ಜೇಡರ ಬಲೆ ಹುಟ್ಟಿದ್ದು ಹೇಗೆ .....?

ಜೇಡರ ಬಲೆ ಹುಟ್ಟಿದ್ದು ಹೇಗೆ .....?

ಬರಹ

ಇತ್ತೀಚೆಗೆ ನಾನು ಕೇಳಿದ ಒಂದು ಸುಂದರ ಜನಪದ ಸೊಗಡಿನ ಕಥೆ ಇದು.

ಪ್ರಪಂಚದ ಅತ್ಯಂತ ಪ್ರಾಚೀನ ನಾಗರೀಕತೆ ಎಂದು ಹೆಸರಾಗಿದ್ದು ಗ್ರೀಸ್ ದೇಶದ ನಾಗರೀಕತೆ. ಈ ನಾಗರೀಕತೆ ಇಂದ ಹುಟ್ಟಿದ ಕಥೆಗಳು ಹಲವಾರು.

ತುಂಬ ವರ್ಷಗಳ ಹಿಂದೆ ಗ್ರೀಕ್ ದೇಶದಲ್ಲಿ ಅರಾಕ್ನೆ ಎಂಬ ಹೆಸರಿನ ಯುವತಿ ವಾಸವಾಗಿದ್ದಳಂತೆ. ಆಕೆಯ ವೃತ್ತಿ ನೇಯ್ಗೆ. ರೇಶಿಮೆಯ ನೂಲನ್ನು ತೆಗೆದು ಅದನ್ನು ಸುಂದರವಾಗಿ ನೇಯ್ದು ವಿಧ ವಿಧವಾದ ರೇಷ್ಮೆಯ ಬಟ್ಟೆ ಗಳನ್ನು ತಯಾರಿಸುವುದರಲ್ಲಿ ಆಕೆಗೆ ಎಲ್ಲಿಲ್ಲದ ಆಸಕ್ತಿ.. ಆಕೆಯಲ್ಲಿದ್ದ ಕಲಾತ್ಮಕತೆಯಂತು ಅದ್ಭುತ. ನೇಯ್ಗೆಯನ್ನೇ ತನ್ನ ಜೀವ ಎಂದು ಕೊಂಡಿದ್ದ ಆಕೆ ದಿನದ ಸಂಪೂರ್ಣ ಸಮಯವನ್ನು ಹೊಸ ಹೊಸ ಮಾದರಿಯ ರೇಷ್ಮೆ ಬಟ್ಟೆಗಳನ್ನು ತಯಾರಿಸುವುದರಲ್ಲಿ ಕಳೆಯುತಿದ್ದಳು. ಬರಿ ಅಷ್ಟೆ ಅಲ್ಲ ಆ ಕೆಲಸವನ್ನು ಅಷ್ಟೇ ಪ್ರೀತಿಸುತಿದ್ದಳು ಕೂಡ..

ಹಾಗಿರುವಾಗ ಆರಾಕ್ನೆ ವಾಸವಾಗಿರುವ ಸುತ್ತ ಮುತ್ತಣ ಗ್ರೀಕ್ ಎಲ್ಲ ಜನರು ಕೂಡ ರೇಶಿಮೆಯ ಬಟ್ಟೆಗಳನ್ನು ಕರೀದಿಸಲು ಇವಳಲ್ಲಿಗೆ ಬರತೊಡಗಿದರು. ಹೀಗೆ ಬರು ಬರುತ್ತಾ ಸುತ್ತ ಮುತ್ತಣ ಪ್ರದೇಶದಲ್ಲಿ ಆರಾಕ್ನೆಯಾ ಪ್ರಸಿದ್ಧಿ ಹೆಚ್ಚಾಗುತ್ತಾ ಹೋಯಿತು. ಆರಾಕ್ನೆಗಂತೂ ತನ್ನ ಬುದ್ದಿಶಕ್ತಿ ಕಲಾತ್ಮಕತೆಯ ಬಗ್ಗೆ ಎಲ್ಲಿಲ್ಲದ ಹೆಮ್ಮೆ. ಹೀಗೆಯೇ ಪ್ರಸಿದ್ಧಿ ಹೆಚ್ಚಾದಂತೆಲ್ಲಾ ಅರಾಕ್ನೆಗೆ ಅಹಂ ಶುರುವಾಯಿತು. ಆಕೆ ತನ್ನ ಕೌಶಲ್ಯದ ಬಗ್ಗೆ ಎಲ್ಲರಲ್ಲಿ ಹೇಳುವುದಕ್ಕೆ ಶುರುಮಾಡಿದಳು.. ಬರು ಬರುತ್ತಾ ತನ್ನ ಪ್ರಸಿದ್ದಿ ಇನ್ನು ಜಾಸ್ಥಿಯಾದಂಥೆಲ್ಲಾ ಆರಾಕ್ನೆಯ ಅಹಂ ಕೂಡ ಆಷ್ಟೇ ಜಾಸ್ತಿಯಾಯಿತು.. ಅವಳು ನನ್ನ ಬುದ್ದಿಶಕ್ತಿಯನ್ನು ಮೀರಿಸಲು ಗ್ರೀಕ್ ದೇಶದ ದೇವತೆ ಅಥೆನ್ಸ್ ಗೆ ( ನಮ್ಮಲ್ಲಿಯ ಸರಸ್ವತಿಯಂತೆ) ಕೂಡ ಸಾಧ್ಯವಾಗದು ಎಂದು ಹೇಳಲು ಶುರು ಮಾಡಿದಳಂತೆ.

