OS ಲ್ಯಾಂಡಿನಲ್ಲೊಂದು ಮದುವೆ

OS ಲ್ಯಾಂಡಿನಲ್ಲೊಂದು ಮದುವೆ

ಬರಹ

ನೆನ್ನೆ ಮಧ್ಯಾಹ್ನ ಸಂಪದ ತೆಗೆದು ಕೂತಿದ್ದೆ. Slashdot ನೋಡೇ ಇಲ್ಲ ಅನ್ನೋದು ನೆನಪಿಗೆ ಬಂದು ತೆಗೆದಾಗ ಕಂಡದ್ದು ನನಗೆ ಬಂದಿರೋ mod points . ಸ್ವಲ್ಪ ಖುಶಿ, ಹಾಗೇ ಯಾವತ್ತು mod points ಖಾಲಿ ಆಗುತ್ತೋ, ಬೇಗ moderate ಮಾಡಿಬಿಡಬೇಕು ಅಂದುಕೊಂಡೇ ಬರಹಗಳನ್ನು ಓದುತ್ತಾ ಹೋದೆ. ಸುಮಾರು ೫-೬ ಆಸಕ್ತಿ ಹುಟ್ಟಿಸುವ ಬರಹಗಳಲ್ಲಿ ಕಣ್ಣಿಗೆ ಕಂಡದ್ದು ದೆಬಿಯನ್ BSD kernelಗೂ ಬಂದಿದೆ!! ಒಂಥರಾ ಖುಶಿ ಆಯ್ತು. ಅಚ್ಚರಿಯೂ ಆಯ್ತು ಅನ್ನಿ.
ದೆಬಿಯನ್ ಅತೀ ಹಳೆಯ (slackware ಜೊತೆಗೆ), ಬಹಳ ಗಟ್ಟಿ ಅನ್ನಿಸೋ, ಇಂದಿಗೂ ಅತ್ಯಂತ democratic ಅನ್ನೋ ಗ್ನು/ಲಿನಕ್ಸ್ ವಿತರಣೆ (distribution). ಇಲ್ಲಿಯವರೆವಿಗೂ ಸರಿ ಸುಮಾರು ೧೦-೧೨ architectureಗಳಲ್ಲಿ ದೆಬಿಯನ್ ಓಡಿಸಬಹುದು. ಒಂದು ರೀತಿಯಲ್ಲಿ "Universal Operating System". ಇಂದಿಗೂ ಅತ್ಯಂತ ಹೆಚ್ಚು ಸಾಫ್ಟ್ವೇರ್ಗಳಿರೋ OS. ನಮ್ಮ ಸಂಪದದ ಗೆಳೆಯರೇ ಸೇರಿ ಕೂಡಿಸಿದ ಚಿಗುರು ಕೂಡ ದೆಬಿಯನ್ ಮೂಲದ್ದೇ.
ಇತ್ತ ಕಡೆ FreeBSD BSDಯ ಮತ್ತೊಂದು ಆವೃತ್ತಿ. BSD ಕೆರ್ನೆಲ್ಗಳು ಯಾವತ್ತೂ ತಮ್ಮ security/stability ಗೆ ಹೆಸರುವಾಸಿ. ಸಾಕಷ್ಟು ಸರ್ವರ್ಗಳಲ್ಲಿ ಇದರ ಬಳಕೆ ಆಗಿದೆ. ಆದರೆ ಇವುಗಳ ಬಳಕೆ Desktopಗಳಲ್ಲಿ ಕಮ್ಮಿ.
ಒಟ್ಟಿನಲ್ಲಿ ಗ್ನು/ಲಿನಕ್ಸ್ ಮತ್ತು ಯೂನಿಕ್ಸ್ ಜಗತ್ತಿನಲ್ಲಿ ಸಾಕಷ್ಟು ಹೆಸರು ಮಾಡಿದ ಎರಡು ಜೀವಗಳು ಬಹಳ ವರ್ಷಗಳ ಬಳಿಕ ಹತ್ತಿರ ಬಂದಿವೆ. ಬಹಳ ಕಾಲ ಸಂತೋಷದಿಂದಿರಲಿ, ವರ್ಷಕ್ಕೊಂದು ಹೊಸ Derivative Distribution ಕೊಟ್ಟು ನೂರು ವರ್ಷ ಬಾಳಲಿ ಅಂತ ನನ್ನ ಹಾರೈಕೆ.

ಕೊಸರು: ಇಂಚರ ಅವರ "ಆಹಾ ಎಂಥಾ ಜೋಡಿ" ಬರಹಕ್ಕೆ ಇದು ಲಿನಕ್ಸ್ ಜಗತ್ತಿನಲ್ಲಿ ಸಂವಾದಿ ಅನ್ನಿಸಿತು.
ಕೊಸರು ೨ : ಮದುವೆ ಅನ್ನೋದನ್ನ ಟೆಕ್ನಾಲಜಿ ಬರಹಕ್ಕೆ ಬರೆದದ್ದು anthropomorphism (http://en.wikipedia.org/wiki/Anthropomorphic) ಅಂತ ಕೆಲವರಿಗೆ ಅನ್ನಿಸಬಹುದು. ಇದು ನನ್ನ ಬರಹಕ್ಕೆ ಹೆಚ್ಚು ಕಾಮೆಂಟುಗಳು ಬರಲಿ ಅನ್ನೋ ದುರಾಸೆಯಿಂದ ಹಾಕಿದ್ದು ಅನ್ನೋದು ನನ್ನ ಸಮಜಾಯಿಷಿ. :)