ಕವನಗಳು
ಲೇಖಕರು: ಬರಹಗಾರರ ಬಳಗ
ವಿಧ: ಕವನ
March 26, 2024
ಅಂದಿನ ಪಾಠ ಅಂದೆ ಕಲಿತಿರಬೇಕು
ಹೆಚ್ಚಿನ ಪರಿಶ್ರಮ ಪಡುತ್ತಿರಬೇಕು
ಕಲಿತ ವಿಷಯಗಳ ಮನನ ಮಾಡಬೇಕು
ಸರಿಯಾದ ವೇಳಾಪಟ್ಟಿ ಹೊಂದಿರಬೇಕು
ಪರೀಕ್ಷೆಗಳೆಂದರೆ ಮಕ್ಕಳಿಗೆ ಉತ್ಸಾಹವಿರಬೇಕು
ಭಯಪಡದೆ ಪರೀಕ್ಷೆಗಳನ್ನು ಎದುರಿಸಬೇಕು
ವಿಷಯಗಳನ್ನು ಅರ್ಥೈಸಿಕೊಂಡು ಓದಬೇಕು
ಉಲ್ಲಾಸದಿಂದ ಪರೀಕ್ಷೆಯಲ್ಲಿ ಪಾಲ್ಗೊಳ್ಳಬೇಕು
ತನ್ನ ಮೇಲೆ ತನಗೆ ವಿಶ್ವಾಸ ಇರಬೇಕು
ವಿಷಯಗಳ ಹೆಚ್ಚಿನ ಜ್ಞಾನ ಹೊಂದಿರಬೇಕು
ಮನಸ್ಸಿನಿಂದ ವಿಷಯಗಳನ್ನು ಓದುವಂತಿರಬೇಕು
ಕಠಿಣ ಪ್ರಶ್ನೆಗಳಿಗೆ ಉತ್ತರ ಪಡೆದುಕೊಂಡಿರಬೇಕು
ಅಕ್ರಮ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
March 26, 2024
ಬಣ್ಣದೋಕುಳಿ ಆಡುತಲಿ ಚಿಣ್ಣರೆಲ್ಲ ಸೇರೋಣ
ಕೆಂಪು ಹಳದಿ ನೀಲ ಬಣ್ಣ ತನ್ನಿರಿ ಎಲ್ಲರು ಇಲ್ಲಿಗೆ ಅಣ್ಣ/
ಬಗೆಬಗೆ ಆಟವ ಆಡುತಲಿ ಬಣ್ಣದ ನೀರ ಎರಚೋಣ
ಹಿರಿಯರು ಕಿರಿಯರು ಬೆರೆಯುತಲಿ ಹೋಳಿ ಸಂಭ್ರಮ ಮಾಡೋಣ//
ಬಿದಿರ ಬೊಂಬೆಯ ಮಾಡುತಲಿ ಕಟ್ಟಿಗೆ ರಾಶಿ ಹಾಕೋಣ
ಹಳೆಯ ವಸ್ತ್ರವ ತೊಡಿಸುತಲಿ ಬೆಂಕಿಯನ್ನು ಹಚ್ಚೋಣ/
ಅರಿಷಡ್ವರ್ಗಗಳ ಮರೆಯುತಲಿ ಮನದ ಕ್ಲೇಶವ ತೊಳೆಯೋಣ
ಸಹನೆ ಶಾಂತಿ ದಾನವೆಲ್ಲ ಬದುಕಿನ ಅಂಗ ಎನ್ನೋಣ//
ಕಾಮದೇವನ ಪ್ರೀತಿ ಪ್ರೇಮ ರತಿದೇವಿಗೆ ವರದಾನ
ನೀಲಕಂಠನ ಕೃಪೆಯ ಸಂಭ್ರಮ ಹೋಳಿ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
March 25, 2024
ಮುಂಜಾನೆಯೊಳು ಮಂಜಿನ ಹನಿಗಳು
ಸುಂದರ ಬಲೆಯನು ಹೆಣೆದಿರಲು
ಚಳಿಯನು ಸುತ್ತಲು ಹರಡಿದೆ ಇಳೆಯೊಳು
ತಂಗಾಳಿಯದು ಬೀಸಿರಲು
ಹೊನ್ನಿನ ಕಿರಣವ ಚೆಲ್ಲುತ ನೇಸರ
ಮೂಡಿದ ಬಾನಿನ ಬಯಲಿನೊಳು
ಬಿಸಿಲಿನ ತಾಪಕೆ ಕರಗಿದ ಇಬ್ಬಲಿ
ಹೂವಿನ ದಳದಲಿ ಮುತ್ತುಗಳು
ನೀಲಿಯ ಗಗನವ ಚುಂಬಿಸಲಾಸೆಯೆ
ಹಕ್ಕಿಯ ಗುಂಪಿನ ಮೆರವಣಿಗೆ
ಬೆಳಗಿನ ಚೆಲುವನು ನೋಡುತ ಮೈಮನ
ಮನವಿದು ಬಯಸಿತು ಬರವಣಿಗೆ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಲೇಖಕರು: ಬರಹಗಾರರ ಬಳಗ
ವಿಧ: ಕವನ
March 24, 2024
ಕಲ್ಲು...
