ಕವನಗಳು

ವಿಧ: ಕವನ
April 09, 2025
ಕಳ್ಳಾ ಪೋಲಿಸ್ ಆಟ  ಈ ಸರ್ಕಾರ ಬಂದಾಗ- ಇವರೇ ಪೋಲಿಸ್; ಅವರು ಮಹಾ ಕಳ್ಳರು- ಇಲ್ಲಾ ತಿರುಗು ಮುರುಗು...   ಕಣ್ಣು ಬಾಯಿ ಬಿಟ್ಟುಕೊಂಡು ಉಸಿರು ಬಿಗಿಹಿಡಿದು ತಮ್ಮದೆಲ್ಲವ ಬಾಚಿ ಹಿಡಿದುಕೊಂಡ ಪ್ರಜೆಗಳು  ಮಾತ್ರ ಬೆರಗು ಬೆರಗು! *** ಏಪ್ರಿಲ್ ಫೂಲ್  ಮೊದಮೊದಲು ಏಪ್ರಿಲ್  ಒಂದರಂದು ಮಾತ್ರ- ತಮಾಷೆಗಾಗಿ ಮಾಡುತಿದ್ದರು ಫೂಲ್...ಫೂಲ್...   ಇಂದು ವರ್ಷವಿಡೀ ಎಲ್ಲರೂ-  ಒಂದಲ್ಲಾ ಇನ್ನೊಂದರಲಿ ಆಗುತಿರುವರು ಸದಾ ಫೂಲ್- ಇದುವೇ ಇಂದಿನ ಜಗತ್ತಿನ ವಿಸ್ಮಯದ ಕಮಾಲ್! *** ಇತಿಹಾಸ ನಿರ್ಮಿಸುವವರು! …
ವಿಧ: ಕವನ
April 08, 2025
ಮರೆಯದಿರು ನನ್ನೊಲುಮೆ ನಿನ್ನೊಲವ ಜೀವನದಿ ಮರೆತಿರಲು ಕುಗ್ಗುವುದು ಸವಿಯೆಂಬ ಮನದೊಲವು ಮರೆತಾಗ ಸಿಗುವುದೇ ಹಸಿರೆನಿಪ ಸ್ವಾಗತದ ಸಿರಿಯೆನಿಪ ಸವಿದೇವರು। ಕರೆಯದೇ ಬರುವವರ ಜೊತೆಗಿಂದು ಬರಬೇಡ ಕರೆದವರ ಕೈಹಿಡಿದು ಕರಕೊಂಡು ಬಾಯಿಂದು ಕೊರೆಯುವರ ದೂರವಿಡು ಬೆಳೆಸುವರ ಸನಿಹವಿರೆ ಬದುಕು ಚೆಲು ಮಧುವುಯೆಂದು॥ *** ಗಝಲ್ ಪ್ರೀತಿ ಹಚ್ಚೆಯನು ಹಚ್ಚಿಸಿಯೊಳಗೆ  ಹೋದೆಯೋ ಮನಕೆ ಒಲವನು ತುಂಬಿಸಿಯೊಳಗೆ ಹೋದೆಯೋ   ಸಾಗರವೆಂಬ ಮನದ ಅಲೆಯಲ್ಲೀಗ ನಲಿಯುತ್ತಿಹೆ ಯಾಕೆ  ಗುಡಿ ಗುಡಿಯಲ್ಲಿರುವ ಘಂಟೆಯೊಳಗೆ ಹೋದೆಯೋ…
ವಿಧ: ಕವನ
April 07, 2025
ಹೊನ್ನ ಕಾಂತಿ ತುಂಬಿ ಇರಲು ಕೂಸಿನಂದ ಹೆಚ್ಚಿತು ತನುವು ಹೊಳೆಯೆ ಚೆಲುವಿನಿಂದ ಕಣ್ಣ ರಶ್ಮಿ ಮಿಂಚಿತು   ಹೆತ್ತ ಅಮ್ಮ ಅಪ್ಪನನ್ನು ನಮಿಸಿ ನಿತ್ಯ ಬದುಕುತ ಬಂಧುಗಳಲಿ ಪ್ರೀತಿಯಿಂದ ಎರಡು ಮಾತ ಆಡುತ   ಸಹನೆ ಇರಲು