ಕೊಲೆಗಾರ(ರ್ತಿ) ಯಾರು ?
ಇಡೀ ವಠಾರ ದಿಗ್ಬ್ರೂಡವಾಗಿತ್ತು . ತಮ್ಮ ಮುಂದೆ ಆಡಿ ಬೆಳೆದ ತಮ್ಮ ಸುಮತಿ ಸಾಯುತ್ತಾಳೆ, ಅದೂ ಇಂತಹಾ ದುರ್ಮರಣಕ್ಕೆ ಈಡಾಗುತ್ತಾಳೆಂದು ಯಾರೂ ತಿಳಿದಿರಲಿಲ್ಲ.
ಆಕೆ ಕೊಲೆಯಾಗಿದ್ದು ಮೇಲ್ನೋಟಕ್ಕೆ ಎದ್ದು ಕಾಣುವಂತಹದ್ದಾಗಿತ್ತು.
ಕುತ್ತಿಗೆಯ ಆಯ ಕಟ್ಟಿಗೆ ಚೂರಿ ಚುಚ್ಚಿ ಕೊಲೆ ಮಾಡಲಾಗಿತ್ತು
ಸುಮತಿಯ ಮದುವೆ ಇನ್ನೊಂದು ವಾರವಿತ್ತು ಲಗ್ನ ಪತ್ರಿಕೆ ಹಂಚಿ ಬರಲೆಂದು ಹೋದವಳು ಶವವಾಗಿ ಮರಳಿದಳು. ರಸ್ತೆಯಲ್ಲಿ ಹೆಣವಾಗಿ ಬಿದ್ದವಳನ್ನು ವಾಹನದಲ್ಲಿ ಹೊತ್ತು ತಂದಿದ್ದರು
ಶೇಖರ್ ಅಂತೂ ಮಾತು ಬಾರದೆ ಮೂಕನಾಗಿ ಹೋಗಿದ್ದ. ನವಜೀವನದ ಕನಸು ನನಸಾಗುವುದರಲ್ಲಿ ನುಚ್ಚು ನೂರಾಗಿತ್ತು.
ಸುಮತಿಯ ಸಂಗೀತದ ಮೇಡಂನ ರೋದನ ಮುಗಿಲು ಮುಟ್ಟಿತ್ತು. ಸುಮತಿ ಅವರ ಅತ್ಯುತ್ತಮ ವಿಧ್ಯಾರ್ಥಿನಿ. ಅವಳು ಸಂಗೀತಕ್ಕೆ ಜೀವನವನ್ನೇ ಮುಡಿಪಾಗಿಡಬೇಕೆಂದ ಆಸೆ ಹೊತ್ತಿದ್ದಳು. ಸುಮತಿಯ ಕಂಠಕ್ಕೆ ಮಾರು ಹೋಗದವರೇ ಇರಲಿಲ್ಲ.
ಸುಮತಿಯ ತಂದೆ ರಾಘವೇಂದರು ಹಣ್ಣಾಗಿ ಹೋಗಿದ್ದರು ಇದ್ದೊಬ್ಬ ಒಬ್ಬಳೇ ಮಗಳನ್ನು ಕಳೆದುಕೊಂಡು ನಿತ್ರಾಣಾರಾಗಿದ್ದರು. ತಾಯಿ ಇಲ್ಲದ ಮಗಳನ್ನು ಅಕ್ಕರೆ ಇಂದ ಬೆಳೆಸಿದ್ದರು.
ಶಾಲಿನಿಯಂತೂ ಪ್ರಜ್ನೆ ತಪ್ಪಿ ಬಿದ್ದಿದ್ದಳು .ಸುಮತಿ ಅವಳ ಜೀವದ ಗೆಳತಿಯಾಗಿದ್ದಳು.
ಯಾರ ಮೇಲೂ ಅನುಮಾನ ಬರುವಂತಿರಲಿಲ್ಲ. ಸುಮತಿ ತನ್ನ ಒಳ್ಳೆಯ ನಡತೆ ಸದ್ಗುಣಗಳಿಂದ ಎಲ್ಲರಿಗೂ ಅಚ್ಚುಮೆಚ್ಚಿನವಳಾಗಿದ್ದಳು.
