Outsourcing ಎಂಬ ಪೀಡೆ

Outsourcing ಎಂಬ ಪೀಡೆ

ಕವನ

ಬೆಳೆಯುತಿದೆ ಬಿಪಿಓ ಎಂಬ ಭೂತ ಯಾವ ಅಡೆತಡೆ ಇಲ್ಲದೆ.
ತನ್ನ ಕದಂಬ ಬಾಹುಗಳ ಚಾಚಿ ಎಗ್ಗಿಲ್ಲದೆ
ಉಂಡ ಮನೆಗೆರೆಡು ಬಗೆದು ಕುಹಕ ನಗೆ ಬೀರುತಿದೆ.
ಇಂಗ್ಲಿಷ್ನಿಂದಲೇ ಎಲ್ಲವೆಂದು ಸಾರಿ ಹೇಳುತಲಿದೆ.
ಭಾಷೆ ವೇಷ ಭಾವಗಳ ಅನುಕರಣೆ ಸಾಗುತಲಿದೆ
ಎತ್ತಲಿನ್ದೆತ್ತಲಿಗೋ ಎಂಬಂತೆ ಕಣ್ಣಿಗೆ ಮಣ್ಣ ಎರೆಚುತ್ತ ಜಾಣ ಕುರುಡನಾಗಿದೆ
ಸ್ವಾಭಿಮಾನವ ಮಾರುಕಟ್ಟೆಯಲ್ಲಿಟ್ಟು
ಕಮಂಗಿಗಳೊಡನೆ ಜೂಜಾಡುತಿದ
ಉದ್ಯೋಗಿಗಳ ರಕ್ತ ತೆಕ್ಕೆಯಲ್ಲಿಟ್ಟು
ಪರಕೀಯರ ಕ್ಷಮೆಕೆಳುವುದೇ ಇದರ ಕಾಯಕವಾಗಿದ.

ಈ ಓಡುತಿಹ ಮದವೆತ್ತಿದ ಕುದುರೆಗೆ ಕಡಿವಾಣ ಹಾಕುವವರ್ಯಾರಿಲ್ಲ.
ಇದರ ನಾಗಲೋಟಕ್ಕೆ ಮುಂದಿಲ್ಲ ಹಿಂದಿಲ್ಲ
ಕಾನೂನು ಕಟ್ಟಳೆಗಳಿಲ್ಲ
ಹಣ ಗಳಿಸುವುದಿದರ ಧ್ಯೇಯ ಸಂಸ್ಕೃತಿಯ ನಿಭಂದನೆಗಳ ಪರಿವೆಯೇ ಇದಕಿಲ್ಲ..
ಪೊಳ್ಳು ಮಾತುಗಳ ಭರವಸೆಯಲ್ಲಿ
ಸ್ವಾಭಿಮಾನವು ಒತ್ತೆಯಾಳಗಿಹುದಿಲ್ಲಿ.
ಹಸಿವ ನೀಗಿಸುವ ದಿಸೆಯಲ್ಲಿ
ನನ್ನತನವೆಂಬುದು ಇಹುದೆಮ್ಮ ಕಿಸೆಯಲ್ಲಿ
ಎಂದೆತ್ತಿ ಬಿಸುಡುವೇನೂ ನನ್ನೀ ಕತ್ತಿನ ಪಟ್ಟಿ
ಅಂದೆನ್ನ ಮನವೆನ್ನ ಶ್ಲಾಗಿಸುವುದೆನ್ನಿ ಬೆನ್ನ ತಟ್ಟಿ...