ಕವನಗಳು
ಲೇಖಕರು: ಬರಹಗಾರರ ಬಳಗ
ವಿಧ: ಕವನ
May 15, 2025
ಬೆತ್ತಲಾದ ಪಾಕಿಸ್ತಾನ..
ಓ ಕುಟಿಲ
ಪಾಕಿಸ್ತಾನೀ
ಆಡಳಿತವೇ-
ಇಡೀ ಜಗತ್ತಿಗೆ
ನಿನ್ನ ನರೀ ಬುದ್ಧಿ
ತೋರಿಸಿಬಿಟ್ಟೆಯಲ್ಲೋ...
ಪಾಪಿ ಉಗ್ರರ
ಸಂಸ್ಕಾರದಲಿ
ಪಾಲ್ಗೊಂಡು
ಜಗತ್ತಿಗೇ ಬೆತ್ತಲಾಗಿ-
ಸಾಕ್ಷಿಯನೇ
ನೀಡಿಬಿಟ್ಟೆಯಲ್ಲೋ!
***
ರಾಷ್ಟ್ರ ಭಕ್ತಿ...
ನಾಡ ಹೆಂಚಿನ
ಮನೆಯಲ್ಲಿರುವವರು-
ತಮ್ಮ ಮಕ್ಕಳ
ರಾಷ್ಟ್ರ ಸೇವೆಗೆ
ಸೈನಿಕರಾಗಿ ಕಳಿಸಿ
ರಾಷ್ಟ್ರಭಕ್ತಿಯ ಮೆರೆದರು...
ಮಹಡಿ ಮನೆಯ
ಎತ್ತರೆತ್ತರಕೆ ಕಟ್ಟಿಸಿ
ಮಕ್ಕಳನ್ನು ಸಾಕಿದವರು-
ದುಶ್ಚಟ ; ದುರಭ್ಯಾಸಗಳ
ದಾಸರನ್ನಾಗಿ ಮಾಡಿ
ಅಹರ್ನಿಶಿ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
May 14, 2025
ಓ ತಾಯೆ ನೀನದ್ಭುತ ವಿಶ್ವದ ಮಾಯೆ
ಈ ಜಗದ ಅತ್ಯುನ್ನತ ಬೆಳಕಿನ ಛಾಯೆ॥
ಕತ್ತಲಲೇ ನಾ ಭ್ರೂಣ ಶಿಶುವಾಗಿ ಬೆಳೆದೆ
ನಿನ್ನ ಜ್ಞಾನದರಿವಿನಲ್ಲಿಯೇ ರೂಪವ ತಳೆದೆ
ಒಂದೊಂದು ಹಾವ ಭಾವಕೂ ಶಿಕ್ಷಕಿ ನೀನು
ಜ್ಞಾನದ ಹಣತೆಯ ಹಚ್ಚಿ ಬೆಳಗಿದ ಜ್ಯೋತಿ॥
ಎದೆಯ ಹಾಲನುಣಿಸಿ ಎನ್ನ ತಣಿಸಿದೆ ನೀನು
ನನ್ನದೊಂದೊಂದು ನಗುವಿಗೆ ಮುತ್ತಿನ ಸುರಿಮಳೆ
ನಾನೆಂಬ ಈ ದೇಹದ ವಾಸ್ತುಶಿಲ್ಪಿಯೆ ನೀನು
ಲೋಕದ ಲೌಕಿಕ ಜ್ಞಾನದ ಗುರುವೆಂಬ ಬಾನು॥
ಒಂದೊಂದು ತುತ್ತಿನಲು ಪ್ರೀತಿ ಭಾವದ ಹೊನಲು
ಪರಿಪರಿಯ ಪರಿಹಾರದ ಅಲೆಗಳ ಕಡಲು…
ಲೇಖಕರು: ಬರಹಗಾರರ ಬಳಗ
ವಿಧ: ಕವನ
May 13, 2025
ಗಝಲ್ ೧
ಜಾತಿಗೆ ಜಾತಿ ಪಗೆ ನಾವು ಬರೆದದ್ದೇ ಗಝಲ್
ನೀತಿ ನಿಯಮವೇ ಬೇಡ ಕೊರೆದದ್ದೇ ಗಝಲ್
ಷೇರುಗಳ ಸಮ ಸಾಲು ಹೊಸಬರಿಗೆ ಮಾತ್ರವೆ
ಗೊತ್ತಿದೆಯೆಂದವರು ಇಲ್ಲಿ ಉಸಿರಿದ್ದೇ ಗಝಲ್
ಇನ್ನೊಬ್ಬರ ಲೇವಡಿ ಮಾಡದಿರೆ ಹೊಟ್ಟೆ ತುಂಬದು