ಯಾರೋ ಒಡವೆಯ ಆಸೆಗೆ ಕೊಂದಿದ್ದಾರೆ ಎನ್ನುವಂತಿರಲಿಲ್ಲ ಏಕೆಂದರೆ ಸುಮತಿ ಧರಿಸಿದ್ದ ಒಡವೆಗಳು ಹಾಗೆ ಇದ್ದವು.
ಅತ್ಯಾಚಾರದ ಪ್ರಯತ್ನದ ಯಾವ ಪುರಾವೆಗಳು ಕಾಣಲಿಲ್ಲ
ಯಾರೋ ಗೊತ್ತಿರುವವರೇ ಮುಂದಿನಿಂದಲೆ ಆಕ್ರಮಣ ಮಾಡಿರುವುದು ಪೋಲೀಸರನ್ನು ಚಿಂತೆಗೀಡು ಮಾಡಲಾಯಿತು.
ಅವಳು ಯಾರ ಯಾರ ಮನೆಗೆ ಹೋಗಬೇಕೆಂಬ ಯೋಚನೆ ಮಾಡಿದ್ದಳೋ ಒಬ್ಬರಿಗೂ ಗೊತ್ತಿರಲಿಲ್ಲ.
ಅದೂ ಅಂದು ಅವಳು ತಮ್ಮ ಮನೆಗೆ ಬರಲೇ ಇಲ್ಲವೆಂದು ಅವರಿಗೆ ತಿಳಿದವರೆಲ್ಲಾ ಹೇಳಿದರು .
ಅವಳ ಕತ್ತಿನಲ್ಲೇ ಇದ್ದ ಚೂರಿಯ ಮೇಲೂ ಯಾರ ಬೆರಳ ಗುರುತೂ ಇರಲಿಲ್ಲ
ಹಾಗಿದ್ದರೆ ಯಾರು ಕೊಲೆ ಮಾಡಿದವರು?
ಒಬ್ಬರಿಗೆ ಒಂದೇ ಅವಕಾಶ
ಉತ್ತರಿಸುವುದಕ್ಕೆ .
ಉತ್ತರದ ಜೊತೆಗೆ ಕಾರಣವೂ ಬೇಕು
(ಮುಂದುವರೆಯುವುದು)
Comments
ಉ: ಕೊಲೆಗಾರ ಯಾರು ?
In reply to ಉ: ಕೊಲೆಗಾರ ಯಾರು ? by gururajkodkani
ಉ: ಕೊಲೆಗಾರ ಯಾರು ?
ಉ: ಕೊಲೆಗಾರ ಯಾರು ?
ಉ: ಕೊಲೆಗಾರ ಯಾರು ?
In reply to ಉ: ಕೊಲೆಗಾರ ಯಾರು ? by ಶ್ರೀನಿವಾಸ ವೀ. ಬ೦ಗೋಡಿ
ಉ: ಕೊಲೆಗಾರ ಯಾರು ?
In reply to ಉ: ಕೊಲೆಗಾರ ಯಾರು ? by roopablrao
ಉ: ಕೊಲೆಗಾರ ಯಾರು ?
In reply to ಉ: ಕೊಲೆಗಾರ ಯಾರು ? by ಶ್ರೀನಿವಾಸ ವೀ. ಬ೦ಗೋಡಿ
ಉ: ಕೊಲೆಗಾರ ಯಾರು ?
In reply to ಉ: ಕೊಲೆಗಾರ ಯಾರು ? by ಸಂಗನಗೌಡ
ಉ: ಕೊಲೆಗಾರ ಯಾರು ?
ಉ: ಕೊಲೆಗಾರ ಯಾರು ?
In reply to ಉ: ಕೊಲೆಗಾರ ಯಾರು ? by kalpana
ಉ: ಕೊಲೆಗಾರ ಯಾರು ?
In reply to ಉ: ಕೊಲೆಗಾರ ಯಾರು ? by kalpana
ಉ: ಕೊಲೆಗಾರ ಯಾರು ?
ಉ: ಕೊಲೆಗಾರ ಯಾರು ?
ಉ: ಕೊಲೆಗಾರ ಯಾರು ?
ಉ: ಕೊಲೆಗಾರ ಯಾರು ?