ಕವನಗಳು
ಲೇಖಕರು: ಬರಹಗಾರರ ಬಳಗ
ವಿಧ: ಕವನ
April 26, 2025
ಅಲ್ಲಲ್ಲಿ ಹೀಗೆಯೇ ನೀನು ಸುತ್ತಬೇಡ ಹೇಳುವವರು ಇಲ್ಲ
ಜಲ್ಲಿಗುದ್ದಿ ಬದುಕಿದರು ಯಾರೊಬ್ಬರೂ ಕೇಳುವವರು ಇಲ್ಲ
ಪರಿಸ್ಥಿತಿ ನೋಡಿ ಮಣೆಹಾಕುವವರು ಎಲ್ಲಿದ್ದರೇನು ಈಗ
ದುಡಿಮೆಯ ಕೈಯಿಂದು ಖಾಲಿಯೋ ಬರುವವರು ಇಲ್ಲ
ಸೋಲುವುದರ ನಡುವೆಯೇ ಬದುಕುವುದರ ಕಲಿಯುತಿರು
ಬಾಳಿನ ಒಳಗಿರುವ ಈ ಬುತ್ತಿಯೊಳಗೇ ಇರುವವರು ಇಲ್ಲ
ಉಪವಾಸ ಬಿಡಲೆಂದಿಗೂ ಹನಿನೀರದು ಇದ್ದರೆ ಸಾಕಲ್ಲವೆ
ವನವಾಸದ ಜೊತೆ ಜೊತೆಯಲ್ಲಿಯೇ ಹಾಡುವವರು ಇಲ್ಲ
ಈಗ ಮಾಡಿಟ್ಟರುವುದ ನಾನೊಬ್ಬನೇ ಉಣ್ಣಬೇಕು ಈಶ
ಇಷ್ಟವಿದ್ದರೂ ನನ್ನಯ ಆಡೊಂಬಲಕೆ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
April 25, 2025
ಯಾವ ಕರುಣೆಯ ನೆಲೆಯ ಕಂಡೆನೆ
ಕಾವನೆಂಬುದ ತಿಳಿದು ನಡೆದೆನೆ
ಭಾವ ದುಂದುಬಿ ಮೊಳಗಿ ಸಾಗಲು ಹರುಷಗೊಂಡೆನು ಬುವಿಯೊಳು
ನೋವ ಮರೆಯುತ ಕುಳಿತೆ ಹೀಗೆಯೆ
ದೇವ ಸನ್ನಿದಿ ಕೈಯ ಪಿಡಿಯಲು
ನಾವೆ ತೀರಕೆ ಸಾವದಾನದಿ ಬಂದು ನಿಂತಿದೆ ನೋಡೆಯ
ಮನದಿ ಮರ್ಕಟ ನಾಟ್ಯವಾಡುತ
ತನುವಿನೊಡಲಲಿ ವಿಷವ ಕಕ್ಕುತ
ಬನದ ನಡುವೆಯೆ ಸುಮದ ಕೊರಳನು ಹಿಚುಕಿ ಹಾಕುತ ನಡೆದರು
ಜನರ ತಿಳಿವನು ಮೆಟ್ಟಿ ನಿಲ್ಲುತ
ಬಣಕೆ ಪಂಡಿತ ತಾವೆಯೆನ್ನುತ
