ಕವನಗಳು
ಲೇಖಕರು: ಬರಹಗಾರರ ಬಳಗ
ವಿಧ: ಕವನ
April 13, 2024
ಶಾಲೆಗೆ ಹೋಗುವ ಕಂದನೆ ಅರಿತುಕೊ
ಸಿರಿತನ ಎನುವುದು ಆರೋಗ್ಯ
ತಿನ್ನಲು ಕುಡಿಯಲು ಸಂಯಮವಿದ್ದರೆ
ಬದುಕಲಿ ದೊರೆವುದು ಈ ಭಾಗ್ಯ
ರಸ್ತೆಯ ಬದಿಯಲಿ ಮಾರಲು ಇಡುವರು
ಬಗೆಬಗೆ ಬಣ್ಣದ ತಿನಿಸುಗಳ
ಮನವನು ಸೆಳೆಯುವ ತರದಲಿ ಇರುವುದು
ಹಚ್ಚುತ ವಿಷಕರ ಬಣ್ಣಗಳ
ತಿನ್ನುವ ಬಯಕೆಯ ನುಡಿ ನೀ ನನ್ನಲಿ
ಮಾಡುವೆ ನಾನೇ ಮನೆಯಲ್ಲಿ
ಮನೆಯಲಿ ಮಾಡಿದ ಇಷ್ಟದ ತಿಂಡಿಯ
ತಿನ್ನುವ ನಾವು ಜೊತೆಯಲ್ಲಿ
ಹಸುವಿನ ಹಾಲನು ಕಾಯಿಸಿ ಕೊಡುವೆನು
ಕುಡಿಯಲು ಕೊಡುವೆನು ದಿನನಿತ್ಯ
ಅಮ್ಮನು ನೀಡಿದ ತಿನಿಸದು ಉತ್ತಮ
ಶಕ್ತಿಯ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
April 12, 2024
ಚಂದಿರನೂರಿನ ಚಂದದ ತಾರೆಗೆ
ಬಂದಿತೆ ಮನದಲಿ ಮುನಿಸು
ನೊಂದಿಹ ತರವಿದೆ ಬಂಧವು ಕಳಚಿತೆ
ಕುಂದಿತೆ ಒಲವಿನ ಕನಸು
ಕಂಪನು ಬೀರುವ ಕೆಂಪಿನ ಚುಕ್ಕಿಗೆ
ಕಂಪನ ತರಿಸಿತೆ ಗಗನ
ಸೊಂಪಿನ ಬಾನಲಿ ರಂಪವ ಮಾಡಿತೆ
ತಂಪಿದು ಎನಿಸಿತೆ ತಾಣ
ಚೆಲುವಿನ ವದನದೆ ಗೆಲುವದು ಕಾಣದೆ
ಕುಲವನು ತೊರೆಯುತ ಬಂತೆ?
ಛಲದಲಿ ಬಿರಿದಿಹ ಚೆಲುವಿನ ಹೂವಿದು
ಒಲವಲಿ ನೋಡುತ ನಿಂತೆ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಲೇಖಕರು: ಬರಹಗಾರರ ಬಳಗ
ವಿಧ: ಕವನ
April 11, 2024
ಕರಿಯ ಮುಗಿಲು ಬಾನಿನಲ್ಲಿ
ಹರಿದು ಬರುವ ಮಿಂಚಿನಲ್ಲಿ
ಹರಿದು ಹೋಗುವಂತೆ ಕಿವಿಯು ಗುಡುಗಿನಾರ್ಭಟ
ಸುರಿಯಲಿರುವ ಮಳೆಯ ನೆನೆದು
ವಿರಹ ಬಾಧೆಯಲ್ಲಿ ನವಿಲು
ಕರೆಯಲೆಂದು ಗೆಳತಿಯನ್ನು ಕಳೆಯೆ ಸಂಕಟ
ಗಿರಿಯ ಹತ್ತಿ ಬಂದ ನವಿಲು
ಮುರಿದ ಮರದ ಕಾಂಡವೇರಿ
ಬರದೆ ಹೋದ ಗೆಳತಿಯನ್ನು ಹುಡುಕತೊಡಗಿತು
