ದಿಕ್ಪಾಲಕರು ಮತ್ತು ವಿದಿಕ್ಕುಗಳನ್ನು ಸರಿಯಾಗಿ ಗುಱುತಿಸುವುದು

ದಿಕ್ಪಾಲಕರು ಮತ್ತು ವಿದಿಕ್ಕುಗಳನ್ನು ಸರಿಯಾಗಿ ಗುಱುತಿಸುವುದು

ಬರಹ

ಅಮರಕೋಶದ ಈ ಶ್ಲೋಕವನ್ನು ಗಮನಿಸಿ
ಇಂದ್ರೋ ವಹ್ನಿಃ ಪಿತೃಪತಿಃ ನೈಋತೋ ವರುಣೋ ಮರುತ್‍
ಕುಬೇರಃ ಈಶಃ ಪತಯಃ ಪೂರ್ವಾದೀನಾಂ ದಿಶಾಂ ಕ್ರಮಾತ್||

ಇದಱರ್ಥ ಪೂರ್ವದಿಕ್ಕಿನಿಂದ ಹಿಡಿದು ಬಲಕ್ಕೆ (ಪ್ರದಕ್ಷಿಣವಾಗಿ) ಬಂದಾಗ ದಿಕ್ಪಾಲಕರನ್ನು ಹೀಗೆ ಹೇೞಬಹುದು
ಪೂರ್ವಕ್ಕೆ=ಮೂಡಣಕ್ಕೆ ಇಂದ್ರ
ವಹ್ನಿಃ=ಅಗ್ನಿ=ಆಗ್ನೇಯ=ಮೂೞ್ತೆಂಕಣ ಅಥವಾ ತೆಮ್ಮೂಡಣಕ್ಕೆ ಅಗ್ನಿ
ಪಿತೃಪತಿಃ=ಯಮ=ದಕ್ಷಿಣ=ತೆಂಕಣಕ್ಕೆ ಯಮ
ನೈಋತಃ=ನಿಋತಿ=ನೈಋತ್ಯ=ಪೞ್ತೆಂಕಣ=ತೆಂಬಡುವಣಕ್ಕೆ ನಿಋತಿ
ವರುಣ=ಪಶ್ಚಿಮ=ಪಡುವಣಕ್ಕೆ ಅಧಿಪತಿ ವರುಣ
ಮರುತ್=ವಾಯು=ವಾಯವ್ಯ=ಪೞ್ವಡಗಣ=ಬಡವಡುಗಣಕ್ಕೆ ವಾಯು
ಕುಬೇರಃ=ಉತ್ತರ=ಬಡಗಣಕ್ಕೆ ಕುಬೇರ
ಈಶಃ=ಈಶಾನ್ಯ=ಮೂೞ್ವಡಗಣ=ಬಡವೂಡಣಕ್ಕೆ ಈಶ್ವರ ಇವರು ಮೂಡಣ ದಿಕ್ಕಿಂದ ಬಲಕ್ಕೆ (ಪ್ರದಕ್ಷಿಣಾಕಾರವಾಗಿ) ಸುತ್ತಿದಾಗ ದಿಕ್ಕುಗಳಿಗಿರುವ ಒಡೆಯರು.