ಕವನಗಳು

ಲೇಖಕರು: karunakaranid54
ವಿಧ: ಕವನ
April 08, 2020
ಮರಹೇಳಿತು  ಕೊಂಬೆಗೆ ಗೂಡನಂಟಿಸಬಂದ  ಹಕ್ಕಿಗೆ- ಹಕ್ಕಿಯೇ ಒಂದು ಹಾಡ ಹಾಡು. ಹಕ್ಕಿ ಹೇಳಿತು- ಹಾಡುತ್ತೇನೆ, ಆದರೆ, ಕಾಯಬೇಕು ನೀನು ನನ್ನ ಗೂಡು.        
ವಿಧ: ಕವನ
March 17, 2020
ಕವಿತೆ ** ** ೧  ನೋಡು, ಜಗದಗಲ, ಮುಗಿಲಗಲ ಆ ಬಾನು ಈ ಭೂಮಿ ಪ್ರಕೃತಿಯ ಅಣು ಅಣುವ  ನೋಡು....  ಆ ಬೆಳಕಲ್ಲಿ ಸೂರ್ಯ, ಚಂದ್ರ, ತಾರೆ ತಲೆ‌ ಎತ್ತಿ  ದಿಗಂತವ ನೋಡು..... ೨ ಒಮ್ಮೆ ಕಣ್ತೆರೆದು ನೋಡು ಬೆಟ್ಟ ಗುಡ್ಡಗಳ ಅಲ್ಲೆಲ್ಲೋ ಸಣ್ಣಗೆ ಹರಿವ ನದಿಯ ಗಿರಿ ತೊರೆಯ ಜಳಪಾತ, ಪ್ರಪಾತವ ನೋಡು ಜಲಚರಗಳ ಬಯಲಾಟವ. ೩ ದಿಟ್ಟಿಸಿ ನೋಡು  ಆ ಕಾನನದ ನಡುವೆ ತಂಪಾಗಿ ಬೀಸೋ ಗಾಳಿಯ ಆ ಮರದ ಕೊಂಬೆಯಲಿ  ಕೂಗೋ ಕೊಗಿಲೆಯ ಆ ವನ ಸುಮಗಳ ನಡುವೆ ನಲಿದು ನರ್ತಿಸೋ ನವಿಲ. ೪ ನೋಡು ನೋಡೆನ್ನ ಮನವೇ ಮನದ ಕಣ್ಣ ತೆರೆದು…
ಲೇಖಕರು: chethan.tk
ವಿಧ: ಕವನ
February 24, 2020
ಪ್ರತಿ ದಿನವು ತುಸು ವತ್ತು ಹುಡುಕು ನೀ ಸಂಪತ್ತು ಅಡಗಿಹುದು ಮನದಾಳದೊಳಗೆ ಆ ಸಂಪತ್ತಿನಾ ಗಡುಗೆ ಮನಸೊಂದು ತಿಳಿ ನೀರ ಕೊಳ ತಲುಪ ಬೇಕಿದೆ ನೀನದರ ತಳ ಕಲಕದಿರು ಕೊಳದ ನೀರ ಸರಿಯಾಗಿ ಸಾಗಬೇಕಿದೆ ಬಲು ದೂರ ನಿನ್ನೊಳಗಣ್ಣ ತೆರೆಯಬೇಕು ನೋಡಲು ನಮ್ ಭಗವಂತನ ಬೆಳಕು ಬೇಕು.. ಅಲ್ಲೇನಾದರೂ ಕಾಣಲು --ಟಿ ಕೆ ಸಿ
ಲೇಖಕರು: chethan.tk
ವಿಧ: ಕವನ
February 24, 2020
---------------------------------------------------------------------- ಇರದುದೆಲ್ಲವ ಮರೆತೆ ಇರುವುದೆಲ್ಲವ ಅರಿತೆ ನನಗಿಲ್ಲ ಯಾವುದೇ ಕೊರತೆ ಬಿಡು ಇರದುದರ ಚಿಂತೆ ಸಿಗುವುದೆಲ್ಲವು ಸಿಗುವುದು ಅವನಿಷ್ಟದಂತೆ ಬರೆದೆ ನನ್ ಭಗವಂತ ಬರೆಸಿದಂತೆ .. ---------------------------------------------------------------------- - ಟಿ ಕೆ ಸಿ
ಲೇಖಕರು: S.NAGARAJ
ವಿಧ: ಕವನ
January 01, 2020
