ಕವನಗಳು

ವಿಧ: ಕವನ
March 31, 2024
ಸೇವಾ ಭಾಗ್ಯವ ಕರುಣಿಸೆಯಾ ಕಾದಿರುವೇ ನಾ, ಜಗದೊಡೆಯಾ||ಪ||   ನಂಬಿ ಬಂದಿರುವೆ ನಿನ್ನಡಿಗೆ ತಾಮಸ ಏತಕೆ ಓ ಪ್ರಭುವೆ ಕಂದನ ಮೊರೆಯಾ ನೀ ಕೇಳು ದೇವಾ ಒಲವಿಂದ ಬಂದೀಗ ಸಲಹೆಂದು ಬೇಡುವೆ||ಅ.ಪ.||   ಕೈಜೋಡಿ ಮುಂದೇ ನಿಂತಿರುವೆ ನೀನೇಕೆ ನನ್ನಲಿ ಮುನಿದಿರುವೆ ಈಶಾ ಪರಮೇಶಾ ಕನಿಕರಿಸು ದುರಿತವ ತಕ್ಷಣ ಪರಿಹರಿಸು ನಿನ್ನಯ ಪಾದ ನಂಬಿದೆ ದೇವಾ ಮುಕ್ಕಣ್ಣ ಪಾಲಾಕ್ಷ ಗಿರಿಜೇಶ ಶಂಕರ|| -ಪೆರ್ಮುಖ ಸುಬ್ರಹ್ಮಣ್ಯ ಭಟ್ 
ವಿಧ: ಕವನ
March 30, 2024
ಹಾರುವ ಹಕ್ಕಿಯ ಗೂಡಲಿ ಬಂಧಿಸೆ ಹಾರುವುದೆಂತದು ಹೊರಗಡೆಗೆ ಹೂವಿನ ದಳಗಳ ಒಳಗಡೆ ಸಿಲುಕಿದ ದುಂಬಿಯು ಬಂಧಿತ ಹೂವೊಳಗೆ   ಪ್ರೀತಿಯ ನೋಟದ ಔತಣ ತೊರೆವೆನೆ? ಕಣ್ಣಲೆ ನೀಡುವೆ ಕರೆಯೋಲೆ ಸರಸದ ಸವಿಯಲಿ ಮೈಯನು ಮರೆತಿರೆ ಬಂಧಿತನಾದೆನು ಒಲವಿನಲೆ   ಜಗವನು ಮರೆಸುವ ಒಲವಿನ ಸಿಂಚನ ಪುಳಕಿತಗೊಳಿಸುವೆ ಪ್ರೇಮದಲಿ ವೇಳೆಯ ಕಳೆಯದೆ ಬಾರೆಯ ಸನಿಹಕೆ ಸೇರಿಕೊ ನನ್ನಯ ತೋಳಿನಲಿ||   -ಪೆರ್ಮುಖ ಸುಬ್ರಹ್ಮಣ್ಯ ಭಟ್ ಚಿತ್ರ ಕೃಪೆ: ಇಂಟರ್ನೆಟ್ ತಾಣ
ವಿಧ: ಕವನ
March 29, 2024
೧. ನಿಶೆಯಿದ್ದರೆ ಮನದಲಿ ಗೆಲುವು ಖಚಿತ ಕಸುವಿದ್ದರೆ ಮನದಲಿ ಗೆಲುವು ಖಚಿತ   ಜೀವವಿದ್ದರೆ ಮನದಲಿ ಗೆಲುವು ಖಚಿತ ಒಲವಿದ್ದರೆ ಮನದಲಿ ಗೆಲುವು ಖಚಿತ   ತನುವಿದ್ದರೆ ಮನದಲಿ ಗೆಲುವು ಖಚಿತ ಹಣವಿದ್ದರೆ ಮನದಲಿ ಗೆಲುವು ಖಚಿತ   ಮೌನವಿದ್ದರೆ ಮನದಲಿ ಗೆಲುವು ಖಚಿತ ಗುಣವಿದ್ದರೆ ಮನದಲಿ ಗೆಲುವು ಖಚಿತ   ಎಚ್ಚರವಿದ್ದರೆ ಮನದಲಿ ಗೆಲುವು ಖಚಿತ ಸವಿಯಿದ್ದರೆ ಮನದಲಿ ಗೆಲುವು ಖಚಿತ *** ೨. ಸವಿಯನಿಂದು ಕೊಡಲು ಹೋದೆ ತೆಗೆದುಕೊಳ್ಳಲಿಲ್ಲ ಮತ್ತಿನಲ್ಲಿ ಮುದ್ದಿಸಲು ಕಾದೆ ಪಡೆದುಕೊಳ್ಳಲಿಲ್ಲ   ಮೋಹವಿಂದು…