ಗಿರಿಯ ಸುತ್ತ ಹಸಿರು ವನವು
ಕರೆದು ಕರೆದು ಗೆಳತಿ ಬರದೆ
ಗಿರಿಯ ನವಿಲು ನೊಂದು ಮನದೆ ಸುತ್ತ ನೋಡಿತು
ಏರಿ ಬರುವ ಗೆಳತಿಯನ್ನು
ದೂರದಲ್ಲಿ ಕಂಡ ನವಿಲು
ಮೇರೆ ಮೀರಿ ಹರುಷವುಕ್ಕಿ ನೋಡ ತೊಡಗಿತು
ದಾರಿಯೆಲ್ಲ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
April 10, 2024
ಯುಗದೊಂದಿಗೆ ಜಗ ಕಂಡಿತು
ಮನ ಮನವೂ ಅರಳಿತು/
ವನ ಸೊಬಗೊಳು ಕೆಂಪೇರಲು
ಪಕ್ಷಿ ಸಂಕುಲ ಹಾಡಿತು//
ಪ್ರತಿವರುಷವು ಬೆಳಕಾಯಿತು
ಸೌರಮಾನವು ಉದಿಸಿತು/
ಯುಗಾದಿಯು ಹೊಸ ಹುರುಪಲಿ
ಜಗದ ತುಂಬಾ ನಡೆಯಿತು//
ಹೊಸಬಟ್ಟೆಯ ತೊಟ್ಟ ಜನರದು
ಹೊಸ ಪಂಚಾಂಗವನಿಟ್ಟರು/
ಬೆಳೆದ ಬೆಳೆಗಳನೆಲ್ಲ ಇರಿಸುತ
ದೇವ ಪೂಜೆಯ ಮಾಡುತ//
ವರುಷದಿಂದಿನ ತಪ್ಪನೆಲ್ಲವ
ಮರೆತು ಹೊಸತನ ತುಳಿಯುತ/
ಗಂಧ ಚಂದನ ತಳಿರು ತೋರಣ
ಬೇವು-ಬೆಲ್ಲವ ಮೆಲ್ಲುತ/
ಸಿಹಿ-ಕಹಿಯನು ಉಣ್ಣುತುಣ್ಣುತ
ಸಮಾನ ದೃಷ್ಟಿಲಿ ನೋಡುತ/
ಕಾಲಮಾನದ ಆದಿ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
April 09, 2024
ಯುಗಾದಿ ಬಂತಿದೋ ಯುಗಾದಿ
ಯುಗದ ಆರಂಭವೆ ಯುಗಾದಿ॥
ಚೈತ್ರದ ಸುಂದರಿ ನೀ ಯುಗಾದಿ
ಬೇವುಬೆಲ್ಲ ಸವಿಯ ಯುಗಾದಿ
ಪಂಚಾಂಗ ಪೂಜೆಯ ಯುಗಾದಿ
ನವ ಚಂದ್ರಮನ ಯುಗಾದಿ॥
ತಳಿರು ತೋರಣದ ಯುಗಾದಿ
ಪ್ರಕೃತಿಯ ಚಿಗುರಿನ ಯುಗಾದಿ
ಪಾಡ್ಯಮಿ ದಿನವೇ ಯುಗಾದಿ
ಪಚ್ಚಡಿ ಸವಿಯುವ ಯುಗಾದಿ॥
ರಂಗಿನ ರಂಗೋಲೀ ಯುಗಾದಿ
ಎಣ್ಣೇಯ ಸ್ನಾನದಾ ಯುಗಾದಿ
ಹೊಸಬಟ್ಟೆ ಉಡುವ ಯುಗಾದಿ
ಹೋಳಿಗೆ ಊಟದ ಯುಗಾದಿ॥
ನಲಿವಿನ ಹಬ್ಬವಿದು ಯುಗಾದಿ
ದುಗುಡವ ಕಳೆಯುವ ಯುಗಾದಿ
ವರುಣನ ಕರೆಯುವ ಯುಗಾದಿ
ಒಳ್ಳೇಯ ಮಾತೀನ ಯುಗಾದಿ॥
ಬ್ರಹ್ಮಾಂಡ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
April 08, 2024
ಕಡ್ಡಿಯಂಥ ಬಳ್ಳಿಯಲ್ಲಿ
ಅಗಲದೆಲೆಯು ಹಲವಿದೆ
ನಡುವಿನಲ್ಲಿ ಖಾದ್ಯಕಾಗಿ
ಕಾಯಿಯೊಂದು ಬಿಟ್ಟಿದೆ
ಬಳ್ಳಿಯಲ್ಲಿ ಹಾವಿನಂತೆ
ಭೂಮಿ ತನಕ ಇಳಿಯದೆ
ಸುತ್ತ ಸುತ್ತ ಸುತ್ತಿಕೊಂಡು
ಸುರುಳಿಯಾಗಿ ನಿಂತಿದೆ
ಅಟ್ಟಿ ಇರಿಸಿದಂತೆ ಹೇಗೆ
ಬೆಳೆದು ಬಂತು ಗಿಡದಲಿ
ಇದನು ನೋಡಿ ಮನದಿ ಬಂತು
ರುಚಿಯ ತಿನಿಸು ಚಕ್ಕುಲಿ
ಹಲವು ಸತ್ವ ಒಳಗೆ ಅವಿತ
ದಿವ್ಯ ಕಾಯಿ ಪಡುವಲ
ಒಂದು ಬಾರಿ ತಿಂದರದನು
ಮರೆಯದಂಥ ರುಚಿಕರ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
(ಚಿತ್ರ ಶ್ರೀಯುತ ಮುರಳಿಯವರ ವಾಲ್ನಿಂದ)
ಲೇಖಕರು: ಬರಹಗಾರರ ಬಳಗ
ವಿಧ: ಕವನ
April 07, 2024
ಹಿಂದೆ ಹೇಗೆ ಬದುಕಿದರೆಂದು
ನಮಗೇಕೆ ಪ್ರಿಯ ಗೆಳೆಯನೇ
ಈ ದಿನದ ನಾಳೆಗಳ ಬಗೆಗೆ ಚಿಂತೆ
ಚಾಯವಾಲನೊ ರೋಟಿ ತಿನ್ನುವವನೊ
ಆಡಳಿತ ಚುಕ್ಕಾಣಿ ಹಿಡಿದಿಹನು ನೋಡು
ಭದ್ರ ಆಡಳಿತ ಸಿಗುವಾಗ ನಮಗೇಕೆ ಚಿಂತೆ !
ದೇಶಕ್ಕೆ ಆಪತ್ತು ಬಂದಾಗ ಎದ್ದು ನಿಲ್ಲುತ
ನಮ್ಮ ಕೊಡುಗೆಯೇನು ತಿಳಿಯುವ
ನಾವು ಬರಿದೆ ಕಾಲನು ಎಳೆಯದೆಲೆ
ಇಂದು ಸಾಗುವ ಮುಂದು ಮುಂದು
ಮುಂದು ಹಸಿದ ಕಣ್ಣುಗಳಿಗೆ ಸಾಂತ್ವನ
ಹೇಳುವ ಚಿತ್ತದಲಿ ತಾಪವನು ತುಂಬದೆಲೆ
ಹಣದಾಹ ಇಲ್ಲದೆಯೆ ಸೇವೆಯನು ಮಾಡು
ಗಳಿಸಿ ಉಳಿಸಿದುದನೆಲ್ಲ ದಾನ ಮಾಡು
ಅವರಿಗೆ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
April 06, 2024
ಕರಗತೊಡಗಿದೆ ಸಮಯ
ಬೆರಗುಗೊಳ್ಳುವ ತರದೆ
ಸರಿದು ಹೋಗುತಲಿಹುದು ವ್ಯರ್ಥವಾಗಿ
ಬರಿದೆ ಯೋಚನೆಗಿಳಿದು
ನೆರಿಗೆಗಟ್ಟಿದೆ ದೇಹ
ಸುರಿಯದೆಲೆ ಕರಿಮುಗಿಲು ದೂರ ಸಾಗಿ
ಜಗದ ಬಾಳುವೆಯಲ್ಲಿ
ಸಿಗುವ ವೇಳೆಯೆ ಹೊನ್ನು
ತೆಗಳಿ ಕುಳಿತರೆ ಸಾಕೆ ಪರರ ಬಗೆಗೆ
