ಕವನಗಳು

ವಿಧ: ಕವನ
May 06, 2025
ಹಗೆಯೊ ಪಗೆಯೊ ಬಗೆಯ ಪೊಗೆಯೊ ದಗೆಯ ಕೊಡುವ ತಂತ್ರ ಹೊಸತು  ತೆಗಳೊ ಪೊಗಳೊ ಹಗಲೆ ರಾತ್ರಿ ತೆಗೆಯ ಬಹುದೆ ನವ್ಯ ಹಾಡು   ಕಲೆಯ ಕಂಬ ಚೆಲುವು ದಿಂಬು ಮಲಗೆ ಸವಿಯ ನಿದ್ರೆ ಮನದಿ  ಹಲವು ಚಿಂತೆ ಹೊಲಸು ಕಂತೆ ಜಲದ ಹುಳುಕು ಕಣ್ಣ ಸರದಿ   ಮನೆಗೆ ಬರದ ಮನದ ಮಾತು ತನುವ ಜೊತೆಗೆ ಹೋಗಿ ಗೆಲಲು ಜನನ ಮರಣ ಹನನ ಸೃಷ್ಟಿ ತನನ ಬಗೆಗೆ ವಿಶ್ವ ಬರಲು   -ಹಾ ಮ ಸತೀಶ ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ 
ವಿಧ: ಕವನ
May 05, 2025
ವಿಶ್ವಮಾನವ ಸಂದೇಶ  ಧರ್ಮವಿರಲಿ ಅಂತರಂಗದಲಿ; ಸೌಹಾರ್ದತೆಯಿರಲಿ ಬಹಿರಂಗದಲಿ ಅಂತರಂಗ-ಬಹಿರಂಗದ ಬೆಸುಗೆಯಿರಲಿ...   ಈ ಭೂಮಿ- ಎಲ್ಲರ ಮನೆ ಇಲ್ಲಿದೆ ಎಲ್ಲರಿಗೂ ಸಮಾನ ಹಕ್ಕು ವಿಶ್ವಮಾನವ ಸಂದೇಶ ಎಲ್ಲರೆದೆಯಲಿರಲಿ! *** ಅಕ್ಷಯ ತೃತೀಯ  ಶ್ರೀಕೃಷ್ಣ- ದ್ರೌಪದಿಗೆ ಕೊಟ್ಟ ಪಾತ್ರೆಯಿಂದ ಆಗಿದ್ದು  ಅಕ್ಷಯ...   ಈಗ ಏರುತ್ತಿರುವ ಬಂಗಾರವ ಕೊಳ್ಳಹೋದರೆ- ನಿಮ್ಮ ಹಣವೆಲ್ಲಾ ಪೂರ್ಣ ಕ್ಷಯ! *** ಇದು ಕಣಣ್ಣಾ ಭಾರತೀಯ ಸೈನ್ಯದ ತಾಕತ್ತೂ… ಮಾಡಿದ್ದುಣ್ಣೋ ಮಹರಾಯ- ಸಿಪಾಯಿ ದಂಗೆ ಪಾಕ್ ಗೆ ಶಾಕ್...  …
ವಿಧ: ಕವನ
May 04, 2025
ಆ ಒಂದು ಕ್ಷಣ ಎಲ್ಲವನ್ನೂ ಬಿಟ್ಟು ನಿನ್ನ ಹಿಂದೆ ಹಿಂದೆಯೇ ಬಂದು ಬಿಟ್ಟೆ  ನಿನ್ನ ಸೌಂದರ್ಯ ಕಣ್ಣಿನಾಳದ ನೋಟ ಬಹು ಮಾಟ ತಡೆಯಲಾರದೆ ಓಡಿ ಬಂದೆ  ಅದೆಷ್ಟು ಸಮಯದಿಂದ ನಿನ್ನ ನೋಡಿದೆ ಅರಿವೇ ಆಗಿರಲಿಲ್ಲ ಆಗುವ ಕಾಲವೂ ಅಲ್ಲ ನಾನು ನೋಡುತ್ತಲೇ ಇದ್ದೆ ನಿನ್ನ ಮುಗಳು ನಗುವ ನಿನ್ನಮೈ ಮಾಟದ ಎದೆ ಹರವ ನಿನ್ನ ಮುಂಗುರುಳ  ಸವಿ ಹೂಟವ ತಡೆಯಲಿಲ್ಲ ಕೇಳಿದೆ ನೀನಾರು ? ನೀ ಹೇಳಿದ ಉತ್ತರ ನಾ ಕನ್ನಡ ಕುವರ   ಒಲವೇ ಹೀಗೆ ಒಮ್ಮೆ ಕೈ ಹಿಡಿದರೆ ಸಧ್ಯಕ್ಕೆ ಬಿಡುವ ಪ್ರಶ್ನೆಯೇ ಇಲ್ಲ ಹಾಗೆಯೇ ಆಯಿತು ಕೈ ಕೈ…
ವಿಧ: ಕವನ
May 03, 2025
ನಿನ್ನಂಥ ರಂಗದೊಳು ಮೌನ ಯಾಕೆಲೆ ಒಲವೆ ನಾನಿಲ್ಲವೇನೇ ನಿನ್ನ ಮಗುವೆ ಕಳೆದ ನೋವುಗಳೆಲ್ಲ  ನನ್ನಲ್ಲೂ ಇಹುದಲ್ಲೆ  ಸಂಜೆಗತ್ತಲೆ ನಡುವೆ ಯಾಕೆ ಅಳುವೆ    ಸಖನಾಗಿ ಸವಿಯಾಗಿ  ನಿನ್ನ ತೋಳಲೆ ಮಲಗೆ  ಹರುಷ ಹೊನಲಿತ್ತು ನಮ್ಮ ಜೊತೆಗೆ  ಇಂದು ಏತಕೆ ಹೀಗೆ  ಮೌನ ತೊರೆಯಾಗಿರುವೆ ಬಾಳ ಕನಸಿನಲಿ ಮುರುಟಿ ಮಲಗೆ   ಮಾತು ಮಾತಿನ ನಡುವೆ  ಗುಡುಗಾಟ ಹುಡುಕಾಟ  ಹುಚ್ಚಾದ ಮನವನ್ನು ಸಂತೈಸುವೆ ಕಾಲ ಕಾಲದ ಎಡೆಯೆ  ಮೌನ ಮುಸುಕಿನ ಆಟ ಹೃದಯವ ಹಿಂಡಿದಾ ನೋವಲ್ಲಿಹೆ   ನಿನ್ನ ಚಿಂತೆಯೊಳಿಂದು  ನನ್ನ ವೇದನೆ ನೂರು …
ವಿಧ: ಕವನ
May 02, 2025
ಮನಸ್ಸಿನಾಳದ ನೋವುಗಳಿಗೆ ಮುಲಾಮು ಹಚ್ಚುವರಿದ್ದರೆ ಬನ್ನಿ ಅದು ಪ್ರೀತಿಯಿಂದ ಆಗಬೇಕೇ ಹೊರತು ದ್ವೇಷದಿಂದಲ್ಲ    ಮನೆ ಮನದಂಗಳದಲ್ಲಿ ಮಹಾಮಾರಿ ವಕ್ಕರಿಸಿದೆ ನೋಡು ಕೊರೋನಾಕ್ಕಿಂತಲೂ ಭಯಂಕರ ಮನುಷ್ಯರ ಒಳಗೆ ಪ್ರೀತಿಯಿಲ್ಲದ್ದು ಕಾರಣವೂ ಇಲ್ಲದಿಲ್ಲ ? ಮನುಷ್ಯ ಸಂಘಜೀವಿ !   ಹುಟ್ಟುವಾಗ ಮಗು ಅಮ್ಮನ ಅಳಿಸಿ ಹುಟ್ಟುತ್ತದೆ ಅದೇ ಸಾಯುವಾಗ ತಾನೇ ಅತ್ತು ಸಾಯುತ್ತದೆ ಬದುಕೇ ಒಂದು ವಿಚಿತ್ರ ಸಂತೆಯಿದ್ದಂತೆ ಅರಿತುಕೊಂಡರೆ ಅರಿವಿನ ಬಾಳು ಸರಾಗ ! ತರಿದುಕೊಂಡರೆ ಅಮಾವಾಸ್ಯೆಯ ನಗುವಿನಂತೆ ದುಃಖಗಳ ಸಾಗರ…
ವಿಧ: ಕವನ
May 01, 2025
