(ಏ)ನೆ, (ಏ)ನೊ ಇವು ಕನ್ನಡದಲ್ಲಿ ಹೆಣ್, ಗಂಡು ತೋರುಗಗಳು ??
ಬರಹ
ನಮ್ಮ ಮಾತುಗಳು ಹೀಗಿರುತ್ತವೆ
೧. ನಾನ್ ಹೋಗ್ತಾ ಇದ್ದೀನಿ..ನೀನ್ ಬರ್ತೀಯೆನೆ? ( ಇಲ್ಲಿ 'ಏನೆ' ಹೆಣ್-ತೋರುಗ ಒರೆ, ಹೆಣ್ಣಿಗೆ ಕೇಳುತ್ತಿರುವ ವಾಕ್ಯ ಇದು)
೨. ನಾನ್ ಹೋಗ್ತಾ ಇದ್ದೀನಿ ..ನೀನ್ ಬರ್ತೀಯೇನೊ? ( ಇಲ್ಲಿ 'ಏನೊ' ಗಂಡ್-ತೋರುಗ ಒರೆ, ಗಂಡಿಗೆ ಕೇಳುತ್ತಿರುವ ವಾಕ್ಯ ಇದು)
ಹೀಗೂ ಇರುತ್ತವೆ
೧. ನಾ ಹೊಂಟೆ ..ನೀ ಬರ್ತಿ? (ಇಲ್ಲಿ ಗಂಡ್-ತೋರುಗ ಮೇಣ್ ಹೆಣ್-ತೋರುಗಗಳನ್ನು ಬಳಸಿಲ್ಲ ..ಇದನ್ನ ಇಬ್ಬರಿಗೂ ಬಳಸಬಹುದು)
೨. ನಾ ಹೊಂಟೆ..ನೀ ಬರಾಕ್ ಹತ್ತಿ? (------,,--------)
ಇದರ ಬಗ್ಗೆ ನಿಮ್ಮ ಅನಿಸಿಕೆ ಹೇಳಿ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: (ಏ)ನೆ, (ಏ)ನೊ ಇವು ಕನ್ನಡದಲ್ಲಿ ಹೆಣ್, ಗಂಡು ತೋರುಗಗಳು ??