ವಿಚ್ಛೇದನ
ನೀಡಲು ನಿರಾಕರಿಸಿದ
ಪತಿ ಮೇಲೇ
ಪತ್ನಿ-
ಕಲ್ಲಿನಿಂದ
ಭಾರೀ ಹಲ್ಲೆ...
ಕಲ್ಲಿನಿಂದ
ಹೊಡೆದ ಮೇಲೂ
ವಿಚ್ಛೇದನ
ನೀಡದಿರ ಪತಿಯೇ-
ನೀನೊಂದು
ಸ್ಟ್ರಾಂಗ್ ಕಲ್ಲೇ!
***
ಓದುವ ಸಂಸ್ಕೃತಿ
ಗ್ರಂಥಾಲಯದ
ಪುಸ್ತಕಗಳು-
ನಮ್ಮ ಧೂಳ
ಕೊಡವುವರಿಲ್ಲವೆಂದು
ಅಳುತಿಹವು
ನೋಡಿರೋ...
ಮನದ ಧೂಳ
ಕೊಡವಿ-
ಪುಸ್ತಕಗಳ
ಓದಿ
ಜ್ಞಾನ ದಾಹವ
ತಣಿಸಿಕೊಳ್ಳಿರೋ!
***
ಕೊರಗು
ಪ್ರತೀ
ಹಂತದಲೂ
ಸಮೃದ್ಧಿ
ಸೌಲಭ್ಯಗಳ
ಪಡೆದರೂ
ಈ ಜೀವ...
ಸದಾ
ಕೊರಗುತಲಿಹುದು
ಮನುಷ್ಯನ
ಅಸಹಜ
ಅತೃಪ್ತಿಯ
ಭಾವ!
***…
ಲೇಖಕರು: ಬರಹಗಾರರ ಬಳಗ
ವಿಧ: ಕವನ
March 23, 2024
ಬದುಕಿ ಬಾಳಿರಿ ಹೆತ್ತವರ ನೆರಳಲಿ
ಬೆಳೆದು ದೊಡ್ಡವರಾಗಿ ಹಿರಿಯರ ಆಶೀರ್ವಾದದಲಿ
ನಲಿದು ಆಡಿರಿ ಬಾಲ್ಯದ ಗೆಳೆಯರ ಒಡನಾಟದಲಿ
ಪ್ರತಿ ಹೆಜ್ಜೆ ಇಡಿ ಗುರುಗಳ ಮಾರ್ಗದರ್ಶನದಲಿ
ತಂದೆ ಬೈದನೆಂದರೆ ಅದು ಜವಾಬ್ದಾರಿಗಾಗಿ
ತಾಯಿ ಕೋಪದಿ ಮಾತನಾಡಿದರೆ ಅದು ಬದುಕಿಗಾಗಿ
ಗುರು ಶಿಕ್ಷಿಸಿದನೆಂದರೆ ಅದು ಶಿಕ್ಷಣಕ್ಕಾಗಿ
ಗೆಳೆಯ ಮಾತುಬಿಟ್ಟರೆ ಅದು ತಪ್ಪಿನ ಅರಿವಿಗಾಗಿ
ಸಹೋದರನ ಹೆಗಲಿಗೆ ಹೆಗಲು ಕೊಡುವವನಾಗು
ಸಹೋದರಿಯ ಬದುಕಿನ ರಕ್ಷಣೆಗೆ ಕಾವಲುಗಾರನಾಗು
ಮಕ್ಕಳು ಪೂಜಿಸುವ ತಂದೆ ನೀನಾಗು
ಸಂಬಂಧಿಕರು ಸಂಬಂಧ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
March 22, 2024
ಎಳೆಯ ಬಾಲೆಯು ಕರದಲಿರುವುದು
ಎಳೆಯ ಮಾವಿನ ಮಿಡಿಗಳು
ಕಿತ್ತು ತಂದಳೆ,ಹೇಗೆ ದೊರೆಯಿತು
ಮಾವು ಮಿಡಿಗಳ ಗೊಂಚಲು
ಒಂದು ಮಿಡಿಯನು ಬಾಯಲಿಟ್ಟಳು
ಮುದ್ದು ಮುಖದಲಿ ನಗುವಿದೆ
ಮುಗ್ಧ ಬಾಲೆಯು ಮಿಡಿಯ ಕಡಿದರೆ
ಮೇಣವಿರುವುದು ಅರಿಯದೆ?