ದ್ವಿಪದಿ ಸಾಲುಗಳ ತೋಚಿದಂತೆ ತಿರುಚಿದ್ದೇ ಗಝಲ್
ಶಬ್ದಗಳ ತುರುಕಿ ಬರೆದರೆ ಓದುಗರಿಗೆ ಅರ್ಥವಾದೀತೆ
ಸ್ವಾರಸ್ಯವಿಲ್ಲದ ವಿಷಯದಲ್ಲಿ ಮತ್ತೆ ತೇಲಿದ್ದೇ ಗಝಲ್
ಮನುಷ್ಯ ತನ್ನ ದೌರ್ಬಲ್ಯವ ತಿದ್ದಿಕೊಳ್ಳಲಾರನೊ ಈಶಾ
ಬೇರೆಡೆ ಹುಟ್ಟನ್ನು ಪಡೆಯುತ ಹೀಗೆ ಕಟ್ಟಿದ್ದೇ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
May 12, 2025
ನವಮಾಸ ಗರ್ಭದಲ್ಲಿ
ನನ್ನ ಹೊತ್ತು,ನಿದ್ರೆಯಿಲ್ಲದೆ
ಕಷ್ಟ ಅನುಭವಿಸಿದ್ದು
ನನಗೆ ತಿಳಿಯಲೇ ಇಲ್ಲಾ..
ತುಂಬಾ ಬಸುರಿ ಇದ್ದಾಗಲೂ
ಜೀವನಕ್ಕಾಗಿ ಮೀನು
ವ್ಯಾಪಾರ ಮಾಡಿ,ಹೆರಿಗೆ
ನೋವು ಅನುಭವಿಸಿ ನನ್ನ
ಭೂಮಿಗೆ ತಂದದ್ದು
ನನಗೆ ತಿಳಿಯಲೇ ಇಲ್ಲಾ..
ಸೀರೆಯನೇ ತೊಟ್ಟಿಲು ಮಾಡಿ
ದಿನವೂ ಮೊಲೆಯ ಹಾಲು
ಕುಡಿಸಿ, ಜೋಗುಳ ಹಾಡುತ
ತೊಟ್ಟಿಲು ತೂಗಿ,ಕಣ್ಣಿಗೆ ಕಾಡಿಗೆ
ಹಚ್ಚಿ, ಹಣೆಗೆ ಮುತ್ತಿಟ್ಟದ್ದು
ನನಗೆ ತಿಳಿಯಲೇ ಇಲ್ಲಾ..
ಮನೆಯೇ ಪಾಠ ಶಾಲೆ ಮಾಡಿ,
ಅಮ್ಮನೇ ಮೊದಲ ಗುರುವಾಗಿ
ಸರಿ,ತಪ್ಪು…
ಲೇಖಕರು: ಬರಹಗಾರರ ಬಳಗ
ವಿಧ: ಕವನ
May 11, 2025
ನಮ್ಮ ಧಮ್ಮದ ಜೊತೆಗೆ ಉಳಿದವರ ಉಳಿಸುವ
ದಯೆ ಕರುಣೆ ಸಮಭಾವ ನಮ್ಮವರ ಉಳಿಸುವ
ಭಾರತದ ಆತ್ಮದೊಳು ಸೇರುತಲೆ ನಡೆಯೋಣ
ಭಾವ ಜ್ಯೋತಿಯ ಜೊತೆಗೆ ನಿಂತವರ ಉಳಿಸುವ
ಸಂಕಟದ ಸಮಯದೊಳು ಸೇವೆ ಗೈಯುವ ಸತತ
ಸತ್ಯ ಸ್ವೀಕಾರ ನಡೆಯೊಳಗೆ ಬಾಳುವರ ಉಳಿಸುವ
ತ್ಯಾಗ ಸೇವೆಯ ತಪಸ್ಸುಗಳು ನಮ್ಮಲಿರಲೀ ಜನರೆ
ಸಮಯದೊಳು ಸಮ ಪ್ರಜ್ಞೆ ಕಾಣುವರ ಉಳಿಸುವ
ಇನ್ನೊಬ್ಬರ ಹಿತವೆನಿಪ ಮನಕೆ ನಡೆಯುವನು ಈಶಾ
ಮಾನವೀಯ ಸೇವೆಯೊಳು ಬರುವವರ ಉಳಿಸುವ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಲೇಖಕರು: ಬರಹಗಾರರ ಬಳಗ
ವಿಧ: ಕವನ
May 10, 2025
ರಾಜ್ ನಮನ...