ಸನಿಹಯಿರುವನ ದೂರ ತಳ್ಳುತ ತಾವೆ ಹಿರಿಯರುಯೆನ್ನುತ
ಅತಿಯುಯೆನಿಸಿತು ಬರೆವ ರೀತಿಯು…
ಲೇಖಕರು: Prabhakar Belavadi
ವಿಧ: ಕವನ
April 24, 2025
ಸ್ಫೋಟಕ ಸುದ್ದಿ! ಆ ದೇಶದ ಒಬ್ಬ ಗಗನಯಾತ್ರಿ
ಚಂದ್ರಮನ ಮೇಲೆ ಕಾಲಿಟ್ಟು ನಡೆದನಂತೆ ಈ ರಾತ್ರಿ
ಅಯ್ಯೋ! ಸಧ್ಯ ನಾನಾಗಬೇಕಿಲ್ಲ ಅಂತಹ ಯಾತ್ರಿ
ಜೊತೆಯಲ್ಲೇ ಇದ್ದಾಳೆ ಹುಣ್ಣಿಮೆ ಚಂದಿರೆ ಗಾಯತ್ರಿ
ಲೇಖಕರು: Prabhakar Belavadi
ವಿಧ: ಕವನ
April 24, 2025
ಅಳುಕದಿರು ಮನಸೇ, ನೋವೆಂದು ನೀನು
ಹೊತ್ತು ತರಬಹುದು ಕೆನೆಹಾಲು ಸವಿಜೇನು
ನೋವುಗಳ ಹೆಣೆದು ದುಪ್ಪಟ್ಟ ಮಾಡಿಬಿಡು
ಹೊದಿಕೆಯಲ್ಲವದು ಅನುಭವಗಳ ಗೂಡು
ಲೇಖಕರು: ಬರಹಗಾರರ ಬಳಗ
ವಿಧ: ಕವನ
April 24, 2025
ಏನೇ ಬರಲಿ ಒಗ್ಗಟ್ಟಿರಲಿ ಎಂದವರಾರೂ
ಒಮ್ಮತದಿಂದಿಲ್ಲ ಇಲ್ಲಿ
ತಮ್ಮೊಳಗಿನ ಪ್ರತಿಷ್ಠೆಯ ಅಮಲು ಪರಾಕಾಷ್ಠೆಯನ್ನು
ತಲುಪಿ ತಾಂಡವವಾಡುವಾಗ.
ಗೃಹಿಣಿಯೊಬ್ಬಳ ತಾಳಿಯನು ಪರೀಕ್ಷೆಗಾಗಿ ತೆಗೆಸೋ
ವ್ಯವಸ್ಥೆಯಲಿ ನಾವು ಮೌನವಾಗಿದ್ದೇವೆ
ಅವಳು ನಮ್ಮ ಕುಲವೇ? ಜಾತಿಯೇ? ಧರ್ಮವೇ?
ಅವರವರು ನೋಡಿಕೊಳ್ಳಲಿ ಬಿಡಿ ನಮಗೇಕೆ
ಮುಟ್ಟಾದ ಮಹಿಳೆಯನು ಹೊರಗಿಟ್ಟ ಸಮಾಜ
ಸಮರ್ಥಿಸುವ ಮನುವಾದವನು ಉಳಿಸಿಕೊಂಡಿದೆ
ಜನಿವಾರ ಜಗಳದಲಿ ತಲ್ಲೀನರಾದ ಜನಮಂದೆ
ಹಿಜಾಬಿನ ಅಸ್ಮಿತೆಯ ಕತ್ತು ಹಿಸುಕಿದೆ..
