'ಜಗಕೆಲ್ಲಾ ಅವನೇ ಹರಿತಾನೆ'
ಜಗದಲ್ಲೂ ನೀನೇ ಜಗವೆಲ್ಲಾ ನೀನೇ
ನಮ್ಮಲ್ಲೂ ನೀನೇ ಎಲ್ಲೆಲ್ಲೂ ನೀನೇ
ಜಡದಲ್ಲೂ ನೀನೇ ಗಿಡದಲ್ಲೂ ನೀನೇ
ಬುಡವೆಲ್ಲಾ ನೀನೇ ಜಗದಗಲ ನೀನೇ II 1 II
ಸಕಲಕೆಲ್ಲವೂ ನೀನೇ ಅಕಳಂಕಕೂ ನೀನೇ
ಹರಿಯೂ ನೀನೇ ಹರಿಯುತಿಹೆ ನೀನೇ
ವಿಶ್ವರೂಪನೂ ನೀನೇ ವಿಶ್ವಭೂಪನೂ ನೀನೇ
ನುಡಿಯಲ್ಲೂ ನೀನೇ ನನ್ನ ಧ್ವನಿಯಲ್ಲೂ ನೀನೇ II 2 II
ದಿಕ್ಕೆಲ್ಲಾ ನೀನೇ ದಿಸೆಯೆಲ್ಲಾ ನೀನೇ
ಭುವಿ ಚರಣ ನೀನೇ ಬಾನ ಮುಕುಟ ನೀನೇ
ಈ ಕೃತಿಯೂ ನೀನೇ ಈ ಸ್ತುತಿಯೂ ನೀನೇ
ಕಣ ಕಣವೂ ನೀನೇ ಋಣ ಋಣವೂ ನೀನೇ II 3 II
ತಗುಲೆ ನಿನ್ನ ಚರಣ ಪಡೆವೆ ಅಂತಃಕರಣ
ಮಾಡೆ ನಿನ್ನ ನಮನ ಧುರಿತವೆಲ್ಲಾ ಶಮನ
ನಿತ್ಯ ನಿನ್ನ ಸ್ಮರಣೆ ಹರಿದು ತಂತು ಕರುಣೆ
ಆ ನಿನ್ನ ಕಾಯ ಆಹಾ ಎಂತಾ ಮಾಯ II 4 II
ಹರಿಯೇ ನಿನ್ನ ನಾಮ ಆನಂದಧಾಮ
ಹರಿಯೇ ನಿನ್ನ ಧ್ಯಾನ ಸೌಂದರ್ಯಪಾನ
ಹರಿಯ ಕೇಳಿ ನಡೆದೆ ಒಳಿತನೆಲ್ಲ ಪಡೆದೆ
ಹರಿಯೆ ಪರಂಧಾಮ ನೀಲಮೇಘಶ್ಯಾಮ II 5 II
ಹರಿಯೆ ಸೂತ್ರದಾರ ಹರಿಯೆ ಜಗದೋದ್ಧಾರ
ಪ್ರಭಾಕರ ಶರ್ಮನು ಮಾಡಿಹ ಈ ಹರಿ ಓಂಕಾರ
ಹರಿಗೆ ನಮಿಸುತ ಹರಿಯ ಸ್ತುತಿಸುತ ಆಗಿ ಉದ್ಧಾರ
ಜಗವೆಲ್ಲಾ ಅವನೇ ಜಗಕೆಲ್ಲಾ ಅವನೇ ಹರಿತಾನೆ II 6 II
ಕರ್ತೃ: ಡಾ. ಪ್ರಭಾಕರ್ ಬೆಳವಾಡಿ