ಲಿನಕ್ಸಾಯಣ - ೧೦ - ಲಿನಕ್ಸ್ ನಲ್ಲಿ ಇಂಟರ್ನೆಟ್ ಎಕ್ಸ್ ಪ್ಲೋರರ್
ಲಿನಕ್ಸ್ ನಲ್ಲಿ ವಿಂಡೋಸ್ ನ ಇಂಟರ್ನೆಟ್ ಎಕ್ಸ್ ಪ್ಲೋರರ್ ಬಳಸ್ಲಿಕ್ಕೆ ಸಾಧ್ಯವೇ? ಇದು ಎಲ್ಲರಲ್ಲಿರುವ ಸಾಮಾನ್ಯ ಸಂದೇಹ.
ವೆಬ್ ಸೈಟ್ ಗಳನ್ನ ಅಭಿವೃದ್ದಿಪಡಿಸುವ ಅನೇಕ ಸ್ನೆಹಿತರಿಗೆ ತಮ್ಮ ಕಂಪ್ಯೂಟರ್ ಅನ್ನ ವಿಂಡೋಸ್ ನಲ್ಲಿ ಬೂಟ್ ಮಾಡ್ಬೇಕು ಅಂದ್ರೆ ಸಂಕೋಚ ಅಥವಾ ಆಲಸ್ಯ.ನನಗಂತೂ ವಿಂಡೋಸ್ ನಲ್ಲಿ ನನ್ನ ಲ್ಯಾಪ್ ಟಾಪ್ ಬೂಟ್ ಮಾಡೋದು ದೊಡ್ಡ ಪ್ರಾಜೆಕ್ಟೇ ಸರಿ.
ಈ ರಗಳೆಗಳನ್ನ ಕಳೆದಿದ್ದು ವೈನ್ ಮತ್ತು ಅದರಿಂದ ನೆಡೆಯುವ ies4linux ಅನ್ನೋ ಈ ತಂತ್ರಾಂಶ.
ಇದನ್ನ ಹೇಗೆ ಲಿನಕ್ಸ್ ನಲ್ಲಿ ಅಳವಡಿಸಿಕೊಳ್ಳೋದು ಅಂದ್ರಾ? ಈ ಕೊಂಡಿಯನ್ನ ಸಂಪರ್ಕಿಸಿ. IE ಅಂತಲೇ ಕರೆಯಲ್ಪಡುವ ಈ ತಂತ್ರಾಂಶದ ಅನೇಕ ಆವೃತ್ತಿಗಳು (೫, ೫.೫, ೬, ೭) ಎಲ್ಲವನ್ನೂ ನೀವು ನಿಮ್ಮ ಲಿನಕ್ಸ್ ನಲ್ಲಿ ಒಮ್ಮೆಲೇ ಅಳವಡಿಸಿಕೊಳ್ಳ ಬಹುದು. ವಿಂಡೋಸ್ ನಲ್ಲಿ ಈ ರೀತಿ ಐ.ಇ ಯ ಎರಡು ಆವೃತ್ತಿಗಳನ್ನ ಒಮ್ಮೆಲೇ ಅಳವಡಿಸಿ ಕೊಳ್ಳೋದು ಸಹ ಸಾಹಸವೇ.
Rating
Comments
ಉ: ಲಿನಕ್ಸಾಯಣ - ೧೦ - ಲಿನಕ್ಸ್ ನಲ್ಲಿ ಇಂಟರ್ನೆಟ್ ಎಕ್ಸ್ ಪ್ಲೋರರ್