ವಿಧ: ಕವನ
March 28, 2024
ಕಣಕಣದಲ್ಲಿಯು ಬೆರೆತಿಹ ಪ್ರೇಯಸಿ ತನುಮನ ನಿನ್ನನೆ ಆಶಿಸಿದೆ ಸನಿಹಕೆ ಬಂದರೆ ದೂರಕೆ ಸರಿಯುವೆ ಇನಿಯನ ಕಾಡುವೆ ಇದು ಸರಿಯೆ?   ನಗುವಿನ ಮೊಗದಲಿ ಗಲ್ಲದ ಈ ಗುಳಿ ಕಚಗುಳಿ ಇಡುತಿದೆ ಮುಂಗುರಳು ತಾರೆಯ ಹೊಳಪಿನ ಸುಂದರ ಕಣ್ಗಳು ಕಾಡುತಲಿರುವುದು ಹಗಲಿರುಳು   ನೆನಪಿನ ಹಕ್ಕಿಗೆ ಸರಪಳಿ ಬಿಗಿಯುತ ಮನಸಿನ ಗೂಡಲಿ ಬಂಧಿಸಿದೆ ಕನಸನು ಕಾಣಲು ಆಸ್ಪದೆ ಎಲ್ಲಿದೆ? ಮನವಿದು ವಿರಹದಿ ನಿದ್ರಿಸದೆ   ಒಲವಿನ ಬೇಡಿಕೆ ಇರಿಸಿದೆ ನಿನ್ನಲಿ ಒಲ್ಲೆನು ಎನ್ನದೆ ಬಳಿ ಬಾರೆ ಬಲ್ಲೆನು ನಿನ್ನಲಿ ಅವಿತಿಹ ಪ್ರೇಮವ ಬದುಕಲಿ…
ವಿಧ: ಕವನ
March 27, 2024
ಗದ್ದುಗೆಯನೇರುವುದು ಎದ್ದು ಮೆರೆದಾಡುವುದು ಸುದ್ದಿಯಲ್ಲಿಯೆ ಇರುವ ಮಹದಾಸೆ ಜೊತೆಗೆ ಹದ್ದಿನಂತೆಯೆ ಇರುವ ಜಿದ್ದು ತುಂಬಿದ ಮನದಿ ಕದ್ದು ಕೋಳಿಯ ತಿನುವ ಕುಹಕ ನಡವಳಿಕೆ.   ಅದ್ದುತ್ತ ವಾಂಛೆಗಳ ಸಿದ್ಧಿಸಲು ಬಯಕೆಗಳು ಗೆದ್ದು ಬರಲೇ ಬೇಕು ಎನುವ ಹಪ ಹಪಿಕೆ ಉದ್ದುತಲಿ ನಯವಿನಯ ಉದ್ದಂಡ ನಟನೆಗಳ ಖುದ್ದಾಗಿ ಮಾಡುತ್ತ ಸದ್ದು ದಿನ ಬಳಕೆ   ಪೆದ್ದುತನವೇನಲ್ಲ ಮದ್ದಿರದ ರೋಗವಿದು ಬಿದ್ದರೂ ಮೂಗು ಮಣ್ಣಾಗಿರದ ಹಾಗೆ ಮುದ್ದು ಮಾಡುತಲಿದ್ದ‌ ಮರಿಯನ್ನೆ ಹಸಿವಾಗಿ ಮೆದ್ದು ಬಿಡುವಂತಿರುವ ಮಾರ್ಜಾಲ ಹೀಗೆ  …
ವಿಧ: ಕವನ
March 26, 2024
