ಕವನಗಳು

ವಿಧ: ಕವನ
April 05, 2024
ಬಾಲ್ಯ ಮತ್ತು ವಾರ್ಧಕ್ಯ ಬಾಲ್ಯವದು ಮೂಡಣದ ಚಿಲುಮೆಯ ಸೂರ್ಯ- ಹೊಸ ಉತ್ಸಾಹ ವಿಸ್ಮಯ ಕೌತುಕದ ಬೆರಗು...   ವಾರ್ಧಕ್ಯವದು ಪಡುವಣದ ಬಸವಳಿದ ಆರ್ಯ- ಸಾರವಿಲ್ಲದ ಅದೇ ಅನುಭಾವ ಹಳತೆಂಬ ಕೊರಗು! *** ಆದರ್ಶಗಳ ಧೂಳೀಪಟ ಅತ್ತ ಕಡೆ ರಾಮ ಇತ್ತಕಡೆ ಗಾಂಧಿ ಮಗದೊಂದು ಕಡೆ ಧರ್ಮರಾಯರು- ಮೇಲೆ ಅಳುತಿಹರು ನೋಡಾ...   ರಾಜಕೀಯದೊಂಬರಾಟಕೆ ಮಾತ್ರ ಅವರ ಹೆಸರು... ಅವರಾದರ್ಶಗಳನು ಯಾರೂ ಬಳಕೆ ಮಾಡುತಿಲ್ಲವೋ ಮೂಢಾ! *** ಇತಿಹಾಸ  ತಿನ್ನುವ ಅನ್ನ ಹೊಟ್ಟೆ ಬಟ್ಟೆ ಆಶ್ರಯಕಾಗಿ- ಎಂದೂ ಹುಟ್ಟಲಿಲ್ಲ ರೋಚಕ ಇತಿಹಾಸ…
ವಿಧ: ಕವನ
April 04, 2024
ಮುರಳಿಯನ್ನು ಬದಿಯಲಿಟ್ಟು ಹೆರಳ ಹೆಣೆವ ನೆಪದಲಿ ಕರೆವ ಮೊದಲೆ ಬಂದೆ ನೀನು ತರುಣಿ ಮನವು ಖುಷಿಯಲಿ   ಹರಡಿ ನಿಂತ ಹೆರಳನೆಲ್ಲ ಕರದಲೊಟ್ಟುಗೂಡಿಸಿ ಸರಿಯದಂತೆ ನೇಯ್ದ ಜಡೆಯ ಪರಿಯನೆಂತು ಪೇಳಲಿ   ತುರುಬಿನಲ್ಲಿ ಹೂವನಿಟ್ಟೆ ಮರೆಯಲಾರೆನೀಕ್ಷಣ ತಿರುಗದಂತೆ ನನ್ನ ತಡೆದು ಕರದಲಿಟ್ಟೆ ದರ್ಪಣ   ಅರಿಯಲಾರೆ ಹರಿಯೆ ನಿನ್ನ ಬರೆದೆ ಪದವ ಪೋಣಿಸಿ ಬಿರಿದ ಹೂವ ತಂದು ನಿನ್ನ ಚರಣಕಿರಿಸಿ ಪೂಜಿಸಿ||   -ಪೆರ್ಮುಖ ಸುಬ್ರಹ್ಮಣ್ಯ ಭಟ್  ಚಿತ್ರ ಕೃಪೆ: ಇಂಟರ್ನೆಟ್ ತಾಣ
ವಿಧ: ಕವನ
April 03, 2024
ಕಂಬಳಿಹುಳಗಳು ಕಂಬಳಿ ಹುಳುಗಳು ದಾಳಿಯನಿಟ್ಟರೆ ಗಿಡಗಳ ನಾಶವು ಇದು ಖಚಿತ ಸನಿಹಕೆ ಹೋದರೆ ದೇಹಕೆ ತಗುಲಲು ತ್ವಚೆಯಲಿ ತುರಿಕೆಯು ಇದು ಉಚಿತ   ಗಾತ್ರದೆ ಚಿಕ್ಕದು, ಗುಂಪಲಿ ಬರುವುದು ಉಳಿಯದು ಗಿಡದಲಿ ಹಸಿರೆಲೆಯು ಎಲೆಗಳ ಮುಕ್ಕುವ ಭೀಕರ ಹುಳುಗಳ ಕಾಟದಿ ಫಸಲಿಗೆ ಕತ್ತರಿಯು   ಕೋಶವ ನಿರ್ಮಿಸಿ ಒಳಗಡೆ ಸೇರುತ ಸಿದ್ಧತೆ ಮುಂದಿನ ಹಂತಕ್ಕೆ ಬಣ್ಣದ ರೆಕ್ಕೆಯ ಚಿಟ್ಟೆಗಳಾಗುತ ಸೊಗಸನು ಬೀರಲು ವಿಶ್ವಕ್ಕೆ||   -ಪೆರ್ಮುಖ ಸುಬ್ರಹ್ಮಣ್ಯ ಭಟ್  *** ಗಝಲ್ ಪ್ರೀತಿ ಹಚ್ಚೆಯನು ಹಚ್ಚಿಸಿಯೊಳಗೆ ಏಕೆ ಹೋದೆಯೋ…
ವಿಧ: ಕವನ
April 02, 2024
ಕನ್ನಡ ನಾಡಿದು ನಮ್ಮದು ಎನ್ನುವ ಹೆಮ್ಮೆಯು ಹರಿದಿದೆ ನರನಾಡಿ ಕನ್ನಡ ಮಾತೆಗೆ ಮಣಿಯುವ ಭಕ್ತಿಯು ನಮ್ಮಯ ಎದೆಯಲಿ ಮನೆಮಾಡಿ   ನೌಕರಿ ಹಿಡಿಯಲು ಬರುವರು ಕೆಲವರು ಜೀವನ ಪಯಣಕೆ ರಹದಾರಿ ಅಂಗಡಿ ಇರಿಸಲು ಬರುವರು ಹಲವರು ಲಾಭವ ದೃಷ್ಟಿಯ ವ್ಯಾಪಾರಿ   ಕನ್ನಡ ಮಾತೆಯು ದೂರಕೆ ತಳ್ಳದೆ ಮಡಿಲನ್ನೀವಳು ಮಮತೆಯಲಿ ಬದುಕನು ನೀಡಿದ ಕನ್ನಡ ಮಾತೆಗೆ ಗೌರವ ಇಲ್ಲವೆ ಇವರಲ್ಲಿ?   ಕನ್ನಡ ಅರಿಯದ ಯಾರನೊ ಕರೆವರು ಬರೆಸಲು ಕನ್ನಡ ಬರಹಗಳ ಏನಿದರರ್ಥವು ಯಾರಿಗೆ ಅರಿವುದು? ಮಾಡುವರಿಂತಹನರ್ಥಗಳ||   -ಪೆರ್ಮುಖ…
ವಿಧ: ಕವನ
April 01, 2024
ಈ ಕಾಲದಲ್ಲೂ ಜಾತಿಗಳೆಂಬ ಹೆಗ್ಗಣಗಳು ಇರುವುದು ವಿಶೇಷ ಆ ಜಾತಿ ಈ ಜಾತಿ ಎನ್ನುತ್ತಲೇ ನಾವು ಅಜಾದಿಗಳು ಜಾತ್ಯಾತೀತವೆನ್ನುವರ ಕಂಡಾಗ, ನಗುವುದೋ ಅಳುವುದೋ ! ಜನಸಾಮಾನ್ಯರೆ ನೀವೇ ಹೇಳಿ...?   ಜಾತಿಯಿಂದಲೇ ರಾಜಕೀಯ ! ಮಾಡುವವರಿಗೆ;   ಅನ್ನುವವರಿಗೆ,  ಪ್ರಜಾಪ್ರಭುತ್ವದ ಕಿರೀಟ ಬೇಕೇನು ? ಇಂದು  ರಾಜಕೀಯದಾಟದಲ್ಲಿ ಓಟು ಹಾಕಿದವ  ಕೋಡಂಗಿ , ಹಾಕಿಸಿಕೊಂಡು ಮೆರೆದವನು  ವೀರಭದ್ರ !  ಅನ್ನುವಂತಾಗಿದೆ  ಛಲವಾದಿಯೆ !!   -ಹಾ ಮ ಸತೀಶ ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ
ವಿಧ: ಕವನ
March 31, 2024
ಸೇವಾ ಭಾಗ್ಯವ ಕರುಣಿಸೆಯಾ ಕಾದಿರುವೇ ನಾ, ಜಗದೊಡೆಯಾ||ಪ||   ನಂಬಿ ಬಂದಿರುವೆ ನಿನ್ನಡಿಗೆ ತಾಮಸ ಏತಕೆ ಓ ಪ್ರಭುವೆ ಕಂದನ ಮೊರೆಯಾ ನೀ ಕೇಳು ದೇವಾ ಒಲವಿಂದ ಬಂದೀಗ ಸಲಹೆಂದು ಬೇಡುವೆ||ಅ.ಪ.||   ಕೈಜೋಡಿ ಮುಂದೇ ನಿಂತಿರುವೆ ನೀನೇಕೆ ನನ್ನಲಿ ಮುನಿದಿರುವೆ ಈಶಾ ಪರಮೇಶಾ ಕನಿಕರಿಸು ದುರಿತವ ತಕ್ಷಣ ಪರಿಹರಿಸು ನಿನ್ನಯ ಪಾದ ನಂಬಿದೆ ದೇವಾ ಮುಕ್ಕಣ್ಣ ಪಾಲಾಕ್ಷ ಗಿರಿಜೇಶ ಶಂಕರ|| -ಪೆರ್ಮುಖ ಸುಬ್ರಹ್ಮಣ್ಯ ಭಟ್ 
ವಿಧ: ಕವನ
March 30, 2024
ಹಾರುವ ಹಕ್ಕಿಯ ಗೂಡಲಿ ಬಂಧಿಸೆ ಹಾರುವುದೆಂತದು ಹೊರಗಡೆಗೆ ಹೂವಿನ ದಳಗಳ ಒಳಗಡೆ ಸಿಲುಕಿದ ದುಂಬಿಯು ಬಂಧಿತ ಹೂವೊಳಗೆ   ಪ್ರೀತಿಯ ನೋಟದ ಔತಣ ತೊರೆವೆನೆ? ಕಣ್ಣಲೆ ನೀಡುವೆ ಕರೆಯೋಲೆ ಸರಸದ ಸವಿಯಲಿ ಮೈಯನು ಮರೆತಿರೆ ಬಂಧಿತನಾದೆನು ಒಲವಿನಲೆ   ಜಗವನು ಮರೆಸುವ ಒಲವಿನ ಸಿಂಚನ ಪುಳಕಿತಗೊಳಿಸುವೆ ಪ್ರೇಮದಲಿ ವೇಳೆಯ ಕಳೆಯದೆ ಬಾರೆಯ ಸನಿಹಕೆ ಸೇರಿಕೊ ನನ್ನಯ ತೋಳಿನಲಿ||   -ಪೆರ್ಮುಖ ಸುಬ್ರಹ್ಮಣ್ಯ ಭಟ್ ಚಿತ್ರ ಕೃಪೆ: ಇಂಟರ್ನೆಟ್ ತಾಣ
ವಿಧ: ಕವನ
March 29, 2024
೧. ನಿಶೆಯಿದ್ದರೆ ಮನದಲಿ ಗೆಲುವು ಖಚಿತ ಕಸುವಿದ್ದರೆ ಮನದಲಿ ಗೆಲುವು ಖಚಿತ   ಜೀವವಿದ್ದರೆ ಮನದಲಿ ಗೆಲುವು ಖಚಿತ ಒಲವಿದ್ದರೆ ಮನದಲಿ ಗೆಲುವು ಖಚಿತ   ತನುವಿದ್ದರೆ ಮನದಲಿ ಗೆಲುವು ಖಚಿತ ಹಣವಿದ್ದರೆ ಮನದಲಿ ಗೆಲುವು ಖಚಿತ   ಮೌನವಿದ್ದರೆ ಮನದಲಿ ಗೆಲುವು ಖಚಿತ ಗುಣವಿದ್ದರೆ ಮನದಲಿ ಗೆಲುವು ಖಚಿತ   ಎಚ್ಚರವಿದ್ದರೆ ಮನದಲಿ ಗೆಲುವು ಖಚಿತ ಸವಿಯಿದ್ದರೆ ಮನದಲಿ ಗೆಲುವು ಖಚಿತ *** ೨. ಸವಿಯನಿಂದು ಕೊಡಲು ಹೋದೆ ತೆಗೆದುಕೊಳ್ಳಲಿಲ್ಲ ಮತ್ತಿನಲ್ಲಿ ಮುದ್ದಿಸಲು ಕಾದೆ ಪಡೆದುಕೊಳ್ಳಲಿಲ್ಲ   ಮೋಹವಿಂದು…
ವಿಧ: ಕವನ
March 28, 2024
ಕಣಕಣದಲ್ಲಿಯು ಬೆರೆತಿಹ ಪ್ರೇಯಸಿ ತನುಮನ ನಿನ್ನನೆ ಆಶಿಸಿದೆ ಸನಿಹಕೆ ಬಂದರೆ ದೂರಕೆ ಸರಿಯುವೆ ಇನಿಯನ ಕಾಡುವೆ ಇದು ಸರಿಯೆ?   ನಗುವಿನ ಮೊಗದಲಿ ಗಲ್ಲದ ಈ ಗುಳಿ ಕಚಗುಳಿ ಇಡುತಿದೆ ಮುಂಗುರಳು ತಾರೆಯ ಹೊಳಪಿನ ಸುಂದರ ಕಣ್ಗಳು ಕಾಡುತಲಿರುವುದು ಹಗಲಿರುಳು   ನೆನಪಿನ ಹಕ್ಕಿಗೆ ಸರಪಳಿ ಬಿಗಿಯುತ ಮನಸಿನ ಗೂಡಲಿ ಬಂಧಿಸಿದೆ ಕನಸನು ಕಾಣಲು ಆಸ್ಪದೆ ಎಲ್ಲಿದೆ? ಮನವಿದು ವಿರಹದಿ ನಿದ್ರಿಸದೆ   ಒಲವಿನ ಬೇಡಿಕೆ ಇರಿಸಿದೆ ನಿನ್ನಲಿ ಒಲ್ಲೆನು ಎನ್ನದೆ ಬಳಿ ಬಾರೆ ಬಲ್ಲೆನು ನಿನ್ನಲಿ ಅವಿತಿಹ ಪ್ರೇಮವ ಬದುಕಲಿ…
ವಿಧ: ಕವನ
March 27, 2024
ಗದ್ದುಗೆಯನೇರುವುದು ಎದ್ದು ಮೆರೆದಾಡುವುದು ಸುದ್ದಿಯಲ್ಲಿಯೆ ಇರುವ ಮಹದಾಸೆ ಜೊತೆಗೆ ಹದ್ದಿನಂತೆಯೆ ಇರುವ ಜಿದ್ದು ತುಂಬಿದ ಮನದಿ ಕದ್ದು ಕೋಳಿಯ ತಿನುವ ಕುಹಕ ನಡವಳಿಕೆ.   ಅದ್ದುತ್ತ ವಾಂಛೆಗಳ ಸಿದ್ಧಿಸಲು ಬಯಕೆಗಳು ಗೆದ್ದು ಬರಲೇ ಬೇಕು ಎನುವ ಹಪ ಹಪಿಕೆ ಉದ್ದುತಲಿ ನಯವಿನಯ ಉದ್ದಂಡ ನಟನೆಗಳ ಖುದ್ದಾಗಿ ಮಾಡುತ್ತ ಸದ್ದು ದಿನ ಬಳಕೆ   ಪೆದ್ದುತನವೇನಲ್ಲ ಮದ್ದಿರದ ರೋಗವಿದು ಬಿದ್ದರೂ ಮೂಗು ಮಣ್ಣಾಗಿರದ ಹಾಗೆ ಮುದ್ದು ಮಾಡುತಲಿದ್ದ‌ ಮರಿಯನ್ನೆ ಹಸಿವಾಗಿ ಮೆದ್ದು ಬಿಡುವಂತಿರುವ ಮಾರ್ಜಾಲ ಹೀಗೆ  …