ಅಂತೂ ಇಂತೂ ಥ್ರೆಡ್ ಮಿಲ್ ಬಂತು
ಹೋದ ತಿಂಗಳು ನೆಂಟರೊಬ್ಬರು ಬಂದಿದ್ದರು
"ರೂಪ ಬರ್ತಾ ಬರ್ತಾ ತುಂಬಾ ಗುಂಡು ಗುಂಡುಗೆ ಆಗ್ತಾ ಇರೋ ಹಾಗಿದೆ, ಸ್ವಲ್ಪ ಕೆಲಸ ಮಾಡ್ಬೇಕು" ಎಂದಿದ್ದರು ಅವರಿಗೆ ಅದು ಹೇಗೆ ನಾನು ಕೆಲಸ ಮಾಡುವುದಿಲ್ಲ ಎಂಬ ಅರಿವು ಉಂಟಾಯ್ತೋ ನಾ ಕಾಣೆ
ಅಮ್ಮ "ರೂಪ ಸ್ವಲ್ಪ ವಾಕ್ ಮಾಡು ದಪ್ಪ ಆಗ್ತಾ ಇದ್ದೀಯಾ " ಅಂತ ಆದೇಶಿಸಿದರು
ನಂಗೆ ಶುರುವಾಯಿತು ಪುಕು ಪುಕು. " ರೀ ನಾನು ದಪ್ಪಾನಾ" ಅಂತ ಇವರನ್ನ ಕೇಳಿದೆ
" ದಪ್ಪ ಅಂತೇನು ಇಲ್ಲ . ಮದುವೇಲಿ ಕರಿಬೇವಿನ ಕಡ್ಡಿ ಹಾಗ್ ಇದ್ದೆ . ಈಗ ಬೋಡಾ ಆಗ್ತೀದೀಯಾ ಅಷ್ಟೆ "ಎಂದರು
"ಜ್ಯೋತಿ (ನನ್ನ ಅಕ್ಕ) ನಾನು ದಪ್ಪಾ ಆಗಿದೀನಾ " ಅಂತ ಕೇಳಿದೆ
"ಮತ್ತೆ ಮನೇಲಿ ಏನು ಕೆಲಸ ಮಾಡದೆ ಇದ್ರೆ ದಪ್ಪ ಆಗ್ತೀಯಾ "ಅಂತ ಹೇಳಿದಳು
ಇವರಿಗೆಲ್ಲಾ ನಾನು ಸೋಮಾರಿ ಎಂಬ ಭಾವನೆ
ಇನ್ನೂ ಯಾರನ್ನೂ ಕೇಳೋದು ಬೇಡ ಅಂತ ಸೀದಾ ಬಾಡಿ ಕೇರ್ (ಕೋರಮಂಗಲ)ಗೆ ಹೋದೆ
"ನೀವು ನಿಮ್ಮ ಹೈಟಿಗೆ ಏಜಿಗೆ ಸರಿಯಾಗೆ ಇದೀರಾ ಸ್ವಲ್ಪ ಫಿಗರ್ ಕರೆಕ್ಷನ್ ಮಾಡಬೇಕು "ಅಂದಳು ಅಲ್ಲಿಯ ಕೌನ್ಸೆಲರ್
ಅದಕ್ಕೆ ಏನು ಮಾಡ್ತೀರಾ ಅಂತ ಕೇಳಿದೆ
ಅದೇನೋ ವೈಬ್ರೆಷನ್ ಮಶಿನ್ ಹೆಸರು ಹೇಳಿದಳು. ಬೆಲೆ ಕೇಳಿ ತಲೆ ಸುತ್ತಿತು. ವಾರಕ್ಕೆ ಮೂರು ಸಲ ಬರಬೇಕು ಎಂದಳು. ಅದು ಆಗುವ ಕೆಲಸವೇ ಅಲ್ಲ
ಬೇಡಪ್ಪಾ ಇದರ ಕತೆ ಎಂದುಕೊಂಡು ಮನ್ದೆಗೆ ಬಂದು ಒಂದೆರೆಡು ದಿನ ವಾಕಿಂಗ್ ಶುರು ಮಾಡಿದೆ.ಅದೂ ಮೂರು ದಿನ ನಡೆಯಿತು . ನಾನು ಬೆಳಾಗ್ಗೆ ನಾಕಕ್ಕೆ ಎದ್ದರೆ ನನ್ನ ಮಗಳೂ ಎದ್ದು ನಾನು ಬರ್ತೀನ್ ಅಂತ ಶುರು ಮಾಡುತಿದ್ದಳು ಅದೂ ನಿಂತು ಹೋಯಿತು
ಸರಿ ಮನೆಯಲ್ಲಿ ಅಳಲು ಶುರು ಮಾಡಿದೆ ಈಗೇನೊ ಡಯಾಬಿಟೀಸ್ ೨೬-೨೮ ವರ್ಷಕ್ಕೆಲ್ಲಾ ಶುರು ಆಗುತ್ತೆ ಅಂತಾ ಇನ್ನೊಂದಷ್ಟು ಬಣ್ಣ ಸೇರಿಸಿ ಹೇಳಿದೆ. ನಾನು ವಾಕ್ ಮಾಡದಿರಲು ನೀವು ನಿಮ್ಮ ಮಗಳೇ ಕಾರಣ . ಅಂತ ದೂರಿದೆ
ಪರಿಣಾಮ
ನನಗೆ ಥ್ರೆಡ್ ಮಿಲ್ ಕೊಡಿಸುವುದಾಗಿ ಅಶ್ವಾಸನೆ ಸಿಕ್ಕಿತು.
ಮೊನ್ನೆ ಶನಿವಾರ ರಾತ್ರಿ ೧೧ ಘಂಟೆಗೆ ಮನೆಗೆ ಬಂತು. ಅದರ ಫೋಟೊ ಇನ್ನೊಮೆ ಹಾಕುತ್ತೇನೆ
ಈಗ ವಾಕಿಂಗ್ ಶುರು ಮಾಡಿದ್ದ್ದೇನೆ. ದಿನಕ್ಕೆ ಅರ್ಧ ಘಂಟೆ
ಅಮ್ಮ ನೋಡಿ "ನೀನು ಇಷ್ಟೊಂದು ಕಷ್ತ ಪಡೋ ಅಷ್ಟು ದಪ್ಪ ಇಲ್ಲ . ಸುಮ್ಮನೆ ಯಾಕೆ ತಂದೆ " ಅಂತ ಬಲೂನ ಒಡೆದಳು.
"ಹೋಗಲಿ ಬಿಡು ಹೇಗೊ ತೆಗೆಸಿಕೊಂಡಿದ್ದೀನಲ್ಲ ಮುಂದೆ ಉಪಯೋಗಕ್ಕೆ ಬೇಕಾದೀತು "ಅಂತ ಹೇಳಿದೆ
ಏನೆ ಆದರೂ ಜಿಮ್ಗೆ ಹೋಗಿ ಬರುವ ಬದಲು ಮನೆಯಲ್ಲೇ ಇರೋದು ಬಹಳ ಉಪಯೋಗ ಆಗ್ತಿದೆ
Comments
ಉ: ಅಂತೂ ಇಂತೂ ಥ್ರೆಡ್ ಮಿಲ್ ಬಂತು
ಉ: ಅಂತೂ ಇಂತೂ ಥ್ರೆಡ್ ಮಿಲ್ ಬಂತು
ಉ: ಅಂತೂ ಇಂತೂ ಥ್ರೆಡ್ ಮಿಲ್ ಬಂತು