ಕವನಗಳು
ಲೇಖಕರು: ಬರಹಗಾರರ ಬಳಗ
ವಿಧ: ಕವನ
April 18, 2025
ಮನದಿ ಸುಂದರ ಚಿತ್ರ ಹರಡಿದೆ
ಛಲದಿ ಮಂದಿರ ಕಟ್ಟಿದೆ
ಚೆಲುವು ಸೂಸಲು ತನುವು ಕುಣಿದಿದೆ
ಒಲವು ಹಾಡುತ ಬಂದಿದೆ
ಜೀವ ಜೀವನ ಸುಖದ ಭಾವನೆ
ಕಾವ ನನಸಲಿ ಮೂಡಿದೆ
ಬಾಳು ಗೆಲುವಲಿ ನಿತ್ಯ ಸವಿದಿದೆ
ಕಾಳ ಮೆಲ್ಲುತ ನಿಂತಿದೆ
ನವ್ಯ ಬದುಕಿಗೆ ತಾನು ಸೇರುತ
ಭವ್ಯ ಸಂಸ್ಕೃತಿ ಉಂಡಿದೆ
ಚೈತ್ರ ಋತುವಿಗೆ ಹಾಗೆ ಸೋಲುತ
ಕ್ಷಾತ್ರ ತೇಜವ ಹೊಂದಿದೆ
ಬೇವು ಬೆಲ್ಲದ ಯುಗದ ಧರ್ಮವು
ನೋವು ಇರದೇ ನಡೆದಿದೆ
ಮತ್ತೆ ಕೋಗಿಲೆ ಕುಕಿಲ ಗಾನವು
ಸುತ್ತ ಹರಡುತ ಸಾಗಿದೆ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್…
ಲೇಖಕರು: ಬರಹಗಾರರ ಬಳಗ
ವಿಧ: ಕವನ
April 17, 2025
ಪುಷ್ಪದಂತೆ ನಲ್ಲೆ ಅರಳಿ ಬಿಡು
ತಬ್ಬುತ್ತಿದ್ದಂತೆ ಹಾಗೆ ನರಳಿ ಬಿಡು
ಬಿಲ್ಲಿಂದ ಬಿಟ್ಟ ಬಾಣ, ಆದೆಯೇಕೆ
ಪ್ರಿಯನ ಎದೆಯೊಳಗೆ ಮರಳಿ ಬಿಡು
ಆಗಸದಲ್ಲಿ ಚಂದಿರನು ಕಾಣಿಸಿದನು
ತಾರೆಯಂತೇ ಇಂದು ಕೆರಳಿ ಬಿಡು
ಬೆಟ್ಟ ಗುಡ್ಡಗಳ ನಡುವೆಯೇ ಕಂದಕವು
ಆಪಾಯ ಆಗುವ ಮೊದಲೇ ತೆರಳಿ ಬಿಡು
ಜೀವನ ಇದರಲ್ಲಿ ಗೆಲುವಿದೆಯಾ ಈಶ
ಇಲ್ಲವೆಂದಾದಲ್ಲಿ ಹಾಗೇ ಹೊರಳಿ ಬಿಡು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಲೇಖಕರು: ಬರಹಗಾರರ ಬಳಗ
ವಿಧ: ಕವನ
April 16, 2025
ಮನದ ಭಾವನೆ ಹೇಳಿ ಸಾಗಲೆ
ಮನದಿ ನೋವನು ಕಂಡು ತುಡಿಯಲೆ
ಮನಕೆ ತಿಳಿದಿಹ ಕಷ್ಟ ತಿಳಿಯುತ ನಿನ್ನ ಸೇರುವೆನು
ಮನಸ ಹುಳುಕನು ತೊರೆದು ಹೋಗಲೆ
ಮನಸ ಒಳಗಡೆ ಭಜನೆ ಮಾಡಲೆ
ಮನವ ತೆಗಳುತ ದೂರ ಸರಿಯುತ ನಿನ್ನ ಸೇರುವೆನು
ತಿನಿಸು ಬಂದರೆ ದೇಹ ಬೆಳೆವುದು
