ಹಲಸಿನ ಹಣ್ಣಿನ ತತ್ವ ವಿಚಾರ
ಹಲಸಿನ ತತ್ವವನ್ನಿಳಿಸುತ್ತಾ
ಕುರುಬರ ಅಜ್ಜ ಮಾರಾಟಗಾರನಾಗುತ್ತಾನೆ
ತನ್ನ ಹಲಸಿನಹಣ್ಣನ್ನುವರ್ಣಿಸುತ್ತಾನೆ
ಸಿಹಿಯನ್ನು ಹೊಗಳುತ್ತಾನೆ
ಸುವಾಸನೆಯನ್ನು ಬಣ್ಣಿಸುತ್ತಾನೆ.
ತನ್ನಪ್ಪ ಬಿಟ್ಟುಹೋದ ಮೂರೆಕರೆ ಜಮೀನು
‘ಮೂಢರ’ಪಾಲಾದುದನ್ನು
ಜೋಪಡಿಗೆ ಆಸರೆ ಒದಗಿಸುತ್ತಾ ಉಳಿದ
ಒಂದೇ ಹಲಸಿನ ಮರವನ್ನೂ
ಅದರ ವಂಶವೃಕ್ಷವನ್ನೂ ಹೇಳುತ್ತಾ
ಕರುಣೆಯನ್ನು ಮಾರುತ್ತಾನೆ.
ಭೂಲೋಕದ ಭೋಜ ಮಹಾರಾಜ
ಬೇಟೆಯ ವೇಳೆ ದಾರಿತಪ್ಪಿ, ಕನಲಿ ಬಾಯಾರಿ
ಬೋಧತಪ್ಪಿ ನೆಲಕುರುಳಿದಾಗ
ಇಂದ್ರ ತಂದ ಹರಕೆಯ ಹಲಸಿನ ಕನಸನ್ನು
ಇಂದ್ರ ತನ್ನ ಅಮರಾವತಿಯಿಂದ ಒಂದು ಹಲಸಿನ ಹಣ್ಣನ್ನು ದಯಪಾಲಿಸಿದನೆಂದು,
ಬೋಜ ತಿಂದೆಸೆದ ಆ ಹಣ್ಣೀನ ಬೀಜ ಮೊಳೆತು-ಚಿಗುರಿ ಹೆಮ್ಮರವಾಗಿ
ತ್ರೇತಾಯುಗದಿಂದಲೂ ತನ್ನ ಜೋಪಡಿಗೆ ಆಸರೆಯಾಗಿದೆ ಎನ್ನುತ್ತಾ
ಮೌಡ್ಯವನ್ನು ಲೇಪಿಸಿ
ಕರುಣೆಯನ್ನು ಮಾರುತ್ತಾನೆ.
ಕೊಂಡು ಕೊಳ್ಳುವ ನನ್ನ ಚೌಕಾಸಿ ಬುದ್ದಿ ಜಾಗೃತವಾಗುತ್ತದೆ
ಜಾಲದೊಳು ಬೀಳಿಸಿದ ಅಜ್ಜನ ಪುರಾಣವನ್ನು ಹಳಿಯುತ್ತಾ
ಹಣ್ಣಿನ ನಿಗೂಢತೆಯನ್ನೂ, ಅಲ್ಪತೆಯನ್ನೂ ಪರಾಮರ್ಶಿಸುತ್ತಾ
ಹಣ್ಣೂ ಬಿಡಿಸುವ ಕಷ್ಟವನ್ನು ರಿಂಗಣಿಸಿ, ಬೆಚ್ಚಿಬೀಳಿಸಿ ಆರು-ಮೂರು ಮಾಡಿ
ಸುರಿದೂ ಅಳೆದೂ
ಕರುಣೆಯಿಂದ ಕೊಳ್ಳುತ್ತೇನೆ.
ಎರಡನೆಯ ಕಂತಿಗೆ ಕಾಯುವುದು