ಊರ ಮಂದಿ ಇವಳ ಜೊತೆಗೆ ನಲಿಯಲು ಆಟ ಪಾಠ ನಡುವೆ ಬೆಳೆದು ಮನೆಯ ರಶ್ಮಿ ಬೆಳಗಲು   ಹೆಣ್ಣು ಹುಡುಗಿ ದೇವಿಯಂತೆ ಎನುತ ಮಂದಿ ಎಲ್ಲರು ಸವಿಯ ಪ್ರೇಮ  ಇರಲು ಸಹನೆ  ಮದುವೆ ಮಾಡಿ ಕೊಟ್ಟರು -ಹಾ ಮ ಸತೀಶ ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ 
ವಿಧ: ಕವನ
April 07, 2025
ಬದುಕಿನ ಬೀದಿಯಲ್ಲಿ ಉದ್ಯೋಗ, ಹಣದ ಅಂಗಡಿಗಳು! ಕಣ್ಣು ಕೋರೈಸುವ ಚಂದದ ಬೆಳಕಿನ ಅಂಗಡಿಗಳು! ಬಾಳ 'ಬೇಕು'ಗಳ ಬೇರು ಗಟ್ಟಿಗೊಳಿಸಲು ಗೊಬ್ಬರ ಸಿಗುವ ಮಳಿಗೆಗಳು!   ಬೇಕುಗಳ ಪಟ್ಟಿ ಬೆಳೆಯುತ್ತಲೇ ಇತ್ತು.. ನಿಲ್ಲದ ವ್ಯಾಪಾರಗಳು! ಇನ್ನೊಂದು, ಮತ್ತೊಂದು, ಮಗದೊಂದು.. ಎಲ್ಲಿದೆ ಪಟ್ಟಿಯ ಕೊನೆಗಳು?! ಬದುಕ ಬೀದಿಯಲಿ ಬಾಚಿ ಬಳಿದು ಮಾಡಿದೆ ಖರೀದಿಗಳು! ಬಸವಳಿದೆ, ಬಾಯಾರಿದೆ ಆದರೆ ಮುಗಿಯದ ಬಯಕೆ, ಬವಣೆಗಳು..   ಸಂಗಾತಿ ಸುಖವ, ಮಕ್ಕಳ ಒಡನಾಟವ ಬದಿಗೊತ್ತಿ ಹತ್ತಿತು ಗೀಳು ಹಾಡು, ಕಥೆ, ನಾಟ್ಯ, ಕಲೆ,…
ವಿಧ: ಕವನ
April 05, 2025
ಅವನು ಬೆಂಕಿ ಹಚ್ಚುವನೇ, ನಂದಿಸಿ ಮೆರೆಯು ಇವನು ಹೊಟ್ಟೆ ಉರಿಯುವನೇ, ಬಾಧಿಸಿ ಮೆರೆಯು   ಕೆಲಸವೇ ಇಲ್ಲದ ಬಲು ಸೋಮಾರಿಗೆ ಏನೆನ್ನಲಿ ಅವನು ಮುತ್ತುಗಳ ಕೊಡುವನೇ,ಸಂಧಿಸಿ ಮೆರೆಯು   ಗತ್ತಿರುವವನ ನಡೆಗೆ ಎಂದಿಗೂ ಮರುಗುತ್ತಾ ಇರು ಇವನು ಹುಳಿ ಹಿಂಡುವನೇ, ಸಾಧಿಸಿ ಮೆರೆಯು   ಹಣವಿಲ್ಲದೆ ಒದ್ದಾಡುವವನ ಎಂದಿಗೂ ಗಮನಿಸು ಅವನು ಕಲಿಕೆಲಿ ಮುಂದಿರುವನೇ, ಓದಿಸಿ ಮೆರೆಯು   ಚಿತ್ತವಿಡಿದು ಹೀಗೆಯೇ ಗರ್ಜಿಸಿದರೆ ಏನು ಫಲ ಈಶ ಇವನು ವಂಚನೆ ಮೂಲದವನೇ, ಬಂಧಿಸಿ ಮೆರೆಯು   -ಹಾ. ಮ ಸತೀಶ ಬೆಂಗಳೂರು ಚಿತ್ರ…