ತಿನುವ ಹಂತದಿ ಪಾಚಿ ಮೆತ್ತಲು
ತನುವ ದೂರಲು ಮುಂದೆ ಬಾಗುತ ನಿನ್ನ ಸೇರುವೆನು
ಕನಸು ಕಾಣುವ ಹಂತ ದಾಟಲು
ಕನಲಿ ಹೋದೆನು ಮೌನ ತೊರೆಯಲು
ನನಸು ಸಿಗದೆಲೆ ಮೇರೆ ಮೀರಲು ನಿನ್ನ ಸೇರುವೆನು
ಚಿಂತೆ ಸೋತಿದೆ ಮನವು ಬಿರಿದಿದೆ
ಕಂತೆ ಸಂತೆಯ ನಡುವೆ ಸೇರಿದೆ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
April 15, 2025
ಬಂತು ಬಂತು ವಿಷುವು ನೋಡು
ನಮ್ಮ ಹಬ್ಬ ವಿಷ್ಣು ಕನಿಯ ಹಾಡು
ಸೂರ್ಯನಿಂದು ಬರುವನು ಮೇಷರಾಶಿಗೆ
ವಿಷು ಕಣಿಯ ಹೆಸರಲಿ ಸಂಕ್ರಾತಿಗೆ!
ಬೆಳಗನೆದ್ದು ಮೀಯುತ
ಸೂರ್ಯನಿಗೆ ನಮಿಸುತ
ಸೌರಮಾನ ಯುಗಾದಿಯ
ಹರುಷದಿಂದ ಆಚರಿಸುತ
ಮಡಿಯನುಟ್ಟು ಪೂಜೆ ಮಾಡಿ
ಭಕ್ತಿಯಿಂದ ಕೈಯ ಮುಗಿಯುತ
ಸಾತ್ವಿಕ ಆಹಾರ ಸೇವನೆಯ ಮಾಡುತ
ಮನೆಯಲ್ಲೇ ದಿನವೆಲ್ಲ ಇರುತ!
ಉರುಳಿಯನ್ನು ತೆಗೆದುಕೊಂಡು
ದವಸ ಧಾನ್ಯ ತುಂಬಿಕೊಂಡು
ಬೆಳೆದ ಬೆಳೆಗಳನೆಲ್ಲ ಇಟ್ಟು
ಮೇಲೆ ಇರಿಸಿ ಕನ್ನಡಿಯು
ಧಾರ್ಮಿಕ ಪಂಚಾಂಗ ಇಟ್ಟು
ದೇವರ ಮುಂದೆ ಇಡುವೆವು…
ಲೇಖಕರು: ಬರಹಗಾರರ ಬಳಗ
ವಿಧ: ಕವನ
April 14, 2025
ನನ್ನೊಲವೆ ನೀನಿರದೆ
ಮುರಳಿ ಗಾನವು ಹೊಮ್ಮದೆ
ಕೃಷ್ಣನಂತೆಯೆ ಕಾದು ಕುಳಿತಿಹೆ
ರಾಧೆ ರಮಣಿಯೆ ಎಲ್ಲಿಹೆ
ಮಧುರ ಭಾವವು ಚಿಮ್ಮಿ ಹೊಮ್ಮಿದೆ
ಮನಸು ಬಾರದೆ ಯಾಮಿನಿ
ಕೈಯ ಮುಗಿಯುತ ಬೇಡಿ ಕಾಡಿದೆ
ಸನಿಹ ನಿಲ್ಲೆಯ ಭಾಮಿನಿ
ಬಾನ ತಾರೆಯ ಅಂದ ಚೆಂದಕೆ
ನಿನ್ನ ಹೋಲಿಕೆ ಮಾಡಿಹೆ
ಮಿನುಗುವಂದದ ರಶ್ಮಿಯಂತೆಯೆ
ಮೊಗದ ಕಣ್ಣದು ಎಂದಿಹೆ
ಹೃದಯದೊಲವಿನ ಸವಿಯ ಮಾತನು
ಆಲಿಸುತ ನೀ ಬಾರೆಯಾ
ಪುಟ್ಟ ತನುವಲಿ ನೆಲೆಯ ನಿಲ್ಲುತ
ಮನಕೆ ಸಂತಸ ತಾರೆಯಾ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಲೇಖಕರು: ಬರಹಗಾರರ ಬಳಗ
