ಹೂಗಾರನ ಪುಸ್ತಕ ಪ್ರೇಮ

ಹೂಗಾರನ ಪುಸ್ತಕ ಪ್ರೇಮ

ಬರಹ

ವೆಂಕಟರಮಣ ಸ್ವಾಮಿ ದೇವಸ್ಥಾನದ ಹೊರಭಾಗದಲ್ಲಿ ಹೂ ಮಾರುವ ಕಾಯಕ ಹೊತ್ತ ಹೂಗಾರನನ್ನು ನೋಡಿದಾಗಲೆಲ್ಲಾ ನನ್ನಲ್ಲಿ ಒಂದು ಕುತೂಹಲ ಮನೆ ಮಾಡುತಿತ್ತು. ಕಾರಣ ಆತನ ಕೈಯಲ್ಲಿ ಸದಾ ಯಾವುದಾದರೊಂದು ಕನ್ನಡ ಪುಸ್ತಕವಿರುತ್ತಿತ್ತು, ಬೆಳಗ್ಗೆ ೬ ರಿಂದ ರಾತ್ರಿ ೧೦ ವರೆಗೆ ಆತ ಅಲ್ಲಿರುತ್ತಿದ್ದ, ಆತನಿಲ್ಲದ ಸಮಯದಲ್ಲಿ ಆತನ ಅಮ್ಮ ಅಲ್ಲಿರುತ್ತಿದ್ದಳು.

ನಾವು ಹಳ್ಳಿಗೆ ರಜೆಯಲ್ಲಿ ಹೋದಾಗ ಈ ವೆಂಕಟರಮಣ ದೇವಸ್ಥಾನಕ್ಕೆ ಹೋಗುತ್ತಿದ್ದೆವು ರಜೆ ಇದ್ದಷ್ಟು ದಿನ, ದಿನಾ ಹೋಗಿ ಬರುವುದು ಪ್ರತೀತಿ. ಆಗ ನಾವು ಚಿಕ್ಕವರು ಆತ ಅಲ್ಲಿ ಹೂಮಾರುತ್ತಾ ಓದುತ್ತಾ ಕುಳಿತಿರುತ್ತಿದ್ದ. ತನ್ನ ಶಾಲಾ ಜೀವನ ಮುಗಿಸಿ ಹೂಗಾರನಾಗಿ ತನ್ನ ಕಾರ್ಯವನ್ನು ಆರಂಭಿಸಿ ಬಿಟ್ಟಿದ್ದ, ಅಮ್ಮನೊಂದಿಗೆ ದೇವಸ್ಥಾನಕ್ಕೆ ಹೋದಾಗ ಅಮ್ಮನ ಸೆರಗಿನಿಂದೆ ಅಡಗಿನಿಂತು, ಆತ ಮುಗುಚಿಟ್ಟಿ ಪುಸ್ತಕಗಳ ಹೆಸರು ಓದುವುದು. ಆದರೆ ಅದನ್ನು ಕೂಡಿಸಿ ಓದುವಷ್ಟರಲ್ಲಿ ಅಮ್ಮ ಹೂ ಕೊಂಡು ಹೊರಟು ಬಿಡುತ್ತಿದ್ದಳು. ಆತ ಮುಗುಳು ನಗುತ್ತಾ "ಏನ್ ಪುಟ್ಟಿ ಅನ್ನುತ್ತಿದ್ದ ?"
ನಾನೋ ಪೆದ್ದು ಪೆದ್ದು ನಗೆ ಬೀರಿ, ಪುಸ್ತಕ ಯಾವುದೆಂದು ಕೇಳಲು ಭಯ, ಪುಸ್ತಕದತ್ತ ಕೈ ತೋರಿದರೆ ಅದಾ ಎಂದು ಅದರ ಹೆಸರೇನೋ ಹೇಳುತಿದ್ದ, ಆಗ ಅದು ಅರ್ಥವಾಗದ ವಯಸ್ಸು ಬಿಡಿ. ನನ್ನ ಅರಿವಿಗೆ ಬಂದಂತೆ ಅದು ಹಳಗನ್ನಡ ಅದಕ್ಕೇ ನನಗೆ ಅದನ್ನು ಸೇರಿಸಿ ಓದಲು ಕಷ್ಟವಾಗುತ್ತಿತ್ತು.