ಲೇಖಕರು: Ashwin Rao K P
ವಿಧ: ಕವನ
April 04, 2025
ಮಚ್ಚು ಹಿಡಿದು ರೀಲ್ಸ್  ಓ ನಟರೇ- ಅಭಿಮಾನಿಗಳಿಗೆ ನೀವೇನು ಸಂದೇಶ ನೀಡುತ್ತಿರುವಿರಿ ಎಂಬುದನರಿಯಿರಿ...   ನಿಮ್ಮ ತೆವಲುಗಳನೇ ಬಿಂಬಿಸಲು ಹೋದರೆ- ಪೋಲಿಸ್ ಠಾಣೆ ಎಂಬುದ ಮರೆಯದಿರಿ! *** ಹನಿ ಟ್ರ್ಯಾಪ್  ಜಾರ್ಖಂಡ್ ನಿವಾಸಿಯಿಂದ- ಸುಪ್ರೀಂ ಕೋರ್ಟ್ ತಲುಪಿದ ಹನಿಟ್ರ್ಯಾಪ್... ಭಳಿರೆ...   ಕನ್ನಡ ನಾಡಿನಲ್ಲಿ ಹನಿ ಹನಿಯಾಗಿ ಹುಟ್ಟಿ ನದಿಯಾಗಿ ಹರಿದು ರಾಜ್ಯಗಳ ದಾಟಿ ಸುಪ್ರೀಂ ಸಾಗರವ ತಲುಪಿತೇ... ಭಾಪ್ರೆ....? *** ಉರುಳಿದ ಸಿಡಿ ಗಂಡು.... ಕಡೆಗೂ ಯತ್ನಾಳ ಪ್ರಯತ್ನಗಳು ವಿಫಲ; ಉಚ್ಛಾಟನೆ-…
ವಿಧ: ಕವನ
April 03, 2025
ನಲಿವ ಹಾಡ ಹಾಡು ನೀನು ಬದುಕು ಸಾಗ್ವ ರೀತಿಗೆ ನವಿಲ ನೃತ್ಯ ನೋಡಿ ಖುಷಿಯು ನಾಟ್ಯದೊಲುಮೆ ನಡಿಗೆಗೆ   ನಿನ್ನ ಜೊತೆಗೆ ಹೆಜ್ಜೆ ಹಾಕಿ ಬರುವೆ ನಾನು ಮೆಲ್ಲಗೆ ಮುಡಿಯ ತುಂಬ ಹೂವ ಮುಡಿಯೆ ಸನಿಹ ನಿಲುವೆ ಮಲ್ಲಿಗೆ   ಸವಿಯ ಸುಖವ ಪಡೆದೆನಿಂದು ಕೈಯ ಹಿಡಿದ ರೀತಿಗೆ ಹೀಗೆಯಿರಲಿ ಕೊನೆಯ ತನಕ ಕಂದ ಬರುವ ಬಾಳಿಗೆ   -ಹಾ. ಮ ಸತೀಶ ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ 
ವಿಧ: ಕವನ
April 01, 2025
ಜೀವ ಕಡಲಲಿ ತೇಲಿ ಸಾಗಿದೆ ದೇವ ಕರುಣೆಯ ಜೊತೆಯಲಿ ಕಾವ ನಮ್ಮನು ಪೊರೆಯುತ ಜಾವ ಬೇಗದಿಯೆದ್ದು ಮೀಯಲು ಹೂವ ಕೊಯ್ಯುತ ದೇವಗರ್ಪಿಸಿ ಬೇವು ಬೆಲ್ಲವ ತಿನ್ನುತ   ದುಡಿಮೆಯಿಲ್ಲದೆ ಬದುಕು ಸಾಧ್ಯವೆ ಕಡಿಮೆ ಹಣವದುಯಿರಲು ಬಳಿಯಲಿ ಕುಡಿತ ಕಂಡಿತು ಬಾಳಲಿ ಕಡಿತವಾಯಿತು ಪ್ರೀತಿಯೊಲವದು ಬಡಿತ ಕಾಣಲು