'ರಾಜ್' ಎಂಬ
ಮೌಲ್ಯಗಳ
ಸರದಾರ...
ಜನಮಾನಸದಲ್ಲಿ
ಬಿತ್ತಿದಿರಿ
ಮಾಲ್ಯಗಳ ಸಾರ...
ಅದ್ಭುತ ನಟನೆಯ
ರಾಜ, ರವಿತೇಜ
ವರನಟನೇ
ನಟಸಾರ್ವಭೌಮನೇ
ಮೌಲ್ಯಗಳ
ತೋರಿಸಿ ಪಾಲಿಸಿದವರೇ-
ನಿಮಗಿದೋ
ನಮ್ಮ ಸಹಸ್ರ ಸಹಸ್ರ ನಮನ!
***
ಯುದ್ಧ...ಯುದ್ಧ...
ಈ ಜಗತ್ತು
ಬಲು ಕಿಲಾಡಿ
ಮತ್ತು ಬಲು
ಬುದ್ಧಿವಂತ ಕಣ್ರೀ-
ಏನು ಮಾಡಬೇಕೆಂಬುದಕೆ
ಅದು ಸದಾ ಬದ್ಧ...
ವ್ಯವಸ್ಥೆಯ
ಕೊಬ್ಬು,ಅಹಂಕಾರ
ಕುಟಿಲತೆಗಳು
ಹೆಚ್ಚಾದಂತೆ
ಸಾರಿ ಬಿಡುತ್ತದೆ-
ಯುದ್ಧ.. ಯುದ್ಧ..ಯುದ್ಧ..!
***
ನಡುಗಿದ ಪಾಕ್..
ಭಾರತೀಯ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
May 09, 2025
ಮನ ಮನದೊಳಗಿನ ಧರ್ಮವನು
ಮನೆಯೊಳಗಿಟ್ಟು ಹೊರಬನ್ನಿ
ಯಾವುದೆ ಜಾತಿಯ ಪಂಥವನು
ಮೀರಿದ ಭಾವದಿ ಹೊರಬನ್ನಿ
ಸೃಷ್ಟಿಗೆ ಯಾವುದೆ ಭೇದವು ಇಲ್ಲ
ನಮ್ಮೊಳೆ ತುಂಬಿದೆ ನೋಡಿಲ್ಲಿ
ಹಗೆತನ ಬಿಡದೆಲೆ ಬಾಳುವೆ ಇಲ್ಲ
ಎನ್ನುವ ಸತ್ಯದಿ ಬದುಕಿಲ್ಲಿ
ಕಷ್ಟವೇ ಬರಲಿ ನಷ್ಟವೇ ಇರಲಿ
ಕೈ ಕೈ ಹಿಡಿದು ನಡೆಯಿಲ್ಲಿ
ಎಲ್ಲರೂ ಒಂದೆ ಎನ್ನುತ ತನುವಲಿ
ನೆಮ್ಮದಿ ಬದುಕನು ಕಾಣಿಲ್ಲಿ
ಭಾರತ ನೆಲದಲಿ ಜನಿಸಿದ ನಾವು
ಅನ್ಯರ ನೆಲದಲಿ ಬಾಳುವುದೆ
ಇಲ್ಲಿಯೆ ನೆಮ್ಮದಿ ಕಾಣುವ ನಾವು
ಸಂತಸ ಇರುವುದು ಐಕ್ಯದಲೆ
-ಹಾ ಮ ಸತೀಶ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
May 08, 2025
ಜಲ ಜಲದ ಧಾರೆ
ಹಾಲ್ ನೊರೆಯ ನೀರೆ
ದುಮು ದುಮುಕಿ ಹರಿವ ಸೇಲೆ
ಮಂಜಲ್ಲಿ ಕರಗಿ
ಚಳಿಯಲ್ಲಿ ನಡುಗಿ
ಹೊಂಗಿರಣ ತಂಪ ಸಾಲೆ
ಲತೆಯಂತೆ ಬಳುಕಿ
ಮೈಯೊಳಗೆ ತುಳುಕಿ