ಸುಮಾರು ವರ್ಷದ ಅಂತರದ ನಂತರ ಹಳ್ಳಿಗೆ ಹೋದಾಗ ನನಗೆ ಆಶ್ಚರ್ಯವಾಗಿದ್ದು, ಅದೇ ವ್ಯಕ್ತಿಯನ್ನು ಪುಸ್ತಕದೊಂದಿಗೆ ಹೂಮಾರುತ್ತಾ ಇರುವುದನ್ನು ನೋಡಿದಾಗ ಓದುವ ಹುಚ್ಚು ( ಅಭ್ಯಾಸ ಎಂದಾದರೆ ಕೆಲವು ತಾಸುಗಳವರೆಗೆ ಆದರೆ ಯಾವುದೇ ಇತಿ ಮಿತಿ ಇಲ್ಲದಿದ್ದರೆ ಅದು ಹುಚ್ಚು ಎಂದು ನನ್ನ ಭಾವನೆ) ಈಗಲೂ ಆತನನ್ನು ಬಿಟ್ಟಿರಲಿಲ್ಲ, ಕುತೂಹಲ ತಡೆಯದೇ ಕೇಳೇ ಬಿಡುವ ಎಂಬ ಮನಸ್ಸು, ಆದರೆ ಭಯ ಎನೆನ್ನೂತ್ತಾರೋ ಎಂದು. ಅಲ್ಲಿಗೆ ಹೋಗಿ ನಿಂತೆ ಆತ ಪರಿಚಯ ಮರೆಯದವನ ಹಾಗೆ ಅಮ್ಮ ಬಂದಿಲ್ಲವಾ ಪುಟ್ಟಿ ಹೂ ಬೇಕಾ ಎಂದ ? ಆತ, ಇಲ್ಲ ಅದೂ ಪುಸ್ತಕ ,,,,,,,,,,,,, ಅಂತೂ ಇಂತೂ ಧೈರ್ಯ ಮಾಡಿ, ನೀವು ಯಾವಾಗಲೂ ಪುಸ್ತಕ ಓದುತ್ತೀರಲ್ಲ ಯಾಕೆ ? ಎಂದೆ, ಅದಕ್ಕೆ ಆ ಹೂಗಾರ ಹೇಳಿದ ಅದಾ ದೊಡ್ಡ ಕಥೆ ಅಂದು, ಹೀಗೆ ಹೇಳಿದರೂ,