 ಮುದಡಿದಿರು ಮನ ಭೂತ ಕಾಲದ ಚಕ್ರದಲಿ ಚಿಂತಿಸದಿರು ಮನ ಭವಿಷ್ಯದ ಆತಂಕದಲಿ ಭೂತ ಭವಿಷ್ಯ ಕಾಲಚಕ್ರದ ಸಂಧಿಕಾಲದಲಿ ಜೀವಿಸು ಪರಿಪೂರ್ಣತೆಯ ವರ್ತಮಾನದಲಿ   ವಿಷಯಾಸಕ್ತಿಗಳ ದಬ್ಬಾಳಿಕೆಗೆ ಆಗಲಿ ಕೊನೆ ಅರಿಷಡ್ವರ್ಗಗಳ ಹತೋಟಿಯಲಿಡಲು ಪಡು ಬವಣೆ  ನಡೆಸಲಿ ಅಂತಃಕರಣ ಸತ್ಯಾನ್ವೇಷಣೆ ಅನುಭವಿಸಿಲ್ಲೇ  ನಾಕ ನರಕದ ಸಿಹಿ ಕಹಿ ನಿರೂಪಣೆ   ಹೊಸ ವರ್ಷಕೆ ಮಾಡು ಮನ ನವ ಸಂಕಲ್ಪ ಅಳಿಸಲಿ ಅಸಹನೆ ಅಸಹಿಷ್ಣುತೆಯ ಪರಿತಾಪ ಹೊರದೂಡಲಿ ಅಜ್ಞಾನ ಅವಿದ್ಯಾ ತಿಮಿರ ಕೂಪ ಆಗಲಿ ಬುದ್ಧಿ ಮನ ಪ್ರಶಾಂತತೆಯ ಪ್ರತಿರೂಪ…
ಲೇಖಕರು: rajeevkc
ವಿಧ: ಕವನ
January 01, 2020
ದೇವನು ಕರುಣಿಸಿದನೆಮಗೆ ಮಾತಿನ ಭಾಗ್ಯವನ್ನು ನುಡಿಯಲು ಮನುಜನು ಸೃಷ್ಠಿಸಿದ ಹಲವು ಭಾಷೆಯನ್ನು. ಭಾಷೆಯು ಒಗ್ಗೂಡಿಸಿದೆ ವಿವಿಧ ಪ್ರಾಂತ್ಯಗಳನ್ನು ಜನಮನಗಳ ಬಂಧಿಸಿತು ಈ ನುಡಿ - ಹೊನ್ನು. ನುಡಿ ಕನ್ನಡವಾಗಿರಲು ಎಷ್ಟು ಚೆನ್ನು ನುಡಿದು ಎಲ್ಲೆಡೆ ಫಸರಿಸು ಕಸ್ತೂರಿ ಸುಗಂಧವನ್ನು. ತಾಯಿ ಲಾಲಿಹಾಡಿಗೆ ಧನಿಗೂಡಿಸುವ ಈ ನುಡಿಯು. ತಂದೆಯ ಪ್ರೀತಿಯನು ತಿಳಿಹೇಳಿದ ಈ ನುಡಿಯು. ಒಡಹುಟ್ಟಿದವರ ಬಾಂದವ್ಯವನು ಬೆಸೆದ ಈ ನುಡಿಯು. ಅಜ್ಜನ ನೀತಿಕತೆಗಳಲಿ ಕಾಣುವ ಈ ನುಡಿಯು. ಮಕ್ಕಳಲಿ ತೊದಲನು ನುಡಿಸಿದ ಈ…
ಲೇಖಕರು: S.NAGARAJ
ವಿಧ: ಕವನ
December 28, 2019
ಈ ಸುಂದರ ಕಲೆಯ ಬಲೆಯಲಿ ಈ ಕಣ್ಗಳು ಸೆರೆಯಾದವು ಮೋಡಿಯಲಿ ಈ ಮೋಹಕ ಕಲಾನಿಲಯದಲಿ ಜೀವತುಂಬಿ ಶಿಲ್ಪಗಳು ನಲಿಯುತಲಿ ಬೆರೆತಿದೆ ಒಂದಾಗಿ ನನ್ನ ಬಾಳಲಿ ಆ ದೇವನ ಸೃಷ್ಟಿಯ ಸಾರವಿಲ್ಲಿ   ಶಿಲಾಬಾಲಿಕೆ ಉಸಿರುಪಡೆದು ಬಂದಾಗ ಮಧುರ ಭಾವನೆಗಳನು  ಮನ ಕಂಡಾಗ ಶಿಲಾಸುಂದರಿಯ ಬಾಹುಗಳಲಿ ನಾ ನಲಿದಾಗ ನಮ್ಮಿರ್ವರ  ಹೃದಯಗಳು  ಒಂದಾದಾಗ ಜೀವ -ಜೇನು , ಜೇನ ಸವಿ  ಆಗ   ಕಾಮಶಾಸ್ತ್ರ ಅಲಂಕಾರಶಾಸ್ತ್ರ ಸಕಲಶಾಸ್ತ್ರವು ಮೂಡಿದಲ್ಲಿ ಕಲ್ಲು ಕಲ್ಲಲಿ  ಜೀವ ತಳೆದು ಕಾಣುವ ಮೈಮನಗಳ  ಮರೆಸುತ್ತಾ ಕಲೆಯ…
ಲೇಖಕರು: rajeevkc
ವಿಧ: ಕವನ
December 16, 2019