ಚೆಲ್ಲಾಟ-ಹುಚ್ಚಾಟ  ಈ ರಾಜಕೀಯದವರು ಜನರ ಧಾರ್ಮಿಕ ಭಾವನೆಗಳೊಂದಿಗೆ ಆಡುತಿರುವರು ಚೆಲ್ಲಾಟ...   ಅಯ್ಯೋ ಅಧಿಕಾರಿಗಳೇ- ನೀವೂ ತುಳಿಯುತಿರುವಿರಾ ಪವಿತ್ರ ಧರ್ಮದ ತೋಟ! *** ಧರ್ಮಾಂಧ ರಕ್ಕಸರು  ಧರ್ಮದ ಹೆಸರ ಹೇಳಿ ಅಮಾಯಕರ ಕೊಲ್ಲುವ ಉಗ್ರಗಾಮಿ ಉಗ್ರರೇ...   ನಿಮ್ಮಅಂತ್ಯ ಇದಕಿಂತಲೂ ಭೀಕರ ಎಂಬುದ ತಿಳಿಯಿರಿ- ಆಧುನಿಕ  ಅಮಾನವೀಯ ರಕ್ಕಸರೇ! *** 'ಡಾ. ರಾಜ್ ಕುಮಾರ್' ಹುಟ್ಟು ಹಬ್ಬದ ಶುಭಾಶಯಗಳು...        ಮತ್ತೆ  ಹುಟ್ಟಿ ಬನ್ನಿರಿ            ಓ ವರನಟರೇ...       ನಟಸಾರ್ವಭೌಮರೇ…
ವಿಧ: ಕವನ
April 30, 2025
ಗಝಲ್ ೧ ಸಾಹಿತ್ಯದ ಜೊತೆಗೆ ಕವಿಯು ಸಾಗಬೇಕಾದರೆ ಛಲವು ಬೇಕು ಜೀವಿಗಳು ಬುವಿಯಲ್ಲಿ ಬದುಕಬೇಕಾದರೆ ಜಲವು ಬೇಕು   ಜೀವನದ ದಾರಿಗಳಲಿ ಹಲವು ಕವಲುಗಳಿವೆ ಗೊತ್ತಿಲ್ಲವೆ ಸಾಧಿಸುವ ಗುರಿಗಳಲಿ ಹೋಗಬೇಕಾದರೆ ಗೆಲುವು ಬೇಕು   ಮೌನದ ಗುಣವದು ಕೆಲವೊಮ್ಮೆ ಪ್ರಯೋಜನಕ್ಕೆ ಬಾರದು ದ್ವೇಷದ ನುಡಿಯದುವು ನಿಲ್ಲಬೇಕಾದರೆ ಒಲವು ಬೇಕು   ಬದುಕಿನ ಮುಖಪುಟವು ಸತ್ಯವನ್ನೇ ನುಡಿಯುತ್ತಾ ಸಾಗಲಿ ವಾಸ್ತವತೆಗಳ ನಡುವೆ ನಡೆಯಬೇಕಾದರೆ ಬಲವು ಬೇಕು   ಚಿಂತೆಯನ್ನು ಬಿಡುತಲಿ ಚಿಂತನೆಯಲ್ಲೇ ಸಾಗುತಿರು ಈಶಾ ಬಾಳಲಿ…
ವಿಧ: ಕವನ
April 29, 2025
ಗಝಲ್ ೧ ತನುವೊಳಗಿನ ಮಾತು ಕೊನೆಯಾಗುತಿದೆ ದೇವ ಮನದೊಳಗಿನ ಒಲವು ಮರೆಯಾಗುತಿದೆ ದೇವ   ಗಾಳಿ ಮೋಡವ ಕೊಂಡೊಯ್ದ ರೀತಿ ಸರಿಯೇ  ಮೈನವೆಯ ನಡುವೆಯೇ ನೋವಾಗುತಿದೆ ದೇವ   ಒಸರಿಲ್ಲ ಹಸಿರಿಲ್ಲ ಒಣಗಿ ನಿಂತಿರುವ ಗಿಡವು ಧರೆಯೆಲ್ಲ ಹೊತ್ತುತಲಿ ಬರಿದಾಗುತಿದೆ ದೇವ    