ಕೊಂಚ ಸೈರಿಸು ಚೂರಿ ಜೊತೆಯಲಿ
ಉಪ್ಪಿನೊಂದಿಗೆ ಬರುವೆನು
ಹೋಳನಾಗಿಸಿ ಉಪ್ಪು ಬೆರೆಯಿಸಿ
ನಿನಗೆ ತಿನ್ನಲು ಕೊಡುವೆನು||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಲೇಖಕರು: ಬರಹಗಾರರ ಬಳಗ
ವಿಧ: ಕವನ
March 21, 2024
ಒಲವ ಕುಣಿಸಿ ಪದಗಳ ಮಾಲೆ ಹಾಕಿದೆ ಕವಿತೆ
ಛಲವ ಮೊಳೈಸಿ ತನುಮನ ಎಲ್ಲ ತಾಕಿದೆ ಕವಿತೆ
ಬಲ ಪ್ರಯತ್ನ ಮಾಡಿದರೆ ಕಾವ್ಯದ ಹುಟ್ಟ ಸಾಧ್ಯವೇ
ಕಾಲ ಕಳೆದಂತೆ ಉತ್ತಮ ಸಮಯ ಬೇಕಿದೆ ಕವಿತೆ
ನಲಿದು ವಾಕ್ಯ ಅರಳುವ ವೇಳೆಗೆ ಕನಸು ಬೀಳುವುದು
ಸಾಲಿನ ಮಿತಿಗೆ ಅಕ್ಷರಗಳ ಜೋಡಿಸಿ ಸಾಕಿದೆ ಕವಿತೆ
ನಾಲಿಗೆ ತುದಿಯಲಿ ಇದ್ದರೂ ಹುಡುಕುವ ಕೆಲಸ ತಲೆಗೆ
ಕಲಿಕೆ ನಿರತ ಹೊಸತು ಪ್ರಯೋಗ ಸೋಕಿದೆ ಕವಿತೆ
ಜಾಲಿಗೆ ಬರೆದ ಕವನ ಚಂದ್ರನ ಹೃದಯ ತಟ್ಟಿದೆ
ಲಲಿತ ಪ್ರಕಾರಗಳ ಭಾವ ಲಹರಿಗೆ ನೂಕಿದೆ ಕವಿತೆ.
