ಎಲೆ ಮರಗಳೇ ಕೇಳಿ
ಬರಹ
ಎಲೆ ಮರಗಳೇ ಕೇಳಿ
ಎಲೆ ಗಿಡಗಳೇ ಕೇಳಿ
ಕೊಲೆಗಡುಕ ಮಾನವರು
ಕರುಣೆ ಇಲ್ಲದ ಕಾಡು
ಕಲ್ಲೆದೆಯ ಜನರು
ಕಡಿಯುತಿಹರಲ್ಲಿ
ನಿಮ್ಮದೇ ಬಂಧುಗಳು
ಎಷ್ಟು ದಿನ ಈ ಮೌನ
ಎಷ್ಟ ದಿನ ಈ ಧ್ಯಾನ
ಬಾಯಿ ಇಲ್ಲದ ಜೀವ
ಬದುಕುವುದು ಬಲು ದುರಳ
ಬಾಯಿತೆರೆಯಿರಿ ನೀವು
ಬೆದರಿಕೆಯ ಹಾಕಿ
ನಿಮ್ಮಿಂದಲೇ ಉಂಡು
ನಿಮ್ಮಿಂದಲೇ ಬೆಳೆದು
ನಿಮ್ಮನ್ನೇ ಇಂದು
ನುಂಗುತಿಹರವರು
ಅರಿಯದಾದರು ಏಕೆ?
ಆ ಮೂರ್ಖ ಜನರು
ಅವರಂತೆ ನಿಮ್ಮದೂ
ಒಂದು ಬದುಕೆಂದು
ಅವರಂತೆ ನಿಮ್ಮದೂ
ಒಂದು ಬಾಳೆಂದು
ನಿಮ್ಮ ಬೆಲ್ಲದ ಬದುಕ
ಮುರಿದು ಮೆರೆದವರನ್ನು
ಶಪಿಸದಲೆ ನೀವುಗಳು
ಸುಮ್ಮನಿರುವಿರಿ ಏಕೆ?
ಎಂತೋ ಕಾದಿರಿ ನೀವು
ಒಂದಲ್ಲ ೊಂದು ದಿನ
ಇಂದಲ್ಲ ಮುಂದೊಮ್ಮೆ
ಬಂದೆ ಬರುವುದು ಈ
ಮಾನವಗೆ ಬುದ್ಧಿಯೆಂದು
ಸಾಕಿನ್ನು ಈ ಮೌನ
ಸಾಕಿನ್ನು ಈ ಧ್ಯಾನ
ಸಿದ್ಧರಾಗಿರಿ ನೀವು
ಕೊನೆಯ ಕದನಕ್ಕೆ
ನಿಮ್ಮದಿದು ನಿಮ್ಮದಿದು
ನಿಮ್ಮದೀ ಲೋಕ
ನಿಮ್ಮಿಂದಲೆ ನಿಮ್ಮಿಂದಲೆ
ನಿಮ್ಮಿಂದಲೇ ನಾಕ.
ಜಯಪ್ರಕಾಶ ನೇ ಶಿವಕವಿ.