ನಂತರ ಇದನ್ನ ಕೇಳಿಸಿಕೊಂಡ ದೇವತೆ ಅಥೆನ ಇವಳಿಗೆ ಹೇಗಾದರೂ ಮಾಡಿ ಬುದ್ಧಿ ಕಲಿಸಬೇಕು ಎಂದು ನಿರ್ಧರಿಸಿದಳು. ಮಾರನೆಯ ದಿನ ಆರಾಕ್ನೆ ತನ್ನ ರೇಶಿಮೆಯ ನೇಯ್ಗೆಯನ್ನು ಒಂದು ಕಡೆಯಿಂದ ಮಾಡುತ್ತಾ ಹೋದಂತೆಲ್ಲ ಇನ್ನೊಂದು ಕಡೆಯಿಂದ ಬಟ್ಟೆ ಯ ನೂಲುಗಳು ಬಿಚ್ಚಿ ಕೊಳ್ಳುತ್ತಾ ಹೋದವು. ಆರಾಕ್ನೆಗೆ ಏನು ಮಾಡಲು ತೋಚದಾಯಿತು.. ಏಕೆ ಹೀಗಾಗುತ್ತಿದೆ ಎಂದು ಆಕೆಗೆ ತಿಳಿಯದಾಯಿತು.. ಮತ್ತೆ ಮರುದಿನ ಅದೇ ರೀತಿ.. ಆರಾಕ್ನೆ ಗೆ ಇದರಿಂದ ತುಂಬ ಬೇಜಾರಾಯಿತು.. ನೇಯ್ಗೆಯೇ ಜೀವವಾಗಿದ್ದ ಆಕೆಗೆ ಆನೇಕ ದಿನಗಳಿಂದ ಒಂದು ಬಟ್ಟೆಯನ್ನು ಪೂರ್ತಿ ಮಾಡಲು ಸಾಧ್ಯವಾಗದಾಗ ದಿಕ್ಕೇ ತೋಚದಂತಾಯಿತು. ಆರಾಕ್ನೆ ಮಾತು ಕೊಟ್ಟ ಎಲ್ಲರು ಆರಾಕ್ನೆ ಇಂದ ರೇಶಿಮೆಯ ಬಟ್ಟೆ ಯನ್ನು ಕೇಳಲು ಶುರುಮಾಡಿದರು. ಇದರಿಂದ ಬೇಸತ್ತ ಆರಾಕ್ನೆ ಆತ್ಮಹತ್ಯೆ ಮಾಡಿಕೊಂಡಳು. ನಂತರ ಗ್ರೀಕ್ ದೇಶದ ದೇವತೆ ಅಥೆನ್ಸ್ ಗೆ ತಾನು ತಪ್ಪು ಮಾಡಿದೆ ಅನ್ನಿಸಿತಂತೆ. ಆಕೆ ನಾನು ನಿನಗೆ ಕೊಟ್ಟ ಶಾಪ ವನ್ನು ವರವಾಗಿ ಪರಿವರ್ತಿಸುತ್ತೇನೆ. ನೀನು ಭೂಮಿ ಯಲ್ಲಿ ಜೇಡ ವಾಗಿ ಹುಟ್ಟು. ನಿನ್ನ ಜೀವಾವಧಿ ಪೂರ್ತಿ ನೀನು ನಿನಗೆ ಇಷ್ಟ ವಾದ ನೇಯ್ಗೆ ಯನ್ನು ನೇಯುತ್ತಾ ಇರು ಅಂಥ ಹೇಳಿದಳಂತೆ.

ಹೀಗೆ ಹುಟ್ಟಿದ್ದು ಜೇಡ ಎನ್ನುತ್ತದೆ ಜನಪದ ಸೊಗಡಿನ ಸುಂದರವಾದ ಗ್ರೀಕ್ ದೇಶದ ಈ ಕಥೆ.

ನೋಡಿ ಚಂದವಾಗಿ ಬಲೆಯನ್ನು ಕಟ್ಟುವುದು ಹೆಣ್ಣು ಜೇಡವೆ. ಒಳಗಡೆ ಇಂದ ಶುರು ಮಾಡಿ ಹೊರಗೆ ತಂದು ಪೂರ್ತಿಯಾಗಿ ಮುಗಿಸುತ್ತದೆ. ಹೊಟ್ಟೆಯ ಕೆಳಭಾಗದಲ್ಲಿರುವ ದ್ರವ ಇದಕ್ಕೆ ಸಹಾಯ ಮಾಡುತ್ತದೆ.

ನಮಗೆ ತಿಳಿದಿರುವ ಹಾಗೆ ಇಂಗ್ಲಿಷ್ ನ ಆನೇಕ ಶಬ್ದಗಳ ಮೂಲ ಗ್ರೀಕ್ ಮತ್ತು ಲ್ಯಾಟಿನ್ ಪದಗಳದ್ದು. ಹಾಗೆಯೇ ಜೇಡ ವನ್ನು ನಾವು aracnide ಎಂಬ ಗುಂಪಿಗೆ ಸೇರಿಸುತ್ತೇವೆ. ಇಲ್ಲಿಯೂ ಇದನ್ನು ವೈಜ್ಞಾನಿಕವಾಗಿ ಹೆಸರಿಸುವಲ್ಲಿ 'ಆರಾಕ್ನೆ' ಯನ್ನು ನೆನಪಿಸುತ್ತೇವೆ.