ಒಂದ್ಸಾರಿ ನಮ್ಮ ಸ್ಕೂಲಲ್ಲಿ ಚೆನ್ನಾಗಿ ಯಾರು ಓದುತ್ತಾರೆ, ಅಂತ ಪರೀಷೆ ಮಾಡಿದರೂ, ಗೆದ್ದವರಿಗೆ " ಶ್ರೀ ರಾಮಯಣ ದರ್ಶನಂ " ಪುಸ್ತಕ ಉಡುಗರೆಯಾಗಿ ಕೊಡೊದಾಗಿ ನಮ್ಮ ಮೇಷ್ಟ್ರು ಹೇಳುದ್ರು, ಸರಿ, ಒಬ್ಬೊಬ್ಬರೆ ಓದೋಕ್ಕೆ ಶುರುಮಾಡುದ್ರು, ಕಡೆಗೆ ಇಬ್ಬರನ್ನೂ ಈ " ಶ್ರೀ ರಾಮಯಣ ದರ್ಶನಂ " ಪುಸ್ತಕ ಕೊಟ್ಟು ಓದೋಕ್ಕೆ ಹೇಳಿದರೂ ಅದರಲ್ಲಿ ನಾನು ಒಬ್ಬ , ನಾನು ಒಂದು ಪುಟ ಓದ್ದೆ, ಆದರೆ ಇನ್ನೊಬ್ಬ ಒಂದು ಕಾವ್ಯನೂ ಓದಕ್ಕಾಗಲಿಲ್ಲ , ಕಡೆಗೆ ಬಹುಮಾನ ನನಗೆ ಬಂತು ನನಗೆ ತುಂಬಾ ಖುಷಿ ಆಯ್ತು , ನಮ್ಮ್ ಮೇಷ್ಟ್ರು ನನ್ನ ಹತ್ತರ ಕರೆದೂ ಹೇಳುದ್ರು, ನೀನು ಓದೊದು ನಿಲ್ಲಿಸ ಬೇಡ, ಒಂದು ವೇಳೆ ಶಾಲೆ ಬಿಟ್ಟರೂ ಪುಸ್ತಕ ಓದೋದು ಬಿಡಬೇಡ ಅಂದರೂ, ಅವರಿಗೆ ಗೊತ್ತಿತ್ತಲ್ಲ, ಈ ಹಳ್ಳಿ ಮಕ್ಕಳಿಗೆ ೭ ಕ್ಲಾಸ್ ಓದಿಸೋದೇ ಕಷ್ಟ ಅಂತ ,ನಾನೊಬ್ಬನೆ ಆ ಕಾಲದಲ್ಲಿ ೭ ಕ್ಲಾಸ್ ಪಾಸ್ ಮಾಡಿದ್ದು , ಅವರು ಹೇಳ್ದಂಗೆ ನಾನು ಒಂದಾದ ಮೇಲೊಂದು ಪುಸ್ತಕ ಕೊಳ್ಳೋದು ಓದೋದು ಇದೇ ಆಗೋಯ್ತು ಅಂದರು, ನೀವು ಎಷ್ಟು ಪುಸ್ತಕ ಓದಿದ್ದೀರ ಅಂದೆ ?, ಅದಕ್ಕೆ ಅವರು ಗೊತ್ತಿಲ್ಲಮ್ಮ ನಾನು ಓದಿದ ಪುಸ್ತಕನೆಲ್ಲಾ ಆ ಮನೆಯಲ್ಲಿ ಹಾಳಾಗದ ಹಾಗೆ ಇಟ್ಟಿದ್ದೀನಿ ಅಂತ ಅತ್ತ ಕೈ ತೋರಿಸಿದರು. ಬಹುಶ: ತನ್ನ ಜೀವಮಾನದ ದುಡಿಮೆಯೆಲ್ಲಾ ಬರೀ ಪುಸ್ತಕಕ್ಕೆ ಖರ್ಚು ಮಾಡಿದ್ದಾರೆ ಅನ್ನಿಸಿತು,

ಸ್ವಲ್ಪ ದೂರದಲ್ಲಿ ಇದ್ದ ಹಾಲ್ ನಲ್ಲಿ ಪುಸ್ತಕಗಳ ರಾಶಿ, ಅದನ್ನ ಯಾರೋ ಅಚ್ಚು ಕಟ್ಟಾಗಿ ಜೋಡಿಸಿಡುತ್ತಿರೋದು ಕಾಣೆಸಿತು. ಎಲ್ಲಾ ನೀವೆ ಕೊಂಡಿದ್ದಾ ಎಂದೆ,
ಒಂದಾದ ಮೇಲೊಂದು ಕೊಂಡೆ,
ನಿಮ್ಮ ಮಕ್ಕಳೂ ಅದನ್ನ ನೋಡ್ಕೊತ್ತಾರ ಅಂದೆ, ಅದಕ್ಕೆ ಅವರು ನಕ್ಕು, ನಾನು ಮದುವೆನೇ ಆಗಲಿಲ್ಲ ಅಂದರೂ,
ಯಾಕೆ ? ( ಕೇಳಬಾರದಿತ್ತೆನೋ ಕೇಳಿಬಿಟ್ಟೆ) ನನಗೆ, ಓದುತ್ತಾ ಓದುತ್ತಾ ಮದುವೆ ಆಗ ಬೇಕು ಅನ್ನೋದೇ ಮರೆತೋಯ್ತು,
ಅಮ್ಮ ಸತ್ತ ಮೇಲೆ, ಅಲ್ಲಿ ಪುಸ್ತಕ ಜೋಡಿಸುತ್ತಿದೆಯಲ್ಲಾ ಆ ಹುಡುಗ ಸಾಹಿತ್ಯ ವಿದ್ಯಾರ್ಥಿ ಓದುತ್ತಿದ್ದಾನೆ, ಆ ಗಿನ್ನೂ ಚಿಕ್ಕವನಿದ್ದ ಅವನೂ ಬಂದು ಸೇರಿಕೊಂಡ ನನ್ನ ಪುಸ್ತಕನೆಲ್ಲಾ ಅವನೇ ನೋಡಿಕೊಳ್ಳೋದು, ನನ್ನ ಊಟನೂ , ನಾನು ಬರೀ , ಇಲ್ಲಿ ಕೂತು ಹೂ ಮಾರೋದು, ಓದೊದು, ಅಷ್ಟೆ ಅಂದರೂ ,