ಅಂದಿನ ಪಾಠ ಅಂದೆ ಕಲಿತಿರಬೇಕು ಹೆಚ್ಚಿನ ಪರಿಶ್ರಮ ಪಡುತ್ತಿರಬೇಕು ಕಲಿತ ವಿಷಯಗಳ ಮನನ ಮಾಡಬೇಕು ಸರಿಯಾದ ವೇಳಾಪಟ್ಟಿ ಹೊಂದಿರಬೇಕು   ಪರೀಕ್ಷೆಗಳೆಂದರೆ ಮಕ್ಕಳಿಗೆ ಉತ್ಸಾಹವಿರಬೇಕು ಭಯಪಡದೆ ಪರೀಕ್ಷೆಗಳನ್ನು ಎದುರಿಸಬೇಕು ವಿಷಯಗಳನ್ನು ಅರ್ಥೈಸಿಕೊಂಡು ಓದಬೇಕು ಉಲ್ಲಾಸದಿಂದ ಪರೀಕ್ಷೆಯಲ್ಲಿ ಪಾಲ್ಗೊಳ್ಳಬೇಕು   ತನ್ನ ಮೇಲೆ ತನಗೆ ವಿಶ್ವಾಸ ಇರಬೇಕು ವಿಷಯಗಳ ಹೆಚ್ಚಿನ ಜ್ಞಾನ ಹೊಂದಿರಬೇಕು  ಮನಸ್ಸಿನಿಂದ ವಿಷಯಗಳನ್ನು ಓದುವಂತಿರಬೇಕು ಕಠಿಣ ಪ್ರಶ್ನೆಗಳಿಗೆ ಉತ್ತರ ಪಡೆದುಕೊಂಡಿರಬೇಕು   ಅಕ್ರಮ…
ವಿಧ: ಕವನ
March 26, 2024
ಬಣ್ಣದೋಕುಳಿ ಆಡುತಲಿ ಚಿಣ್ಣರೆಲ್ಲ ಸೇರೋಣ ಕೆಂಪು ಹಳದಿ ನೀಲ ಬಣ್ಣ ತನ್ನಿರಿ ಎಲ್ಲರು ಇಲ್ಲಿಗೆ ಅಣ್ಣ/ ಬಗೆಬಗೆ ಆಟವ ಆಡುತಲಿ ಬಣ್ಣದ ನೀರ ಎರಚೋಣ ಹಿರಿಯರು ಕಿರಿಯರು ಬೆರೆಯುತಲಿ ಹೋಳಿ ಸಂಭ್ರಮ  ಮಾಡೋಣ//   ಬಿದಿರ ಬೊಂಬೆಯ ಮಾಡುತಲಿ  ಕಟ್ಟಿಗೆ ರಾಶಿ ಹಾಕೋಣ ಹಳೆಯ ವಸ್ತ್ರವ ತೊಡಿಸುತಲಿ ಬೆಂಕಿಯನ್ನು ಹಚ್ಚೋಣ/ ಅರಿಷಡ್ವರ್ಗಗಳ ಮರೆಯುತಲಿ ಮನದ ಕ್ಲೇಶವ ತೊಳೆಯೋಣ ಸಹನೆ ಶಾಂತಿ ದಾನವೆಲ್ಲ ಬದುಕಿನ ಅಂಗ ಎನ್ನೋಣ//     ಕಾಮದೇವನ ಪ್ರೀತಿ ಪ್ರೇಮ ರತಿದೇವಿಗೆ ವರದಾನ ನೀಲಕಂಠನ ಕೃಪೆಯ  ಸಂಭ್ರಮ ಹೋಳಿ…
ವಿಧ: ಕವನ
March 25, 2024
ಮುಂಜಾನೆಯೊಳು ಮಂಜಿನ ಹನಿಗಳು ಸುಂದರ ಬಲೆಯನು ಹೆಣೆದಿರಲು ಚಳಿಯನು ಸುತ್ತಲು ಹರಡಿದೆ ಇಳೆಯೊಳು ತಂಗಾಳಿಯದು ಬೀಸಿರಲು   ಹೊನ್ನಿನ ಕಿರಣವ ಚೆಲ್ಲುತ ನೇಸರ ಮೂಡಿದ ಬಾನಿನ ಬಯಲಿನೊಳು ಬಿಸಿಲಿನ ತಾಪಕೆ ಕರಗಿದ ಇಬ್ಬಲಿ ಹೂವಿನ ದಳದಲಿ ಮುತ್ತುಗಳು   ನೀಲಿಯ ಗಗನವ ಚುಂಬಿಸಲಾಸೆಯೆ ಹಕ್ಕಿಯ ಗುಂಪಿನ ಮೆರವಣಿಗೆ ಬೆಳಗಿನ ಚೆಲುವನು ನೋಡುತ ಮೈಮನ ಮನವಿದು ಬಯಸಿತು ಬರವಣಿಗೆ||   -ಪೆರ್ಮುಖ ಸುಬ್ರಹ್ಮಣ್ಯ ಭಟ್ 
ವಿಧ: ಕವನ
March 24, 2024
ಕಲ್ಲು... ವಿಚ್ಛೇದನ ನೀಡಲು ನಿರಾಕರಿಸಿದ  ಪತಿ ಮೇಲೇ  ಪತ್ನಿ- ಕಲ್ಲಿನಿಂದ ಭಾರೀ ಹಲ್ಲೆ...   ಕಲ್ಲಿನಿಂದ ಹೊಡೆದ ಮೇಲೂ ವಿಚ್ಛೇದನ ನೀಡದಿರ ಪತಿಯೇ- ನೀನೊಂದು ಸ್ಟ್ರಾಂಗ್ ಕಲ್ಲೇ! *** ಓದುವ ಸಂಸ್ಕೃತಿ  ಗ್ರಂಥಾಲಯದ ಪುಸ್ತಕಗಳು- ನಮ್ಮ ಧೂಳ ಕೊಡವುವರಿಲ್ಲವೆಂದು ಅಳುತಿಹವು ನೋಡಿರೋ...   ಮನದ ಧೂಳ ಕೊಡವಿ- ಪುಸ್ತಕಗಳ ಓದಿ ಜ್ಞಾನ ದಾಹವ ತಣಿಸಿಕೊಳ್ಳಿರೋ! *** ಕೊರಗು  ಪ್ರತೀ  ಹಂತದಲೂ ಸಮೃದ್ಧಿ ಸೌಲಭ್ಯಗಳ ಪಡೆದರೂ ಈ ಜೀವ...   ಸದಾ ಕೊರಗುತಲಿಹುದು ಮನುಷ್ಯನ ಅಸಹಜ ಅತೃಪ್ತಿಯ ಭಾವ! ***…
ವಿಧ: ಕವನ
March 23, 2024
ಬದುಕಿ ಬಾಳಿರಿ ಹೆತ್ತವರ ನೆರಳಲಿ ಬೆಳೆದು ದೊಡ್ಡವರಾಗಿ ಹಿರಿಯರ ಆಶೀರ್ವಾದದಲಿ ನಲಿದು ಆಡಿರಿ ಬಾಲ್ಯದ ಗೆಳೆಯರ ಒಡನಾಟದಲಿ ಪ್ರತಿ ಹೆಜ್ಜೆ ಇಡಿ ಗುರುಗಳ ಮಾರ್ಗದರ್ಶನದಲಿ   ತಂದೆ ಬೈದನೆಂದರೆ ಅದು ಜವಾಬ್ದಾರಿಗಾಗಿ ತಾಯಿ ಕೋಪದಿ ಮಾತನಾಡಿದರೆ ಅದು ಬದುಕಿಗಾಗಿ ಗುರು ಶಿಕ್ಷಿಸಿದನೆಂದರೆ ಅದು ಶಿಕ್ಷಣಕ್ಕಾಗಿ ಗೆಳೆಯ ಮಾತುಬಿಟ್ಟರೆ ಅದು ತಪ್ಪಿನ ಅರಿವಿಗಾಗಿ   ಸಹೋದರನ ಹೆಗಲಿಗೆ ಹೆಗಲು ಕೊಡುವವನಾಗು ಸಹೋದರಿಯ ಬದುಕಿನ ರಕ್ಷಣೆಗೆ ಕಾವಲುಗಾರನಾಗು ಮಕ್ಕಳು ಪೂಜಿಸುವ ತಂದೆ ನೀನಾಗು ಸಂಬಂಧಿಕರು ಸಂಬಂಧ…