ozimandias ಕವನದ ಅನುವಾದ

ozimandias ಕವನದ ಅನುವಾದ

ಬರಹ

ಓಸಿಮಾಂಡಿಯಾಸ್

ದೂರದೂರಿನ ಯಾತ್ರಿಕನೊಬ್ಬ

ಪುರಾತನ ನಾಡಿಂದ ಹಿಂದಿರುಗುವಾಗ

ಕಂಡನಂತೆ ಮರಳುಗಾಡಿನ ಮಧ್ಯೆ

ಮುಂಡವಿಲ್ಲದ ಕಾಲುಗಳೆರಡು,

ಕೆಳಗೆ ಮರಳಲ್ಲಿ ಬಿದ್ದ ಮಸುಕು ಶಿರ,

ಮುಖದಲ್ಲಿ ಮುಗುಳ್ನಗೆ,

ಬಿರಿದ ತುಟಿ,

ತೋರುತಿದೆ ಗತ್ತು,

ಶಿಲ್ಪಿ ಕೈಚಳಕದ ಕಸರತ್ತು,

ಶಿಥಿಲ ಶಿಲ್ಪದ ಮೇಲೂ ಭಾವಗಳ ಬೆಳಕು,

ವಿಧಿಗೆದುರಾಗಿ ನಿಂತಿದೆಯೇನೋ ಈ ಬದುಕು:

ಕೆಳಗೊಂದು ಬಿನ್ನವತ್ತಳೆ, ಹೀಗೆ

"ಓ ಬಲಶಾಲಿಗಳೇ,

ನಾನು ಓಸಿಮಾಂಡಿಯಾಸಿಸ್, ರಾಜಾಧಿರಾಜ.

ನನ್ನ ಸಾಧನೆಗಳೆಡೆ ನೋಡಿ, ನೀವು ಹೆದರುವುದೇ ನಿಜ"

ಶಿಥಿಲ ಶಿಲ್ಪದ ಹೊರತು ಬೇರೇನೂ ಇಲ್ಲ ಅಲ್ಲಿ,

ಮಿತಿಯನರಿಯದೆ ಸುತ್ತಿ ನಿಂತ ಮರಳುಗಾಡಿನಲ್ಲಿ.

ಪಿ. ಬಿ. ಶೆಲ್ಲಿ

ಅನುವಾದ ಮಂಜುನಾಥ್ ವೆಂ.