ಕವನಗಳು

ವಿಧ: ಕವನ
June 02, 2025
ಬೆನ್ನಿಗೂ ಬಂತೇ ಆಭರಣ..... ಕತ್ತಿನಿಂದ ಬೆನ್ನಿನತ್ತ ತಿರುಗಿದ ಆಭರಣ- ಸ್ಫರ್ಧೆಯೇ ಆರಂಭ ಹೊಸ ವಿನ್ಯಾಸಕೆ...   ವಿಶಾಲವಾಗುತಿರುವ ಬೆನ್ನ ನೋಡಿ ಮರುಕ ಬಂತೇ- ನಮ್ಮೀ ಚೆಲುವ ಆಭರಣಕೆ! *** ಪ್ರತಿಷ್ಠೆ..... ನನಗೆ ನನ್ನ  ತಾಯ್ ದೊಡ್ಡವಳ್; ನಿನಗೆ ನಿನ್ನ ತಾಯ್... ಕಂಡವರಾರ್ ಸಾವಿರಾರು ವರ್ಷಗಳ ಇತಿಹಾಸವನ್?   ಇಲ್ಲಿ ಪ್ರತಿಷ್ಠೆಗಾಗಿ ಹೋಲಿಕೆ ಏಕೆ....? ಸೋದರರೆಲ್ಲಾ ಸಮಕಾಲೀನರ್... ಸುಮ್ಮನೆ ಪ್ರಹಸನವೇಕೆ ಓ ಕಮಲಹಾಸನ್? *** ಸರ್ಜಿಕಲ್ ಧಾಳಿ...!  ಸರ್ಜಿಕಲ್ ಸ್ಟ್ರೈಕ್ ಮೊದಲು…
ವಿಧ: ಕವನ
June 01, 2025
ಬಾಳಿನ ಪಯಣದ ಜೊತೆಗೆ ನೀನು ಸೇರಿಯಾಗಿದೆ ಗೆಳತಿ ನಿನ್ನಂತರಂಗದಲ್ಲಿಹ ಚಿಲುಮೆಯಿಲ್ಲಿ  ಸರಿಯಾಗಿದೆ ಗೆಳತಿ   ಮುತ್ತಿನರಮನೆಯೊಳಗೆ ಕೂರಿಸುತ್ತಲೇ ಮತ್ತಾಯಿತು ಯಾಕೆ  ಕನಸಿನೊಳಗಿನ ನನಸದು ನಾಚುತ್ತಾ ಸೆರೆಯಾಗಿದೆ ಗೆಳತಿ   ಮಾಣಿಕ್ಯ ವಜ್ರದೊಳು ಯೌವನವು ಹೊಳೆವ  ನಕ್ಷತ್ರವು ಹೃದಯ ಭಾಷೆಯ ನಡುವೆ ಮಲ್ಲೆ ಜೊತೆಯಾಗಿದೆ ಗೆಳತಿ   ಬದುಕೊಂದು ಪ್ರೇಮ ಗಂಗೆ ಹರಿಯುತಿಹಳೂ ನೋಡು ಒಲವಿನಲಿ ಬಂದಿರುವ ಜಲಧಾರೆ ಪ್ರೀತಿಯಾಗಿದೆ ಗೆಳತಿ   ಹರುಷದಿಂದಲೆ ಬೆರೆಯು ಯಾವತ್ತೂ ಮನದೊಳಗೆ ಈಶಾ ಮುಕುಟ ಮಣಿಗಳ ನಡುವೆಯೆ…
ವಿಧ: ಕವನ
May 31, 2025
ಗಝಲ್ - ೪ ( ಮುರಧಫ್ ಪ್ರಕಾರ ಬರೆದ ಗಝಲ್) ಮಧುರ ಕ್ಷಣಗಳ ಬಿಂಬವೆ ನಾವೆಂದೂ ಸಾಗೋಣ ಸಾಕಿ ಬದುಕು ಸುಂದರತೆಗಳ ನಡುವೆ ನಾವೆಂದೂ ಸಾಗೋಣ ಸಾಕಿ   ಪ್ರೀತಿಯೊಳಗಿನ ತಂತಿಯ ಮನವು ಹೀಗೆಯೇ ಇರುವುದೇತಕೆ ಕೈಯ ಬಳೆಯ ಸದ್ದಿನೊಳು ಒಲವೆ ನಾವೆಂದೂ ಸಾಗೋಣ ಸಾಕಿ   ತುಟಿಯಾಸೆಗೆ ಮೀರಿದ ಭಾವನೆಯು ಬೇಕೇನು ನಮಗೆ ಚೈತ್ರದ ಸೊಗಸಿಗೆ ದಿನವೂ ಗೆಲುವೆ ನಾವೆಂದೂ ಸಾಗೋಣ ಸಾಕಿ   ಆಗಸದಲ್ಲಿ ರಾತ್ರಿಯ ಚಂದಿರನ ಬೆಳದಿಂಗಳು ಇರುವುದಾದರೂ ಏಕೆ ತಾರೆಯು ಕುಡಿನೋಟದೊಳು ಬಲು ಚೆಲುವೆ ನಾವೆಂದೂ ಸಾಗೋಣ ಸಾಕಿ  …
ವಿಧ: ಕವನ
May 30, 2025
ಗಝಲ್ (ಚೋಟೀ  ಬೆಹರ್ ) - ೧ ಮಧುರ ಕ್ಷಣಗಳ ಬಿಂಬವು ಸಾಕಿ ಬದುಕು ಸುಂದರ ಭಾವವು ಸಾಕಿ   ಪ್ರೀತಿ ತಂತಿಯ ಜೊತೆ ಸ್ನೇಹವೆ ಕೈಯ ಬಳೆಯೊಳು ಮೋಹವು ಸಾಕಿ   ತುಟಿಗು ಮೀರಿದ ತನು ಚಪಲವೆ ಚೈತ್ರ ಸೊಗಸಿನ ಗಾನವು ಸಾಕಿ   ರಾತ್ರಿ ಚಂದಿರನ ಸನಿಹ ಕಾಮವೆ ತಾರೆ ಸವಿದಿಹ ನೋಟವು ಸಾಕಿ   ಈಶ ಒಲವದು ಇದ್ದರೆ ಚಂದವೆ ಮನದ ಅರಸಿಯ ಪ್ರೇಮವು ಸಾಕಿ *** ಗಝಲ್ - ೨ ಒಂದೇ ವಿಚಾರಧಾರೆ ಇರುವ ಗಝಲ್ (ಮುಸಲ್ ಸಿಲ್ ) ಮಧುರ ಕ್ಷಣಗಳ ಅರಿವುಯಿದೆ ಮೌನವಾಗಿರು ಬದುಕಿಗೆ ಸುಂದರವಾದ ಹರವುಯಿದೆ ಮೌನವಾಗಿರು   ಪ್ರೀತಿಯ…
ವಿಧ: ಕವನ
May 29, 2025
ಬರುತ್ತವೆ ನೆನಪುಗಳು ಹೊತ್ತು ಮುಳುಗಿದಾಗ ತನುವಿನೊಳಗೆ ನಡುಕವಿರುತ್ತದೆ ಕತ್ತದುವು ಉಳುಕಿದಾಗ ಹೀಗೆ    ಮೆತ್ತನೆಯ ರತ್ನಗಂಬಳಿಯಲ್ಲಿ ಮುಳ್ಳಿಟ್ಟವನಾರು ದೇಹವಿಂದು ಮುರುಟುತ್ತಲೇ ಯೌವನವು ನಡುಗಿದಾಗ ಹೀಗೆ    ಕನಸುಗಳು ಬೀಳದೆ ಒಲವೆಂದೂ ಚಿಗುರದು ದೇಹಸಿರಿಯು ಬಾಡಿತಿಂದು ಹಬೆಯೊಳಗೆ ಸಿಲುಕಿದಾಗ ಹೀಗೆ    ನನಸಿಲ್ಲದೆ ಒದ್ದಾಟವು ಯೌವನದ ಹುಚ್ಚಿನಲಿ ಪ್ರೀತಿಯದು ಸಿಗದೇ ಹೋಯ್ತು ದ್ವೇಷವನು ಕುಲುಕಿದಾಗ ಹೀಗೆ    ನಡೆಯಿಲ್ಲದೆ ನುಡಿಯದು ಶುದ್ಧವೇ ಈಶಾ ನರಗಳೆಲ್ಲ ಜೋತು ಬೀಳುತ್ತದೆಯೋ ಮನ ಸವರಿದಾಗ…