ವಿಧ: ಕವನ
April 13, 2025
ಗಝಲ್ ೧
ಉಸಿರ ಕೊಡುತ ನಮಗೆ ಬದುಕ ನೀಡಿದ್ದೇ ಗಾಳಿ
ಬಿರುಗಾಳಿ ಬೀಸಿ ಬಾಳ ಮಣ್ಣು ಮಾಡಿದ್ದೇ ಗಾಳಿ
ಸಂಜೆಗೆ ಗಿಡಮರದ ಅಲುಗಾಟ ಜೋರಾಯಿತೇಕೆ
ಈ ಸುಂದರ ನೋಟಕ್ಕೆ ಸಂಗೀತ ಹಾಡಿದ್ದೇ ಗಾಳಿ
ಬನದ ಕಲರವದ ನಡುವೆಯೇ ಹುಡುಗಾಟವು
ಮುರಳಿಯ ಮೋಹದ ನಾದವ ಕಾಡಿದ್ದೇ ಗಾಳಿ
ಜಾತಿ ಬಣ್ಣದ ನಡುವೆಯೇ ಸುಣ್ಣವ ಮೆತ್ತಬೇಡ
ತನುವ ಬೆಸೆದಿರುವ ಪ್ರೀತಿಯನು ನೋಡಿದ್ದೇ ಗಾಳಿ
ಚಿಂತೆಯಾ ಮನದಲಿ ಬಯಕೆ ಇದೆಯಾ ಈಶ
ಮತ್ಸರದ ಮನವ ಇಂದು ಹೊರಗೆ ದೂಡಿದ್ದೇ ಗಾಳಿ
***
ಗಝಲ್ ೨
ಹಸಿರು ಸೀರೆಯ ಉಟ್ಟು ,ಮಲಗಿಹಳು ದಾತೆ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
April 12, 2025
ಯಾವ ಗಳಿಗೆಗೆ ನಾನು ಬಂದೆನೊ
ಯಾವ ಬೆಳಕನು ಕಂಡು ನಿಂದೆನೊ
ಯಾವ ಸುಖವನು ಉಂಡು ಬೆಳೆದೆನೊ
ಯಾವ ನೆಲದಲಿ ಹೇಗೆ ಇರುವೆನೊ
ಯಾರ ಸ್ನೇಹವ ಮಾಡಿ ನಲಿದೆನೊ
ಯಾರ ಬಂಧಕೆ ಸೋತು ಹೋದೆನೊ
ಯಾರ ಜೀವಕೆ ಕೈಯ ಹಿಡಿದೆನೊ
ಯಾರ ಸಂಗದಿ ಪ್ರೀತಿ ಪಡೆದೆನೊ
ಯಾರು ಯಾರಿಗೊ ಮೋಡಿ ಆದೆನೊ
ಯಾರು ಕಾಣದ ನೆಲಕೆ ಸೋತೆನೊ
ಯಾರು ಕೇಳದ ಪದಕೆ ಕುಣಿದೆನೊ
ಯಾರು ಬಾರದ ಸವಿಗೆ ಕಾದೆನೊ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಲೇಖಕರು: Vinutha B K
ವಿಧ: ಕವನ
April 11, 2025
ಮೂಡಣದ ನೇಸರ ನೋಡಲು ಬಲು ಚಂದ
ರವಿರಾಯ ಕತ್ತಲೆಯ ಮರೆಮಾಡಿ ಹೊರಬಂದ
ಪದೇ ಪದೇ ಪ್ರೇಮವಾಗುವ ಪ್ರೀತಿಯ ಕಂದ
ಅದಕೆ ಕಾರಣ ನಿನ್ನ ಪ್ರೀತಿ ಸ್ನೇಹ ಸಂಬಂಧ
ಅರೆಗಳಿಗೆ ನಿಂತರೆ ನೀ ಕೊಡುವೆ ವಿಟಮಿನ್ ಸತ್ವ
ನಿನ್ನ ಬಗ್ಗೆ ಅರಿಯೇ ಬೇರೊಂದು ಬೇಡ ತತ್ವ.