ಬಗಲಿನಲ್ಲಿಹ ಮೃತ್ಯು
ಜಗಳವೇತಕೆ ಮನವೆ
ಗಗನ ಸೇರುವ ನಾವು ಬಾಳ ಕೊನೆಗೆ
ಜಿಪುಣನಾಗದೆ ಬಾಳು
ಚಪಲ ಕೆಟ್ಟದು ಕೇಳು
ವಿಫಲನಾಗದ ಹಾಗೆ ಹೆಜ್ಜೆಯಿರಿಸಿ
ಜಪವ ಗೈಯುತ ಹರಿಯ
ಸಫಲಗೊಳ್ಳಲಿ ಯತ್ನ
ಸುಫಲ ನೀಡಲಿ ಹರಿಯು ಕರುಣೆಯಿರಿಸಿ||
-ಪೆರ್ಮುಖ ಸುಬ್ರಹ್ಮಣ್ಯ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
April 05, 2024
ಬಾಲ್ಯ ಮತ್ತು ವಾರ್ಧಕ್ಯ
ಬಾಲ್ಯವದು
ಮೂಡಣದ
ಚಿಲುಮೆಯ ಸೂರ್ಯ-
ಹೊಸ ಉತ್ಸಾಹ
ವಿಸ್ಮಯ
ಕೌತುಕದ ಬೆರಗು...
ವಾರ್ಧಕ್ಯವದು
ಪಡುವಣದ
ಬಸವಳಿದ ಆರ್ಯ-
ಸಾರವಿಲ್ಲದ
ಅದೇ ಅನುಭಾವ
ಹಳತೆಂಬ ಕೊರಗು!
***
ಆದರ್ಶಗಳ ಧೂಳೀಪಟ
ಅತ್ತ ಕಡೆ ರಾಮ
ಇತ್ತಕಡೆ ಗಾಂಧಿ
ಮಗದೊಂದು ಕಡೆ
ಧರ್ಮರಾಯರು-
ಮೇಲೆ ಅಳುತಿಹರು
ನೋಡಾ...
ರಾಜಕೀಯದೊಂಬರಾಟಕೆ
ಮಾತ್ರ ಅವರ ಹೆಸರು...
ಅವರಾದರ್ಶಗಳನು
ಯಾರೂ ಬಳಕೆ
ಮಾಡುತಿಲ್ಲವೋ
ಮೂಢಾ!
***
ಇತಿಹಾಸ
ತಿನ್ನುವ ಅನ್ನ
ಹೊಟ್ಟೆ ಬಟ್ಟೆ
ಆಶ್ರಯಕಾಗಿ-
ಎಂದೂ ಹುಟ್ಟಲಿಲ್ಲ
ರೋಚಕ
ಇತಿಹಾಸ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
April 04, 2024
ಮುರಳಿಯನ್ನು ಬದಿಯಲಿಟ್ಟು
ಹೆರಳ ಹೆಣೆವ ನೆಪದಲಿ
ಕರೆವ ಮೊದಲೆ ಬಂದೆ ನೀನು
ತರುಣಿ ಮನವು ಖುಷಿಯಲಿ
ಹರಡಿ ನಿಂತ ಹೆರಳನೆಲ್ಲ
ಕರದಲೊಟ್ಟುಗೂಡಿಸಿ
ಸರಿಯದಂತೆ ನೇಯ್ದ ಜಡೆಯ
ಪರಿಯನೆಂತು ಪೇಳಲಿ
ತುರುಬಿನಲ್ಲಿ ಹೂವನಿಟ್ಟೆ
ಮರೆಯಲಾರೆನೀಕ್ಷಣ
ತಿರುಗದಂತೆ ನನ್ನ ತಡೆದು
ಕರದಲಿಟ್ಟೆ ದರ್ಪಣ
ಅರಿಯಲಾರೆ ಹರಿಯೆ ನಿನ್ನ
ಬರೆದೆ ಪದವ ಪೋಣಿಸಿ
ಬಿರಿದ ಹೂವ ತಂದು ನಿನ್ನ
ಚರಣಕಿರಿಸಿ ಪೂಜಿಸಿ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ: ಇಂಟರ್ನೆಟ್ ತಾಣ