ವಿಧ: ಕವನ
May 28, 2025
ಅಭಿನಂದನೆಗಳು ಬಾನು ಮುಷ್ತಾಕ್... ಕನ್ನಡದ ಬಾನು ಬೆಳಗಿದ ಚೊಚ್ಚಲ ಬೂಕರ್ ದೀಪ...   ಕನ್ನಡ ಸಾಹಿತ್ಯ ಭೂಗರ್ಭದಲಿ ಇನ್ನೂ ಎಷ್ಟು  ಇವೆಯೋ ಇಂತಹ ಮಹಾನ್ ಸಾಹಿತ್ಯ ಸ್ತೂಪ! *** ಭಾರತೀಯ ಪರಂಪರೆ  ನಾವು-  ಸಭೆ ಸಮಾರಂಭಗಳ ಏರ್ಪಡಿಸಿ ಜನರ ಸೇರಿಸಲು ಮಾಡುತಿಹೆವು  ಹರಸಾಹಸ...   ಬನ್ನಿ- ಊರ ಜಾತ್ರೆ ನಾಡ ಹಬ್ಬಗಳ ನೋಡಬನ್ನಿ... ಅಲ್ಲಿ ಜನಸಾಗರ ಸೇರಿ ಹರಿವುದು ಭಕ್ತಿರಸ! *** ಜಾತಿ ಜಾತಿ ಎನ್ನುವ ಕೋತಿ.. ಜಾತಿಯೇ ಈ ಓಟಿನ ಕೋಟೆಯೆಂದು ಭ್ರಮಿಸಿ- ಆಟವಾಡುತಿಹುದು ರಾಜಕೀಯ ಕೋತಿ...   ಈ ಜಾತಿ-…
ವಿಧ: ಕವನ
May 27, 2025
ಗಝಲ್ ೧ ಅರ್ಥಗಳನು ಹುಡುಕುತ್ತಲೇ ಕೊರಗದಿರು ಅನರ್ಥಗಳು ನಡೆಯುತ್ತಲೇ ಕೊರಗದಿರು   ಮಲಗಿದೆ ಯಾಕೆ ಪ್ರೀತಿಯು ಸಿಗಲಿಲ್ಲವೆ ಪ್ರೇಮಿಸುವರ ನೋಡುತ್ತಲೇ ಕೊರಗದಿರು   ತುಂತುರಾಗಿರುವ ಮಳೆಯೊಳಗೆ ಇರಬೇಡ ಜೀವನದೊಳಗಲ್ಲಿ ಓಡುತ್ತಲೇ ಕೊರಗದಿರು   ದಟ್ಟವಾಗಿರುವ ಅಡವಿಯೊಳಗೆ ಸಾಗಬೇಡ ಚೆಲುವೆಯರೆಲ್ಲ  ಹೋಗುತ್ತಲೇ ಕೊರಗದಿರು   ಮೌನವಾಯಿತೆಂದು ಸುಡಬೇಡ  ಸವಿಯನು ಪೂರ್ಣಚಂದ್ರನನ್ನು ಕಾಣುತ್ತಲೇ ಕೊರಗದಿರು *** ಗಝಲ್ ೨ ಒಲವಿರುವ ಮಾತುಗಳ ಮನದಿಂದ ತಿಳಿಸಿದೆ  ನೋವಿರುವಂತ ಹೃದಯಕ್ಕೆ ಕಣ್ಣಿಂದ ತಿಳಿಸಿದೆ…
ವಿಧ: ಕವನ
May 26, 2025
ಮೌನದೊಳಗಿನ ಅರ್ಥ ಬಿಡಿಸಿರುವ ಬಗೆಗೆ ಕನಸು ಬರುವುದೆ ಗೆಳತಿ ಚಿಂತೆಯಿರದಾ ಯೋಗ ಸಂಕುಚಿತ ಭಾವದಿ ನನಸು ಸಿಗುವುದೆ ಗೆಳತಿ   ಸಂತಸದ ಚೆಲುವಿನಲಿ ರೂಪ ಯೌವನ ಏರುತ  ಸಾಗುವುದೆ ಹೇಳು ಸೌಂದರ್ಯ ನವ ಯುಗದ  ಮೋಹದಲಿ ಒಲವು ಕಾಣುವುದೆ ಗೆಳತಿ   ಹೃದಯ ಸವಿಯುತ ಸಂತಸ ಪಡುತಿರೆ ಹೊರಟು ಬಂದಿರುವೆ ನಾನು ಬೆತ್ತಲ ಮನಸ್ಥಿತಿಯ ತನುವಿನಾ ರೂಪದಲಿ ತಿನಿಸ ತಿನ್ನುವುದೆ ಗೆಳತಿ   ಕಣ್ಣಿನ ಹನಿಯು ಜಾರುತಿರೆ ಸುತ್ತ ತಡೆಯುವರು ಯಾರಿಹರು ಇಂದು ಪ್ರೀತಿಗೆ ನಿತ್ಯವೂ ಗುಲಾಬಿಯ ಮುಳ್ಳದು ಚುಚ್ಚದೆ ಇರುವುದೆ ಗೆಳತಿ…
ವಿಧ: ಕವನ
May 25, 2025
ಮೌನ ತರವೇ ಹೇಳೂ ಬಹುದಿನಗಳಾಯ್ತೂ ನಿನ್ನೊಳು   ಖುಷಿಯಾಗೆ ಇದ್ದೆಯಲ್ಲೆ ಬಹು ಸನಿಹದಿ ಕೈಹಿಡಿದು ಸಾಗುತ್ತಿದ್ದೆ ಜೊತೆ ಜೊತೆಯಲಿ ಏನಾಯ್ತು ನಲ್ಲೆಯೀಗ ಬೆಳದಿಂಗಳಿಲ್ಲವೆ  ರಾತ್ರಿ ಹಗಲೇ ಗತಿಯು ನನಗೆ ಇನ್ನೇನಿದೆ   ಜೀವನದ ಸೊಗಡನ್ನು ಸವಿಯುತ್ತ ಸಾಗಿದೆವು ಕಾಮನೆಯ ಲೋಕದಲ್ಲಿ ಈಜಾಡಿ ನಲಿದೆವು ಎನ್ನರಸಿ ಇಂದೇಕೆ ಸಂಶಯ ಹೃದಯದಲಿ ಅರಸೊತ್ತಿಗೆ ಕಾಣದೆ ಹೋದೆಯಾ   ಸಂಸಾರವೆಂಬುದೂ ಸಾಗರವು ನೀ ತಿಳಿಯು ಎರಡು ಕೈ ಸೇರಿದರೆ ಸುಖದೊಳಗೆ ಎಂದೂ ಜ್ಯೋತಿಯು ನೀನಾಗು ಬಳಿಯಲ್ಲೆ ನಾನಿರುವೆ ಸವಿಯಾಗುತ ಸೇರುತ…
ವಿಧ: ಕವನ
May 24, 2025
ಮತ್ತೆ ಹೇಳುತ್ತೇನೆ ಮತ್ತೆ ಮತ್ತೆ ಹೇಳುತ್ತೇನೆ ಹೇಳುತ್ತಲೇ ಇರುತ್ತೇನೆ.. ಕ್ಷಮಿಸಿ.....   ನೀವು ಕೇಳುವ ಪ್ರಶ್ನೆಗೆ ನೀವು ಬಯಸಿದ  ಉತ್ತರವನ್ನು ನೀಡಲಾರೆ...   ವಿಚಾರಣೆಗೆ ಮುನ್ನವೇ  ಶಿಕ್ಷೆ ಘೋಷಿಸುವ ನ್ಯಾಯಾಲಯಗಳಲ್ಲಿ  ಸಾಕ್ಷ್ಯ ನುಡಿಯಲಾರೆ...   ಪ್ರಭುತ್ವದ ಪಹರೆಯಲ್ಲಿರುವ  ಸತ್ಯದ ಸೂತಕಕ್ಕೆ.. ಪ್ರಜಾ ಸತ್ತೆಯೆಂದು  ಪರಾಕು ಹೇಳಲಾರೆ...   ಖಾಂಡವ ದಹನಕ್ಕೆ  ಕವಾಯತು ನಡೆಯುತ್ತಿರುವಾಗ..   ಹೂವಿನ ರಕ್ಷಣೆಗೆ  ಮುಳ್ಳಿರುವುದು  ತಪ್ಪೆನ್ನಲೇ?...   ತೋಳಗಳು ತುಪಾಕಿಯೇರಿಸಿ…