ಬೋ. ಕು. ವಿ
ಚಿತ್ರ ಕೃಪೆ: ಸುನಿಲ್ ಸರ್
ಲೇಖಕರು: ಬರಹಗಾರರ ಬಳಗ
ವಿಧ: ಕವನ
April 11, 2025
ಪ್ರೀತಿ ಹಚ್ಚೆಯನು ಹಚ್ಚಿಸಿಯೊಳಗೆ ಹೋದೆಯೋ
ಮನಕೆ ಒಲವನು ತುಂಬಿಸಿಯೊಳಗೆ ಹೋದೆಯೋ
ಸಾಗರವೆಂಬ ಮನದ ಅಲೆಯಲ್ಲೀಗ ನಲಿಯುತ್ತಿಹೆ ಯಾಕೆ
ಗುಡಿ ಗುಡಿಯಲ್ಲಿರುವ ಘಂಟೆಯೊಳಗೆ ಹೋದೆಯೋ
ಕಾಡಿನಲ್ಲಿರುವ ನಡುವಿನ ದಾರಿಯೊಳಗೆ ನಡೆದು ಹೋಗು
ಆಗಸದಲ್ಲಿಹ ಮೋಹಕ ಚಂದಿರನೊಳಗೆ ಹೋದೆಯೋ
ಮಳೆಹನಿಯ ನೀರಾಟದ ಆರ್ಭಟದೊಳಗೆಯೇ ಮೆಲ್ಲ ಸಾಗು
ಮರವನೇರುತ ಗೆಲ್ಲನಿಡಿದು ಕನಸಿನೊಳಗೆ ಹೋದೆಯೋ
ದೀಪವಿರುವ ಕೋಣೆಯಲ್ಲಿ ಸ್ಥಳವನಿಡಿದು ಕುಳ್ಳಿರುತ ಹಾಡು
ಚಿಲಕವಿರದ ಮನೆಯ ಪಡಸಾಲೆಯೊಳಗೆ ಹೋದೆಯೋ
ಸುಪ್ತವಿರುವ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
April 10, 2025
ಬೇಜಾರು ಮಾಡದ್ದೆ ಹುಡುಗ ಅಕ್ಕೊ ಹೇಂಗೆ
ಒಪ್ಪಿಗೆ ಕೊಡು ಓ ಕೂಸೆ ಒಪ್ಪಕ್ಕನ ಹಾಂಗೆ
ಅಬ್ಬೆ ಮೇಲಿನ ಪ್ರೀತಿ ಅಪ್ಪನಾ ಜೊತೆಗಾರ್ತಿ
ಎರಡನ್ನು ನೆನೆಸ್ಯೊಂಡರೆ ಎನ್ನ ಬಾಳಿಂಗೆ ಸ್ಪೂರ್ತಿ
ತವರು ಮನೆಯ ಹಕ್ಕು ಬೇಡ ಹೇಳಿದ್ದೆ ನೀನು
ಬದುಕಲೀ ಬಿಡಲಣ್ಣ ಮನೆ ಮಂದಿ ಜೇನು
ಊರ ಮಂದಿಯ ಜೊತೆಗೆ ಸವಿಯಾಗಿ ಬಾಳಿದ್ದೆ
ಗಂಡನಾ ಮನೇಲಿ ಒಟ್ಟಿಂಗೆ ಇರೆಕು ಹೇಳಿದ್ದೆ
ತಪ್ಪುಗಳ ಮಾಡದ್ದೆ ಒಪ್ಪಿಯ ಕೈಹಿಡಿದು ಹಾಡು
ಗುಣವಂತೆಯ ಹೊಗುಮನೆಯು ಖುಷಿಯಿಪ್ಪ ಬೀಡು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ:…