ಚೆಲುವೆಲ್ಲ ಹರಿಸಿ ಸಾಗಿ
ಸುತ್ತೆಲ್ಲ ಸಿರಿಗೆ
ಬೆಳಕಾದ ಬಗೆಗೆ
ಒಲವೆಲ್ಲ ಸುರಿಸಿ ಬೀಗಿ
ತಾವರೆಯ ಎಲೆಗೆ
ಹನಿ ಹನಿಯ ನೀರು
ಮುತ್ತನ್ನು ಒತ್ತಿ ಹಾಡಿ
ಬಂಗಾರ ಕಿರಣ
ಹನಿಯೊಳಗೆ ಇಳಿದು
ಸುತ್ತೆಲ್ಲ ಹೊಳಪ ನೀಡಿ
ಮುಂಜಾನೆ ಸವಿಗೆ
ಅಂಬಿಗನ ದನಿಯು
ನೀರೊಳಗೆ ಓಡಿಯಾಡಿ
ಜಲಚರದ ರಾಶಿ
ಸುತ್ತೆಲ್ಲ ನಲಿದು
ಸಂತಸದಿ ಆಡಿಪಾಡಿ
ನೀರಲೆಯ ಸೊಬಗು…
ಲೇಖಕರು: ಬರಹಗಾರರ ಬಳಗ
ವಿಧ: ಕವನ
May 07, 2025
ಗಝಲ್ ೧
ಜೀವನದಲ್ಲಿ ಕನಸುಗಳು ನಾವು ಹೇಳಿದಂತೇ ಇಲ್ಲ
ಬದುಕಿನಲ್ಲಿಯ ನನಸುಗಳು ನಾವು ಕೇಳಿದಂತೇ ಇಲ್ಲ
ಹುಟ್ಟು ಸಾವಿನ ನಡುವೆ ನಮಗೆ ದ್ವೇಷವೂ ಬೇಕೆ
ನ್ಯಾಯ ಸಿಗುವವರೆಗೆ ಸ್ಥೈರ್ಯ ಬೆಳೆದಂತೇ ಇಲ್ಲ
ಬಲವಾದ ಪ್ರೀತಿಯೊಳು ಜಾತಿ ಬರುವುದೇ ಹೇಳು
ಹೆತ್ತವರ ಮನ ನುಡಿಗೆ ಕೂಸು ಮಣಿದಂತೇ ಇಲ್ಲ
ಉರಿಬಿಸಿಲ ನಡುವೆಯೇ ಮಳೆ ಹನಿಯು ಬರುವುದೇ
ತಂಪಿರದ ಒಣ ನೆಲದ ಮಣ್ಣಿಂದು ಕುಣಿದಂತೇ ಇಲ್ಲ
ಸಿರಿವಂತರಾ ಮಾತು ಕತೆಗೇ ಇಂದು ಬೆಲೆ ಏಕೆ ಈಶ
ಬಡವರಲ್ಲಿಯ ಪಾಂಡಿತ್ಯ ಯಾರೂ ಪಡೆದಂತೇ ಇಲ್ಲ
***…
ಲೇಖಕರು: ಬರಹಗಾರರ ಬಳಗ
ವಿಧ: ಕವನ
May 06, 2025
ಹಗೆಯೊ ಪಗೆಯೊ
ಬಗೆಯ ಪೊಗೆಯೊ
ದಗೆಯ ಕೊಡುವ ತಂತ್ರ ಹೊಸತು
ತೆಗಳೊ ಪೊಗಳೊ
ಹಗಲೆ ರಾತ್ರಿ
ತೆಗೆಯ ಬಹುದೆ ನವ್ಯ ಹಾಡು
ಕಲೆಯ ಕಂಬ
ಚೆಲುವು ದಿಂಬು
ಮಲಗೆ ಸವಿಯ ನಿದ್ರೆ ಮನದಿ
ಹಲವು ಚಿಂತೆ
ಹೊಲಸು ಕಂತೆ
ಜಲದ ಹುಳುಕು ಕಣ್ಣ ಸರದಿ
ಮನೆಗೆ ಬರದ
ಮನದ ಮಾತು
ತನುವ ಜೊತೆಗೆ ಹೋಗಿ ಗೆಲಲು
ಜನನ ಮರಣ
ಹನನ ಸೃಷ್ಟಿ
ತನನ ಬಗೆಗೆ ವಿಶ್ವ ಬರಲು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