡಿ ಈ ವೆಬ್ಸೈಟ್ ಆರಂಭಿಸಿದೆ" ಎಂಬ ಕೊನೆಯ ವಾಕ್ಯ ಓದಿ ಮತ್ತಷ್ಟು ಗಾಬರಿಯಾಯಿತು.

ಆಸಕ್ತರಿಗಾಗಿ ವೆಬ್ಸೈಟಿನ URL:
http://www.karnatakapubliclibrary.gov.in/
(http://164.100.80.120/karpublib/ ಗೆ ರಿಡೈರೆಕ್ಟ್ ಆಗುತ್ತದೆ).

Rating
No votes yet

Comments