ಜ್ಯೇಷ್ಟ ಮಾಸದ ಶ್ರೇಷ್ಟ ಪುಷ್ಪ - ಬ್ರಹ್ಮಕಮಲ

ಜ್ಯೇಷ್ಟ ಮಾಸದ ಶ್ರೇಷ್ಟ ಪುಷ್ಪ - ಬ್ರಹ್ಮಕಮಲ

ಬರಹ

ಜ್ಯೇಷ್ಟ ಮಾಸಕ್ಕೂ ಬ್ರಹ್ಮಕಮಲಕ್ಕೂ ಅದೇನು ಅನುಬಂಧವೋ ತಿಳಿಯಿದು. ಮುಂಗಾರಿನ ಮಳೆ ಹನಿಗಳು ಧರೆಗಿಳಿದಂತೆ ಕ್ಯಾಕ್ಟಸ್ ಜಾತಿಯ ಬ್ರಹ್ಮಕಮಲದ ಗಿಡದಲ್ಲಿ ಮೊಗ್ಗುಗಳು ಹೊರಹೊಮ್ಮತೊಡಗುತ್ತವೆ. ಕೆಲವೇ ದಿನಗಳಲ್ಲಿ ಮೊಗ್ಗರಳಿ ಹೂವಾಗಿ ಮನಸ್ಸನ್ನಾಕರ್ಷಿಸುತ್ತವೆ. ಆದರೆ ಈ ಸುಂದರ ಬ್ರಹ್ಮಕಮಲಕ್ಕೂ ಸೂರ್ಯನಿಗೂ ಬದ್ದ ದ್ವೇಶವಿರಬೇಕು. ಅತ್ಬವಾ ಚಂದ್ರನಮೇಲಿನ ಮೋಹವೋ ತಿಳಿಯದು. ಅದಕ್ಕೋ ಏನೋ ಈ ಪುಷ್ಪಗಳು ರಾತ್ರಿಯಲ್ಲಿಯೇ ಅರಳುವುದು. ಬೆಳಗಾಗುವಹೊತ್ತಿಗೆ ಮುದುಡಿಕೊಂಡುಬಿಡುವುದು ಇದರ ಜಾಯಮಾನ. ಪುಷ್ಪದ ಚುಕ್ಕೆಯಿಲ್ಲದ ಶ್ವೇತ ವರ್ಣಕ್ಕೂ ರಾತ್ರಿಯ ಕಪ್ಪಿಗೂ ಅದೆಂಥ ತಾಳಮೇಳ!! ಆದರೊಂದು ಕೊರತೆ ಈ ಪುಷ್ಪದಲ್ಲಿದೆ. ಅದೆಂದರೆ ಇದರಲ್ಲಿ ಯಾವರೀತಿಯ ಸುವಾಸನೆಯೂ ಇಲ್ಲ.
ವಿಜ್ಞಾನದ ಈ ಯುಗದಲ್ಲಿ ಈ ನಿಶಾಸುಂದರಿಯನ್ನು ಬೆಳಗಿಗೂ ಪರಿಚಯಿಸುವುದು ಸುಲಭವಾಗಿದೆ. ರಾತ್ರಿ ಸುಮಾರು ೯.೦೦ರ ಹೊತ್ತಿಗೆ ಅರ್ಧಂಬರ್ಧ ಅರಳಿರುವ ಮೊಗ್ಗುಗಳನ್ನು ಗಿಡದಿಂದ ಕಿತ್ತು ಫ್ರಿಡ್ಜಿನಲ್ಲಿಡಿ. ಬೆಳಗಾಗೆದ್ದು ಪುಷ್ಪದ ಸೌಂದರ್ಯದ ಆನಂದವನ್ನು ಸವಿಯಿರಿ.