ಹುಡುಕಿದರು ಒಕ್ಕಿದರೂ ಕಾಳಿಲ್ಲ ಮನೆಯೊಳಗೆ  ಬದುಕಿನಲಿ ಜೀವಿಸಲು ಹೊರೆಯಾಗುತಿದೆ ದೇವ   ಉಸಿರಿರುವ ಜೀವಿಯಲಿ ತ್ರಾಣವಿಹುದೇ ಈಶ ಜೀವ ಜಲ ಅನ್ನವ ನೀಡು ಸಾವಾಗುತಿದೆ ದೇವ *** ಗಝಲ್ ೨ ಬದುಕಿನ ಸವಿಯಾಂಗಿಪ್ಪ ದಾರಿಲಿ ನಡೆಸಲೆಡಿಗೋ ಕೂಸೇ…
ವಿಧ: ಕವನ
April 28, 2025
ಗಝಲ್ ೧ ಜೀತಕ್ಕೆ ಇರುವವರಲ್ಲ ಎಂಬುದನು  ತಿಳಿಯಿರಿ ಈಗ ಸ್ವಾತಂತ್ರ್ಯದ ದಿಕ್ಕಿನೆಡೆಗೆ ಯಾವತ್ತೂ ನಡೆಯಿರಿ ಈಗ   ಪ್ರಾಮಾಣಿಕವಾದ  ನಂಬಿಕೆಗಳೆಲ್ಲ ಹೋದವು ಎತ್ತ ಸಂವಿಧಾನದ ಆಶಯಗಳ ಬಗ್ಗೆಯೇ ಕಲಿಯಿರಿ ಈಗ   ಛತ್ರಿ ಚಾಮರವನು ಹಿಡಿದು ಹೋಗುವಿರಿ ಯಾಕೆ  ನಮ್ಮೊಳಗಿನ ಬಲ ,ಅದೇನೆಂದು ಅರಿಯಿರಿ ಈಗ   ಸಾಮಾನ್ಯರಿಗೆ ದಾರಿ ತೋರಿಸುವರ ಕಡೆ ನೋಡಿರಿ ಹುಮ್ಮನಸ್ಸಿನಲಿ ಒಳ್ಳೆಯವರ ಜೊತೆ ಬೆರೆಯಿರಿ ಈಗ   ಬಡವರಲ್ಲಿಯ ನೋವನರಿಯುತ ಸ್ಪಂದಿಸು ಈಶಾ ಸಹೃದಯಕೆ ಸ್ವಂತಿಕೆಯು ಬಂದಾಗ ಬರೆಯಿರಿ ಈಗ  *** ಗಝಲ್ ೨…
ವಿಧ: ಕವನ
April 27, 2025
ಲೇಡಿ ಸಿಂಗಂ... ಎನ್ ಕೌಂಟರ್- ಪಾಪಿಯ ದೇಹದ ಪರೀಕ್ಷೆ ಮಾಡುವರಂತೆ ಮರಣೋತ್ತರ...   ವಾರೆವ್ವಾ... ನಮ್ಮ ಕರ್ನಾಟಕದ ಲೇಡಿ ಸಿಂಗಂ ಕೊಟ್ಟಿಲ್ಲವೇ  ಕ್ರೂರಿಗೆ ಸೂಕ್ತ ಉತ್ತರ...! *** ಡೋಂಟ್ ಟಚ್... ಧರ್ಮ ಮತ್ತು ಜಾತಿಗಳು- ಧಗಧಗಿಸುವ ಜ್ವಾಲೆಯ ಬೆಂಕಿಗಳೋ ಹುಚ್ಚರಾ...   ರಾಜಕಾರಣಿಗಳೇ- ಇವುಗಳನು ಮುಟ್ಟಿದರೆ ಸುಟ್ಟು ಭಸ್ಮವಾದೀರಿ ಎಚ್ಚರಾ! *** ಅಣ್ಣಾ ರಾಜಕೀಯದವರೇ... ಅವರ ಬುರ್ಖಾ ಇವರ ಜನಿವಾರ ನಿಮ್ಮ ಉಡುದಾರ ತೀರಾ ವೈಯಕ್ತಿಕ ಧಾರ್ಮಿಕ ಪರಂಪರೆಯ ವಿಚಾರ...   ಇವುಗಳನು ನೀವು ಮುಟ್ಟಿ …