-ಚಂದ್ರಶೇಖರ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
March 21, 2024
ನೋಡಿದಿರೇನು ನದಿಯ ಒಡಲು
ಬರಿದಾಗಿ ಹೋಗಿದೆ ಮಡಿಲು
ಭೋರ್ಗರೆಯಬೇಕಿತ್ತು ಹಾಲ್ಗಡಲು
ಮುಂದೆ ಸಾಗಿ ಸೇರಲು ಕಡಲು
ಸ್ನಾನ ಪಾನಾದಿಗಳಿಗೆ ಬೇಕು ನೀರು
ವನ್ಯಜೀವಿಗಳಿಗಂತೂ ಉಳಿಸಲಿಲ್ಲ ಚೂರು
ಸುತ್ತ ಮಾನವನದ್ದೇ ಕಾರುಬಾರು
ಹೀಗೆ ಸಾಗಿದರೆ ಬಿಡಬೇಕಾದೀತು ಊರು
ದೈವವನು ನೀವು ಜರಿಯುತ
ಮೌಲ್ಯಗಳ ಸದಾ ಮರೆಯುತ
ಕುಡಿದು ಕುಣಿದು ನಲಿಯುತ
ಸೋದರತೆಯ ತೊರೆದು ಬಡಿದಾಡುತ
ಆತ್ಮಸಾಕ್ಷಿ ಯನ್ನು ತೊರೆದು
ಕ್ರೂರ ಕೃತ್ಯಗಳಲ್ಲಿ ಮೆರೆದು
ಪ್ರಾಣಿ ಪಕ್ಷಿಗಳನ್ನು ಇರಿದು
ಸತ್ಯ ಅಸತ್ಯಗಳ ಜರಿದು
ಸಾಗಿದರಾಯಿತೆ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
March 20, 2024
ಮುನಿದಳೇಕೆ ಅರಿಯದಾದೆ
ನಲ್ಲೆ ಇಂದು ಈತರ
ದಟ್ಟ ಮುಗಿಲ ಪರದೆಯೊಳಗೆ
ಉಳಿದ ಹಾಗೆ ಚಂದಿರ
ಏನು ಮರೆತೆ ಮೊಗವ ತಿರುವೆ
ನೆನಪು ಮನಕೆ ಬಾರದೆ
ರಮಿಸಲೆಂತು ಕಾಂತೆ ಇವಳ
ಹಾದಿ ಈಗ ತೋಚದೇ
ಮೊನ್ನೆ ತಾನೆ ಜನ್ಮ ದಿನಕೆ
ಬೆರಳಿಗಿಟ್ಟೆ ಉಂಗುರ
ಮದುವೆ ದಿನವು ದೂರವಿಹುದೆ
ಮತ್ತೆ ಏಕೆ ನಿಷ್ಟುರ
ಮಲ್ಲೆ ಹೂವ ಮಾಲೆ ತರಲು
ನಡೆದೆ ನಾನು ಕ್ಷಣದಲಿ
ಹೋಗಿ ತಂದು ತುರುಬಲಿಡಲು
ಬಿರಿದ ಕಮಲ ಮೊಗದಲಿ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಲೇಖಕರು: ಬರಹಗಾರರ ಬಳಗ
ವಿಧ: ಕವನ
March 19, 2024
ಮನದೊಳಗೆ ತುಂಬಿಸಿರುವೆ ಹರೇ ರಾಮ ನಾಮ
ತನುವೊಳಗೆ ಹರಡಿಸಿರುವೆ ಹರೇ ರಾಮ ನಾಮ
ನೆಲದೊಳಗೆ ಹಬ್ಬಿಸಿರುವೆ ಹರೇ ರಾಮ ನಾಮ
ಗಿಡದೊಳಗೆ ಉಳಿಸಿರುವೆ ಹರೇ ರಾಮ ನಾಮ
ನಡೆಯೊಳಗೆ ಸೇರಿಸಿರುವೆ ಹರೇ ರಾಮ ನಾಮ
ನುಡಿಯೊಳಗೆ ಬೆರೆಸಿರುವೆ ಹರೇ ರಾಮ ನಾಮ
ಜ್ಞಾನದೊಳಗೆ ಇರಿಸಿರುವೆ ಹರೇ ರಾಮ ನಾಮ
ಪ್ರಾಣದೊಳಗೆ ಕೂರಿಸಿರುವೆ ಹರೇ ರಾಮ ನಾಮ
***
ಬಾರೆಲೆ ಹಕ್ಕಿಯೆ
ಹಾರುತ ಹಾರುತ ಬಾರೆಲೆ ಹಕ್ಕಿಯೆ
ಬಣ್ಣದ ಹಕ್ಕಿಯೆ ಚೆಂದದ ಹಕ್ಕಿಯೆ
ಬಾನೊಳು ರೆಕ್ಕೆಯ ಬಿಚ್ಚುತ ಹಾರುವೆ
ಸೂರ್ಯನ ಕಡೆಗೋ ಹಾರುತ ಹೋಗುವೆ
…