ಮನೆಯವೊಳಗಡೆ ಬೊಡಿದು ಹೋಯಿತು ವಯಸಲಿ   ಮನವು ಕೊರಗಲು ಸುಪ್ತ ಭಾವನೆ ತನುವ ಚೆಲುವದು ಕರಗಲು ಜನವು ದೂರಕೆ ಹೋಗಲು ಕಣವು ಮುತ್ತಲು ದೇಹವೇದನೆ ಕುಣಿಯ ತೋಡುತ ಗೋರಿಯಾಗಲು ಹೆಣದ ರೂಪದಿ ಮಲಗಿತು -ಹಾ. ಮ ಸತೀಶ…
ವಿಧ: ಕವನ
March 31, 2025
ಯಾರು ಇರದ ನಾಡಿನಿಂದ ಜನಿಸಿ ಇಳೆಗೆ ಬಂದೆನೊ ನೆಲದ ಹಸಿರನುಂಡು ಬೆಳೆದೆ ತಾಯ ಜೊತೆಗೆ ನಲಿದೆನೊ   ಕಷ್ಟವಿರಲಿ ನಷ್ಟವಿರಲಿ ಅಪ್ಪನಿದ್ದ ಸನಿಹದಿ ನನ್ನ ಕರೆದು ಲಲ್ಲೆ ಮಾಡಿ ನೋವ ಮರೆವ ಕ್ಷಣದಲಿ   ಹರಕು ದಿಂಬು ಹರಿದ ಚಾಪೆ ನನಗೆ ರಾತ್ರಿ ಗೆಳೆಯರು ಬೆಳಗು ಆಗೆ ತೋಟದೊಳಗೆ ಕುಣಿವ ನವಿಲೆ ಮಿತ್ರರು   ಬಡತನವೆ ನನ್ನ ಉಸಿರು ದೇವ ಕೊಟ್ಟ ಉಡುಗೊರೆ ಅದನೆ ಹೊದ್ದು ನಡೆದೆನಂದು ನನ್ನ ಬಾಳ ಪಯಣದೆ   ನನ್ನನೆತ್ತಿ ಸಲಹಿದವರ ಮರೆಯಲಾರೆ ಎಂದಿಗು ಅವರ ಋಣವು ತೀರುವರೆಗು ಇರುವೆ ನಾನು ನೆಲದೊಳು   ನನ್ನ ನೋವು…
ಲೇಖಕರು: huchcheerappaiti@gmail.com
ವಿಧ: ಕವನ
March 30, 2025
ಮಾಮರದಲ್ಲಿ ಹಾಡುತಿದೆ  ಕೋಗಿಲೆಯೊಂದು ಕೂಗುತಿದೆ  ಪ್ರಕೃತಿ ಸೌಂದರ್ಯ ಹೊಳೆಯುತಿದೆ  ಮನುಕುಲಕ್ಕೆ ಖುಷಿ ತಂದೈತಿ   ಅರಳಿಸು ಎನ್ನ ಮನವು ತಣಿಸು ನನ್ನ ತನುವು  ಪ್ರಕೃತಿ ಸೌಂದರ್ಯವು  ಹನುಮಂತ ದೇವರ ಜಾತ್ರೆಯು   ಕೋಗಿಲೆ ಧ್ವನಿಯಲ್ಲಿ ಸಂಗೀತವು  ಜನಮನದಲ್ಲಿ ಸಂತೋಷವು  ಮಕ್ಕಳ ಮುಖದಲ್ಲಿ ಮಂದಹಾಸವು  ಇದು ದೇವರ ಕೊಟ್ಟ ಫಲವು   ಉತ್ಸವದ ಜಾತ್ರೆ ನಡದೈತೊ  ಹನುಮಪ್ಪನ ತೇರು ಎಳೆದೈತೊ  ಭಕ್ತರ ಹೃದಯಕ್ಕೆ ಹರ್ಷ ತಂದೈತೊ  ಯುಗಾದಿ ಹಬ್ಬದ ಜಾತ್ರೆ ನಡದೈತೊ   ದೇವಾನು ದೇವತೆಗಳ ವರವು  ಪ್ರಕೃತಿ…