ಐ ಟಿ (IT)
ಕಂಬನಿಯ ಕಂಗಳಲಿ
ಸವಿಯಾದ ನೆನಪಲ್ಲಿ
ಆ ಜಾರಿ ಹೋದ
ನೆಮ್ಮದಿಯ ಬಾಳಲ್ಲಿ...
ಪ್ರಗತಿಯೇ ಜೀವನ
ಜೀವನವೆ ಪ್ರಗತಿ
ಹುಚ್ಚಾದ ಈ ಮಾತು
ತಲೆತುಂಬಿ ಕಿಚ್ಚೆದ್ದು...
ಸೊಗಸಾದ ಬಾಳಿಂದ
ಕೇಳ ಬಿದ್ದೆ ಕಲ್ಲಲ್ಲಿ
ಆ ಕಣ್ಣ ನೀರಲ್ಲಿ
ನಾ ಆಯ್ ಟಿ ಸಿಲುಕಲ್ಲಿ..
ಈ ಯಂತ್ರ ಜನರಲ್ಲಿ
ಗುರಿಯೆಂಬ ಗುಂಗಲ್ಲಿ
ನಾ ಕಳೆದುಕೊಂಡೆ
ಮನ:ಶಾಂತಿ ನನ್ನಲ್ಲಿ..
ಸಂಸಾರ ಜೋತೆಯಲ್ಲಿ
ನಾ ನಾಕು ತಾಸಷ್ಟೇ
ಉಳಿದೆಲ್ಲ ತಾಸು
ಕೀ ಬೋರ್ಡು ಮೌಸಷ್ಟೆ..
ಲಕ್ಷಕ್ಕೆ ಲಕ್ಷ
ದುಡ್ಡಿದ್ರೂ ಅಷ್ಟೆ..
ಮನಸ್ಸೆಂಬ ಈ ಕೋಣೆ
ಕರಿ ಕತ್ತಲಷ್ಟೆ...
ಮನೆಯೂಟ ಗತಿಯಿಲ್ಲ
ಸಮಯವೇ ದೊರಕಲ್ಲ
ಫಾಶ್ಟ್ ಫುಡ್ಡೇ ಎಲ್ಲ
ಇಂಗ್ಲೀಷೆ ಬೆಲ್ಲ..
ಹೈ ಫೈಯಿ ಟಸ್ ಟುಸ್ಸು
ಎಲ್ಲೆಂದರಲ್ಲಿ
ಎನಾಯ್ತು ಇಂದು
ಈ ತಾಯಿ ಮಡಿಲಲ್ಲಿ..
ಗಂಡಿಲ್ಲ ಹೇಣ್ಣಿಲ್ಲ
ಸರದಾಗೆ ಎಲ್ಲಾ
ಹೇಣ್ಣೆಂಬ ಜಾತಿ
ಮೆರೆಯುತಿದೆ ಜಗವೆಲ್ಲ..
ಆ ಕಡಲ ಧರೆಗೆ
ದಡವುಂಟು ಕೊನೆಗೆ
ಈ ಆಯ್ ಟಿ ಕಡಲಲ್ಲಿ
ಕಡೆಯಿಲ್ಲ ಕೊನೆವರೆಗೆ...
ನೀ ಇಳಿದರೊಳಗೆ
ಸವಿನೋವು ಮನದೊಳಗೆ
ನೀ ಹೊರಗು ಇಲ್ಲ
ನೀ ಒಳಗೂ ಅಲ್ಲ....
ಬದುಕಿಗೆ ಸಮಯವೆ?
ಸಮಯಕ್ಕೆ ಬದುಕೆ?
ನಮ್ಮವರು ನಂಮ್ಮಿಂದ
ದೂರಾಗಬೇಕೆ?
ನುರೆಂಟು ದಾರಿ
ನಮ್ಮಲ್ಲಿ ಜೀವಿಸಲು..
ಜನರೇಕೆ ಕೋರುವರು
ಈ ಆಯ್ ಟಿ ದಾರಿ??
ತಿಳಿದಿಲ್ಲ ಅವರಿನ್ನು
ಈ ಆಯ್ ಟಿ ಹೋಳಿ
ದೇವರಿಗೆ ಬಿಟ್ಟಂತೆ
ಆಗುವರು ಘೂಳಿ...
ರಾಜಕುಮಾರ. ಮಠಪತಿ
ಸತ್ಯಂ ಕಂಪ್ಯೂಟರ್ ಸರ್ವಿಸೆಸ್ ಲಿಮಿಟೆಡ್, ಹೈದ್ರಬಾದ್