ಕನ್ನಡ ಅಂಕಿಗಳು ಮಾಡಿದ ಪಾಪವೇನು?

ಕನ್ನಡ ಅಂಕಿಗಳು ಮಾಡಿದ ಪಾಪವೇನು?

ಕೆಲ ದಿನಗಳ ಹಿಂದೆ ಪುಣೆಗೆ ಹೋಗಿದ್ದೆ. ಅಲ್ಲಿ ಬಸ್ಸಲ್ಲಿ ಟಿಕೆಟ್ ಮೇಲೆ ದರ ದೇವನಾಗರಿ ಅಂಕಿಯಲ್ಲಿ ಅಚ್ಚಾಗಿತ್ತು. ಏನ್ ಬಂತಪ್ಪ ಅಂದುಕೊಂಡೆ,. ಹಂಗೂ ಹಿಂಗು ದೇವನಾಗರಿ ಅಂಕಿಗಳು ತುಸು ಗೊತ್ತಿರುವದರಿಂದ ತಿಳೀತು ಅನ್ನಿ. ಬಾಂಬೆಯಲ್ಲೂ ಅಸ್ಟೇ ಅಂತೆ,.. ಟಿಕೆಟ್ ಮೇಲಿರುವ ಒಂದೊಂದು ಪದಾನೂ ದೇವನಾಗರಿ(ಮರಾಟಿ ಬರೆಯಲು ಬಳಸುವ ಲಿಪಿ).. ಕೂಡಲೆ ಕನ್ನಡ ನಾಡಿನ ಸರಕಾರಿ ಬಸ್ಸುಗಳ ಟಿಕೆಟುಗಳ ಮೇಲೆ ಕಾಣದ ಕನ್ನಡ ಅಂಕಿಗಳ ಬಗ್ಗೆ ನೆನೆದು ಮನಸ್ಸು ಮುದುಡಿತು.

ಕೆ.ಎಸ್.ಆರ್.ಟಿ.ಸಿ ಆಗಲಿ,.ಬಿ.ಎಮ್.ಟಿ.ಸಿ ಆಗಲಿ ಬಸ್‍ಗಳ ಟಿಕೆಟ್‍ಗಳ ಮೇಲೆ ಇಂಗಳಿಸಿನಲ್ಲಿಯೇ ದರ ಬರೆದಿರುತ್ತದೆ.ಎಲ್ಲೋ ಅಲ್ಲೊಂದು ಇಲ್ಲೊಂದು ಕನ್ನಡ ಪದ ಕಂಡರೂ ದರ ಇಂಗಳೀಸಿನಲ್ಲಿಯೇ. ಯಾಕೆ? ಕನ್ನಡ ಅಂಕಿಗಳು ಕನ್ನಡಿಗರಿಗೆನೇ ಗೊತ್ತಿಲ್ಲ ಅಂತಲೋ ಇಲ್ಲ ಹೊರಗಿನವರಿಗೆ ತೊಂದರೆಯಾಗುತ್ತದೆ ಅಂತಲೋ? ಹೀಗೆ ಎಸ್ಟು ಅಂತ ಹೊರಗಿನವರಿಗೆ ಅನುಕೂಲ ಮಾಡಿ ಕೊಡಲು ನಮ್ಮ ನುಡಿಯನ್ನು ನಾವು ಹಿಂತಳ್ಳುತ್ತ ಇರುವದು?

ಈಗಿನ ಹಲವು ಪೇಪರ್‍ಗಳಾಗಲಿ,.ತಿಂಗಳೋಲೆ(ಮ್ಯಾಗಜೀನ್‍ಗಳು)ಗಳ ಪುಟಗಳ ಸಂಕೆಗಳನ್ನು ನೋಡಿ,.. ಇಂಗಳೀಸಿನಲ್ಲೇ ಇರುತ್ತವೆ ಯಾಕೆ? ಪುಣೆ,ಬಾಂಬೆಗಳಲ್ಲಿ, ತೊಂದರೆ ಆಯಿತು ಅಂತ ಏನಿಲ್ಲವೆಂದರೂ ದೇವನಾಗರಿ ಸಂಕೆಗಳನ್ನಾದರೂ ಕಲಿತುಕೊಳ್ಳುತ್ತಾರೆ. ಅಂತ ಕಲಿತುಕೊಳ್ಳಬೇಕಾದ ಪರಿಸ್ತಿತಿ ತಂದೊಡ್ಡದೇ ಹೊರಗಿನವರಿಗೆ ಕನ್ನಡ ಕಲಿಯಿರಿ ಅಂದರೆ ಹೇಗೆ ಕಲಿತಾರು?

ಇಸ್ಟಕ್ಕೆ ನನಗೆ ಬೇಸರವಾಗಲಿಲ್ಲ. ೨೦೦೮ರ ಕನ್ನಡ ಅಂಕಿಗಳಲ್ಲಿ ಮೂಡಿಸಿರುವ ಕ್ಯಾಲೆಂಡರ್ ಹುಡುಕುತ್ತಿದ್ದೆ.. ಬೆಂಗಳೂರಲ್ಲೆಲ್ಲೂ ನನಗೆ ಸಿಗಲಿಲ್ಲ.. :(

ಯಾಕೆ ಹೀಗೆ ನಾವು ಕನ್ನಡ ಅಂಕಿಗಳನ್ನು ಮೂಲೆಗಟ್ಟುತ್ತಿದ್ದೇವೆ,.. ಈ ಬಗ್ಗೆ ನಾವು ಎಚ್ಚೆತ್ತುಕೊಳ್ಳಬೇಕಿದೆ ಅಲ್ಲವೇ?

Rating
No votes yet

Comments