ಕವನಗಳು

ವಿಧ: ಕವನ
June 13, 2025
ಚರಂಡಿಯ ನೀರಿನಂತೆ ಬದುಕ ಬೇಡವೆಂದು ಹೇಳುವುದು ಹೇಗೆ ವಿಶಾಲ ಮನದಲ್ಲಿಯೇ ಸವಿಯುತಿರುಯೆಂದು ಕೇಳುವುದು ಹೇಗೆ   ಧನಿಕರ ನೋಡಿ ಅವರಂತೆ ನಾನಾಗುವೆಯೆಂದರೆ ನಡೆದೀತೆ ಚಾಪೆಯಿದ್ದಷ್ಟೇ ಕಾಲುಗಳ ಚಾಚೆಂದು ಬೇಡುವುದು ಹೇಗೆ   ಜಾತ್ರೆಯಲ್ಲಿನ ನೋಟವನ್ನು ಹೃದಯದಲಿರಿಸಿ ನಡೆಮುಂದೆ ಜೀವನದೊಳಗಿನ ಗುಣದಲ್ಲಿನ ನಡತೆಗಳ ಕಾಣುವುದು ಹೇಗೆ   ಗರಡಿ ಮನೆಯಲ್ಲಿನ ಮಣ್ಣಿನಲ್ಲಿ ತುಂಬಿಹುದು ಆರೋಗ್ಯವು ಮನೆವಿಚಾರವ ತನುವುಗಳಲ್ಲಿ ಬಿಟ್ಟು ಹೋಗುವುದು ಹೇಗೆ   ನಿಯತ್ತುಗಳ ನಡುವೆ ಮೋಹಗಳ ತುಂಬಿದೆಯಾ ಈಶಾ ಒಲವಿಂದು…
ವಿಧ: ಕವನ
June 12, 2025
ಮಲಗಿದಾಗೆಲ್ಲ ಕವಿತೆ ಕನಲುವುದು  ನನ್ನಿಂದ ದೂರವಾಗಿರಬೇಕೆಂದು,  ಮಗ್ಗುಲ ಬದಲಿಸಿದಾಗಲೂ ಎದುರಾಗುವುದು  ಪ್ರಶ್ನೆಗಳೇ ತುಂಬಿದ ನೋಟ,  ಒಂಟಿ ಭಾವ ಹೊಮ್ಮಿಸುತ್ತಾ   ಬರೇ ನೀ ಎಲ್ಲರಿಗೂ ಸುದ್ದಿಯಾಗಿರುವೆ  ನನ್ನ ಅರಿತವರಿಲ್ಲ ಬಿಡು  ಎಂಬ ನಿಟ್ಟುಸಿರು ಕಾಡುವಾಗ  ತಳಮಳ ಮನದ ತುಂಬಾ   ನಿನ್ನಿಂದಲ್ಲವೇ ಜಗವ ಕಂಡಿದ್ದು  ಎನ್ನುವಾಗಲೂ  ಸೆಟೆದುಕೊಂಡು ಹುಸಿಕೋಪ  ತೋರಿದ್ದು ಏನೋ ಭರವಸೆ   ಮತ್ತೆ ಒಲಿದು ಬರುವಳೆಂದು  ನಿದ್ದೆಗೂ ಬಿಡದೆ ಎದುರಾಗುವಾಗೆಲ್ಲ  ಅವಳ ಸಾಂಗತ್ಯದ ನೆನಪ ಪುಟ  ಒಂದೊಂದಾಗಿ…
ವಿಧ: ಕವನ
June 11, 2025