ರಾಜಕೀಯ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
April 23, 2025
ಕನ್ನಡಿಯಲ್ಲಿ ನನ್ನ
ತಲೆಯ ನೋಡಿಕೊಂಡೆ
ಕೂದಲು ಬೆಳ್ಳಿಯ ತರಹ
ಬೆಳ್ಳಗಾಗಿತ್ತು
ಮುಖವನ್ನು ನೋಡಿದಾಗ
ಸುಕ್ಕುಗಟ್ಟಿತ್ತು, ಕಣ್ಣು ಒಳಸೇರಿತ್ತು
ಚರ್ಮ ಕಪ್ಪಾಗಿ ತುಟಿ ಒಣಗಿತ್ತು
ಕೈಗಳು ತ್ರಾಣವಿಲ್ಲದೆ ಜೋತು ಬಿದ್ದಿದ್ದವು
ಹೊಟ್ಟೆ ಊದಿತ್ತು ಕಾಲುಗಳು ಬೆಂಡಾಗಿ
ನೋವೆಂದು ಕೂಗುತ್ತಿತ್ತು
ಸೊಂಟವು ತ್ರಾಣವೇ ಇಲ್ಲದಂತೆ ಬಿದ್ದುಕೊಂಡಿತ್ತು
ಶರೀರದ ಪ್ರತಿಯೊಂದು ಜಾಗವೂ
ಮುಟ್ಟಿದರೆ ಮುನಿಯಾಗಿತ್ತು
ಆದರೆ ಆದರೆ ಹೃದಯ ಮಾತ್ರ ಮೊದಲಿನಂತಿತ್ತು
ಪ್ರೀತಿಯಿಂದ ನನ್ನವರು ಎಲ್ಲೆಂದು ಕೂಗುತ್ತಿತ್ತು…
ಲೇಖಕರು: ಬರಹಗಾರರ ಬಳಗ
ವಿಧ: ಕವನ
April 22, 2025
ಗಝಲ್ ೧
ಹರಸಿ ಸಾಗಿರಿ ಹಿರಿಯರೆಲ್ಲರು ಬದುಕ ಕಟ್ಟಿಹ ಒಲವೊಳು
ನಮಿಸಿ ಬಾಗಿರಿ ಕಿರಿಯರೆಲ್ಲರು ಉಸಿರ ತಟ್ಟಿಹ ಒಲವೊಳು
ಕೊಳೆಯ ತೊಳೆಯುತ ಸಾಗಿರೆಲ್ಲರು ಮತ್ತೆ ಸಂಶಯವೇತಕೊ
ವಿಷಯ ಕಲಿಯುತ ಬಾಳಿರೆಲ್ಲರು ಜ್ಞಾನ ಇಟ್ಟಿಹ ಒಲವೊಳು
ನಿಶೆಯ ಹೊಂದದೆ ಬದುಕಿರೆಲ್ಲರು ವಿಷಮ ಚೈತ್ರವು ಏತಕೆ
ವಶಕೆ ಸಿಗದೆ ದುಡಿಯಿರೆಲ್ಲರು ಬದುಕ ಕೊಟ್ಟಿಹ ಒಲವೊಳು
ಕನಸ ದೇಶದಿ ನೋಡಿಯೆಲ್ಲರು ನನಸು ಬಾರದೆ ಇರುವುದೆ
ಹಸಿರ ಲೋಕದಿ ಹಾಡಿರೆಲ್ಲರು ಜೀವ ಹುಟ್ಟಿಹ ಒಲವೊಳು
ಭವದ ಸುತ್ತಲು ನೋಡಿರೆಲ್ಲರು ಮನದಿ ಸವಿಯಿದೆ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
April 21, 2025
ನಾವು ಬರೆದದ್ದೇ ಸಾಹಿತ್ಯ ಅಂದಿದ್ದಾರೆ ಗುರು
ಓದುಗರೆಲ್ಲರೂ ದಡ್ಡರೆಂದು ತಿಳಿದಿದ್ದಾರೆ ಗುರು
ಬರೆದುದಲ್ಲಿ ಒಂದು ನೀತಿಯೂ ಇಲ್ಲವು, ಯಾಕೆ ?
ಒಂದೇ ಸಮಾಜದಲ್ಲಿ ಎಲ್ಲರೂ ಬೆರೆತಿದ್ದಾರೆ ಗುರು
ಸಾಹಿತ್ಯದ ಪೂರ್ಣ ನಿಯಮವನ್ನು ಕಲಿತಿಲ್ಲವೇ ?
ಕವಿಗಳು ಕಾವ್ಯದಾ ಕಲೆಯ ಮರೆತಿದ್ದಾರೆ ಗುರು
ಈಗ ಕ್ಷುಲ್ಲಕ ಕಾರಣಗಳಿಗೆ ನಾವೇ ದೂರುದಾರರು
ಇತಿಹಾಸವನ್ನೇ ಬದಲಿಸಲಿಂದು ಕಾದಿದ್ದಾರೆ ಗುರು
ಬರವಣಿಗೆ ತಿಳಿಯದವರ ಕೈಯಲ್ಲಿಯೇ ಬರಹ ಈಶ
ಹೀಗಿರುವವರ ಬರಹಕ್ಕೆ ಓದುಗರು ಬೆಂದಿದ್ದಾರೆ ಗುರು
-ಹಾ .ಮ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
April 20, 2025
ಗಝಲ್ ೧
ಏಕೆ ಕಾಡುತಿರುವೆ , ಸಖಿಯೆ ?
ನೋವ ನೀಡುತಿರುವೆ ಸಖಿಯೆ ?
ಕಷ್ಟದಾ ಕಾರ್ಮೋಡ ,ಕವಿದಾಗ
ಬಿಟ್ಟೇಕೆ ಓಡುತಿರುವೆ ಸಖಿಯೆ ?
ಏರಿದಾ , ಮದಿರೆಯ ಮತ್ತಿನಲಿ
ಅದೇನ ,ಮಾಡುತಿರುವೆ ಸಖಿಯೆ ?
ಅರಳಿದ ,ಹೂವಂತೆ ನಳ ನಳಿಸಿ
ಕ್ಷಣದಿ, ಬಾಡುತಿರುವೆ ಸಖಿಯೆ
ಸಾಕು ಮಾಯೆಯ ಆಟ
ನಿಲ್ಲಿಸು ,ಬೇಡುತಿರುವೆ ಸಖಿಯೆ
***
ಗಝಲ್ ೨
ಒಬ್ಬನಿಗೆ ಹೆದರಿ ಬದುಕುವುದು ಸ್ವಾತಂತ್ರ್ಯವೆ ?
ನಾಯಕನ ಕಾಲಕೆಳಗೆ ತೂರುವುದು ಸ್ವಾತಂತ್ರ್ಯವೆ ?
ಬರಹಗಾರ ಯಾರದೋ ಮರ್ಜಿಗೆ ಬರೆಯುವುದು ಯಾಕೆ
ನಾನೇ ಎನ್ನುವವನ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
April 19, 2025
ಯಥಾ ದುಡಿಮೆ ತಥಾ ಫಲಮೇ...
ಈ ದೊಡ್ಡ ದೊಡ್ಡ
ಸೆಲೆಬ್ರಿಟಿಗಳೆಲ್ಲಾ-
ಮಟ್ಕಾ, ಜೂಜು
ಗುಟ್ಕಾಗಳಿಗೇ
ಜಾಹೀರಾತುಗಳ
ನೀಡುವರಲ್ಲಾ...?
ಈ ರೀತಿ
ತಿಂದ ಹಣ
ಜೀರ್ಣವಾಗದೆ-
ತೊಂದರೆಗಳಲೇ
ಬಳಲಿ;ಕೊರಗಿ
ನಿರ್ಗಮಿಸುವರಲ್ಲ!
***
ಮರೆಯಾದ ದೇಶಪ್ರೇಮಿ ನಟ ಮನೋಜ್...
ದೇಶಭಕ್ತಿ
ಸಿನಿಮಾಗಳನು
ಭಾರತೀಯ
ಚಿತ್ರರಂಗಕೆ
ನೀಡಿ ಮೆರೆದ-
ಮನೋಜ್ ಕುಮಾರ್...
ಮತ್ತೊಮ್ಮೆ ಹುಟ್ಟಿ-
ಇಂದಿನ ಯುವಕರ
ಎದೆಯೊಳಗೆ
ದೇಶಭಕ್ತಿಯ
ಕಿಚ್ಚನೆಬ್ಬಿಸು
ಓ ಭಾರತ್ ಕುಮಾರ್!
***
ತಾಯಿ ಮತ್ತು ಹೆಂಡತಿ
ತಾಯಿಯನು
ಶೇಕಡಾ …