ಬ್ರಹ್ಮ ಕಮಲ.

ಬ್ರಹ್ಮ ಕಮಲ.

ಬರಹ

ಹೋದ ವರ್ಷ ಗೆಳತಿಯೊಬ್ಬಳು ನಮ್ಮನೆಗೆ ಬರೋವಾಗ ೪ ದೊಡ್ಡ ದೊಡ್ಡ ಎಲೆಗಳನ್ನು ತಂದಿದ್ದಳು. ಅವನ್ನು ಪಾಟ್‍ನಲ್ಲಿ ಹಾಕಲು ಹೇಳಿದಾಗ ನನಗೆ ಆಶ್ಚರ್ಯ!ಅರೆ, ಎಲೆಗಳನ್ನ ನೆಡೋದ್ರಿಂದ ಗಿಡ ಬೆಳೆಯುತ್ತಾ? ಅಂತ. ಆಕೆ ನಗುತ್ತಾ "ಅಷ್ಟೆ ಅಲ್ಲ, ಎಲೆಯಲ್ಲಿಯೇ ಎಲೆ ಬಿಡುತ್ತೆ ಅಲ್ಲದೆ ಹೂವು ಸಹ ಎಲೆಯ ತುದಿಗೇ ಹುಟ್ಟೋದು. ಇದನ್ನ ಬ್ರಹ್ಮ ಕಮಲ ಅಂತಾರೆ" ಅಂದ್ಲು. ಬ್ರಹ್ಮ ಕಮಲ ಅನ್ನೊ ಹೂವೊಂದಿದೆ,ಅದು ರಾತ್ರಿ ಅರಳಿ,ಬೆಳಗಾಗೊವಷ್ಟರಲ್ಲಿ ಬಾಡಿ ಹೋಗುತ್ತೆ ಅಂತ ಗೊತ್ತಿತ್ತು. ಆದರೆ ನೋಡಿರಲಿಲ್ಲ. ಆ ೪ ಎಲೆಗಳನ್ನು ನೆಟ್ಟು ಹೂವಿಗಾಗಿ ವರ್ಷವಿಡೀ ಕಾದದ್ದೇ ಬಂತು ಹೂವು ಮಾತ್ರ ಕಾಣಲಿಲ್ಲ! ಪಕ್ಕದ ಮನೆ ಆಂಟಿ ಹೇಳಿದ್ರು. ಹೂವು ಬಿಡೋದು ಜೂನ್- ಜುಲೈಯಲ್ಲಿ ಅಂತ. ಈಗ ೧೫ ದಿನದ ಹಿಂದೆ ಒಮ್ಮೆಲೆ ೩ ಮೊಗ್ಗು! ಮನೆಯಲೆಲ್ಲ ಸಂಭ್ರಮವೋ ಸಂಭ್ರಮ, ಮನೆ ಮಗಳ ಹೆರಿಗೆಯ ಕ್ಷಣಗಳನ್ನು ಎಲ್ಲರೂ ಎದುರು ನೋಡುವಂತೆ ಹೂ ಅರಳುವ ಕ್ಷಣಕ್ಕಾಗಿ ನಾವು, ಪಕ್ಕದ ಮನೆಯವರು ಕಾಯತೊಡಗಿದೆವು. ಮೊದಲ ಮೊಗ್ಗು ಅರಳುತ್ತಿರುವ ವೇಳೆ ನಮ್ಮ ನಮ್ಮೆಲ್ಲರ ಸಂತಸದ ಕಲರವ ದಾರಿಯಲ್ಲಿ ಹೋಗುವವರನ್ನು ಕ್ಷಣ ಕಾಲ ನಿಂತು ನೋಡುವಂತೆ ಮಾಡಿದ್ದು ಸುಳ್ಳಲ್ಲ. ಅವರನ್ನೂ ಕರೆದು ಬ್ರಹ್ಮ ಕಮಲದ ದರ್ಶನ ಮಾಡಿಸಿದ್ದಾಯ್ತು!
ಈಗ ನಿಮಗಾಗಿ ಆ ಅಪರೂಪದ ಹೂವಿನ ಫೋಟೊ.