ಮೌನ ತರವೇ ಹೇಳೂ ಬಹುದಿನಗಳಾಯ್ತೂ ನಿನ್ನೊಳು   ಖುಷಿಯಾಗೆ ಇದ್ದೆಯಲ್ಲೆ ಬಹು ಸನಿಹದಿ ಕೈಹಿಡಿದು ಸಾಗುತ್ತಿದ್ದೆ ಜೊತೆ ಜೊತೆಯಲಿ ಏನಾಯ್ತು ನಲ್ಲೆಯೀಗ ಬೆಳದಿಂಗಳಿಲ್ಲವೆ  ರಾತ್ರಿ ಹಗಲೇ ಗತಿಯು ನನಗೆ ಇನ್ನೇನಿದೆ   ಜೀವನದ ಸೊಗಡನ್ನು ಸವಿಯುತ್ತ ಸಾಗಿದೆವು ಕಾಮನೆಯ ಲೋಕದಲ್ಲಿ ಈಜಾಡಿ ನಲಿದೆವು ಎನ್ನರಸಿ ಇಂದೇಕೆ ಸಂಶಯ ಹೃದಯದಲಿ ಅರಸೊತ್ತಿಗೆ ಕಾಣದೆ ಹೋದೆಯಾ   ಸಂಸಾರವೆಂಬುದೂ ಸಾಗರವು ನೀ ತಿಳಿಯು ಎರಡು ಕೈ ಸೇರಿದರೆ ಸುಖದೊಳಗೆ ಎಂದೂ ಜ್ಯೋತಿಯು ನೀನಾಗು ಬಳಿಯಲ್ಲೆ ನಾನಿರುವೆ ಸವಿಯಾಗುತ ಸೇರುತ…
ವಿಧ: ಕವನ
June 09, 2025
ಅಭೇದ್ಯ...!  ಗದಗದಲ್ಲಿ ಸಿದ್ದರಾಮಯ್ಯಗೆ. ಮುಜುಗರ- ಕಾಲು ನೋವಿನಿಂದ ಮೆಟ್ಟಿಲು ಹತ್ತಲು ಅಸಾಧ್ಯ...   ಯಾರ ಮುಂದೆ ಗೆದ್ದು ಬೀಗಿದರೂ- ಈ ದೇಹ ಪ್ರಕೃತಿಯ ಮುಂದೆ ನೋ...ನೋ... ಅಭೇದ್ಯ! *** ಮಿತಿಯಿರಲಿ... ಆರ್ ಸಿ ಬಿ- ಈ ಸಾರಿ ಕಪ್ ನಮ್ದೇ... ಈ ಅಮೂಲ್ಯವಾದ ಪ್ರಾಣವೂ ನಿಮ್ದೇ...   ಅತಿರೇಕದ ಹುಚ್ಚಾಟವಿರದಿರಲಿ ಯುವಜನಾಂಗವೇ... ಸಂಭ್ರಮಾಚರಣೆಗೂ ಒಂದು ಮಿತಿಯಿರಲಿ! *** ತಲೆದಂಡ... ಆರ್ ಸಿ ಬಿ ಸಂಭ್ರಮಾಚರಣೆ- ತಲೆದಂಡ ತಲೆದಂಡ... ಸರ್ಕಾರ ತನ್ನ ತಲೆ ಉಳಿಸಿಕೊಳ್ಳಲು ತಲೆದಂಡ...   ತನ್ನ…
ವಿಧ: ಕವನ
June 08, 2025
ಗತಿಸಿರುವ ಭಾವದೊಳು ಮಥಿಸಿ ನಡೆಯಲು ಬಹುದೆ ಕಾತರದ ಕನಸುಗಳ ಕಾಣಬಹುದೆ ಜೀವನದ ಮೌಲ್ಯಗಳ ಒಳಗೆ ತೂರುತ ನಡೆಯೆ  ಕ್ಷಣಿಕ ವ್ಯಾಮೋಹಗಳ ನೆನೆಯಬಹುದೆ    ಚಿತ್ತವಿಲ್ಲದೆ ಗುಡಿಯ ಸುತ್ತುತಲೇ ಸಾಗುತಲಿ ಚಿತ್ತ ಬ್ರಾಂತಿಯ ಒಳಗೆ ನಡೆಯಬಹುದೆ ಆತುರದ ಹುಡುಕಾಟ ಜೀವನದಿ ಎಳೆದಾಟ ಪ್ರೀತಿ ತಪ್ಪಿದ ಬದುಕ ಕಾಣಬಹುದೆ   ಚಿಂತೆ ಇರುತಲಿ ಮನದಿ ಇರದಂತೆ ತೋರಿಸುತ ಸಾಗುವ ಬದುಕನ್ನು ಸವಿಯಬಹುದೆ ಬಾಳು ಕರಗುತಲಿರಲು ಕರಗದಂತೇ ಇರುವೆ ತಾಯ ಮಡಿಲಿನ ಭಾಗ್ಯ ಸಿಗಲುಬಹುದೆ *** ಇದ್ದಾಗ ಯಾರೂ ಇಲ್ಲದ ಜಾಗಕ್ಕೆ…