ನನ್ನಲ್ಲಿ ಒಂದು ಪ್ರಶ್ನೆ ಹಾಗೆ ಉಳಿತು, ಹೋಗೋಕ್ಕೆ ಹೋದವಳು ಮತ್ತೆ ಅವರಲ್ಲಿ ಬಂದು ಅಂಕಲ್ ಆ ಹಾಲ್ ಪಕ್ಕ ಗುಡಿಸಲಿದೆಯಲ್ಲಾ ಯಾಕೆ ಅಂದೆ ಅದಾ ನಾನು, ಆ ಹುಡುಗ ಮಲಗೋಕ್ಕೆ ಅಂದರು, ನಾನೆಂದೆ ಆ ಹಾಲಲ್ಲೆ ಮಲಗ ಬಹುದಲ್ಲವಾ ಅಂತ,
ಛೇ ಹಾಗೆಲ್ಲಾಗುತ್ತೆ ಅದೂ ಸರಸ್ವತಿ ಮಂದಿರ ಅಂದರೂ, ಯಾಕೋ ಮುಂದೆ ಕೇಳೋಕೆ ಮಾತೆ ಉಳಿಲಿಲ್ಲ,
ಆತ ತನ್ನ ಜೀವನ ಪೂರ್ತಿ ಬರೀ ಓದಿಗಾಗಿ ಮುಡಿಪಿಟ್ಟಿದ್ದ, ಮಾತು ಹಳ್ಳಿಯವರ ಹಾಗೆ ಇದ್ದರೂ, ಆತನ ಓದೂ ಯಾವ ಪ್ರೋಪೆಸರ್ ಕೂಡ ಏನು ಮಾಡೊಕಾಗೊಲ್ಲಾ ಬಿಡಿ, ಅವರ ಮುಂದೆ,

ಆದರೆ ನಾನು ಅವರು ಓದಿರುವಷ್ಟು ಪುಸ್ತಕನಾ, ನೋಡೆ ಇಲ್ಲವಲ್ಲ ಅಂತ ನನಗೆ ನನ್ನ ಬಗ್ಗೆನೇ ಜಿಗುಪ್ಸೆ ಹುಟ್ಟಿತು,
ಅಂತ ವ್ಯಕ್ತಿನ ನೋಡಿದ್ದೇ ಭಾಗ್ಯ ಅಂತ, ದೇವಸ್ಥಾನಕ್ಕೆ ಹೋಗದೆ, ಅಲ್ಲೇ ಕೈ ಮುಗಿದು ಬಂದು ಬಿಟ್ಟೆ.
ಬರುತ್ತಾ ಒಂದು ಕನ್ನಡ ಪುಸ್ತಕ ಕೊಂಡು ತರುವ ಮನಸ್ಸಾಯಿತು.
.
.
.
.
.
.
.
.
.
.
.
.
( ಈ ಲೇಖನ ಓದಿದಮೇಲೆ ನಿಮಗೂ ಆ ವ್ಯಕ್ತಿಯನ್ನು ನೋಡುವ ಅಥವಾ ತಿಳಿಯುವ ಕುತೂಹಲ ಮೂಡ ಬಹುದು,
ಆ ಕುತೂಹಲ ನನಗೂ ಇದೆ, ಆದರೆ, ಅಷ್ಟರಲ್ಲಿ ಸೂರ್ಯ ಹುಟ್ಟಿದ್ದ ಏಳು ಮೇಲೆ ಸೋಮಾರಿ ಇನ್ನೂ ಮಲಗಿದ್ದೀಯ ಅಂದ,
ಈ ಲೇಖನ ಇಷ್ಟವಾದರೆ ತುಂಬಾ ಖುಷಿ, ಇಲ್ಲವಾದರೆ ಸಾರಿ, ಯಾಕೆಂದರೆ ಇದು ಕಲ್ಪನೆ, ಇಲ್ಲಿನ ಯಾವ ಅಷ್ಶರದಲ್ಲೂ ವಾಸ್ತವದ ನೆರಳೂ ಸಹ ಇಲ್ಲ )

*********************************