ಚಿಂತೆ| ಚಿಂತೆ| ಚಿಂತೆ| ಜಗದ ಮಂದಿಗೆಲ್ಲ ಇದು, ಆಪ್ತಮಿತ್ರನಂತೆ. ಚಿಂತೆ ಗೆದ್ದ ಮಂದಿ, ಬಹೂ ವಿರಳವಂತೆ. ಚಿಂತೆ ಇರದ ಜಗದ ಊಹೆ, ಬರೀ ಭ್ರಾಂತಿಯಂತೆ. ಇದರ ಮೊದಲ ಆಗಮನವು, ಎಚ್ಚರಿಕೆ ಗಂಟೆಯಂತೆ. ಮನವು ಎಚ್ಚೆತ್ತಿಕೊಳಲು, ಅದು ಚಿಂತೆಮುಕ್ತವಂತೆ. ಚಂಚಲ ಮನವು ಪ್ರೇರೇಪಿಸಿದೆ, ಚಿಂತೆ ಮತ್ತೆ ಮರಳುವಂತೆ. ಭಿನ್ನ ರೂಪ ತಾಳಿ ಮನವನಂಟಿದೆ, ಬಿಡದ ಜಿಗಣೆಯಂತೆ. ಇದರ ಬತ್ತಳಿಕೆಯಲಿ ಇಹುದು, ಹಲವು ಬಾಣವಂತೆ. ಶಕ್ತಿಯಲಿ ಒಂದನೊಂದು ಮೀರುವ, ಸಾಮರ್ಥ್ಯವಿರುವುದಂತೆ. ದುರ್ಬಲ ಮನಗಳು ಇದಕೆ,…
ಲೇಖಕರು: prakashajjampur
ವಿಧ: ಕವನ
December 10, 2019
ದೇಹಕ್ಕೆ ನಾಟಿದ ಬಾಣಗಳನೆಲ್ಲ, ನೋವಿನ ಮಧ್ಯೆಯೇ ಕಿತ್ತು ಹಾಕ್ಕುತ್ತಿದ್ದೇನೆ, ಒಂದೊಂದು ಬಾಣದ ಹಿಂದೆ ಒಂದೊಂದು ಕಥೆ,  ಬಾಣಗಳ್ಳನ್ನು ಎಣಿಸೋ ಕೆಲಸನೇ ಇಲ್ಲ, ಮತ್ತೆ ಬೀಳದಂತೆ ತಪ್ಪಿಸಿಕೊಳ್ಳಬೇಕು, ಇನ್ನು ಹಂಚಿಕೊಳ್ಳೋದೆಲ್ಲಿ ವ್ಯಥೆ?,  ಸಮಯ ಒಮ್ಮೆ ನಿಮ್ಮ ವಿರುದ್ಧ ಯುದ್ಧ ಸಾರಿದರೆ, ಕರುಣೆ ಇಲ್ಲದ ಕಟುಕನಂತೆ ಬಾಣ, ಹೂಡತಾನೆ ಇರುತ್ತೆ,  ಯಾರ ಹತ್ರ ಸಹಾಯ ಕೇಳೋದು?, ಯಾರ ಹತ್ರ ಶರಣು ಬೇಡೋದು, ಈ ಯುದ್ಧ ಜಗತ್ತಿಗೆ, ನೀವೆಂತಾ ಕ್ಷತ್ರಿಯ ಅಂತ ಸಾರುತ್ತೆ,  ಒಂದೊಂದು ಬಾಣವೂ ಒಂದೊಂದು ಅನುಭವ…
ಲೇಖಕರು: rajeevkc
ವಿಧ: ಕವನ
November 29, 2019
ಕಡಲಾಳದಂತಿರುವ ಬಡತನದ ಬವಣೆಯಲಿ, ಈಜಲೆಂದು ದೂಡಿದೆ ನೀನು. ನಾ ಮಾತಾಡಲಿಲ್ಲ| ಮೌನವ ಮೀರಲಿಲ್ಲ | ಬಡತನದ ಬೇಗೆಯನು ಸಹಿಸುತಲಿ, ಸಿರಿತನದ ಆಸೆಗಳ ಮರೆಯುತಲಿ, ಈಜಿ ದಡ ಸೇರಿದೆ ನಾನು. ನಾ ಮುಳುಗಲಿಲ್ಲ| ಬಡತನ ಎನಗೆ ಹೊರೆಯಾಗಲಿಲ್ಲ | ಜೀವನ ಯಾನದ ಪ್ರತಿಹಂತದಲು, ದುಃಖದ ಬಾಣಗಳ ಮಳೆಗರೆದೆ ನೀನು. ನಾ ದೂಷಿಸಲಿಲ್ಲ| ಮೌನವ ಮೀರಲಿಲ್ಲ | ನೋವುಗಳ ನುಂಗುತಲಿ, ಮುಂಬರುವ ನಲಿವುಗಳ ನೆನೆಯುತಲಿ, ಯಾನವ ಬೆಳೆಸಿದೆ ನಾನು. ನಾ ಹೆದರಲಿಲ್ಲ| ದುಃಖದ ಬಾಣಗಳ ಇರಿತಕ್ಕೆ, ನಾ ಮಣಿಯಲಿಲ್ಲ | ಜೀವನದ ಹೋರಾಟದಿ,…