ವಿಧ: ಕವನ
June 07, 2025
ಯಾವ  ನೋವು  ಮಾನವನಿಗೆ  ನಗಣ್ಯ  ಆದರೆ  ಹಲ್ಲು ನೋವು ಮಾತ್ರ ಬದುಕನ್ನೆ  ಅಲ್ಲಾಡಿಸಿ ಜಾಡಿಸುತ್ತದೆ ! * ನಾನೂ  ಮಂತ್ರಿಯಾಗ ಬೇಕು  ಅಂದು ಕೊಂಡೆ  ಆಗಲಿಲ್ಲ  ಕಾರಣ  ಭ್ರಷ್ಟಾಚಾರ  ನನಗೆ  ತಿಳಿದಿಲ್ಲ ! * ನಿನ್ನೆಯವರೆಗೂ ಚಾಯ ಮಾರತಿದ್ದ  ನನ್ನ ತಮ್ಮ ಇಂದು  ನಾಯಕ ! * ದೇವರ ದಯೆ ಜೊತೆಗೆ ನಮ್ಮ ಮನೋಸ್ಥೈರ್ಯ ಎರಡೂ ಸೇರಿದಾಗ  ಬಾಳು ಬಂಗಾರ ಬದುಕು ಸಿಂಗಾರ ! * ಅಂದು ದೇವ  ಮಾನವ ಸರಿ  ಕೂಸೇ ! ಇಂದು  ದೆವ್ವ  ವೇ ಮಾನವ ! * ಬೆಟ್ಟದ  ಕೆಳಗೆ ನಿಂತು  ನಲ್ಲೆಗೆ ಹೇಳಿದೆ ನಿನ್ನ ಮೇಲಿನ…
ವಿಧ: ಕವನ
June 06, 2025
ಸುತ್ತಲಿನ ವರ್ತಮಾನದಲ್ಲೆಲ್ಲೋ  ಕೆದಕುತ್ತಾ ಕೂರುತ್ತೇವೆ  ನೀರಿಕ್ಷೆಗಳೆಂಬ ಎರೆಹುಳುಗಳನ್ನು  ಬದುಕೆಂಬ ಹಳ್ಳದ ಬದಿಯಲ್ಲಿ..   ಸ್ವಾಭಿಮಾನದ ಬಿಸ್ಕತ್ತಿಗೂ  ಅಂಗಲಾಚುವ ದಯನೀಯತೆಗೆ  ಕಣ್ಣನ್ನೇ ಬೊಟ್ಟುಮಾಡಿ  ಮತ್ತೆ ಮತ್ತೆ ಶಪಿಸುತ್ತೇವೆ ನಮ್ಮದೇ ಬದುಕಿಗೆ    ಕನಸಿನ ಬಂಡಿಯ ಗಾಲಿಯ ಬಿಚ್ಚಿ  ಒಲ್ಲದ ಮನದಲ್ಲಿಯೇ ನಗುತ್ತೇವೆ  ಮಧ್ಯಮ ವರ್ಗವೆಂಬ ಆಕಾಂಕ್ಷೆಯ ಗಾಳಕ್ಕೆ  ನಾವೇ ಬಲಿಯಾಗಿದ್ದೇವೆ..   ಚಿನ್ನದ ರಸ್ತೆಯಲಿ ನಡೆಯಲು ಬಯಸಿದವನಿಗೆ  ಕೊಳ್ಳಲೂ ಅಸಾಧ್ಯವಾಗಿಸಿದ್ದು ನಮ್ಮದೇ ನಿರೀಕ್ಷೆ …
ವಿಧ: ಕವನ
June 05, 2025
ನಾವೆಲ್ಲರೂ  ಉಸಿರಾಡಲು  ಶುದ್ಧ ಗಾಳಿಬೇಕು  ಶುದ್ಧ ಗಾಳಿ ಬರಲು  ಭೂಮಿ ಮೇಲೆ  ಗಿಡ ಮರಗಳಿರಬೇಕು    ಧರಣಿಗೆ ಮಳೆ ಬರಲು  ಗಿಡ, ಮರಗಳಿರಬೇಕು  ನಾವೆಲ್ಲರೂ ಇದ್ದ  ಜಾಗದಲ್ಲಿ ಗಿಡ,  ಮರ ನೆಡಬೇಕು   ಧಣಿದು ಬರುವಾಗ ನೆರಳು ನೀಡಲು ಮರಗಳಿರಬೇಕು  ನಾವೆಲ್ಲರೂ ಮರಗಳ  ಕಡಿಯದೆ ಗಿಡ ಮರ  ಬೆಳೆಸಬೇಕು   ನಾವೆಲ್ಲರೂ ನಮ್ಮ ಪರಿಸರವ ಸ್ವಚ್ಛ  ವಾಗಿಡಬೇಕು ಭೂಮಿಯ ಹಸಿರಾಗಿಡಲು ಪ್ರಯತ್ನ ಮಾಡಬೇಕು ಜೂನ್ ೫ ವಿಶ್ವ ಪರಿಸರ ದಿನದ ಶುಭಾಶಯಗಳು -’ಕಡಲಕವಿ’ ಶಿವಾನಂದ ಬಿ ಮೊಗೇರ, ಭಟ್ಕಳ
ವಿಧ: ಕವನ
June 04, 2025
ಹಿಂದಿನ  ಅವರು ಏನು ಮಾಡಿಟ್ಟು  ಹೋದುದನ್ನು ಇಂದಿನವರು ಪ್ರಶ್ನಿಸದೇ ಸ್ವೀಕರಿಸಿ ಅದರಂತೆ  ಇರಬೇಕು  ಬರೆಯಬೇಕು  ಕೊನೆಗೆ ಅಲ್ಲಿಯು ಇಲ್ಲಿಯೂ ಗತಿ ಇಲ್ಲದೇ ಸಾಯಬೇಕು ! *** ದಾರಿ ಬಿಡಿ ನುಂಗಣ್ಣರು ಬಂದಿದ್ದಾರೆ  ದಾರಿ ಬಿಡಿ ರಸ್ತೆಯ ಅಗಲೀಕರಣ ,  ಚರಂಡಿ ರಿಪೇರಿ ,  ರಸ್ತೆ ಹೊಂಡ  ಮುಚ್ಚಿಸುವುದು , ಸರಕಾರಕ್ಕೆ  ಸೇರಿದ ಸ್ಥಳ ಮಾರಾಟ ,  ನಗರ ನಿರ್ಮಲೀಕರಣ ,  ಆರೋಗ್ಯ ಭಾಗ್ಯ ಆಹಾರ ವಸ್ತುಗಳ  ಮಾರಾಟ , ಸಬ್ಸೀಡಿ ,  ಶಿಕ್ಷಣ ವ್ಯವಸ್ಥೆ  ಯಾವುದೂ  ಜನರಿಗಾಗಿಯಲ್ಲ .  ಜನರ ಹೆಸರಲ್ಲಿ…
ವಿಧ: ಕವನ
June 03, 2025
ಬಾನಿಗೆ ಸುಂದರ ಚಿತ್ತಾರವ ಬಿಡಿಸಿದವರಾರು..   ಪ್ರಳಯಾಂತಕ ಮಹಾ ಸಾಗರವ ಶಾಂತವಾಗಿ ನಿಲ್ಲಿಸಿದವರಾರು..   ಉಪ್ಪು ಕಹಿ ನೀರಿನಲಿ ಮೀನುಗಳಿಗೆ ಆಹಾರ,ಜೀವನ ಇಟ್ಟವರಾರು..   ಸಮುದ್ರ ಮೀನುಗಾರಿಕೆಯಲಿ  ಮಾನವನಿಗೆ ಬದುಕು ಕಟ್ಟಿ ಕೊಟ್ಟವರಾರು..   -ಕಡಲ ಕವಿ, ಶಿವಾನಂದ ಬಿ ಮೊಗೇರ, ಭಟ್ಕಳ.